Hindu Vani
Index
ಪ್ರತಿಧ್ವನಿ
ಉತ್ತಮ ಸಂಚಿಕೆ
ಮುಖಪುಟ ಲೇಖನದಲ್ಲಿ ವರ್ಣಿಸಿದ ವ್ಯಕ್ತಿತ್ವವು ಮುಖಪುಟದಲ್ಲಿ ಕಂಡಾಗ ಮೊದಲ ಪ್ಯಾರಾದ ಪ್ರತಿಯೊಂದು ಶಬ್ದಗಳಿಗೂ ಅರ್ಥ ಬಂದಂತಿತ್ತು. ಲೇಖನ ಕೂಡಾ ಅವರನ್ನು ಮುಂದೆ ಕುಳ್ಳಿರಿಸಿ ವಿವರಿಸುವ ರೀತಿಯಲ್ಲಿದ್ದಿತು. ಸಾಧನೆಗೆ ಯುಕ್ತವಾದ ವ್ಯಕ್ತಿತ್ವ ಇಂತಹವರಿಂದ ನಾಡು ಸುಂದರವಾಗಿದೆ. - ಮಿತ್ರಾ ಶಂಕರ್, ಹುಬ್ಬಳ್ಳಿ
ಅದ್ಭುತ ಮತ್ತು ಅಮೃತ ಅನುಭವಗಳು
ಕುಂಭಮೇಳದಲ್ಲಿ ಭಾಗವಹಿಸಿ ಬಂದ ವಿಶ್ವ ಹಿಂದು ಪರಿಷತ್ತಿನ ಇಬ್ಬರು ಕಾರ್ಯಕರ್ತರು ಕುಂಭಮೇಳದ ಅನುಭವಗಳನ್ನು ಕಣ್ಣಿಗೆ ಕಟ್ಟುವಂತೆ ಮತ್ತು ಮೈಮರೆಯುವಂತೆ ವಿವರಿಸಿದುದನ್ನು ಓದುವುದೇ, ಆನಂದ. ಇದಕ್ಕಿಂತ ಇನ್ನೊಂದು ಅದ್ಭುತವೇನಾದರೂ ಇದ್ದರೆ ಅದು ನಮ್ಮ ಪುಣ್ಯ ಭೂಮಿಯಲ್ಲಿ ಮಾತ್ರ ಸಾಧ್ಯ'. 'ಇಂತಹ ಭಕ್ತಿಯ ದರ್ಶನವನ್ನು ಅನುಭವಿಸುವುದು ಹಿಂದುಗಳಿಗೆ ಮಾತ್ರಲಭ್ಯ'. 'ಈರಾಷ್ಟ್ರ ಅಖಂಡವೆನ್ನಲು ಇನ್ನೇನು ಬೇಕು? 'ಭೂಮಿಯ ಮೇಲಿನ ಅತಿದೊಡ್ಡ ಮಾನವ ಕೂಟ' ಶುದ್ದ ಸಂತೋಷ ಆನಂದಮಯ' 'ಹಿಂದು ಧರ್ಮದ ಅನುಭವಗಳು ಅತೀಂದ್ರಿಯ ಸಂದರ್ಭಗಳು ಮತ್ತು ಸಂಬಂಧಗಳನ್ನು ಹೊಂದಿದೆ' ಎನ್ನುವಂತಹ ಮಾತುಗಳು ಅನುಭವಿಸಿ ಬಂದ ಉದ್ಗಾರಗಳು. ಭಾರತಕ್ಕೆ ಜಯವಾಗಲಿ. - ಎಸ್. ಭಾಗ್ಯ, ಬೈಯಪ್ಪನಹಳ್ಳಿ
ಹಿಂದು ವಾಣಿ ಒಂದು ಸಮೃದ್ಧ ಪತ್ರಿಕೆ
ಡಾ. ವಿಜಯಲಕ್ಷ್ಮಿ ದೇಶಮಾನೆ ಅವರ ಆದರ್ಶ, ಅವರ ವ್ಯಕ್ತಿತ್ವ ಮಾದರಿಯದು. ಅವರ ಕುರಿತ ವಿಷಯಗಳನ್ನು ಓದುವುದೇ ಅಭಿಮಾನದ ಸಂಗತಿ. ಟಿ ಎ ಪಿ ಶೆಣೈ ಅವರ ಗಂಗಾವತರಣ- ಪ್ರಯಾಗಗಳ ಕುರಿತ ಪ್ರಯಾಗ ರಾಜ್ ಕುರಿತ ಪುಟ್ಟ ಲೇಖನವೂ ಸೊಗಸಾಗಿತ್ತು.
ಡಾ. ಗೋವಿಂದ ನರೇಗಲ್ ಅವರ ಕುರಿತ ಅಮೃತ್ ಜೋಶಿ ಅವರ ಲೇಖನ ತುಂಬಾ ಮಾರ್ಗದರ್ಶಕ. ಹಿಂದುಗಳಿಗಾಗಿ, ಹಿಂದುಗಳ ರಕ್ಷಣೆಗಾಗಿ ಅವರ ಹೋರಾಟ ಮಾದರಿಯದು. ಶಾರದಾ ಮೂರ್ತಿಯವರು ಪ್ರಸ್ತುತಪಡಿಸಿದ ಲಲಿತಮ್ಮ- ವೆಂಕಟೇಶ್ ಮೂರ್ತಿ ಅವರ ಮನೋಭಾವ ನನ್ನ ಮನವನ್ನು ಕಲಕಿತು. ನಾನು ಕೂಡ ಅವರಂತೆಯೇ ಈ ಹಿಂದೆ ಮದುವೆ, ಮುಂಜಿಯಂತಹ ಕಾರ್ಯಕ್ರಮಗಳ ಸಡಗರ, ಸಂಭ್ರಮವನ್ನು ಅನುಭವಿಸಿದ್ದೇನೆ. ಅದೇ ರೀತಿ ಇಂದು ನಡೆಯುತ್ತಿರುವ ಇಂತಹ ಸಡಗರವಿಲ್ಲದ, ಯಾಂತ್ರೀಕೃತ ಸಂಭ್ರಮಾಚರಣೆಗಳಿಗಾಗಿ ವ್ಯಥೆಗೊಂಡಿದ್ದೇನೆ. - ನಮಸ್ಕಾರ ಗೀತಾ ಸಭಾಹಿತ, ಬೆಂಗಳೂರು