Logo

VHP PUBLICATIONS

Hindu Vani


expand_more

ಸಂಪಾದಕೀಯ

ಅದೇ ಪಶ್ಚಿಮ ಬಂಗಾಳ- ಅದೇ ಮಮತಾ


2047ರಲ್ಲಿ ಭಾರತವನ್ನು ಮುಸ್ಲಿಂ ರಾಜ್ಯವನ್ನಾಗಿ ಮಾಡುವ ಪ್ರಯೋಗ ಶಾಲೆಯಾಗಿ ಪಶ್ಚಿಮ ಬಂಗಾಳವು ಕಾರ್ಯಾರಂಭ ಮಾಡುತ್ತಿರುವಂತೆ ಕಾಣುತ್ತಿದೆ. ರಾಜ್ಯದ ಕೆಲವು ಜಿಲ್ಲೆಗಳ ಹಿಂದುಗಳು ದೈನಂದಿನ ಬದುಕನ್ನು ನಡೆಸಲು ಗಡಿ ಭದ್ರತಾ ದಳಗಳು ಕಾವಲು ಕಾಯಬೇಕಾಗಿ ಬಂದಿದೆ. ಮುರ್ಷಿದಾಬಾದ್‌ನಲ್ಲಿ ಮನೆಯಿಂದ ಹೊರಗೆಳೆದು 72 ವರ್ಷದ ವೃದ್ಧ ಹರಗೋವಿಂದ ದಾಸರನ್ನೂ ಅವರ ಮಗ 40 ವರ್ಷದ ಚಂದನ ದಾಸರನ್ನೂ ಥಳಿಸಿ ಕೊಂದುದು ಅಲ್ಲಿಯ ಹಿಂದುಗಳ ಬದುಕನ್ನು ಪ್ರತಿಬಿಂಬಿಸಿದೆ. ಅಪರಾತ್ರಿಯಲ್ಲಿ ಭಾಗೀರಥಿ ನದಿಯನ್ನು ತೆಪ್ಪದಲ್ಲಿ ದಾಟಿ ಬಿ.ಎಸ್.ಎಫ್ ಸೈನಿಕರ ಕಾವಲಿನಲ್ಲಿ ಸಂತ್ರಸ್ಥ ಶಿಬಿರಗಳಲ್ಲಿ ಜೀವ ರಕ್ಷಣೆ ಮಾಡುವ ಸ್ಥಿತಿ ಹಿಂದುಗಳಿಗೆ ಬಂದಿದೆ. ಸಾವಿರಾರು ಅಧಿಕಾರಿಗಳು ಮಾಡಬೇಕಿರುವ ನಾಗರಿಕ ಆಡಳಿತವನ್ನು ನ್ಯಾಯಾಲಯವು ಕೈಗಿತ್ತಿಕೊಳ್ಳಬೇಕಿರುವ ಪರಿಸ್ಥಿತಿಯು ಪಶ್ಚಿಮ ಬಂಗಾಳದಲ್ಲಿದೆ. ಕಲ್ಕತ್ತಾ ಉಚ್ಚನ್ಯಾಯಾಲಯವು ಮುರ್ಷಿದಾಬಾದಿಗೆ ಸೈನವನ್ನು ನಿಯೋಜಿಸಿ ಶಾಂತಿಯನ್ನು ಕಾಪಾಡುವಂತಾಯಿತು ಎಂದಾಗ ರಾಜ್ಯ ಸರ್ಕಾರದ ಅಸಾಮರ್ಥ್ಯವನ್ನು ಅಂದಾಜಿಸಬಹುದು.

ಮುಸ್ಲಿಂ ಹಿಂಸೆಯು ಕರಾರುವಾಕ್ಕಾಗಿ ನಿರ್ಧಾರಿತವಾಗಿದೆ. ಸ್ವಾತಂತ್ರ್ಯ ಪೂರ್ವ ಕಲ್ಕತ್ತಾದ ನೇರಕ್ರಮ (Direct Action) ದ ಪುನರಾವೃತ್ತಿ ಈಗ ಮತ್ತೊಮ್ಮೆ ಪ್ರಯೋಗದಲ್ಲಿದೆ. ಶುಕ್ರವಾರದ ನಮಾಜು ಮುಗಿಯುತ್ತಿದ್ದಂತೆ ಮುಸ್ಲಿಮರ ಹಿಂಡು ಗಲ್ಲಿ ಗಲ್ಲಿಗಳಿಗೆ ನುಗ್ಗುತ್ತದೆ. ಮೊದಲು ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಿ ಬೆಂಕಿ ಇಡುವುದು, ಪೊಲೀಸ್ ವಾಹನಗಳನ್ನು ಸುಟ್ಟು ಪೊಲೀಸರು ಅಸಹಾಯಕರಾಗುವಂತೆ ಮಾಡುವುದು, ನಂತರ ಹಿಂದು ಮನೆಗಳಿಗೆ ನುಗ್ಗಿ ಥಳಿಸುವುದು ಬೆಂಕಿಯಿಟ್ಟು ಆಸ್ತಿಪಾಸ್ತಿಗಳನ್ನು ನಾಶಪಡಿಸುವುದು ಕ್ರಮ ಬದ್ಧವಾಗಿ ನಡೆಯುತ್ತದೆ.

ದೇಶವನ್ನು ಸುಡಲು ಹೊರಟ ಭಯೋತ್ಪಾದಕರ ಪರವಾಗಿ ನಿಂತು ದೇಶವು ಸಾವಿರ ಭಾಗಗಳಾಗಲಿ ಎಂದು ಘೋಷಣೆ ಕೂಗುವ ಉಮರ್‌ ಖಾಲಿದ್ ದೆಹಲಿಯ ಸೆರೆಮನೆಯ ಸೆಕೆಯಲ್ಲಿ ಬೆವರು ಸುರಿಸುತ್ತಿದ್ದಾನೆ ಎಂದು ನೆನೆದು ಕಂಬನಿ ತುಂಬುವ ಪ್ರಕಾಶರಾಜ್ ಎಂಬ ನಟನು ಪಶ್ಚಿಮ ಬಂಗಾಳದ ಹಿಂದುಗಳು ಥಳಿತಕೊಳ್ಳಗಾಗಿ ರಕ್ತಸೋರುತ್ತ ಪ್ರಾಣ ಬಿಡುವುದರ ಕುರಿತು ಸೊಲ್ಲೆತ್ತುತ್ತಿಲ್ಲ. ಮಣಿಪುರದ ಕುರಿತು ಪುಟಗಟ್ಟಲೆ ಬರೆಯುವ ಬರಹಗಾರರು ಈಗ ಏನನ್ನೂ ಹೇಳುತ್ತಿಲ್ಲ. ಭಾರತದ ಸ್ಥಿತಿಗತಿಗಳನ್ನು ವಕ್ರವಾಗಿ ಚಿತ್ರಿಸುವ ವಿದೇಶಿ ಮಾಧ್ಯಮಗಳು, ವಿಚಾರವಾದಿಗಳು ಬಂಗಾಳದ ಮುಸ್ಲಿಮರ ಕೌರ್ಯಕ್ಕೆ ಕುರುಡರಾಗಿ ಬಿಟ್ಟರು. ಜೈ ಶ್ರೀರಾಮ್ ಎನ್ನುವುದು ಕೋಮು ಘೋಷಣೆ ಎಂದವರು ಅಲ್ಲಾಹೋ ಅಕ್ಟರ್ ಸಹಜವಾಗಿ ಹೊರಹೊಮ್ಮುವ ಉದ್ದಾರವೆನ್ನುವರು. ಅಫ್‌ಘಾನಿಸ್ತಾನ, ಪಾಕಿಸ್ತಾನ ಮತ್ತು ಬಂಗ್ಲಾಗಳಲ್ಲಿ ಹಿಂದುಗಳ ವಿರುದ್ಧ ನಡೆಯುತ್ತಿರುವ ಸಾರ್ವಜನಿಕ ಹಿಂಸಾ ಕೃತ್ಯಗಳೀಗ ಬಂಗಾಳದ ಜಿಲ್ಲೆಗಳಲ್ಲಿ ಸರ್ವೇಸಾಮಾನ್ಯವಾಗಿ ಬಿಟ್ಟಿವೆ. ಹಿಂದು ಹೆಣ್ಣುಮಕ್ಕಳು ಕಾಣೆಯಾಗಿ ಬಿಡುವುದು, ದೇವಸ್ಥಾನಗಳು ಧ್ವಂಸವಾಗುವುದು, ಮನೆಗಳಿಗೆ ಬೆಂಕಿ ಇಟ್ಟು ಧಾಳಿ ಮಾಡುವುದು ತಡೆಯಿಲ್ಲದೆ ಸಾಗುತ್ತಿದೆ.

ಡೊಂಕಾಲ್ ಮತ್ತು ಜಾಫ್ರಾಬಾದ್‌ಗಳ ಹಿಂದುಗಳೀಗ ತಾತ್ಕಾಲಿಕವಾಗಿ ನಿಯುಕ್ತಿಗೊಂಡ ಕೇಂದ್ರಿಯ ಸಶಸ್ತ್ರಪಡೆಗಳು ಶಾಶ್ವತವಾಗಿ ಇರುವಂತೆ ಒತ್ತಾಯಿಸುತ್ತಿರುವರು. ಮನೆ ಬಿಟ್ಟು ಶಿಬಿರಗಳಲ್ಲಿ ಬದುಕುತ್ತಿರುವವರನ್ನು ಕಾಣಲು ಬಂದ ಮೂಲ ಕಾಂಗ್ರೆಸ್ಸಿನ ಸಂಸದ ಖಲೀಲು‌ ರಹಮಾನರನ್ನು ಸುತ್ತುಗಟ್ಟಿದ ಸಂತ್ರಸ್ಥರು; ಹಿಂಸಾಕೃತ್ಯಗಳಿಗೆ ಕಾರಣಕರ್ತರಾದವರೇ ಈಗ ಸಂತೈಸುವ ನಾಟಕವಾಡಲು ಬರುತ್ತಿರುವರು ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು. ಮಲ್ಲಾದ ಶಿಖರಕ್ಕೆ ಬಂದ ಕಾಂಗ್ರೆಸ ಸಂಸದ ಇಲಾಖಾನ್ ಚೌಧರಿಯನ್ನು ಮಾತನಾಡಲು ಬಿಡದೆ ಘೋಷಣೆ ಕೂಗಿ ಹಿಂದಿರುಗುವಂತೆ ಮಾಡಿದರು. ಫರಕ್ಕಾದ ಶಾಸಕ ಮುನಿರುಲ್ ಇಸ್ಲಾಂ ಹಿಂಸೆಗೆ ಬಲಿಯಾದ ಜನರನ್ನು ಎದುರಿಸಲಾಗದೆ, ತನ್ನ ನಿವಾಸವನ್ನು ಬದಲಾಯಿಸಿ ಮತ್ತೆಲ್ಲೋ ಹೋಗಿ ಪ್ರಾಣ ಉಳಿಸಿಕೊಂಡರು.

ಈ ನಡುವೆ ಮಮತಾ ಬ್ಯಾನರ್ಜಿ ನೋವಿಗೊಳಗಾದ ಹಿಂದುಗಳ ಬಗ್ಗೆ ಯಾವ ಸಹಾನುಭೂತಿಯನ್ನು ತೋರಲಿಲ್ಲ. ಅದರ ಬದಲು ಇಮಾಮರ ಸಭೆಯನ್ನು ಏರ್ಪಡಿಸಿದರು. ಮುಸ್ಲಿಮರ ರಕ್ಷಣೆಯೇ ತನ್ನ ಸರ್ಕಾರದ ಗುರಿಯೆನ್ನುತ್ತಾ ಅವರನ್ನು ಓಲೈಸತೊಡಗಿದರು. ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿದ ಮಸೂದೆಗೆ ರಾಷ್ಟ್ರಾಧ್ಯಕ್ಷರು ಸಹಿಯನ್ನು ಹಾಕಿ ಅದು ಉಮೀದ್ ಕಾನೂನಿನ ಹೆಸರಲ್ಲಿ ದೇಶಾದ್ಯಂತ ಜಾರಿಗೆ ಬಂದಿದ್ದರೂ, ಈ ಮುಖ್ಯಮಂತ್ರಿಯು ಆ ಕಾನೂನನ್ನು ಪಶ್ಚಿಮ ಬಂಗಾಳದಲ್ಲಿ ಜಾರಿಗೆ ಬರಲು ಬಿಡಲಾರೆ ಎನ್ನುವ ಸಂವಿಧಾನ ವಿರೋಧಿ ಬಡಾಯಿಯನ್ನು ಕೊಚ್ಚಿಕೊಂಡರು. ನ್ಯಾಯಾಲಯದ ತೀರ್ಪಿನಂತೆ ಬಂದ ಸಶಸ್ತ್ರದಳಗಳು ಬಾಂಗ್ಲಾದೇಶದಿಂದ ಜನರನ್ನು ತಂದು ಬಂಗಾಳದಲ್ಲಿ ಗಲಭೆಗಳನ್ನು ಎಬ್ಬಿಸುತ್ತಿವೆ ಎನ್ನುವ ಕತೆಯನ್ನು ಕಟ್ಟಿ ಹೇಳಲು ಪ್ರಾರಂಭಿಸಿದರು. ಮಮತಾ ಬ್ಯಾನರ್ಜಿಯನ್ನು ಬೆಂಬಲಿಸುವ ಹೇಳಿಕೆಯನ್ನು ನೀಡಿದ ಹಿಂದಿನ ಎನ್.ಡಿ.ಟಿ.ವಿ. ಪತ್ರಕರ್ತೆ ಸಾಗರಿಕಾ ಘೋಷ್ ಬಿಹಾರದಿಂದ ಹಿಂದೂಗಳನ್ನು ಮುಸ್ಲಿಂ ವೇಷದಲ್ಲಿ ಕರೆಸಿ ಗಲಭೆಯನ್ನು ಎನ್ನಿಸಲಾಗುತ್ತದೆ ಎಂದರು.

ಅಲ್ಲಲ್ಲಿ ನಡೆಯುತ್ತಿರುವ ಘಟನೆಗಳು ಹಲವು ತಿರುವುಗಳನ್ನು ಹಲವು ತಿರುವುಗಳನ್ನು ಸೂಚಿಸುತ್ತವೆ. ಗುಪ್ತ ಸಭೆಗಳಲ್ಲಿ ಕೇಂದ್ರ ಸರ್ಕಾರದ ಆಸ್ತಿಗಳಾದ ರೈಲು, ಅಂಚೆ ಕಛೇರಿಗಳನ್ನು ಗುರಿಯಾಗಿಡಬೇಕು ಎಂದು ಪ್ರಚೋದಿಸುವ ಮಾತುಗಳು ಕೇಳಿಬಂದರೆ, ಇನ್ನು ಕೆಲವುಕಡೆ ಮಹಿಳೆಯರಿಂದ 'ಸಾಯಲೂ ಸಿದ್ಧ ಕೊಲ್ಲಲ್ಲೂ ಸಿದ್ಧ ಎನ್ನುವ ಘೋಷಣೆಗಳು ಕೇಳಿ ಬರುತ್ತವೆ. ಸಂವಿಧಾನದ ದಯೆಯಿಂದ ಮಂತ್ರಿಯಾಗಿರುವ ಜಾರ್ಖಂಡದ ಹಸನ್ ಅನ್ಸಾರಿ, ತನ್ನ ಪ್ರಥಮ ಪ್ರಾಶಸ್ತ್ರವಿರುವುದು ಷರೀಯತ್‌ಗೆ ಎಂದು ಘೋಷಿಸುತ್ತಾನೆ. ತನ್ನ ಅಂತರಂಗವನ್ನು ಬಯಲು ಮಾಡಿದ ಈತನು ತನಗೆ ಷರೀಯತ್ ಮಹತ್ವದ್ದು, ಕುರಾನ್ ತನ್ನ ಹೃದಯದಲ್ಲಿದೆ. ಸಂವಿಧಾನವಿರುವುದು ಕೈಯಲ್ಲಿ ಎನ್ನುತ್ತಾ ಮುಸ್ಲಿಂ ಮಂತ್ರಿಯ ಪಾಲಿಗೆ ಸಂವಿಧಾನದ ಸ್ಥಾನವೇನು ಎನ್ನುವುದನ್ನು ಸಾರಿಬಿಟ್ಟಿರುವನು. ಈ ಜಾರ್ಖಂಡಿನ ಸರ್ಕಾರಕ್ಕೆ ಬೆಂಬಲ ನೀಡುತ್ತಿರುವುದು ಸಂವಿಧಾನವೆಂದು ಜಪಿಸುತ್ತಾ ಇರುವ ಕಾಂಗ್ರೇಸ್ ಈಗಿರುವ ಒಂದೇ ದಾರಿಯೆಂದರೆ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಾಧ್ಯಕ್ಷರ ಆಡಳಿತವನ್ನು ತರುವುದು. ಸಾರಿ ಸಾರಿ ಕೊಂದರೆ ಪಾಪವಿಲ್ಲ ಎನ್ನುತ್ತಾರೆ.