Hindu Vani
Index
ದುರಾಡಳಿತ
ಕಳುವಾದ ವಿಗ್ರಹಗಳು ಕಾಣೆಯಾದ ಕಲಾ ಕೃತಿಗಳು ಮಾಯವಾದ ಫೈಲ್‌ಗಳು
ಸರ್ಕಾರದ ಸಾಂಸ್ಕೃತಿಕ ಚಿಹ್ನೆಗಳನ್ನು ಸಂಕೇತಗಳನ್ನೂ ಉಳಿಸಿ ರಕ್ಷಿಸುವುದು ಹೊಣೆಯಾಗಿದೆ. ದೇವಸ್ಥಾನಗಳೂ ಸೇರಿದಂತೆ ಹತ್ತು ಹಲವು ಕಡೆಗಳಲ್ಲಿ ವಿಗ್ರಹಗಳು ಕಾಣೆಯಾಗಿವೆ. ಕಳವಾಗಿವೆ. ಮದ್ರಾಸ್ ಉಚ್ಚನ್ಯಾಯಾಲಯದಲ್ಲಿ ಈ ಪ್ರಕರಣವು ದಾಖಲಾದ ದಿನದಿಂದಲೂ 376 ವಿಗ್ರಹಗಳು ಈಗಾಗಲೇ ಕಳುವಾಗಿವೆ ಎಂದು ಹೇಳುತ್ತಲೇ ಇರುವರು. ಅರ್ಜಿದಾರರು ಇವೆಲ್ಲವುಗಳ ವಿವರಗಳನ್ನು ಅಧಿಕಾರಿಗಳ ಮುಂದೆ ಇಟ್ಟಿರುವರು. ಅದಕ್ಕೂ ಹೆಚ್ಚಾಗಿ ಅವರ ಪ್ರಕಾರ ಈ ವಿಗ್ರಹಗಳು ವಿದೇಶಗಳ ಮಾರುಕಟ್ಟೆಗಳಲ್ಲಿ ಕಾಣಬಂದಿವೆ.
ಇವೆಲ್ಲವುಗಳನ್ನು ವಿವರಣೆಯ ಮೂಲಕ ನೀಡಿದ ಹಂತದಲ್ಲಿ ಈ ಪ್ರಕರಣದ 41 ಫೈಲ್‌ಗಳು ಕಾಣೆಯಾಗಿವೆ ಎಂದು ಅಧಿಕಾರಿಗಳ ಹೇಳಿಕೆಯು ಬಂದಿದೆ. ಈ ಫೈಲ್‌ಗಳು ಕಾಣದಿರಲು ಕಾರಣವೇನು? ಇದು ತಮಿಳುನಾಡು ಸರ್ಕಾರದ ವಕೀಲರಾದ ಸಂಜಯ್ ಹೆಗ್ಡೆ ಮತ್ತು ಸಬರೀಶ ಸುಬ್ರಮಣ್ಯಂರವರಿಗೆ ಸರ್ವೋಚ್ಚನ್ಯಾಯಾಲಯದ ವಿಚಾರಣಾ ಪೀಠದ ನ್ಯಾಯಾಧೀಶರಾಗಿರುವ ಆರ್. ಮಹದೇವನ್ ಮತ್ತು ಬಿ. ವಿ. ನಾಗರತ್ನರವರು ಕೇಳಿದ ಪ್ರಶ್ನೆ, ಅದಕ್ಕೆ ಉತ್ತರಿಸಿದ ಸಂಜಯ ಹೆಗ್ಡೆಯವರು ಕೆಲವು ಫೈಲ್‌ಗಳನ್ನು ಮತ್ತೆ ಪುನರಚಿಸಿ ಇಡಲಾಗಿದೆ ಎಂದರು. ಇದಕ್ಕೆ ಮರು ಪ್ರಶ್ನೆಯನ್ನು ಕೇಳಿದ ಪೀಠವು “ಹಾಗಾದರೆ ಈ ಕುರಿತು ಪ್ರಾಥಮಿಕ ಮಾಹಿತಿ ವರದಿಯನ್ನು (ಎಫ್.ಐ.ಆರ್.)ಸಲ್ಲಿಸಲಾಗಿದೆಯೇ? ಇಲ್ಲದಿದ್ದರೆ ರಾಜ್ಯ ಮುಖ್ಯ ಕಾರ್ಯದರ್ಶಿಯನ್ನು ನ್ಯಾಯಾಲಯಕ್ಕೆ ಕರೆಯಲೇ? ಸಾಂಸ್ಕೃತಿಕ ಕಲಾಪಗಳ ರಕ್ಷಣೆ ಸರ್ಕಾರದ್ದು ತಾನೇ?” ಎಂದಿದೆ.
ನ್ಯಾಯಮೂರ್ತಿ ಬಿ.ವಿ. ನಾಗರತ್ನರವರು ಕಾಣೆಯಾದ ಫೈಲುಗಳ ಹಿಂದಿನ ನಿಜವನ್ನು ಬಯಲು ಮಾಡಲೇಬೇಕು. 38 ಪೊಲೀಸ್ ಠಾಣೆಗಳಲ್ಲಿದ್ದ ವಿವಿಧ ಫೈಲ್‌ಗಳು ಒಂದೇ. ಸಮಯದಲ್ಲಿ ಬೆಂಕಿಗೆ ಆಹುತಿಯಾದವೇನು? ಅಥವಾ ಈ ಪೈಲುಗಳನ್ನು ನಾಶಪಡಿಸಲು ಆಜ್ಞಾಪಿಸಲಾಗಿದೆಯೇ? ಎಂದು ಕಟುವಾಗಿ ಕೇಳಿದರು.
ಕಾಣೆಯಾದ ಫೈಲ್‌ಗಳ ಬಗ್ಗೆ ವಿಚಾರಣೆಯಾಗಬೇಕೆಂದು ನ್ಯಾಯಾಲಯದ ಮುಂದೆ ಬಂದ ವಕೀಲ ಎಲಿಫೆಂಟ್ ರಾಜೇಂದ್ರನ್‌ರವರು ದಾಖಲಿಸಿದ ಪ್ರಕರಣದ ಕುರಿತು ವಿಚಾರಣೆಯ ಪ್ರಾರಂಭದ ಹಂತದ ನಡಾವಳಿಗಳಿವು. ರಾಜೇಂದ್ರನ್‌ರವರು ಆರೋಪಿಸುವಂತೆ ಈ ಫೈಲ್‌ಗಳಲ್ಲವೂ ಕಳುವಾದ ದೇವಸ್ಥಾನಗಳ ವಿಗ್ರಹಗಳು, ಅಮೂಲ್ಯ ಕಲಾಕೃತಿಗಳು ಮತ್ತು ಇತರ ಬೆಲೆ ಬಾಳುವ ನಿಧಿಗಳ ಕುರಿತು ಇದೆ. ಕೆಲವು ವಿಗ್ರಹಗಳು ಸುಮಾರು 1500 ರಿಂದ 2000 ವರ್ಷಗಳಷ್ಟು ಪ್ರಾಚೀನವಾಗಿದೆ. ಪೋಲಿಸ್ ಅಧಿಕಾರಿಗಳು, ಅಧಿಕಾರಿವರ್ಗ ಮತ್ತು ವಿಗ್ರಹ ಚೋರರ ಗುಂಪುಗಳ ವ್ಯವಸ್ಥಿತ ಕಾಳಸಂತೆಯಲ್ಲಿ ಇವೆಲ್ಲವೂ ಮಾಯವಾಗಿವೆ.
ವಕೀಲ ಸಂಜಯ್ ಹೆಗ್ಡೆಯವರು ಉತ್ತರಿಸುತ್ತಾ “ಕಾಣೆಯಾದ ಫೈಲುಗಳ ವಿಚಾರದಲ್ಲಿ ಈ 11 ಎಫ್.ಐ.ಆರ್.ಗಳು ದಾಖಲಾಗಿವೆ. ಅಷ್ಟೇ ಅಲ್ಲದೆ ಕೆಲವು ವಿಗ್ರಹಗಳು ಸ್ವಾಧೀನಕ್ಕೆ ಬಂದಿವೆ” ಎಂದರು. ವಕೀಲರ ಉತ್ತರಗಳೆಲ್ಲವೂ ನುಣಿಚಿಕೊಳ್ಳುವ ಧಾಟಿಯಲ್ಲಿರುವುದನ್ನು ಗಮನಿಸಬಹುದು. ದೇವಸ್ಥಾನಗಳು ಸರಕಾರಿ ಹಿಡಿತದಲ್ಲಿರುವ ಕಾರಣದಿಂದ ನಡೆಯುತ್ತಿರುವ ಎಡವಟ್ಟುಗಳಿವು.