Logo

VHP PUBLICATIONS

Hindu Vani


expand_more

ಸಂಸ್ಕೃತಿ

ಹೆಸರಿನಲ್ಲಿದೆ ಸಂಸ್ಕೃತಿ


ಅರುಣ:

ಸೂರ್ಯನ ಸಾರಥಿ.


ಅರುಂಧತಿ:

ವಸಿಷ್ಠ ಮಹರ್ಷಿಯ ಪತ್ನಿ, ಅಕ್ಷಮಾಲೆಯೆಂದು ಕೂಡಾ ಈಕೆಗೆ ಹೆಸರಿದೆ. ಮನುವಿನ ಮಗಳಾದ ದೇವಹೂತಿ ಈಕೆಯ ತಾಯಿ, ಮರೀಚಿ ಮುನಿಯ ಪತ್ನಿ ಕಲೆ, ಅಂಗೀರಸನ ಪತ್ನಿ ಶ್ರದ್ಧೆ, ಪುಲಸ್ತನ ಮಡದಿ ಹವಿರ್ಭುಕ್, ಶೃಗು ಋಷಿಯ ಹೆಂಡತಿ ಖ್ಯಾತಿ, ಕ್ರತು ಋಷಿಯ ಪತ್ನಿ ಕ್ರಿಯೆ, ಅತ್ರಿಯ ಪತ್ನಿ ಅನಸೂಯೆ ಹಾಗೂ ಕಪಿಲ ಋಷಿ ಇವರೆಲ್ಲರೂ ಅರುಂಧತಿಯ ಒಡಹುಟ್ಟಿದವರು. ಈಕೆ ಋಷಿಗಳಿಗೆ ಧರ್ಮರಹಸ್ಯವನ್ನು ಬೋಧಿಸಿದಳು. ನವದಂಪತಿಗಳಿಗೆ ನಕ್ಷತ್ರ ರೂಪದ ಅರುಂಧತಿಯನ್ನು ತೋರಿಸುವ ಸಂಪ್ರದಾಯವಿದೆ.


ಅರ್ಜುನ:

ಪಾಂಡು ರಾಜ ಮತ್ತು ಕುಂತಿಯರ ಮಗ, ದೌಪದಿಯ ಸ್ವಯಂವರದಲ್ಲಿ ಮತ್ಸಯಂತ್ರವನ್ನು ಭೇಧಿಸಿ ಆಕೆಯನ್ನು ಗೆದ್ದವನು. ಇರಾವಂತ, ಬಭ್ರುವಾಹನ, ಅಭಿಮನ್ಯು ಅವನ ಮಕ್ಕಳು, ಗಾಂಡೀವ ಅವನ ಬಿಲ್ಲು. ಮಾಯಾಸುರನಿಂದ ಪಡೆದ ದೇವದತ್ತ ಶಂಖ ಅರ್ಜುನನದ್ದು. ಶಿವನಿಂದ ಪಾಶುಪತಾಸ್ತ್ರವನ್ನು ಅರ್ಜುನನು ಪಡೆದನು.


ಅಲಕನಂದಾ:

ಸ್ವರ್ಗಲೋಕದಲ್ಲಿ ಹರಿಯುವ ಗಂಗೆಯ ಹೆಸರು.


ಅಲಕಾ:

ಕುಬೇರನ ರಾಜಧಾನಿ. ರಾವಣನಿಗೆ ಲಂಕೆಯನ್ನು ಬಿಟ್ಟುಕೊಡಬೇಕಾಗಿ ಬಂದಾಗ ನಿರ್ಮಿಸಿದ ಸುಂದರ ನಗರ.


ಅವಂತೀ:

ನರ್ಮದಾ ನದಿಯ ದಕ್ಷಿಣದ ಮಾಳವಾಸಲ್ಲಿರುವ ಒಂದು ದೇಶ. ಉಜ್ಜಯಿನಿ ಅದರ ರಾಜಧಾನಿ. ಇಲ್ಲಿ ಸಾಂದೀಪನಿ ಋಷಿಯ ಬಳಿ ಬಲರಾಮ ಮತ್ತು ಕೃಷ್ಣರು ವಿದ್ಯಾಭ್ಯಾಸ ಮಾಡಿದರು.


ಅಶ್ವಿನಿ:

ದಕ್ಷನ ಮಗಳು, ಚಂದ್ರನ 27 ಮಂದಿ ಪತ್ನಿಯರಲ್ಲಿ ಹಿರಿಯಳು.


ಅಸಿತ:

ಹಿಮವಂತನ ಮಗಳು ಏಕಪರ್ಣೆಯ ಪತಿ. ಈತನ ಸ್ಮರಣೆಯಿಂದ ಸರ್ಪಭಯವಿಲ್ಲ.


ಅಹಲ್ಯಾ:

ಗೌತಮ ಮುನಿಯ ಪತ್ನಿ, ಇವರ ಮಗ ಶತಾನಂದ.


ಆತ್ರೇಯ:

ವಾಮದೇವ ಋಷಿಯ ಶಿಷ್ಯ ವಿದುರನಿಗೆ ಜ್ಞಾನದ ಉಪದೇಶ ಮಾಡಿದವನು.


ಆದಿತ್ಯ:

ಕಶ್ಯಪ ಅದಿತಿಯರ ಮಗ, ಧಾತೃ, ಮಿತ್ರ, ಆರ್ಯಮ, ಶಕ್ರ, ವರುಣರು ಇವನ ಒಡಹುಟ್ಟಿದವರು.


ಆನಕ:

ವಸುದೇವನ ತಮ್ಮ ಶೂರ ರಾಜ ಮತ್ತು ಮಾರಿಷೆಯರ ಮಗ,


ಆನರ್ಥ:

ಇಕ್ಷಾಕುವಿನ ಮೊಮ್ಮಗ, ಕುಶಸ್ಥಲೀ ಅಂದರೆ ದ್ವಾರಕಾ ನಗರವನ್ನು ಇವನೇ ನಿರ್ಮಿಸಿದುದು.