Hindu Vani
Index
ಪ್ರತಿಧ್ವನಿ
ಧರ್ಮಸ್ಥಳ
ಹಿಂದುವಾಣಿ ಸೆಪ್ಟೆಂಬರ್ ಸಂಚಿಕೆಯು ಸಂಪಾದಕೀಯವೂ ಸೇರಿದಂತೆ ಮೂರು ಲೇಖನಗಳ ಮೂಲಕ ಧರ್ಮಸ್ಥಳದ ಅಸಲು ಪರಿಸ್ಥಿತಿಯನ್ನು ತಿಳಿಸಿಕೊಟ್ಟಿತು. ದೇಶವನ್ನು ಮಾರುವ ಶಕ್ತಿಗಳು ರಾಜಕೀಯ ಕ್ಷೇತ್ರದಲ್ಲಷ್ಟೇ ಅಲ್ಲದೆ ಹಲವು ಹತ್ತು ದಿಕ್ಕುಗಳಲ್ಲಿ ಹೊಂಚು ಹಾಕಿ ಕಾದಿರುವುದು ಈಗ ಸ್ಪಷ್ಟವಾಗುತ್ತಿದೆ. ಸದಾ ಜಾಗೃತ ಕಣ್ಣುಗಳಿಂದ ಇವನ್ನು ಗಮನಿಸುತ್ತ ಇರುವುದು ದೇಶ, ಧರ್ಮವನ್ನು ಪ್ರೀತಿಸುವವರ ಕರ್ತವ್ಯವಾಗಿದೆ.
ವಿಡಂಬನೆಯ ಲೇಖನ “ಮುಸುಕು ಹಾಕಿದ ಬುರುಡೆ”ಯೂ ಕೂಡ ಇಂದಿನ ವಾಸ್ತವತೆಯನ್ನು ವ್ಯಂಗ್ಯವಾಗಿ ವಿವರಿಸಿದೆ. ಕ್ಯಾಪ್ಟನ್ ಧೋನಿ, ಪಂಚತಂತ್ರದ ನರಿ, ಪರುಶದ ಕಲ್ಲು, ಕರ್ನಾಟಕದ ಬಂಡೆಗಳೆಲ್ಲವೂ ಏನೇನೆಲ್ಲವನ್ನೂ ನೆನಪಿಸುತ್ತವೆ. ಹೊಳೆಯಾಚೆಯ ಧರ್ಮಸ್ಥಳವು ಉತ್ತಮ ಲೇಖನವಾಗಿ ಆ ಕಾಲದ ಶುದ್ಧ ಸಮಾಜ ಜೀವನವನ್ನು ಕಣ್ಣ ಮುಂದೆ ತಂದಿದೆ.
- ರಾಮಚಂದ್ರ ಶಾಸ್ತ್ರಿ, ಶಿವಮೊಗ್ಗ
ಬದಲಾಗುವುದೆಂದರೆ!
ವ್ಯಕ್ತಿಯು ಬದಲಾಗಲು ಕಾರಣವಾಗುವ ವ್ಯಕ್ತಿ ಮತ್ತು ಪರಿಸರಗಳನ್ನು ನಮ್ಮ ಮುಂದೆಯೇ ನಡೆಯುವ ಸನ್ನಿವೇಶವನ್ನು ತಂದು ಪ್ರಸ್ತುತ ಅಂಕಣದ ಲೇಖಕಿಯು ಎಂದಿನಂತೆ ಅತ್ಯಂತ ಸುಂದರವಾಗಿ ವಿವರಿಸಿರುವರು.
-- ಕೋಮಲ ಸುಂದರ್, ಗುಬ್ಬಿ
ಪರರಿಗಾಗಿ ಪ್ರಾಣವನ್ನು ಕೊಡುವುದು
ದಧೀಚಿ ಮತ್ತು ವೃತ್ರರಾಕ್ಷಸರ ಉಪಾಖ್ಯಾನವು ಓದಲು ಸುಂದರ ಕಾವ್ಯದಂತೆ ಇದೆ. ವಜ್ರಾಯುಧವನ್ನು ಸೆಳೆದುದೇ ತಡ ಮಿಂಚಿನಂತೆ ಬೆಳಕು ಹರಿಯಿತು. ವೃತ್ರನ ದೇಹ ಪರ್‌ಪ ಎಂದು ಹರಿಯಿತು. ವೃತ್ರಸತ್ತ ಮತ್ತೆ ಬೆಳಕು ಬಂದಿತು. ಮಕ್ಕಳೆಲ್ಲರೂ ಓದುವಂತಹ ಓದಲೇ ಬೇಕಾದ ಕಥೆ.
-- ರಾಜಾರಾಮ್, ಶ್ರೀನಗರ
ನಾನು ಮೊದಲು ಹುಡುಕುವುದು ಶಬ್ದಶೋಧ
ಶಬ್ದ ಸಂಪತ್ತನ್ನು ಬೆಳೆಸಲು ಸಾಮಾನ್ಯ ಜ್ಞಾನವನ್ನು ಪಡೆಯಲು ನನ್ನಂತೆ ಮೊದಲು ಪುಟ 32ನ್ನು ತೆರೆಯಿರಿ.
-- ವನಿತಾ, ಹಾವೇರಿ