Hindu Vani
Index
ಸಂಸ್ಕೃತಿ
ಹೆಸರಿನಲ್ಲಿದೆ ಸಂಸ್ಕೃತಿ
ಅಕ್ರೂರ :
ಯದುವಂಶದ ಶ್ವಫಲನ ಮಗ. ಇವನ ತಾಯಿ ಗಾಂದಿನಿ, ಕಂಸನ ಅಷ್ಟಮಂತ್ರಿ ಗಳಲ್ಲಿ ಒಬ್ಬ ಅಹುಕುನ ಮಗಳು ಭುತನು ಇವನ ಹೆಂಡತಿ. ಕಂಸನ ಅಪ್ಪಣೆಯಂತೆ ಬಲರಾಮ ಕೃಷ್ಣರನ್ನು ನಂದಗೋಕುಲದಿಂದ ಮಥುರೆಗೆ ಕರೆದುಕೊಂಡು ಬಂದನು. ಅಕ್ರೂರನಿಗೂ ಕೃಷ್ಣನು ತನ್ನ ದಿವ್ಯರೂಪವನ್ನು ತೋರಿಸಿದ್ದನು. ದೌಪದಿ ಸ್ವಯಂವರದಲ್ಲಿ ಅಕ್ರೂರನೂ ಇದ್ದನು. ಅವನು ಪಾಂಡವರ ಅಜ್ಞಾತವಾಸದ ನಂತರ ಅವರನ್ನು ಭೇಟಿಯಾಗಿದ್ದನು. ಅಕ್ರೂರನ ಇನ್ನೊಂದು ಹೆಸರು ಬಭ್ರು ಎಂದು.
ಅಗತ್ಯ:
1) ಪರ್ವತದ ಬೆಳವಣಿಗೆಯನ್ನು ತಡೆದವನು (ಅಗ+2), ಅಗಸ್ಯರೂ ವಸಿಷ್ಠರೂ ಮಿತ್ರಾವರುಣರೆಂಬ ಋಷಿಯ ಮಕ್ಕಳು. ವಿದರ್ಭದ ರಾಜಕುಮಾರಿ ಲೋಪಾಮುದ್ರೆ ಅಗಸ್ಯರ ಪತ್ನಿ, ಇವರ ಮಗ ದೃಡಸ್ಯು. ಇವರ ಕಾಲ ವೈವಸ್ವತ ಮನ್ವಂತರ,
2) ಸ್ವಾಯಂಭುವ ಮನ್ವಂತರದಲ್ಲೂ ಒಬ್ಬರು ಅಗಸ್ಯ ಋಷಿ ಇದ್ದಾರೆ. ಇವರು ಪುಲಸ್ಯ ಋಷಿ ಮತ್ತು ಕರ್ದಮ ಬ್ರಹ್ಮನ ಮಗಳು ಹವಿರ್ಭುಕರ ಮಗ. ಇವರ ಶಿಷ್ಯ, ಅಗ್ನಿವೇಶ್ಯ. ಈ ಶಿಷ್ಯನಿಗೆ ಅಗಸ್ತರು ಧನುರ್ವೇದವನ್ನೂ ಬ್ರಹ್ಮಾಸ್ತ್ರವನ್ನೂ ಅನುಗ್ರಹಿಸಿದರು.
ಅಗ್ನಿ:
ಪಂಚಭೂತಗಳಲ್ಲಿ ಮೂರನೇ ದೇವತೆ. ಋಗ್ವದದಲ್ಲಿ ಬರುವ ಮೊದಲನೇ ದೇವತೆಯೇ ಅಗ್ನಿ, ಈತನು ದಕ್ಷಬ್ರಹ್ಮನ ಮಗಳು ಸ್ವಾಹೆಯನ್ನು ಮದುವೆಯಾದನು. ಶ್ರೀಕೃಷ್ಣನ ಸೂಚನೆಯಂತೆ ಅರ್ಜುನನ ಸಹಾಯದಿಂದ ಖಾಂಡವ ವನವನ್ನು ಸುಟ್ಟು ಸಂತುಷ್ಟನಾಗಿ ಅರ್ಜುನನಿಗೆ ಕಪಿಧ್ವಜದ ರಥವನ್ನೂ ಗಾಂಡೀವ ಧನುಸ್ಸನ್ನೂ ಅಕ್ಷಯವಾದ ಬತ್ತಳಿಕೆಯ ಕೊಟ್ಟನು. ಶ್ರೀ ಕೃಷ್ಣನಿಗೆ ಚಕ್ರಾಯುಧವನ್ನು ಕೊಟ್ಟವನು ಅಗ್ನಿಯೇ.
ಅಂಗದ:
1) ಕಪಿರಾಜನಾದ ವಾಲಿ ಮತ್ತು ತಾರೆಯರ ಮಗ, ಮಹಾ ಪರಾಕ್ರಮಿ. ಸುಗ್ರೀವನಿಗೆ ಯುವರಾಜ, ಸೀತೆಯನ್ನು ಹುಡುಕಲು ಹೊರಟ ದಕ್ಷಿಣ ದಿಕ್ಕಿನ ತಂಡಕ್ಕೆ ನಾಯಕನಾಗಿದ್ದವನು. ಯುದ್ಧಕ್ಕೆ ಮೊದಲು ಹಾಗೂ ಮತ್ತೊಮ್ಮೆ ರಾವಣನಲ್ಲಿಗೆ ರಾಯಭಾರಿಯಾಗಿಯೂ ಹೋಗಿದ್ದನು.
2) ಲಕ್ಷ್ಮಣ ಮತ್ತು ಊರ್ಮಿಳೆಯರ ಮಗನ ಹೆಸರು ಕೂಡಾ ಅಂಗದ.
ಅಂಗನಾ :
ಉತ್ತರ ದಿಕ್ಕಿನ ದಿಗ್ಗಜ :
ಅಂಗೀರಸ :
ವೈವಸ್ವತ ಮನ್ವಂತರ ಕಾಲದಲ್ಲಿ ವರುಣನು ಮಾಡುತ್ತಿದ್ದ ಯಜ್ಞದಕುಂಡದಲ್ಲಿ ಹುಟ್ಟಿದ ಋಷಿ, ಈತನ ಪತ್ನಿ ವಸುದೆ.
ಅಟ್ಟೋದಾ :
ಬಹಿರ್ಷದರೆಂಬ ಪಿತೃದೇವತೆಗಳ ಮಗಳು. ಮುಂದೆ ಸತ್ಯವತಿಯಾಗಿ ಜನಿಸಿ ಪರಾಶರರಿಂದ ವ್ಯಾಸ ಋಷಿಯನ್ನು ಪಡೆದಳು. ಬಳಿಕ ಶಂತನು ರಾಜನನ್ನು ಮದುವೆ ಯಾದಳು.
ಅಜ :
ದಶರಥನ ತಂದೆ.