Logo

VHP PUBLICATIONS

Hindu Vani


expand_more

ಸಂಸ್ಕೃತಿ

ಹೆಸರಿನಲ್ಲಿದೆ ಸಂಸ್ಕೃತಿ


ಅನೂರು: ಕಶ್ಯಪ ಮುನಿ ಮತ್ತು ವಿನತೆಯರ ಮಗ, ಗರುಡನ ಅಣ್ಣ. ಇವನ ಇನ್ನೊಂದು ಹೆಸರು ಅರುಣ. ಇವನ ಪತ್ನಿ ಶೈನಿ. ಸಂಪಾತಿ ಮತ್ತು ಜಟಾಯು ಇವನ ಮಕ್ಕಳು.

ಆಕಾಶ ರಾಜ: ರಾಜ ಸುಧರ್ಮನ ಮಗ, ಇವನ ಮಗಳು ಪದ್ಮಾವತಿ. ಈಕೆಯನ್ನು ವೆಂಕಟೇಶ್ವರನಿಗೆ ಕೊಟ್ಟು ಮದುವೆ ಮಾಡಿಸುತ್ತಾನೆ. ಅವನಿಗೆ ತಿರುಪತಿಯಲ್ಲಿ ದೇವಸ್ಥಾನವನ್ನು ಕಟ್ಟಿಸಿಕೊಡುತ್ತಾನೆ.

ಆರುಷಿ : ಮನುಚಕ್ರವರ್ತಿಯ ಮಗಳು. ಕೃಗು ಋಷಿಯ ಮಗ ಚ್ಯವನ ಮುನಿಯನ್ನು ಮದುವೆಯಾಗುತ್ತಾಳೆ. ಇವರಿಬ್ಬರ ಮಗ ಔರ್ವ,

ಇಂದ್ರಾಣಿ : ಇಂದ್ರನ ರಾಣಿಯಾದ ಶಚಿದೇವಿ. ಉತ್ತಂಕ : ಬೈದ ಋಷಿಯ ಶಿಷ್ಯ, ಜಮಮೇಜಯನಿಂದ ಶಿಷ್ಯ. ಜಮಮೇಜಯನಿಂದ ಸರ್ಪಯಾಗವನ್ನು ಮಾಡಿಸಿದವನು.

ಉತ್ತಮ : ಉತ್ತಾನಪಾದರಾಜನ ಕಿರಿಯರಾಣಿ ಸುರುಚಿಯ ಮಗ, ಈ ರಾಜನ ಹಿರಿಯ ಹೆಂಡತಿ ಸುನೀತಿಯ ಮಗ ಧ್ರುವಕುಮಾರ,

ಊರ್ಮಿಳಾ : ಜನಕ ರಾಜನ ಮಗಳು. ಇವಳು ಲಕ್ಷ್ಮಣನ ಪತ್ನಿಯಾಗುತ್ತಾಳೆ. ಏಕಪರ್ಣಾ: ಹಿಮಮಂತ ಮತ್ತು ಮೇನೆಯರ ಮಗಳು.

ಕಣ್ವ : ಕಶ್ಯಪ ಗೋತ್ರದ ಋಷಿ, ಶಕುಂತಲೆಯು ಈತನ ಆಶ್ರಮದಲ್ಲಿ ಬೆಳೆದಳು. ಈತನ ತಾಯಿ ಮೇಧಾತಿಥಿ.

ಕಯಾಧು : ಜಂಭಾಸುರನೆಂಬ ರಾಕ್ಷಸನ ಮಗಳು. ಹಿರಣ್ಯ ಕಶಪುವಿನ ಹೆಂಡತಿ. ಪ್ರಹ್ಲಾದನು ಇವರಿಬ್ಬರ ಮಗ.

ಕರ್ಣಿಕಾ : ವಸುದೇವನ ತಮ್ಮನಾದ ಕಂಕನ ಮಡದಿ. ಈಕೆಯ ಮಕ್ಕಳು ಋತಧಾಮಾ ಮತ್ತು ಜಯ.

ಕಲಾ: ಕರ್ದಮ ಋಷಿ ಮತ್ತು ದೇವಹೂತಿಯರ ಮಗಳು. ಮರೀಚ ಮುನಿಯನ್ನು ಮದುವೆಯಾಗಿ ಕಶ್ಯಪ ಮುನಿಯನ್ನು ಹೆತ್ತಳು.