Logo

VHP PUBLICATIONS

Hindu Vani


expand_more

ಜಿಹಾದ್

2008ರ 26/11

ಪಾಕಿಸ್ತಾನೀ ಜೆಹಾದಿ ಭಯೋತ್ಪಾದನೆ


2008ರಲ್ಲಿ ಮುಂಬಯಿಯಲ್ಲಿ ನಡೆದ ಇಂಡಿಯನ್ ಮುಜಾಹಿದಿನ್ ಪ್ರೇರಿತ ಭಯೋತ್ಪಾದನಾ ಕೃತ್ಯವು, ಭಾರತದ ಮುಸ್ಲಿಮರನ್ನು ದೇಶಾದ್ಯಂತ ಪ್ರಚೋದಿಸುವ ಉದ್ದೇಶವನ್ನು ಒಳಗೊಂಡಿತ್ತು. ಇದು ಇಂಟೆಲಿಜೆನ್ಸ್‌ ಬ್ಯೂರೋ (ಐ.ಬಿ)ದ ವಿಶೇಷ ನಿರ್ದೇಶಕರಾಗಿದ್ದ ಅಶೋಕ ಪ್ರಸಾದ್ ತಮ್ಮ ಸಂದರ್ಶನವೊಂದರಲ್ಲಿ ಹೇಳಿದ ಮಾತು. ಪಾಕಿಸ್ತಾನದ ಐ.ಎಸ್.ಐ, ಬೆಂಬಲದ ಈ ಸಂಘಟನೆಯು ಲಷ್ಕರ್ ಇಡ್ಕೊಬಾ(ಎಲ್.ಇ.ಟಿ) ಕರಾಚಿಯಿಂದ ಯೋಜಿತವಾಗಿದ್ದಿತು.

ಪಾಕಿಸ್ತಾನದಿಂದ ಜಿಹಾದಿ ಭಯೋತ್ಪಾದನೆಯ ಈ ಏಜಂಟರು ಅಮೆರಿಕಾದಲ್ಲಿದ್ದ ಪಾಕಿಸ್ತಾನಿ ಪ್ರಜೆ ಡೆವಿಡ್ ಕಾಲೆನ್ ಹೆಡ್ಲಿಯನ್ನು ಪಾಕಿಸ್ತಾನದ ಎಲ್.ಇ.ಟಿ ಮೂಲಕ ಈ ಕೃತ್ಯದಲ್ಲಿ ತೊಡಗಿಸಿದ್ದರು. ಹೆಡ್ಲಿಯ ಪೂರ್ಣ ಪ್ರವಾಸವನ್ನು ಈಚೆಗೆ ಅಮೆರಿಕಾದಿಂದ ಭಾರತಕ್ಕೆ ವರ್ಗಾಯಿಸಿದ ಥಾವೂರ್ ರಾಣಾ ಯೋಜಿಸಿದ್ದನು. ಕೆನಡಾದಿಂದ ನೇಪಾಳ ಮತ್ತು ಬಾಂಗ್ಲಾದೇಶಗಳ ಮೂಲಕ ಭಾರತದಲ್ಲಿ ಭಯೋತ್ಪಾದನಾ ಕೃತ್ಯಕ್ಕಾಗಿ ನಿಗದಿಯಾದ ಸ್ಥಾನಗಳ ನಿಖರ ಮಾಹಿತಿಯನ್ನು ಕರಾಚಿಯಲ್ಲಿ ಕ್ರೋಢೀಕರಿಸಲು ಅವನು ನೆರವಾಗಿದ್ದನು.

ಇಂಡಿಯನ್ ಮುಜಾಹಿದಿನ್ ಸಂಘಟನೆಯು ಈ ಕೃತ್ಯವನ್ನು ಕಾರ್ಯರೂಪಕ್ಕೆ ತರಲು 10 ಭಯೋತ್ಪಾದಕರನ್ನು ವಿಶೇಷವಾಗಿ ಭರ್ತಿ ಮಾಡಿದ್ದಿತು. ಅವರಿಗೆ ಅಗತ್ಯ ತರಬೇತಿಯನ್ನು ನೀಡಲಾಗಿದ್ದಿತು. ನ್ಯೂಜೆರ್ಸಿಯಲ್ಲಿದ್ದ ಈ ಸಂಪರ್ಕ ಕೇಂದ್ರವು ಸಮುದ್ರ ಮಾರ್ಗದಿಂದ ಈ ಯೋಜನೆಯನ್ನು ತಲುಪಲು ನಿಶ್ಚಯಿಸಿದ್ದಿತು. ಇದರ ಪೂರ್ಣ ಸಮನ್ವಯವನ್ನು ಆರ್ಥಿಕ ಬೆಂಬಲವನ್ನೂ ಸ್ಪೇನ್ ಮತ್ತು ಇಟೆಲಿ ದೇಶಗಳ ಮೂಲಕ ಮಾಡಲು ಯೋಜಿತವಾಗಿದ್ದಿತು.

ಈ ಭಯೋತ್ಪಾದಕ ಪ್ರಸಂಗದಲ್ಲಿ ಮುಂಬಯಿ ಪೊಲೀಸ್ ದಳದ ತುಕಾರಾಮ ಕಾಂಬ್ಳೆ ತನ್ನ ಪ್ರಾಣವನ್ನು ಪಣಕ್ಕಿಟ್ಟು ಭಯೋತ್ಪಾದಕರಲ್ಲಿ ಒಬ್ಬನಾದ ಅಜ್ಜಲ್ ಕಸಬ್‌ನನ್ನು ಹಿಡಿಯುವಲ್ಲಿ ಸಫಲರಾದರು. ಈ ಸಾಹಸದಲ್ಲಿ ಅವರು ತಮ್ಮ ಪ್ರಾಣವನ್ನು ಅರ್ಪಿಸಬೇಕಾಯಿತು. ಅಜ್ಜಲ್ ಕಸಬ್ ಕೈವಶನಾದುದರಿಂದ ಇಡಿಯ ಕೃತ್ಯದ ಪೂರ್ಣ ಚಿತ್ರವೂ ಅದರಲ್ಲಿ ಪಾಕಿಸ್ತಾನದ ಕೈವಾಡವೂ ಬೆಳಕಿಗೆ ಬಂದವು. ಹಾಗಲ್ಲದೆ ಹೋಗಿದ್ದರೆ ಅದಾಗಲೇ ಕಾಂಗ್ರೆಸ್ ನಾಯಕರು ಕಟ್ಟಿದ ಕತೆಯಂತೆ ಈ ಇಡೀ ಘಟನೆಯು ಆರ್.ಎಸ್.ಎಸ್. ನಡೆಸಿದ ನಾಟಕವೆಂದೇ ಬಿಂಬಿತವಾಗುತ್ತಿದ್ದಿತ್ತು.

ಮುಂಬಯಿ ಕೃತ್ಯದ ಆ ಹತ್ತು ಮಂದಿ ಪಾಕಿಸ್ತಾನಿ ಭಯೋತ್ಪಾದಕರು ಭಾರತದ ಗುರುತು ಪತ್ರಗಳನ್ನು ಹೊಂದಿದ್ದರು. ಪಾಕಿಸ್ತಾನದ ಐ.ಎಸ್.ಐ. ಯೋಜನೆ ಮಾಡಿದಂತೆ, ಈ ಪ್ರಸಂಗವನ್ನು ಭಾರತದಲ್ಲಿ ಡೆಕ್ಕನ್ ಮುಜಾಹಿದಿನ್ ಎನ್ನುವ ಗುಂಪು ಮಾಡಿರುವುದು ಎಂದು ಪ್ರಚಾರವಾಗುವಂತೆ ನಿರ್ಧರಿಸಲಾಗಿದ್ದಿತು. ಹಾಗೆ ಮಾಡುವುದರಿಂದ ಭಾರತದ ಮುಸ್ಲಿಮರು ಭಾರತ ಸರ್ಕಾರದ ವಿರುದ್ಧ ಇರುವರೆಂದು ಸ್ಥಾಪಿಸಬೇಕೆಂದುಕೊಂಡಿದ್ದರು. ಭಯೋತ್ಪಾದಕ ಕೃತ್ಯಗಳ ಮೂಲಕ ಭಾರತವು ಅಶಾಂತಿಯ ಪ್ರದೇಶವೆಂದು ಸಾಬೀತುಪಡಿಸುತ್ತಾ ಅಲ್ಲಿ ಅಲ್ಪಸಂಖ್ಯಾತರ ಜೀವನವು ದುರ್ಭರವಾಗಿದೆಯೆಂದು ಚಿತ್ರಿಸುವುದು ಅವರ ಉದ್ದೇಶವಾಗಿದ್ದಿತು. ಈ ಮೂಲಕ ಭಾರತದಲ್ಲಿ ವಿದೇಶಿ ಬಂಡವಾಳವನ್ನು ಹೂಡುವುದು ಅಪಾಯಕಾರಿ ಎಂದು ವಿದೇಶಗಳನ್ನು ನಂಬಿಸುವುದೂ ಇದರ ಇನ್ನೊಂದು ಉದ್ದೇಶವಾಗಿದ್ದಿತು.

ಈಗ ಭಾರತಕ್ಕೆ ವರ್ಗಾಯಿಸಲ್ಪಟ್ಟ ಥಾವೂರ್ ರಾಣಾ, ಹಿಂದೆ ಬಂಧಿಸಲ್ಪಟ್ಟ ಅಜ್ಜಲ್‌ ಕಸಬ್ ಸೇರಿ ಮೂರನೆಯ ಭಯೋತ್ಪಾದಕ ಹೆಡ್ಲಿಗೆ ಆರ್ಥಿಕ ನೆರವು ಮತ್ತು ಆಶ್ರಯವನ್ನು ನೀಡಿದವನು. ಭಾರತೀಯ ವೀಸಾ ಮತ್ತು ಭಾರತದ ಪ್ರವಾಸಕ್ಕೆ ಟಿಕೇಟುಗಳ ವ್ಯವಸ್ಥೆಯು ಈ ರಾಣಾ ಮೂಲಕವೆ ನಡೆದಿದ್ದಿತು. ಹೆಡ್ಲಿಯ ಮುಂಬೈ ಭೇಟಿ ಮತ್ತು ಭಾರತದಲ್ಲಿ ಉಳಿದ ನಗರಗಳಿಗೆ ಪ್ರವಾಸವೆಲ್ಲವೂ ರಾಣಾನ ನೆರವಿನಿಂದಲೇ ಸಾಧ್ಯವಾಗಿದ್ದಿತು. ಮುಂಬಯಿ ಕೃತ್ಯದ ಎರಡು ವರ್ಷಗಳ ಮೊದಲು 2006ರಿಂದ 2008ರ ವರೆಗಿನ ಇಡಿಯ ಯೋಜನೆಯು ರಾಣಾನಿಗೆ ತಿಳಿದೇ ನಡೆದಿದ್ದಿತು.

1997ರಲ್ಲಿ ಕೆನಡಾದ ಪೌರನಾಗಿದ್ದ ಥಾವೂರ್ ರಾಣಾ, ಪಾಕಿಸ್ತಾನದ ಪಂಜಾಬಿನಲ್ಲಿ ಹುಟ್ಟಿದವನು. ಹಸನ್ ಅಬ್ದಾಲ್‌ನಲ್ಲಿದ್ದ ಸೈನಿಕ ಶಾಲೆಯಲ್ಲಿ ಆತನು ತರಬೇತಿಯನ್ನೂ ಪಡೆದಿದ್ದ, ಸೈನ್ಯದಲ್ಲಿ ವೈದ್ಯನಾಗಿದ್ದ ಅವನು ಕರ್ನಲ್ ಹುದ್ದೆಯವರೆಗೆ ಬಡ್ತಿಯನ್ನು ಹೊಂದಿದ್ದನು. ಅಲ್ಲಿರುವಾಗಲೇ ಅವನಿಗೆ ಹೆಡ್ಲಿಯ ಭೇಟಿಯಾಗಿದ್ದಿತು. ರಾಣಾ ಎಲ್. ಇ. ಟಿ.ಯ ಸತತ ಸಂಪರ್ಕದಲ್ಲಿದ್ದವನು. ಒಪ್ಪಂದದಂತೆ ಅವನ ಮಾಹಿತಿಯನ್ನು ಭಾರತಕ್ಕೆ ನೀಡುತ್ತಿದ್ದ ಪಾಕಿಸ್ತಾನವು ಕ್ರಮೇಣ ಯಾವುದನ್ನೂ ನೀಡದೆ ಹಿಂಜರಿಯಿತು. ಅವನಿಗಿದ್ದ ಲಷ್ಕರ್ ಇತೊಯ್ಯಾ, ಹಪೀಜ್ ಸೈಯದ್, ಪಾಕಿಸ್ತಾನಿ ಗುಪ್ತಚರ ಇಲಾಖೆಯ ಸಂಬಂಧವೆಲ್ಲವೂ ಪಾಕಿಸ್ತಾನಕ್ಕೆ ಅರಿವಿದ್ದಿತು. 2009ರಿಂದ 2013ರವರೆಗೆ ಪಾಕಿಸ್ತಾನ ನಡೆಸಿದ ವಿಚಾರಣೆಯಲ್ಲಿ ಅದಕ್ಕೆ ಈ ಕುರಿತು ಸಾಕ್ಷ್ಯಗಳು ಲಭ್ಯವಾಗಿದ್ದವು.

ಮುಂಬೈ ಘಟನೆಯಲ್ಲಿ ಸೆರೆಸಿಕ್ಕ ಅಜ್ಜಲ್ ಕಸಬ್ ಸಿಂದ್ ಪ್ರಾಂತದ ಎಲ್.ಇ.ಟಿ. ಯಲ್ಲಿ ತರಬೇತಿಯನ್ನು ಪಡೆದವನು. ಅವನು ಮುಂಬಯಿಗೆ ಸಮುದ್ರ ಮಾರ್ಗದಿಂದ ಬಂದ ಯಾಂತ್ರಿಕ ದೋಣಿಯನ್ನು ಎಲ್.ಇ.ಟಿ. ಒದಗಿಸಿದ ಹಣದಿಂದ ಕರಾಚಿಯ ಅಂಗಡಿಯೊಂದರಿಂದ ಖರೀದಿಸಲಾಗಿದ್ದಿತು. ಕರಾಚಿಯ ನಿರ್ದೇಶನದಲ್ಲಿ ಈ ಧಾಳಿಯು ನಡೆದ ಬಗ್ಗೆ ಭಾರತಕ್ಕೆ ಸಾಕ್ಷ್ಯಗಳು ಸಿಕ್ಕಿವೆ. ಅಲ್ಲಿಯವರೆಗೆ ಒಂದಿಷ್ಟು ವಿಚಾರಣೆಗೆ ನೆರವಾಗುತ್ತಿದ್ದ ಪಾಕಿಸ್ತಾನವು ಭಯೋತ್ಪಾದಕರು ಮತ್ತು ಅವರ ನಿರ್ದೇಶಕರ ಧ್ವನಿಯನ್ನು ಹೋಲಿಸುವ ಹಂತದಲ್ಲಿ ವಿಚಾರಣೆಯಿಂದ ಹಿಂಜರಿಯಿತು. ಈ ರಾಣಾ 2009 ಸೆಪ್ಟೆಂಬರ್‌ನಲ್ಲಿ ಡೆನ್ಮಾಕ್‌ ಭಯೋತ್ಪಾದಕ ಕೃತ್ಯದ ಕಾಲದಲ್ಲಿ ಅಲ್ಲಿಗೆ ಹೋಗಲು ಪ್ರಯತ್ನದಲ್ಲಿದ್ದಾಗ ಬಂಧನಕೊಳಗಾದನು.

2008 ನವೆಂಬರ್ 26ರಂದು ಮುಂಬಯಿಯಲ್ಲಿ ನಡೆದ ಈ ಭಯೋತ್ಪಾದನೆಯ ಕೃತ್ಯದಲ್ಲಿ 6 ಅಮೆರಿಕಾ ಪ್ರಜೆಗಳು ಸೇರಿದಂತೆ 166 ಜನರು ಸಾವಿಗೀಡಾಗಿದ್ದರು. ಮುಂಬೈ ಧಾಳಿಯ ನಂತರ ಆ ಕುರಿತು ರಾಣಾ ಹೆಡ್ಲಿಯು “ಏನು ಆಗಬೇಕಾಗಿದ್ದಿತೋ ಅದು ನಡೆಯಿತು” ಎಂದು ಉದ್ಗಾರವೆತ್ತಿದ್ದನು. ಆ ಘಟನೆಯಲ್ಲಿ ಸಾವಿಗೀಡಾದ ಭಯೋತ್ಪಾದಕರಿಗೆ ಪಾಕಿಸ್ತಾನದ ಅತ್ಯುಚ್ಚ ನಾಗರೀಕ ಪ್ರಶಸ್ತಿಯಾದ ನಿಶಾನ್ ಇ ಹೈದರ್‌ಅನ್ನು ನೀಡಬೇಕು ಎಂದು ಒತ್ತಾಯಿಸಿದ್ದನು.