Logo

VHP PUBLICATIONS

Hindu Vani


expand_more

ಸಾರ್ಥಕವಾಯಿತು ಬದುಕು

ಸಾರ್ಥಕವಾಯಿತು ಬದುಕು

ಸಾರ್ಥಕವಾಯಿತು ಬದುಕು


ಮಾರ್ಗಶಿರ ಶುಕ್ಲ ಪಂಚಮಿ(25.11.2025)ಯನ್ನು ವಾಡಿಕೆಯಂತೆ ಸ್ಕಂದ ಪಂಚಮಿ ಎಂದು ಕರೆಯುತ್ತಿದ್ದರೆ; ಆ ದಿನದಂದು ಶ್ರೀರಾಮಚಂದ್ರ ಮತ್ತು ಸೀತಾದೇವಿಯರ ವಿವಾಹವೂ ನಡೆದುದರಿಂದ ಅದನ್ನು ವಿವಾಹ ಪಂಚಮಿಯೆಂದು ಕರೆಯುತ್ತಾರೆ.

ಅಂದು ಅಭಿಜಿನ್ ಮೂಹೂರ್ತದಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಪೂಜ್ಯ ಸರಸಂಘಚಾಲಕರ ಉಪಸ್ಥಿತಿಯಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದ 161 ಅಡಿ ಎತ್ತರದ ಶಿಖರದ ಮೇಲೆ ಧರ್ಮ ಧ್ವಜವನ್ನು ಹಾರಿಸಿದರು. 22ಅಡಿ ಉದ್ದ ಮತ್ತು ||ಅಡಿ ಅಗಲವಿರುವ ಈ ಕೇಸರಿ ಧ್ವಜದಲ್ಲಿ ಮೂರು ಪ್ರತೀಕಗಳಿವೆ. ಶ್ರೀರಾಮನು ಸೂರ್ಯವಂಶಕ್ಕೆ ಸೇರಿರುವನಾದುದರಿಂದ ಪ್ರಖರ ಸೂರ್ಯನೂ, ಈ ವಿಶ್ವ ಸೃಷ್ಟಿಯನ್ನು ಪ್ರತಿಬಿಂಬಿಸುವ “ಓಂ' ಕಾರವೂ ಇಕ್ಷಾಕು ವಂಶದ ಚಿಹ್ನೆಯಾದ ಕೋವಿದಾರು ವೃಕ್ಷವೂ (ಕನ್ನಡ: ಕೆಂಪು ಮಂದಾರ, ಬಹೂನಿಯಾ ಸಸ್ಯವರ್ಗಕ್ಕೆ ಸೇರಿದೆ) ಇದೆ. ಈ ಧ್ವಜಾರೋಹಣದೊಂದಿಗೆ 'ಮಂದಿರವಲ್ಲೇ ಕಟ್ಟುವೆವು' ಎಂದು ಸಾರಿದ ನಮ್ಮ ಸಂಕಲ್ಪವು ಈಡೇರಿತು.

ಹಲವು ಶತಕಗಳ ಹಿಂದು ತಪಸ್ಸು ಪೂರ್ಣವಾಗಿ ಫಲಿಸಿದಂತಾಯಿತು. ಈ ಕಾಲದಲ್ಲಾದ ನಮ್ಮ ಹುಟ್ಟು ಮತ್ತು ಈ ಬದುಕು ಸಾರ್ಥಕವಾಯಿತು. (ಮುಖಪುಟ ಟಿಪ್ಪಣಿ)