Logo

VHP PUBLICATIONS

Hindu Vani


expand_more

ವಿಶೇಷ

By ನರಸಿಂಹಮೂರ್ತಿ, ಸಾಮಾಜಿಕ ಸಾಮರಸ್ಯ ಪ್ರಮುಖ, ಕರ್ನಾಟಕ ದಕ್ಷಿಣ

ಸಾಮರಸ್ಯಕ್ಕಾಗಿ ವಿಶೇಷ ಪ್ರಯತ್ನಗಳು

ವಿಶ್ವ ಹಿಂದೂ ಪರಿಷದ್ ಸಾಮಾಜಿಕ ಸಾಮರಸ್ಯ ವಿಭಾಗದ ಪ್ರಮುಖರಾದ ದೇವಜಿಭ್ಯಾ ರಾವತ್‌ರವರು ಕರ್ನಾಟಕ ದಕ್ಷಿಣ ಪ್ರಾಂತ್ಯದಲ್ಲಿ ಮೂರು ದಿನಗಳ ಪ್ರವಾಸವನ್ನು ಕೈಗೊಂಡಿದ್ದರು. ಪ್ರವಾಸದ ಸದುಪಯೋಗವನ್ನು ಮಾಡಿಕೊಳ್ಳಲು ವಿವಿಧ ಜಿಲ್ಲೆಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು. ಕಾರ್ಯಕರ್ತರು ಯೋಜಿತ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸಿದುದು ಮುಂದಿನ ಸಾಮರಸ್ಯದ ಕಾರ್ಯಗಳಿಗೆ ಪುಟ ನೀಡುವಂತೆ ರೂಪುಗೊಂಡವು.


ವಿಶೇಷ

11.8.2025. ಧರ್ಮಶ್ರೀ ಪ್ರಾಂತಕಾರ್ಯಾಲಯ: ಸಾಮರಸ್ಯದ ವಿಶೇಷ ಕಾರ್ಯಕ್ರಮವಾಗಿದ್ದ ಈ ಅವಧಿಯಲ್ಲಿ ಡಾ| ಅಂಬೇಡ್ಕರವರು ಹಿಂದು ಸಮಾಜ ಸುಧಾರಕರಾಗಿ ವಹಿಸಿದ ವಿಶಿಷ್ಟ ಪಾತ್ರವನ್ನು ಸಂಘದ ವ್ಯವಸ್ಥಾ ಪ್ರಮುಖರಾದ ಕಾ.ಶಂ.ಶ್ರೀಧರ್‌ರವರು ವಿವರಿಸಿದರು. ಪ್ರಾಜ್ಞಸಭಿಕರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಸಭೆಯಲ್ಲಿ ಹಲವು ವಿಚಾರಗಳು ಮಂಡಿಸಲ್ಪಟ್ಟವು.

ವಿಶೇಷ

29.08.2025 ನಾಗವಾರ: ನಾಗವಾರದಲ್ಲಿ ಏರ್ಪಡಿಸಿದುದು 12 ನಾನಾ ಸಮುದಾಯಗಳ ಹಿರಿಯರ ಮಿಲನಗೋಷ್ಠಿ, ಅಲ್ಲಿ ಪರಸ್ಪರ ಸಂವಾದಗಳು ಮುಕ್ತವಾಗಿ ನಡೆದವು. ಹಿಂದು ಸಮಾಜವು ಒಂದಾಗಿ ನಿಂತು ತನ್ನ ರಕ್ಷಣೆಯನ್ನು ತಾನು ಮಾಡಲು ಶಕ್ತವಾದಾಗ ಹಲವು ಸಮಸ್ಯೆಗಳ ನಿವಾರಣೆಯು ಸಾಧ್ಯವೆನ್ನುವ ಹಿನ್ನೆಲೆಯಲ್ಲಿ ನಡೆದ ಮಾತುಕತೆಗಳು ಉತ್ತಮ ಪರಿಣಾಮವನ್ನು ಉಂಟುಮಾಡಿದವು. ಮಾನ್ಯ ದೇವಜಿ ರಾವತ್‌ರೊಂದಿಗೆ (ಭಾಗ್ಯನಗರ)ದಿಂದ ಪೂಜ್ಯಸ್ವಾಮಿ ಇದ್ದದ್ದು ಅರ್ಥಪೂರ್ಣವೆನಿಸಿತು. ಪ್ರಾಂತ ಹೈದರಾಬಾದ್ ಶಂಕರ್‌ರವರೂ ಸಾಮಾಜಿಕ ಸಮರಸತೆ ವಿಭಾಗದ ಪ್ರಮುಖರಾದ ನರಸಿಂಹಮೂರ್ತಿಯವರು ಸಹ ಪ್ರಮುಖರಾದ ಓಂಪ್ರಕಾಶ್ ರವರೂ ಜೊತೆಗೂಡಿದ್ದರು. ಪರಿಷದ್ ಪ್ರಾಂತ ಕಾರ್ಯದರ್ಶಿಗಳಾದ ಬಿ.ಈ. ಸುರೇಶರವರೂ ಪ್ರವಾಸದ ಪ್ರತಿ ಹಂತದಲ್ಲೂ ಮಾರ್ಗದರ್ಶನಕ್ಕೆ ಲಭ್ಯರಿದ್ದರು.

ವಿಶೇಷ

30.8.2025ರಂದು ಕೆ.ಆರ್. ಪುರಂ: ಜಿಲ್ಲೆಯ ಉಪೇಕ್ಷಿತ ವಿಭಿನ್ನ ರೀತಿಯ ಸಾಮರಸ್ಯದ ಕಾರ್ಯಕ್ರಮವನ್ನು ಕಾಲೋನಿಯಲ್ಲಿ ಕಲ್ಪಿಸಲಾಯಿತು.ಕನ್ಯಾಪೂಜೆಯಂತಹ ವಿಶಿಷ್ಟ ಕಾರ್ಯಕ್ರಮವು ಕಾಲೋನಿಯ ಎಲ್ಲಾ ವಾಸಿಗಳಿಗೆ ಭಾವುಕ ಅನುಭವವನ್ನು ನೀಡಿತು. ಬಾಲಕಿಯರ ಪಾದಪೂಜೆಯನ್ನು ಮಾಡಿ ಅವರಿಗೆ ಪೂಜ್ಯ ಶಂಕರ ಸ್ವಾಮೀಜಿಯವರು ಲಕ್ಷ್ಮಿ ದೇವತೆಯ ವಿಗ್ರಹವನ್ನೂ ಹೊಸ ಉಡುಪುಗಳ ಉಡುಗೊರೆಯನ್ನೂ ನೀಡಿದರು. ಹಿಂದೂ ಧರ್ಮದಲ್ಲಿ ಹೆಣ್ಣು ಮಕ್ಕಳೆಲ್ಲರೂ ದೇವಿಯರೆನ್ನುವ ವಿಚಾರವನ್ನು ಎಲ್ಲರೂ ಮನಗಂಡರು. ಇದರೊಂದಿಗೆ ಸಭೆಯ ಅವಧಿಯಲ್ಲಿ ಸಮುದಾಯಗಳ ಮಿಲನ ಮತ್ತು ವಿಚಾರವಿನಿಮಯಗಳೂ ನಡೆದವು.

ವಿಶೇಷ

31.8.2025ರಂದು ಕೋಲಾರ: ವಿಭಾಗದ ದೇವನಹಳ್ಳಿ ಮತ್ತು ಗೌರಿಬಿದನೂರಿನಲ್ಲಿ ಸಭೆಗಳು ನಡೆದವು. ದೇವನಹಳ್ಳಿಯಲ್ಲಿ ಎಂಟು ಸಮುದಾಯಗಳ ಹಿರಿಯರೂ ಗೌರಿಬಿದನೂರಿನಲ್ಲಿ 25 ಸಮುದಾಯದವರೂ ಬಂದು ಸೇರಿದ್ದರು. ದೇವಜಿಭ್ಯಾಯವರು ಹಿಂದೂ ಸಮಾಜವು ಹಲವು ಹಂತಗಳಲ್ಲಿ ವಿಕಾಸಗೊಂಡ ಇತಿಹಾಸವನ್ನು ವಿವರಿಸಿದರು. ಜಾತಿಯ ಕಟ್ಟುಪಾಡುಗಳು ಪ್ರಾರಂಭವಾಗಲು ಮುಸ್ಲಿಂ ಆಡಳಿತದ ದೌರ್ಜನ್ಯಗಳೇ ಕಾರಣವಾದುದನ್ನು ದೃಷ್ಟಾಂತಗಳ ಮೂಲಕ ವಿವರಿಸಿದರು. ಮತ್ತೆಮತ್ತೆ ಸೇರುತ್ತಾ ಹೊಸ ವಿಧಾನಗಳನ್ನು ಅನುಸರಿಸುವುದರ ಮೂಲಕ ಈಗ ಮತ್ತೆ ಹೊಸ ಅಖಂಡ ಹಿಂದು ಸಮಾಜವನ್ನು ನಿರ್ಮಿಸೋಣವೆಂದು ಕರೆ ನೀಡಿದರು.

ವಿಶೇಷ

.