Logo

VHP PUBLICATIONS

Hindu Vani


expand_more

ಕತೆಕತೆ ಕಾರಣ

ಕತೆಕತೆ ಕಾರಣ

ದೇಶಕ್ಕಾಗಿ ಬದುಕು

ಕರ್ನಾಟಕದ ಮಂಗಳೂರು, ಸ್ವಾತಂತ್ರ್ಯ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ನಗರ. ಅಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ವಕೀಲರಾದ ಕಾರ್ನಾಡು ಸದಾಶಿವರಾಯರೂ ಒಬ್ಬರು. 

ಕಾರ್ನಾಡು ಸದಾಶಿವರಾಯರಿಗೆ ಒಂದು ದಿನ ಎರಡು ಟೆಲಿಗ್ರಾಮ್‌ಗಳು ಬಂದವು. ಒಂದರಲ್ಲಿ ಆಗಿನ ಮದ್ರಾಸಿನ ಆಸ್ಪತ್ರೆಯಲ್ಲಿ ವಿಷಮ ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರ ಒಬ್ಬನೇ ಮಗನು ತೀರಿಹೋದನೆಂಬ ಸುದ್ದಿ ಇದ್ದಿತು.

ಮಗನ ಶವವನ್ನು ಮರುದಿನ ಸಂಜೆ ಮಂಗಳೂರನ್ನು ಮುಟ್ಟುವ ರೈಲಿನಲ್ಲಿ ಕಳುಹಿಸಲಾಗುವುದು ಎಂದು ಸೂಚಿಸಲಾಗಿದ್ದಿತು. ಇನ್ನೊಂದು ತಂತಿಯಲ್ಲಿ ಮಹಾತ್ಮಾಗಾಂಧಿಯವರನ್ನು ಮುಂಬೈನಲ್ಲಿ ಬಂಧಿಸಲಾಗಿದೆ. ಅದನ್ನು ವಿರೋಧಿಸಿ ಮಂಗಳೂರಿನಲ್ಲಿ ಭಾರಿ ಪ್ರದರ್ಶನಗಳು ಮತ್ತು ಸಭೆ ನಡೆಯಬೇಕು ಎಂದು ಇದ್ದಿತು.

ಸದಾಶಿವರಾಯರು ಮೊದಲನೆ ತಂತಿಯನ್ನು ಮಡಚಿ ಜೇಬಿನಲ್ಲಿಟ್ಟುಕೊಂಡರು. ಎರಡನೆಯ ಟೆಲಿಗ್ರಾಂನ್ನು ಹಿಡಿದುಕೊಂಡು ನಗರದ ಎಲ್ಲ ಮನೆ ಅಂಗಡಿಗಳನ್ನು ಸುತ್ತಿದರು. ಮರುದಿನ ಮಂಗಳೂರಿನಲ್ಲಿ ಬೃಹತ್ತಾದ ಪ್ರದರ್ಶನ ಸಭೆ ನಡೆಯಿತು.

ಸದಾಶಿವರಾಯರ ಜೀವನ ಚರಿತ್ರೆಯನ್ನು ಬರೆದ ಲೇಖಕರು ಆ ದಿನ ಅವರು ಭಾಷಣ ಮಾಡುತ್ತಿದ್ದ ಭಾವಚಿತ್ರವನ್ನು ಆ ಪುಸ್ತಕದಲ್ಲಿ ಪ್ರಕಟಿಸಿರುವರು. ಅದರ ಕೆಳಗೆ ವಿವರವೂ ಇದ್ದಿತು. “ಇದು ಸದಾಶಿವರಾಯರ ಆ ದಿನ ಭಾಷಣ ಮಾಡುತ್ತಿದ್ದ ಚಿತ್ರ. ಅವರ ಭಾಷಣ ನಡೆಯುತ್ತಿದ್ದಾಗ 5 ಮಂದಿ ಕಾರ್ಯಕರ್ತರು ಅವರ ಮಗನ ಶವವನ್ನು ಪಡೆಯಲು ರೈಲು ನಿಲ್ದಾಣಕ್ಕೆ ಹೋಗಿದ್ದರು” ಎಂದು. ಬದುಕಿನ ಎಲ್ಲವನ್ನೂ ದೇಶಕ್ಕೆ ಅರ್ಪಿಸುವುದೆಂದರೆ ಇದೇನೆ.

ಆಗರ್ಭ ಶ್ರೀಮಂತರಾಗಿದ್ದ ಸದಾಶಿವರಾಯರ ಕೋಟ್ಯಂತರ, ರೂಪಾಯಿ ಬೆಲೆಬಾಳುವ ಅವರ ಆಸ್ತಿಯನ್ನು ಆಂಗ್ಲ ಸರ್ಕಾರವು ಮುಟ್ಟುಗೋಲು ಹಾಕಿತು. ಉತ್ತಮ ಆದಾಯ ತರುತ್ತಿದ್ದ ಅವರ ವಕೀಲವೃತ್ತಿಯ ಸನ್ನದನ್ನು ಸರ್ಕಾರವು ಹಿಂತೆಗೆದುಕೊಂಡಿತು. ಸದಾಶಿವರಾಯರು ಕಂಗೆಡಲಿಲ್ಲ. ಸ್ವಾತಂತ್ರ್ಯ ಚಳುವಳಿಯಿಂದ ಹಿಂದೆ ಸರಿಯಲಿಲ್ಲ.

ಸತ್ಯಾಗ್ರಹ ನಿಧಿ ಸಂಗ್ರಹಕ್ಕಾಗಿ ಮಂಗಳೂರಿಗೆ ಬಂದ ಮಹಾತ್ಮಾಗಾಂಧಿಯವರ ಜೋಳಿಗೆಗೆ ಅವರ ಪತ್ನಿ ಮತ್ತು ತಾಯಿಯವರು ತಮ್ಮ ಮೈಮೇಲೆ ಧರಿಸಿದ ಎಲ್ಲಾ ಆಭರಣಳನ್ನು ಕಳಚಿ ಹಾಕಿದರು. ಇಷ್ಟೊಂದು ಶ್ರೀಮಂತರಾದ ಸದಾಶಿವರಾಯರು ತಮ್ಮ ಕೊನೆಯ ಕಾಲದಲ್ಲಂತೂ ಬಹಳ ಬಡತನವನ್ನು ಅನುಭವಿಸಿದರು. ಆದರೂ ಅವರ ಸ್ವಾತಂತ್ರ್ಯದ ಕೆಚ್ಚು ಆರಲಿಲ್ಲ ಹಾಗಾಗಿ ಅವರು ತ್ಯಾಗವೀರ ಕಾರ್ನಾಡು ಸದಾಶಿವರಾಯರು.

ಸರ್ಜೇರಾವ್‌ ಜೇಧೆ ಶಿವಾಜಿ ಮಹಾರಾಜನ ಸೇನಾಪತಿ, ಕೊಪ್ಪಳದ ಯುದ್ಧದಲ್ಲಿ ಅವನು ಭಾಗವಹಿಸಿದ ಪ್ರಸಂಗ, ಆ ಯುದ್ಧದಲ್ಲಿ ಸರ್ಜೇರಾವ್ ಗೆದ್ದನು. ಆದರೆ ಮಗ ಸೂರ್ಯಾಜಿ ಜೇನೆಯ ಹಣೆಗೆ ಬಾಣವೊಂದು ನಾಟಿತ್ತು. ತಂದೆಯ ತೊಡೆಯ ಮೇಲೆ ಮಲಗಿದ ಸೂರ್ಯಾಜಿಯ ಹಣೆಗೆ ನಾಟಿದ ಬಾಣವನ್ನು ವೈದ್ಯರು ಕಿತ್ತರು. ಆದರೆ ರಕ್ತಸ್ರಾವದಿಂದ ಮಗನು ಅಲ್ಲೇ ಪ್ರಾಣಬಿಟ್ಟನು.

ಸಂಜೆ ಮಗನ ಅಂತ್ಯಸಂಸ್ಕಾರವು ನಡೆಯುತ್ತಿದ್ದಿತು. ಚಿತೆಯ ಮೇಲಿಟ್ಟ ಶವವನ್ನು ನೋಡುತ್ತಾ ಇದ್ದ ಸೊಸೆ ಗೋದುಬಾಯಿ ಒಮ್ಮೆಲೆ ದಿಗ್ರಾಂತಳಂತೆ ಓಡುತ್ತಾ ಹೋಗಿ ಚಿತೆಗೆ ಹಾರಿಬಿಟ್ಟಳು. ಗಂಡನೊಂದಿಗೆ ತಾನೂ ಹೊರಟುಬಿಟ್ಟಳು.

ಅತ್ತ ಜಿಂಜಿಯಲ್ಲಿ ಇನ್ನೊಂದು ಯುದ್ದವು ನಡೆಯುತ್ತಿದ್ದಿತು. ಕೊಪ್ಪಳದ ಯುದ್ಧವು ಮುಕ್ತಾಯವಾಗುತ್ತಲೆ ಅಲ್ಲಿಂದ ಜಿಂಜಿಗೆ ಸೈನ್ಯವನ್ನು ದೌಡಾಯಿಸಬೇಕೆಂದು ಶಿವಾಜಿ ಮಹಾರಾಜನ ಸೂಚನೆಯಾಗಿದ್ದಿತು. ಸರ್ಜೆರಾವ್, ಮಗನ ಮತ್ತು ಸೊಸೆಯ ಅಂತ್ಯಸಂಸ್ಕಾರದ ವಿಧಿಗಳು ಮುಗಿಯುತ್ತಲೇ ಅದೇ ರಾತ್ರಿ ಜಿಂಜಿಯ ಕಡೆಗೆ ಹೊರಟನು.

ದೇಶಭಕ್ತರ ನೋವು ಅನುಭವಿಸಲು ಅಲ್ಲ. ಸಹಿಸಿಕೊಳ್ಳಲು.

ಕೃಪೆ: ಬಾಲಸಂಸ್ಕಾರ ಮಾರ್ಗದರ್ಶಿಕೆ


ಟೀಕೆ ಟಿಪ್ಪಣಿ ಇಲ್ಲದೆ. ತಿರುಪತಿ

ತಿರುಪತಿಯ ಏಳು ಬೆಟ್ಟಗಳ ಬುಡದಲ್ಲಿ 'ಮಮ್ರಾಜ್' ಹೆಸರಿನ ಹೋಟೆಲ್ ನಿರ್ಮಿಸಲು ಸರ್ಕಾರದಿಂದ ಅನುಮತಿಯನ್ನು ನೀಡಲಾಗಿದ್ದಿತು. ಹಲವು ತಿಂಗಳ ಕಾಲ ನಡೆದ ವಿರೋಧ ಪ್ರದರ್ಶನಗಳ ನಂತರ ಅನುಮತಿಯನ್ನು ಹಿಂಪಡೆಯಲಾಯಿತು.

4000ಕ್ಕೂ ಹೆಚ್ಚು ಕ್ರೈಸ್ತರು ತಿರುಪತಿ ತಿರುಮಲ ದೇವಸ್ಥಾನ(ಟಿ.ಟಿ.ಡಿ) ದಲ್ಲಿ ಉದ್ಯೋಗಿಗಳಾಗಿರುವರು. ಅವರನ್ನೆಲ್ಲಾ ಗುರುತಿಸಿ ಕ್ರೈಸ್ತ ಉದ್ಯೋಗಿಗಳಿಲ್ಲದ ತಿರುಪತಿ ದೇವಸ್ಥಾನವನ್ನಾಗಿಸಲು ಈಗಲೂ ಸತತ ಪ್ರಯತ್ನಗಳು ನಡೆಯುತ್ತವೆ.

ಕತೆಕತೆ ಕಾರಣ

• ತಿರುಪತಿಯಲ್ಲಿ ಲುಲ್ಲು ಮಾಲ್ ನಿರ್ಮಾಣ ಮಾಡುವ ಪ್ರಯತ್ನವು ನಡೆಯುತ್ತಲೇ ಇದೆ. ಅದರೊಂದಿಗೆ ಅದನ್ನು ತಡೆದು ಹಿಂದು ಜನಸಂಖ್ಯೆಯ ಪ್ರಮಾಣವನ್ನು ಉಳಿಸುವ ಪ್ರಯತ್ನವೂ ಮುಂದುವರೆಯುತ್ತದೆ.

• ತಿರುಪತಿಯಲ್ಲಿ ಇಬ್ಲಿಗಿ ಜಮಾತ್‌ನ ಸಮಾವೇಶವನ್ನು ನಡೆಸುವ ತೀರ್ಮಾನವನ್ನು ಅನುಮೋದಿಸಲಾಗಿದ್ದಿತು. 8ಸಾವಿರ ಮುಸ್ಲಿಮರು ಬರುವ ಸಂಭವವಿದ್ದ ಈ ಸಭೆಯು ಹಿಂದು ಸಂಘಟನೆಗಳ ಸತತ ಪ್ರಯತ್ನದಿಂದ ರದ್ದುಗೊಂಡಿತು.