Hindu Vani
Index
ಪ್ರತಿಧ್ವನಿ
ಪಥ ಸಂಚಲನವೂ
ಸಂತ ಪಾದಯಾತ್ರೆಯೂ
ಹಿಂದುವಾಣಿಯು ಪ್ರಕಟಿಸಿದ ಯುವತಿಯರ ಪಥಸಂಚಲನವೂ ಅದರೊಂದಿಗೆ ಸಂತಮಹಾತ್ಮರ ಪಾದಯಾತ್ರೆಯೂ ಪೂರಕವಾದಂತಿದೆ. ಹಿಂದು ಸಮಾಜದಲ್ಲಿ ಸಮಸಮವಾಗಿರುವ ಮಹಿಳೆಯರು ಶಕ್ತರಾಗುವುದು ಮತ್ತು ಸಮಾಜವು ಸಂತರಿಂದ ಸಾತ್ವಿಕ ಶಕ್ತಿಯನ್ನು ಪಡೆಯುವುದು ಈ ದಿನಗಳಲ್ಲಿ ಅನಿವಾರ್ಯವಾಗಿದೆ. ಇಂತಹ ಪ್ರಯತ್ನಗಳು ಮುಂದುವರೆಯಲಿ.
-- ಶ್ರೀನಿವಾಸಮೂರ್ತಿ, ಚಿಕ್ಕಮಗಳೂರು
ಕೇರಳ ಹೈ ಕೋರ್ಟ್ ತೀರ್ಪು
ವಕ್ಷ ಬೋರ್ಡಿನ ಏಕಸ್ವಾಮಿತ್ವಕ್ಕೆ ಅಡ್ಡಿಯಿಲ್ಲವೇನೋ ಎಂದು ಅನಿಸುವ ಕಾಲದಲ್ಲಿ ಬಂದ ಕೇರಳ ಉಚ್ಚನ್ಯಾಯಾಲಯದ ತೀರ್ಪು ಸ್ವಾಗತಾರ್ಹವಾಗಿದೆ.ಹಿಂದು ಸಮಾಜವು ನಿರಾಳವಾಗಿರುವ ಸಮಯವಿದಲ್ಲ. - ಸುರೇಂದ್ರನ್ ಹೆಬ್ಬಾಳ
ಕಥೆ ಕವನ-ಶೋಧ
ಮನೆಯ ಮಕ್ಕಳ ಓದು ಬೋಧಪ್ರದವಾಗಲು ಅವರ ಭಾಷಾ ಜ್ಞಾನ ಬೆಳೆಯಲು ಅವರ ಅರಿವು ಹೆಚ್ಚಲು ಮೀಸಲಿಟ್ಟ ಪುಟಗಳು ಆಹ್ಲಾದಕಾರಿಯಾಗಿವೆ. ಕುತೂಹಲಕಾರಿಯಾಗಿವೆ.
ಕಾಮಿನಿ ಶಶಿಧರ, ಹೊಸಪೇಟೆ
ವಿಕಸಿತ ಭಾರತಕ್ಕಾಗಿ ಬಜರಂಗದಳ, ದುರ್ಗಾವಾಹಿನಿ
ಭಾರತದ ಕೇಂದ್ರ ಸರ್ಕಾರವು ವಿಶ್ವ ಹಿಂದು ಪರಿಷದ್ ಮತ್ತು ಅದರ ಪ್ರಮುಖ ವಿಭಾಗ ಗಳನ್ನು ಸಮಾಜ ಜಾಗೃತಿಗಾಗಿ ಆರಿಸಿ ಅವರ ಸೇವೆಯನ್ನು ಶ್ಲಾಘಿಸಿದ ವಿಚಾರವು ಶ್ಲಾಘನೀಯವಾದುದು. ಸಜ್ಜನ ಶಕ್ತಿಗಳು ಜೊತೆಯಾಗಿ ತೊಡಗಿದರೆ ಯಾವುದೂ ಅಸಾಧ್ಯವಲ್ಲ. ವಿಶ್ವ ಹಿಂದು ಪರಿಷತ್ತಿಗೆ ಶುಭಾಶಯಗಳು. - ನರೇಂದ್ರ ದೇವ, ಹಾವೇರಿ
ಪ್ರಸ್ತುತದ ಪ್ರಸ್ತುತತೆ
ಎಂದಿನಂತೆ ನಮ್ಮೆದುರು ನಡೆಯುತ್ತಿರುವ ವಿದ್ಯಮಾನಗಳ ಒಪ್ಪುತಪ್ಪುಗಳನ್ನು ಜೊತೆಯಾಗಿ ಹೆಣೆದು ಮುಂದಿಟ್ಟ ಅಂಕಣಕಾರರಿಗೆ ಧನ್ಯವಾದಗಳು. -- ಭಾರತಿ, ಹೊಸಕೋಟೆ