Hindu Vani
Index
ಸಂಸ್ಕಾರ
ಸಂಘದ ಜೀವನ ಸಂಸ್ಕಾರ
- ನರೇಂದ್ರ ಮೋದಿ
ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅಮೇರಿಕಾದ ಪೋಡ್‌ಕ್ಯಾಸ್ಟರ್ ಸಂಶೋಧಕ ವಿಜ್ಞಾನಿ ಲೆಕ್ಸ್ ಫ್ರೀಡ್‌ಮನ್ ಅವರಿಗೆ ನೀಡಿದ ಸಂದರ್ಶನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಅದರ ಸೇವಾಕಾರ್ಯಗಳ ಕುರಿತು ಶ್ಲಾಘಿಸಿದರು.
ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ “ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯಲ್ಲಿ ಹೇಳಿಕೊಡುತ್ತಿದ್ದ ದೇಶಭಕ್ತಿಯ ಗೀತೆಗಳು ನನ್ನ ಮನಸ್ಸಿಗೆ ತುಂಬಾ ಖುಷಿ ಕೊಡುತ್ತಿತ್ತು. ಹೀಗೆ ನಾನು ಸಂಘಕ್ಕೆ ಬಂದೆ. ಸಂಘದ ಸಂಸ್ಕಾರ ಅಂತೂ ಸಿಕ್ಕಿತು. ಏನಾದರೂ ಯೋಚಿಸಿ ಅಥವಾ ಕೆಲಸ ಮಾಡಿ, ಒಂದು ವೇಳೆ ಓದುತ್ತಿದ್ದರೆ ಚೆನ್ನಾಗಿ ಓದಬೇಕು, ದೇಶಕ್ಕೆ ಸೇವೆ ಸಲ್ಲಿಸಬೇಕು. ವ್ಯಾಯಾಮ ಮಾಡುತ್ತಿದ್ದರೆ ಚೆನ್ನಾಗಿ ವ್ಯಾಯಾಮ ಮಾಡಬೇಕು. ವ್ಯಾಯಾಮದ ಮೂಲಕ ಸದೃಢಗೊಂಡ ನನ್ನ ಶರೀರವೂ ದೇಶಕ್ಕೆ ಕೆಲಸ ಮಾಡಬೇಕು. ಇದು ಸಂಘದವರು ಶಾಖೆಯಲ್ಲಿ ಹೇಳಿಕೊಡುತ್ತಿದ್ದ ಪಾಠ.”
“ಈಗ ಸಂಘ ಬೃಹತ್ ಸಂಘಟನೆಯಾಗಿದೆ. ಸಂಘಕ್ಕೆ 100 ವರ್ಷ ಪೂರ್ಣಗೊಂಡಿದ್ದು ಜಗತ್ತಿನಲ್ಲಿ ಇಷ್ಟು ದೊಡ್ಡ ಸ್ವಯಂಸೇವಕ ಸಂಘಟನೆಯ ಬಗ್ಗೆ ನಾನು ಎಲ್ಲೂ ಕೇಳಿಲ್ಲ. ಕೋಟ್ಯಾಂತರ ಜನ ಅದರ ಜೊತೆ ಸೇರಿಕೊಂಡಿದ್ದಾರೆ. ಆದರೆ ಸಂಘವನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಸಂಘದ ಕೆಲಸವನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬೇಕು ಮತ್ತು ಸಂಘ ಸ್ವತಃ ನಾವು ಜೀವನದ ಉದ್ದೇಶ ಎಂದು ಯಾವುದನ್ನು ಹೇಳುತ್ತೇವೆಯೋ, ಆ ವಿಷಯದಲ್ಲಿ ನಿಮಗೆ ಉತ್ತಮ ಮಾರ್ಗದರ್ಶನ ತೋರಿಸುತ್ತದೆ. ಎರಡನೇಯದು ದೇಶವೇ ಎಲ್ಲವೂ ಆಗಿದೆ. ಜನಸೇವೆಯೇ ಪ್ರಭುಸೇವೆಯಾಗಿದೆ. ಇದು ಯಾವುದನ್ನು ನಮ್ಮ ವೇದಕಾಲದಲ್ಲಿ, ಋಷಿಮುನಿಗಳು, ವಿವೇಕಾನಂದರು ಹೇಳಿದ್ದರೋ, ಅದೇ ಮಾತಾಗಿದೆ. ಅದೇ ಮಾತನ್ನು ಸಂಘವೂ ಹೇಳುತ್ತದೆ. ಹಾಗೆಯೇ ಸಂಘದಿಂದ ನಮ್ಮಲ್ಲಿ ಏನು ಪರಿಣಾಮ ಆಗಿದೆ ಎಂದು ಕೇಳಿದರೆ ಸಮಾಜಕ್ಕಾಗಿ ಏನಾದರೂ ಮಾಡಬೇಕು ಎಂಬ ಪ್ರೇರಣೆ ಸಿಗುತ್ತದೆ ಎಂದು ಸ್ವಯಂಸೇವಕರು ಹೇಳುತ್ತಾರೆ. ಇಂದು ಅಂತಹ ಕೆಲಸ ದೊಡ್ಡ ಮಟ್ಟದಲ್ಲಿ ನೆಡೆಯುತ್ತಿದೆ.”
“ಕೆಲವು ಸ್ವಯಂಸೇವಕರು ಸೇವಾಭಾರತಿ ಹೆಸರಿನ ಸಂಘಟನೆ ಸ್ಥಾಪನೆ ಮಾಡಿದ್ದಾರೆ. ಈ ಸೇವಾಭಾರತಿ ಬಡವರ ವಸತಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಆ ಪ್ರದೇಶಗಳಿಗೆ ಅವರು ಸೇವಾಬಸ್ತಿ ಎಂದು ಕರೆಯುತ್ತಾರೆ. 1.25 ಲಕ್ಷದಷ್ಟು ಸೇವಾಪ್ರಕಲ್ಪಗಳನ್ನು ಅವರು ನಡೆಸುತ್ತಾರೆ.
ಹಾಗೆಯೇ ಯಾವುದೇ ಸರ್ಕಾರದ ಸಹಾಯವಿಲ್ಲದೆ ಕೇವಲ ಸಮಾಜದ ಸಹಾಯದಿಂದ ಅಲ್ಲಿಗೆ ಹೋಗುವುದು, ಸಮಯ ನೀಡುವುದು, ಮಕ್ಕಳನ್ನು ಓದಿಸುವುದು, ಅವರ ಆರೋಗ್ಯದ ಬಗ್ಗೆ ಯೋಚಿಸುವಂತಹ ಕೆಲಸಗಳನ್ನು ಮಾಡುತ್ತಾರೆ. ಸೇವಾಬಸ್ತಿಯವರನ್ನು ಸ೦ಸ್ಕಾರವ೦ತರನ್ನಾಗಿಸುವುದು, ಪ್ರದೇಶಗಳಲ್ಲಿ ಸ್ವಚ್ಛತೆಯ ಅಲ್ಲಿನ ಕೆಲಸ ಸೇರಿದಂತೆ ಅನೇಕ ಸವಾಲಿನ ಕೆಲಸಗಳನ್ನು ಮಾಡುತ್ತಾರೆ. ಹಾಗೆಯೇ ಇಂತಹ ಸವಾಲಿನ ಕೆಲಸ ಸಣ್ಣ ಸಂಖ್ಯೆಯಲ್ಲಿಲ್ಲ. ಇನ್ನೂ ಕೆಲವು ಸ್ವಯಂಸೇವಕರಿದ್ದಾರೆ. ಅವರು ವನವಾಸಿ ಕಲ್ಯಾಣ ಆಶ್ರಮ ನಡೆಸುತ್ತಾರೆ. ಕಾಡಿನಲ್ಲಿ ಬುಡಕಟ್ಟು ಜನಗಳ ಜೊತೆಗೇ ಜೀವಿಸುತ್ತಾ ಸೇವೆ ಸಲ್ಲಿಸುತ್ತಾರೆ. 70000ಕ್ಕೂ ಹೆಚ್ಚು ಏಕಲ್ ವಿದ್ಯಾಲಯ (One Teacher One School) ನಡೆಸುತ್ತಾರೆ. ಈ ಕಾರ್ಯಕ್ಕೆ ಅಮೆರಿಕದಲ್ಲಿನ ಕೆಲವರು ತಮ್ಮ ದಿನನಿತ್ಯದ ಖರ್ಚನ್ನು ಸ್ವಲ್ಪ ಕಡಿಮೆಗೊಳಿಸಿ ಉಳಿಸಿದ ಹಣವನ್ನು ಏಕಲ್ ವಿದ್ಯಾಲಯದ ನಿರ್ವಹಣೆಗಾಗಿ ನೀಡುತ್ತಾರೆ.”
“ಕೆಲವು ಸ್ವಯಂಸೇವಕರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ತರಲು ವಿದ್ಯಾಭಾರತಿ ಹೆಸರಿನ ಸಂಘಟನೆ ತೆರೆದಿದ್ದಾರೆ. ಅವರು ಇಡೀ ದೇಶದಲ್ಲಿ ಸುಮಾರು 25000 ಶಾಲೆಗಳನ್ನು ನಡೆಸುತ್ತಾರೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ಹಣದಲ್ಲಿ ಶಿಕ್ಷಣ ಸಿಗುವುದರ ಜೊತೆಗೆ ಸಂಸ್ಕಾರವೂ ಸಿಗುತ್ತಿದೆ. ಜೀವನದ ಎಲ್ಲ ಕ್ಷೇತ್ರಗಳೊಂದಿಗೆ ಮಹಿಳೆಯರಾಗಲಿ ಯುವಕರಾಗಲಿ ಕಾರ್ಮಿಕರ ಕ್ಷೇತ್ರಗಳಲ್ಲೂ ಸಂಘ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ಮದ್ದೂರ್ ಸಂಘದ 55000 ಯೂನಿಯನ್‌ಗಳು ಇವೆ ಮತ್ತು ಕೋಟಿ ಮಂದಿ ಸದಸ್ಯರಿದ್ದಾರೆ. ಜಗತ್ತಿನಲ್ಲಿ ಇಷ್ಟು ದೊಡ್ಡ ಕಾರ್ಮಿಕ ಸಂಘ ಇನ್ನೆಲ್ಲೂ ಇಲ್ಲ. ಎಡಪಂಥಿಯರು ಕಾರ್ಮಿಕ ಚಳುವಳಿಗೆ ಬಲ ನೀಡಿದರು ಎಂದು ಕೆಲವರು ಹೇಳುತ್ತಾರೆ. ಆದರೆ ಅವರ ಕಾರ್ಮಿಕ ಚಳುವಳಿಯ ಘೋಷಣೆ 'ಜಗತ್ತಿನ ಕಾರ್ಮಿಕರೆಲ್ಲ ಒಂದಾಗಿ' (Workers of the World Unite). ಆದರೆ ಆರೆಸ್ಸೆಸ್ ಸ್ವಯಂಸೇವಕರೊಂದಿಗೆ ಬೆಳೆದ ಕಾರ್ಮಿಕ ಸಂಘ 'ಕಾರ್ಮಿಕರು ಜಗತ್ತನ್ನು ಒಗ್ಗೂಡಿಸುತ್ತಾರೆ' (Workers Unite the World). ಈ ವಾಕ್ಯಗಳ ರಚನೆಯಲ್ಲಿ ಬಹಳ ವ್ಯತ್ಯಾಸವಿಲ್ಲ ಆದರೆ ಬಹುದೊಡ್ಡ ವೈಚಾರಿಕ ಬದಲಾವಣೆ ಇದೆ. ಇದು ಸಂಘದ ಸಂಪರ್ಕದಿಂದ ಬಂದ ಜನರು ತಮ್ಮ ರುಚಿ ಪ್ರಕೃತಿಗೆ ಪ್ರವೃತ್ತಿಗೆ ಅನುಗುಣವಾಗಿ ಕೆಲಸ ಮಾಡುವ ರೀತಿ, ಯಾವಾಗ ಇವರ ಕೆಲಸಗಳನ್ನು ಹತ್ತಿರದಿಂದ ನೋಡುತ್ತವೆಯೋ ಆಗ ನಿಮಗೆ 100 ವರ್ಷದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಮರ್ಪಿತ ಭಾವದೊಂದಿಗೆ, ಸಾಧಕನ ಹಾಗೆ ಮಾಡಿದ ಕಾರ್ಯದ ಅರಿವಾಗುತ್ತದೆ. ನನ್ನ ಸೌಭಾಗ್ಯವೆಂದರೆ ಅಂತಹ ಪವಿತ್ರ ಸಂಘಟನೆಯಿಂದ ನನ್ನ ಜೀವನಕ್ಕೆ ಸಂಸ್ಕಾರ ಸಿಕ್ಕಿದೆ”.