Hindu Vani
Index
ಸಂಪಾದಕೀಯ
ನಾಡು ನುಡಿಯ ತೇರು ಭುವನೇಶ್ವರಿಯ ದಸರಾ
ಯಾರು ಏನೇ ಹೇಳಲಿ; ಯಾವುದೇ ರೀತಿಯ ವ್ಯಾಖ್ಯಾನವನ್ನು ಮಾಡಲಿ; ದಸರಾ ಉತ್ಸವವು ಹಿಂದುಗಳ ಹಬ್ಬ, ದೇವಿ ಭುವನೇಶ್ವರಿಯು ನಾಡು, ನುಡಿಯ ಅಧಿಷ್ಠಾನ ದೇವತೆ, ದಸರಾ ಮೆರವಣಿಗೆಯು ತಾಯಿ ದೇವತೆಯ ನೇತೃತ್ವದಲ್ಲಿ ಅಧರ್ಮವನ್ನು ಮೆಟ್ಟಿ ನಿಂತು ಗೆದ್ದ ಸ್ಮರಣೆ. ಧಾರ್ಮಿಕ ಶಕ್ತಿಯನ್ನು ಆರಾಧಿಸುವ ಸಂಕೇತ. ಆದರೆ ಹಾಗಾಗುವ ಬದಲು ಈ ನವರಾತ್ರಿಯ ಉತ್ಸವವು ಮತಬ್ಯಾಂಕನ್ನು ಓಲೈಸುವ ಪ್ರಯೋಗಶಾಲೆಯಾಗಿ ಮಾರ್ಪಡಿಸುವಲ್ಲಿ ರಾಜ್ಯ ಸರ್ಕಾರದ ನಾಯಕರು ಶಕ್ತಿ ಮೀರಿ ಪ್ರಯತ್ನಿಸುತ್ತಿರುವುದು ಈಗ ಕಣ್ಣಿಗೆ ರಾಚುತ್ತಿದೆ. ತಾಯಿ ಭುವನೇಶ್ವರಿಯನ್ನು ಅರಿಸಿನ ಕುಂಕುಮದಿಂದ ಸಿಂಗರಿಸಿ ಮುಸ್ಲಿಮರನ್ನು ಹತ್ತಿರ ಸುಳಿಯದಂತೆ ಮಾಡಿರುವಿರಿ ಎಂದು ತಗಾದೆ ಎತ್ತಿದ ಮುಸ್ಲಿಂ ಮಹಿಳೆಯನ್ನು ಈಗ ಅದೇ ದೇವಿಯ ಮೆರವಣಿಗೆಯನ್ನು ಉದ್ಘಾಟಿಸಲು ಆರಿಸಿರುವುದು ಕನ್ನಡವನ್ನು ಕರ್ನಾಟಕವನ್ನು, ದೇವಿ ಭುವನೇಶ್ವರಿಯಾಗಿ ಕಾಣುವ ಕೋಟಿ ಕೋಟಿ ಕನ್ನಡಿಗರ ಭಾವನೆಗಳನ್ನು ಅವಮಾನಿಸಿದಂತಾಗಿದೆ. ಅರಿಶಿನ ಕುಂಕುಮದ ಬಣ್ಣ ಬಳಿದು ಕನ್ನಡ ಬಾವುಟದ ಬಳಿ ಬಾರದಂತಹ ಪರಿಸ್ಥಿತಿಯನ್ನು ಉಂಟುಮಾಡಿದಿರಿ ಎಂದು ಮಂಗಳಕರ ಬಣ್ಣಗಳನ್ನು ದೂಷಿಸಿದ ಮಹಿಳೆಗೆ ಈಗ ಅದೇ ಅರಿಶಿನ, ಕುಂಕುಮ, ದೇವಿಯ ಪ್ರತಿಮೆ, ಮಂಗಳ ವಾದ್ಯಮೇಳಗಳು ಸಂಗೀತ ಗೋಷ್ಟಿಗಳು ಹೇಗೆ ಸಹ್ಯವಾದವು?
ನಾಡ ಹಬ್ಬದಂತಹ ಸಮಾರಂಭದ ಉದ್ಘಾಟನೆಗೆ ಸತ್ಪಾತ್ರರಾಗಲು ಇಂತಹ ಪವಿತ್ರ ಕಾರ್ಯಕ್ರಮದ ಶೋಭೆಗೆ ಪೂರಕವಾದ ಮನೋಭಾವವನ್ನು ಹೊಂದಿರಬೇಕು. ಆಕೆಗೆ ಆಕೆಯ ಮಸೀದಿಗೆ ಹೋಗಲೇನೇ, ಪ್ರಾರ್ಥಿಸಲೇನೇ ಅವಕಾಶವಿಲ್ಲದ ನಿರ್ಬಂಧವಿದೆ. ಈ ರೀತಿಯ ಬಂಧನದ ಮನಸ್ಸು ತಾನು ಒಪ್ಪದ ಪ್ರತಿಮೆಯನ್ನು ನಂಬದ ಆಚರಣೆಯನ್ನು ಹೇಗೆ ನಡೆಸಿಕೊಂಡೀತು?. ಈಗಿನ ಈ ದಸರಾ ಸಂದರ್ಭದಲ್ಲಂತೂ ಬೇಕಾದುದು ನಾಡಿನ ಜನಮಾನಸದಲ್ಲಿ ಸಾಮರಸ್ಯವನ್ನು ತುಂಬುವ ಮನಸ್ಸು. ಪ್ರತೀಕಾರ ಭಾವನೆಯ, ಹೆಚ್ಚುಗಾರಿಕೆಯ ಸ್ವಭಾವವಲ್ಲ. ಕನ್ನಡವನ್ನು ಕರ್ನಾಟಕವನ್ನು ಮೆಚ್ಚುವ ಅಂಶಗಳನ್ನು ಅನ್ವೇಷಿಸಬೇಕಲ್ಲದೆ ನಿರಾಕರಿಸುವುದನ್ನು ಪ್ರೋತ್ಸಾಹಿಸುವುದಲ್ಲ. ದಸರಾದ ಆರಾಧ್ಯ ದೇವಿಯು ಹರಿದ್ರಾ ಕುಂಕುಮ ಶೋಭಿತಳಾಗಬೇಕಲ್ಲದೆ ಉದ್ಘಾಟಕರ ಮರ್ಜಿಗೆ ಖುಷಿಕೊಡಲು ನಮಾಜಿನ ಟೊಪ್ಪಿಗೆಯನ್ನು ಇಡಲು ಹೋಗಬಾರದಲ್ಲವೇ? ಅಂತಹ ಧಾವಂತವನ್ನು ಈ ಸರ್ಕಾರದ ಜನರು ತೋರಲು ಹೊರಟಂತಿದೆ. ಮುಂದೆಯೂ ಇಂತಹ ತಿಳಿಗೇಡಿ ನಿರ್ಧಾರಗಳಿಂದ ಉದ್ಘಾಟಕರೇ ನಾಡದೇವಿಗೆ ಅಪಚಾರವಾಗುವಂತೆ ಮಾಡುವ, ಮಾತನಾಡುವ ಪ್ರಮೇಯವು ಉಂಟಾಗಬಾರದು.
ಇಂದಿನ ಸಾಮಾಜಿಕ ವಾತಾವರಣವನ್ನು ಕದಡಿಸಿ ಹೊಲಸು ಕೆಸರಾಗಿಸುವುದರಲ್ಲಿ ಸರ್ಕಾರವನ್ನು ನಡೆಸುವವರು ಯಶಸ್ವಿಗಳಾಗಿ ಬಿಟ್ಟಿರುವರು. ಚಾಮುಂಡಿ ಬೆಟ್ಟವು ಹಿಂದುಗಳ ಆಸ್ತಿಯೇನಲ್ಲ. ಎನ್ನುವ ಮಂತ್ರಿಗಳ ಮಾತಿಗೆ ಹಿಮ್ಮೇಳವಾಗಿ 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆಯು ವಿಧಾನಸೌಧದ ಮೊಗಸಾಲೆಯಿಂದ ಪ್ರಾರಂಭವಾಗಿ ಈದ್ ಮೆರವಣಿಗೆಗಳಲ್ಲಿ ಮೊಳಗುತ್ತಿದೆ. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವ ಉತ್ಸಾಹಿಗಳಿಂದ ಈಗಾಗಲೇ ಗಣೇಶ ಮೆರವಣಿಗೆಯಲ್ಲಿ ಭಾಗವಹಿಸುವ ಹಿಂದು ಹೆಣ್ಣು ಮಕ್ಕಳನ್ನೇ ಗುರಿಯಾಗಿಸಿ ಲಾಠಿ ಏಟುಕೊಡಲು ಪೊಲೀಸರಿಗೆ ಧೈರ್ಯಬಂದಿದೆ. ಹಿಂದು ಎಂದರೆ ಕೊಲೆ; ಇಸ್ಲಾಂ ಎಂದರೆ ಶಾಂತಿ ಎನ್ನುವ ಮುಖ್ಯಮಂತ್ರಿಯ ಮಾತು, ಅಶಾಂತಿಯನ್ನು ಹಬ್ಬಿಸುವ ಮುಸ್ಲಿಂ ಕಿಡಿಗೇಡಿಗಳಿಗೆ ಹುಮ್ಮಸ್ಸನ್ನು ತುಂಬಿದೆ. ಇದಕ್ಕೆ ಬೆಂಬಲವಾಗಿ ಅವರ ನಾಯಕರೇ ಲೋಕಸಭೆಯಲ್ಲಿ ಹಿಂದು ಎಂದರೆ ಹಿಂಸೆ, ಹಿಂಸೆ, ಹಿಂಸೆ ಎಂದು ಘೋಷಿಸಿದರು. ಹಿಂದು ಸಮಾಜದಲ್ಲಿರುವ ತಾರತಮ್ಯದಿಂದ ಮತಾಂತರವಾಗುತ್ತಾರೆ ಎನ್ನುವ ಮೂರ್ಖ ಮಾತು ಅರಾಜಕ ಸ್ಥಿತಿಯನ್ನು ಉಂಟುಮಾಡುತ್ತಿದೆ.
ಇದರಿಂದಾಗಿ ಪೊಲೀಸರಿಗೆ ಪೊಲೀಸ್ ಠಾಣೆಗಳೂ ಕೂಡಾ ಸುರಕ್ಷಿತವಾಗಿಲ್ಲ. ಠಾಣೆಗೆ ಬೆಂಕಿ ಇಡುವುದು ಸಾಮಾನ್ಯವೆನಿಸಿಬಿಟ್ಟಿದೆ. ಹೇಗಿದ್ದರೂ ಒಂದೆರಡು ತಿಂಗಳುಗಳಲ್ಲಿ ಇಂತಹ ಹುಂಬ ಭೀಕರ ಕೃತ್ಯಗಳ ಪ್ರಕರಣಗಳನ್ನು ಮಂತ್ರಿ ಮಂಡಳವೇ ಹಿಂದೆಗೆದುಕೊಳ್ಳುತ್ತದೆ. ಎನ್ನುವ ವಿಶ್ವಾಸವು ಸಮಾಜಘಾತಕರಲ್ಲಿ ಉಂಟಾಗಿದೆ. ನಾಲ್ಕು ಕಲ್ಲುಗಳನ್ನು ಎಸೆದುದಕ್ಕೆ ಇಷ್ಟೊಂದು ರಾದ್ಧಾಂತವೇ ಎನ್ನುವ ಮಂತ್ರಿಗಳ ಮಾತು ಕೋಮುಗಲಭೆಯನ್ನು ಹರಡಿಸಲು ನೆರವಾಗುತ್ತಿದೆ. ಬಂಧನ, ವಿಚಾರಣೆಗೆಲ್ಲವೂ ನಾಟಕದಂತೆ ನಡೆದು ಬಿಡುಗಡೆಯಂತೂ ಖಾತರಿ ಎನ್ನುವ ವಿಶ್ವಾಸವೂ ಕೋಮುಗಲಭೆಕೋರರಲ್ಲಿ ಹೆಚ್ಚುತ್ತಿದೆ.
ಈಚಿನ ಗಲಭೆಗಳಿಗೆ ಸರ್ಕಾರವೇ ಮೊದಲ ಕಾರಣವಾಗಿದ್ದಿತು. ಕೆರೆಗೋಡಿನ ಧ್ವಜಸ್ತಂಭದಲ್ಲಿ ಧ್ವಜವನ್ನು ಹಾರಿಸಲು ಅನುಮತಿ ನೀಡದ ಸರ್ಕಾರ ಅದರ ಪರಿಣಾಮವನ್ನು ಅರಿಯದೇ ಹೋಯಿತು. ಇದರ ಬೆನ್ನಲ್ಲೇ ನಡೆದ ನಾಗಮಂಗಲದ ಮುಸ್ಲಿಂ ಗಲಭೆಯು ಗಣೇಶ ವಿಸರ್ಜನೆಯ ಉತ್ಸವವನ್ನು ಮಲಿನಗೊಳಿಸಿತು. ಈಗ ನಡೆದ ಮದ್ದೂರಿನ ಪರಿಸ್ಥಿತಿಯಂತೂ ಕೈಮೀರಿ ಹೋಯಿತು. ಇದೇ ಮುಂದುವರಿದು ಬೇಲೂರಿನಲ್ಲಿ ಗಣೇಶ ವಿಗ್ರಹಕ್ಕೆ ಚಪ್ಪಲಿ ಹಾರವನ್ನು ತೋಡಿಸುವ ಭಂಡ ಧೈರ್ಯವು ಬಂದಿದೆ.
ನಾಡು, ನುಡಿ, ಧರ್ಮದ ಮಹತ್ವವನ್ನು ಮರೆಮಾಚಬಲ್ಲೆ ಎಂದು ಹೊರಟ ಸರ್ಕಾರವು ಅದರ ಪರಿಣಾಮವನ್ನು ಅನುಭವಿಸಲೇ ಬೇಕಾಗಿದೆ. ಅಲ್ಪಸಂಖ್ಯಾತರ ಮತಗಳಿಂದ ನಮ್ಮ ಸರ್ಕಾರವು ಬಂದಿದೆ ಎಂದು ಘೋಷಿಸಿ ಹಿಂದು ಸಮಾಜಕ್ಕೆ ಕೃತಘ್ನವಾಗಿರುವ ಪಕ್ಷವೂ ಸರ್ಕಾರವೂ ತನ್ನ ತಪ್ಪಿಗೆ ತಕ್ಕ ಶಿಕ್ಷೆಯನ್ನು ಪಡೆದೇ ತೀರುತ್ತದೆ. ಇದು ಮುಂದೆ ಬರುವ ಸರ್ಕಾರಗಳಿಗೂ ಪಾಠವಾಗಲಿದೆ.