Logo

VHP PUBLICATIONS

Hindu Vani


expand_more

ವಿಡಂಬನೆ

By - ವೆಂಕಟೇಶ್‌ ರಾವ್, ಹುಣಸೂರು

ನೊಬೆಲ್ ಶಾಂತಿ ಪದಕವೆನ್ನುವ ಅಣಕು ಪ್ರಶಸ್ತಿ

ಡೊನಾಲ್ಡ್ ಟ್ರಂಪ್ ಎನ್ನುವ ವ್ಯಕ್ತಿಗೆ ನೊಬೆಲ್ ಪ್ರಶಸ್ತಿಯನ್ನು ಅದು ಕೂಡಾ ಶಾಂತಿ ಸ್ಥಾಪಿಸಲು ಪ್ರಯತ್ನಿಸಿದುದಕ್ಕಾಗಿ ನೀಡಲಿರುವರು ಎಂದರೆ ಅದೊಂದು ವಿಡಂಬನೆ ಅಥವಾ ಹಾಸ್ಯಾಸ್ಪದ ವಿಚಾರವೇ ಸರಿ.

ಏಕೆಂದರೆ 1973ರಲ್ಲಿ ಇದೇ ಪ್ರಶಸ್ತಿಯನ್ನು ಅಮೆರಿಕಾದ ಹೆನ್ರಿ ಕಿಸಿಂಜರ್ ಎನ್ನವ ಮಹಾಯುದ್ಧಕೋರ ಮತ್ತು ಸಾಮೂಹಿಕ ಕೊಲೆಗಾರನಿಗೆ ಕೊಡಲಾಗಿದ್ದಿತು. ಆತನು 2009 ರಲ್ಲಿ ಲಿಬಿಯಾ ಎನ್ನುವ ದೇಶವನ್ನೇ ನಿರ್ನಾಮ ಮಾಡಲು ಹೊರಟ್ಟಿದ್ದನು. ಅಫಘಾನಿಸ್ತಾನದ ಮೇಲೆ ಬಾಂಬು ದಾಳಿಯನ್ನು ಪ್ರಾರಂಭಿಸಿದ ಬರಾಕ್ ಒಬಾಮಾ ಎನ್ನುವ ಅಮೆರಿಕಾ ಅಧ್ಯಕ್ಷನಿಗೂ ಈ ಪ್ರಶಸ್ತಿಯನ್ನು ನೀಡಲಾಗಿದ್ದಿತು. ಆಗಾಗ ಶಾಂತಿಯ ಕಿರು ಸಂದೇಶವನ್ನು ಕೊಡಲು ಹೊರಟು ಮಹಾಯುದ್ಧವನ್ನು ಪ್ರಾರಂಭಿಸಿದವರೇ ಈ ಪ್ರಶಸ್ತಿಯನ್ನು ಪಡೆದುಕೊಂಡುದು ಈ ಪಾರಿತೋಷಕದ ಇತಿಹಾಸವಾಗಿದೆ. 1970ರ ದಶಕದ ಪ್ರಾರಂಭದಲ್ಲಿ ಕಾಂಬೋಡಿಯಾ, ಲಾವೋಸ್ ಮತ್ತು ವಿಯೆಟ್ನಾಂಗಳ ಸರ್ವನಾಶ ಮಾಡಲು ಮತ್ತು ಆ ಪುಟ್ಟದೇಶಗಳ ಇಂಚಿಂಚೂ ಭೂಮಿಯನ್ನು ಬಾಂಬು ಧಾಳಿಯಿಂದ ನಡುಗಿಸಿದುದೇ 5ಲಕ್ಷ ನಾಗರಿಕರನ್ನು ಕೊಂದಿದ್ದೇ ಈ ವ್ಯಕ್ತಿಗಳ ಹೆಗ್ಗಳಿಕೆಯಾಗಿದೆ.

ಹೆನ್ರಿಕಿಸಿಂಜರ್ ಬಗ್ಗೆ ಹೇಳ ಹೊರಟರೆ, ಆತನು ಇಲ್ಲಿಗೂ ನಿಲ್ಲದೆ ಈ ದೇಶಗಳ ಕೃಷಿ ಭೂಮಿಯ ಮೇಲೆ ವಿಷಮಯ ರಾಸಾಯನಿಕವನ್ನು ಸುರಿಸಿ ಅಲ್ಲಿಯ ಕೃಷಿ ಆರ್ಥಿಕತೆಯನ್ನು ನಾಶಗೊಳಿಸಿ ಅವುಗಳ ಯುದ್ಧ ಶಕ್ತಿಯನ್ನು ಹಾಸಗೊಳಿಸುವ ನೀತಿಯನ್ನು ಅವಲಂಬಿಸಿದ್ದನು. ಈ ರಾಸಾಯನಿಕ ಯುದ್ಧವು ಸಾವಿರ ಸಾವಿರ ಜನರ ಸಾವಿಗೆ ಕಾರಣವಾದುದಷ್ಟೇ ಅಲ್ಲದೆ ಮುಂದೆ ಹುಟ್ಟಿದ ಪೀಳಿಗೆಯು ತೀವ್ರ ನೋವಿನ ಕ್ಯಾನ್ಸರ್ ರೋಗ ಪೀಡಿತರಾಗಲು ಕಾರಣವಾಯಿತು. ಅಂಗವಿಕಲ ಮಕ್ಕಳ ಹುಟ್ಟು ಪ್ರಾರಂಭವಾಯಿತು. ಅಮೆರಿಕಾದ ಸಾಮ್ರಾಜ್ಯ ಶಾಹಿ ನೀತಿಯನ್ನು ಎದುರಿಸಲು ಹೊರಟ ಪುಟ್ಟ ಪುಟ್ಟ ದೇಶಗಳ ಕತೆಯಿದು, ನೊಬೆಲ್ ಪ್ರಶಸ್ತಿಗಾಗಿ ಹೊರಟ ಕೊಲೆಗಡುಕರ ಚರಿತೆಯಿದು.

ಈ ಹೆನ್ರಿಕಿಸಿಂಗರ್ ನೊಬೆಲ್ ಪ್ರಶಸ್ತಿ ಪಡೆದಾಗಂತೂ ಯುದ್ದಕ್ಕೂ ಶಾಂತಿ ಪ್ರಯತ್ನಕ್ಕೂ ವ್ಯತ್ಯಾಸವೇ ಕಾಣದಾಯಿತು. 1971 ರಲ್ಲಿ ಈ ಕಿಸಿಂಜರ್ ಯುದ್ಧ ನೀತಿಗಳು ಆಗಿನ ಪೂರ್ವ ಪಾಕಿಸ್ತಾನವಾಗಿದ್ದ ಈಗಿನ ಬಾಂಗ್ಲಾದೇಶದಲ್ಲಿ 30ಲಕ್ಷ ಹಿಂದುಗಳ ಮಾರಣ ಹೋಮಕ್ಕೆ ಕಾರಣವಾಯಿತು.

ಈ ಹಿಂದು ನಿರ್ನಾಮವನ್ನು ನಿಲ್ಲಿಸಲು ಪಾಕಿಸ್ತಾನದ ಮೇಲೆ ಯುದ್ಧ ಸಾರಿದ ಭಾರತವನ್ನು ಈತ 'ಬಾಸ್ಟರ್ಡ್ಸ್' ಎಂದು ಕರೆದ. ಆತನಿಗೆ ಹೋಲಿಸಿದರೆ ಈಗಿನ ಟ್ರಂಪ್ ಸಂತನೆನ್ನಬೇಕು. ಈ ನೊಬೆಲ್ ಪದಕ ವಿಜೇತರು ಪಶ್ಚಿಮ ದೇಶಗಳ ಪಾಲಿಗೆ ಪ್ರಚಾರ ಸಾಧನಗಳಂತೆ. 1964ರಲ್ಲಿ ಜೀನ್ ಪಾಲ್ ಸಾರ್ತ್ರೆ ಎನ್ನುವ ಫ್ರಾನ್ಸ್ ಲೇಖಕನಿಗೆ ನೊಬೆಲ್ ಪ್ರಶಸ್ತಿ ಘೋಷಿತವಾಯಿತು. ಅದನ್ನು ನಿರಾಕರಿಸಿದ ಆ ಸಾಹಿತಿಯು 'ಪಾಶ್ಚಾತ್ಯ ಲೇಖಕರಿಗೆಂದೇ ಮೀಸಲಾಗಿರುವ ಮತ್ತು ಆಗಾಗ ಪ್ರಚಾರಕ್ಕಾಗಿ ಪೌರ್ವಾತ್ಯರಿಗೂ ಹಂಚುವ ಈ ಪ್ರಶಸ್ತಿ ನನಗೆ ಬೇಡ' ಎಂದಿದ್ದರು.