Logo

VHP PUBLICATIONS

Hindu Vani


expand_more

ವಿದ್ಯಮಾನ

By ಮನೋಹರ, ವಿಭಾಗ ಕಾರ್ಯದರ್ಶಿ, ಬೆಂಗಳೂರು
ವಿದ್ಯಮಾನ

ಆ ಆರು ಪ್ರಶ್ನೆಗಳು

 ಸರ್ವೋಚ್ಛನ್ಯಾಯಾಲಯದ ಬಗ್ಗೆ ಸಂಸದರಾದ ನಿಶಿಕಾಂತ ದುಬೆಯವರು ಮಾಡಿದ ಟಿಪ್ಪಣಿಯೊಂದು ಕುತೂಹಲಕಾರಿಯಾಗಿದೆ. “ಧಾರ್ಮಿಕ ದೌರ್ಜನ್ಯವನ್ನು ಪ್ರಚೋದಿಸಿರುವುದಕ್ಕೆ ಹೊಣೆ ಹೊರಬೇಕಾದವರು ಯಾರಾದರೂ ಇದ್ದರೆ ಅದು ಸರ್ವೋಚ್ಚ ನ್ಯಾಯಾಲಯ ಹಾಗೂ ಅದರ ನ್ಯಾಯಾಧೀಶರು” ಎನ್ನುವ ಅವರ ಮಾತು ವಿವಾದವನ್ನು ಸೃಷ್ಟಿಸಿತು. ಆದರೆ ಆ ಮಾತನ್ನು ಬೆಂಬಲಿಸಿ ಜೆ.ಎನ್.ಯು ಪ್ರಾಧ್ಯಾಪಕರಾದ ಆನಂದ ರಂಗನಾಥನ್ ನೀಡಿದ ಹೇಳಿಕೆಯು ಮಾತ್ರ ಅದನ್ನು ಇನ್ನಷ್ಟು ಸ್ಪಷ್ಟಗೊಳಿಸುತ್ತಿದೆ.

ಕಾಶ್ಮೀರದ ಕುರಿತು ದ್ವಂದ್ವ ನಿಲುವು:

ಕಾಶ್ಮೀರಕ್ಕೆ ವಿಶೇಷ ಸ್ಥಾನವನ್ನು ನೀಡಿದ 370ನೇ ವಿಧಿಯನ್ನು ಹಿಂದೆಗೆಯುವುದರ ವಿರುದ್ಧ ವಿರೋಧ ಪಕ್ಷಗಳು ಸರ್ವೋಚ್ಚ ನ್ಯಾಯಾಲಯದ ಮೊರೆಹೋದವು. ನ್ಯಾಯಾಲಯವು ಅದನ್ನು ಸ್ವೀಕರಿಸಿತು. ಆದರೆ ಕಾಶ್ಮೀರದ ಹಿಂದುಗಳ ವಿರುದ್ಧ 1990ರಲ್ಲಿ ನಡೆದ ದೇವಸ್ಥಾನಗಳ ಧ್ವಂಸ, ಕೊಲೆ, ಅತ್ಯಾಚಾರ, ಆಸ್ತಿ ಪಾಸ್ತಿಯನ್ನು ವಶಪಡಿಸಿ ಸಮೂಹಿಕ ವಲಸೆ ಹೋಗುವಂತೆ ಬಲತ್ಕಾರ ಮಾಡಿದ ಅನ್ಯಾಯಗಳ ಕುರಿತು ನ್ಯಾಯಾಲಯಕ್ಕೆ ಮಾಡಿದ ಮನವಿಯನ್ನು ಅದು ತಿರಸ್ಕರಿಸಿತು. ಅವೆಲ್ಲ ನಡೆದುದು ಬಹಳ ಹಿಂದೆ ಎಂದು ಕಾರಣವನ್ನು ಹೇಳಿತು. ಇದು ಧಾರ್ಮಿಕ ಸಂಘರ್ಷಕ್ಕೆ ದಾರಿ ಮಾಡಿಕೊಡುವುದಿಲ್ಲವೇ ಎಂದು ಆನಂದ ರಂಗನಾಥನ್ ಪ್ರಶ್ನಿಸಿದರು.

ವಕ್ಷಬೋರ್ಡ್ ದುರುಪಯೋಗ:

ವಕ್ಷ ಬೋರ್ಡಿನ ಸುಧಾರಣೆಯ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ವ್ಯಾಕುಲವನ್ನು ತೋರಿಸುತ್ತಿದೆ. ಕಳೆದ 30 ವರ್ಷಗಳಿಂದ ಅದು ಕಾನೂನಿಗೆ ವಿರುದ್ಧವಾಗಿ ಹಲವು ಆಸ್ತಿಗಳನ್ನು ವಶಪಡಿಸಿಕೊಂಡಿದೆ. ತೆರಿಗೆಯನ್ನು ವಂಚಿಸಿದೆ. ಸಮಾನಾಂತರವಾದ ನ್ಯಾಯಾಲಯವಾಗಿ ವರ್ತಿಸಿದೆ. ಇಷ್ಟಾಗಿಯೂ ನ್ಯಾಯಾಲಯವು ಮೌನಕ್ಕೆ ಮೊರೆ ಹೋಯಿತು. ಇಸ್ಲಾಂ ಸುಧಾರಣೆಯನ್ನು ಒಪ್ಪುವುದಿಲ್ಲವೆನ್ನುವುದಾದರೆ; ಹಿಂದು ಭೂಮಿಯಲ್ಲಿ ಮಸೀದಿಗಳನ್ನು ಹಾಗೂ ದರ್ಗಾಗಳನ್ನು ಕಟ್ಟುವುದು ಒಪ್ಪಿತವೇ? 20ಲಕ್ಷ ಹಿಂದು ಆಸ್ತಿಪಾಸ್ತಿಗಳನ್ನು ವಕ್ಷ ಕಬಳಿಸಿದುದು ಧಾರ್ಮಿಕ ಪಕ್ಷಪಾತವಲ್ಲವೇ?

ದೇವಸ್ಥಾನಗಳ ಸಂಪತ್ತಿನ ಲೂಟಿ:

ಸರ್ಕಾರವು ದೇವಸ್ಥಾನಗಳನ್ನು ನಿಯಂತ್ರಿಸುತ್ತಿದೆ. ಅವುಗಳ ಆದಾಯವು ಮದ್ರಸಾಗಳಿಗೆ ಸೋರಿ ಹೋಗುತ್ತಿದೆ. ಆ ಹಣದಿಂದ ಹಜ್ ಯಾತ್ರೆ, ಇಫ್ತಾರ್ ಔತಣಗಳು, ಮುಸ್ಲಿಮರಿಗೆ ಸಾಲ ಸೌಕರ್ಯಗಳು ಆಭಾದಿತವಾಗಿ ನಡೆಯುತ್ತಿವೆ. ಆದರೆ ಹಿಂದು ಧಾರ್ಮಿಕ ಉತ್ಸವಗಳಿಗೆ ಇನ್ನಿಲ್ಲದ ಅಡ್ಡಿ ಆತಂಕಗಳು. ಈ ಕುರಿತು ಹೂಡಿದ ಕಾನೂನು ಕ್ರಮಗಳನ್ನೆಲ್ಲ ನ್ಯಾಯಾಲಯವು ತಳ್ಳಿಹಾಕುತ್ತಲೇ ಬರುತ್ತಿದೆ. ಅಲ್ಪಸಂಖ್ಯಾತರಿಗೆ ಪ್ರಥಮ ಆದ್ಯತೆಯ ಪುರಸ್ಕಾರವು ಸಿಗುತ್ತಿದೆ. ಇದು ಹಿಂದುಗಳನ್ನು ಪ್ರಚೋದಿಸುವ ಕ್ರಮಗಳಲ್ಲವೇ?

ಹಿಂದುಗಳ ವಿರುದ್ಧ ಶೈಕ್ಷಣಿಕ ನೀತಿ:

ಶೈಕ್ಷಣಿಕ ಹಕ್ಕಿನ ಕಾನೂನಿನಂತೆ ಹಿಂದು ಶಾಲೆಗಳು ಅಲ್ಪಸಂಖ್ಯಾತರಿಗೆ ಶೇಕಡಾ 25 ಸೀಟುಗಳನ್ನು ಕಾಯ್ದಿರಿಸಬೇಕು. ಆದರೆ ಮುಸ್ಲಿಂ ಮತ್ತು ಕ್ರೈಸ್ತ ಶಾಲೆಗಳಿಗೆ ಇದರಿಂದ ವಿನಾಯಿತಿಯಿದೆ. ಹೀಗಾಗಿ ಸಾವಿರಾರು ಹಿಂದು ಶಾಲೆಗಳು ಮುಚ್ಚಬೇಕಾಗಿ ಬಂದಿದೆ. ಹಿಂದು ವಿದ್ಯಾರ್ಥಿಗಳು ಅಹಿಂದು ಶಾಲೆಗಳಲ್ಲಿ ಓದಬೇಕಾಗಿ ಬಂದಿದೆ. ಇದು ಮತಾಂತರಕ್ಕೆ ದಾರಿಮಾಡಿ ಕೊಡುತ್ತದೆ. ಇದನ್ನು ಸುಪ್ರಿಂ ಕೋರ್ಟ್ ಕಾಣುತ್ತಿಲ್ಲವೇ?

ವಿದ್ಯಮಾನ

ವಾಕ್ ಸ್ವಾತಂತ್ರ್ಯವೆಂಬ ಬೂಟಾಟಿಕೆ:

ಹಿಂದುಗಳ ಮಾತು ದ್ವೇಷಭಾಷಣವಾಗುತ್ತದೆ. ಆದರೆ ಉಳಿದವರು ಅಂದುದು ಅಭಿವ್ಯಕ್ತಿ ಸ್ವಾತಂತ್ರ್ಯವೆಂದಾಗುತ್ತದೆ. ನೂಪುರ ಶರ್ಮಾ ಕುರಾನಿನ ಮಾತುಗಳನ್ನು ಉಲ್ಲೇಖಿಸಿದಾಗ ನ್ಯಾಯಾಲಯವು ಅದು ದ್ವೇಷದ ಭಾಷಣವೆಂದು ಹೆಸರಿಸಿತು. ಆದರೆ ಸ್ಟಾಲಿನ್ ಅಥವಾ ಉದಯನಿಧಿಯರು ಸನಾತನ ಧರ್ಮವನ್ನು ರೋಗವೆಂದು ಕರೆದಾಗ ನ್ಯಾಯಾಲಯವು ಮೌನವಹಿಸಿತು.


ವಿದ್ಯಮಾನ

ಹಿಂದು ಪರಂಪರೆಗೆ ನಿಷೇಧಗಳು:

ಸರ್ವೋಚ್ಚನ್ಯಾಯಾಲಯವು ದಸರಾದಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸುತ್ತದೆ. ಆದರೆ ಮುಸ್ಲಿಂ ಈದ್ ದಿನಗಳಲ್ಲಿ ಕ್ರೂರವಾದ ಹಲಾಲ್ ಪದ್ಧತಿಯಲ್ಲಿ ಪ್ರಾಣಿಗಳ ಸಾಮೂಹಿಕ ವಧೆಯನ್ನು ಒಪ್ಪುತ್ತದೆ. ಜನ್ಮಾಷ್ಟಮಿ ದಿನದ ಮೊಸರು ಕುಡಿಕೆಯ ಸ್ಪರ್ಧೆಗೆ ಇತಿಮಿತಿಗಳನ್ನು ವಿಧಿಸುತ್ತದೆ. ಮೊಹರಂನ ಕ್ರೂರ ಹಿಂಸಾ ಮೆರವಣಿಗೆಯ ವಿರುದ್ಧ ಯಾವುದೇ ಕಾನೂನಿನ ಕ್ರಮವಿರುವುದಿಲ್ಲ. ದೀಪಾವಳಿಯ ಪಟಾಕಿ ಪರಿಸರ ವಿರುದ್ಧವಾಗುತ್ತದೆ. ಉಳಿದವರ ಪಟಾಕಿ ಸರಮಾಲೆಗಳಿಗೆ ನಿರ್ಬಂಧವಿರುವುದಿಲ್ಲ.

ಹಿಂದು ಧಾರ್ಮಿಕ ನೀತಿ ನಿಯಮಗಳಿಗೆ ನಿರ್ಬಂಧಗಳು:

ಶಬರಿಮಲೆಯಲ್ಲಿ ಹಿಂದು ಭಾವನೆಗಳಿಗೆ ಘಾಸಿ ಮಾಡಲಾಗುತ್ತದೆ. ಹಿಂದು ದೇವಸ್ಥಾನಗಳಲ್ಲಿ ಕೆಲವು ಕಡೆ ಪುರುಷರಿಗೆ ಮಾತ್ರವೇ ಅಥವಾ ಸ್ತ್ರೀಯರಿಗೆಂದು ಮಾತ್ರ ಪ್ರವೇಶವಿರುವ ಪದ್ಧತಿಯಿದೆ. ನ್ಯಾಯಾಲಯಗಳು ಈ ಕುರಿತು ಹಿಂದುಗಳನ್ನು ಮಾತ್ರ ಪ್ರಶ್ನಿಸುತ್ತದೆ. ಇಸ್ಲಾಂ ಮಹಿಳೆಯರಿಗೆ ಮಸೀದಿಯಲ್ಲಿ ನಮಾಜು ಮಾಡಲು ಮಾತ್ರವಲ್ಲ ಪ್ರವೇಶಿಸಲು ಕೂಡಾ ನಿರ್ಬಂಧಿಸುತ್ತದೆ. ಕ್ರೈಸ್ತರಲ್ಲಿ ಮಹಿಳೆಯರು ಸನ್ಯಾಸಿಯರಾಗುವಂತಿಲ್ಲ. ಇವನ್ನು ನ್ಯಾಯಾಲಯಗಳು ಎಲ್ಲೂ ಕೂಡಾ ಪ್ರಶ್ನಿಸಲೇ ಇಲ್ಲ.


ಇವು ಆನಂದ ರಂಗನಾಥ ಮುಂದಿಟ್ಟ ಪ್ರಶ್ನೆಗಳು.