Hindu Vani
Index
ಪದ್ಧತಿ
ದೇವರ ಪೂಜೆಗೆ ಹಣ್ಣು-ಕಾಯಿ ಹೋಮಕ್ಕೆ ಕಾಯಿಯ ಚಿಪ್ಪು
ಸನಾತನ ಧರ್ಮವೆಂದರೆ ಅದ್ಭುತ ಹಾಗೂ ರೋಚಕ ಆಚರಣೆಗಳ ಸಂಗಮ. ವಿಶಿಷ್ಟ ವೈವಿಧ್ಯಗಳ ಸಮಾಗಮ. ಆನಂದ ವೈಭವಗಳ ಮೇಳ. ಹಿಂದು ಧರ್ಮದ ಪ್ರತಿಯೊಂದು ಹಬ್ಬಗಳಲ್ಲೂ ವಿಶೇಷ ಪೂಜೆ ಪುನಸ್ಕಾರಗಳು, ಸಂಪ್ರದಾಯಗಳು ಒಳಗೊಂಡಿವೆ. ನಾವು ದೇವರ ಪೂಜೆಯಲ್ಲಿ ಉಪಯೋಗಿಸುವ ಹಣ್ಣು ಕಾಯಿ ಏಕೆ ಶ್ರೇಷ್ಠವೆಂದರೆ, ದೇವರನ್ನು ಪೂಜಿಸುವಾಗ ಭಯ, ಭಕ್ತಿ, ಶ್ರದ್ಧೆ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾದದ್ದು ಅದು ಸ್ವಚ್ಛವಾಗಿ ಶುದ್ಧವಾಗಿ ಇರಬೇಕು ಎನ್ನುವುದು. ಮಡಿಯಿಂದ ಪೂಜಿಸುವುದು ಎಂದರೆ ಈ ರೀತಿಯ ಪೂಜ್ಯಭಾವನೆಯೊಂದಿಗೆ ಇರುವುದು.
ದೇವರಿಗೆ ಮಾಡುವ ನೈವೇದ್ಯವನ್ನು ಸ್ವಚ್ಛತೆಯಿಂದ ಹಾಗೂ ಮಡಿಯಿಂದ ಮಾಡುವುದು ನಮ್ಮ ಸನಾತನ ಧರ್ಮದ ವಿಶೇಷ. ಆದುದರಿಂದ ಪೂಜೆಗೆ ನಾವು ಉಪಯೋಗಿಸುವ ಹಣ್ಣು-ಕಾಯಿ ತುಂಬಾ ವಿಶೇಷವಾದ ಸ್ಥಾನವನ್ನು ಹೊಂದಿದೆ. ಬಾಳೆಹಣ್ಣನ್ನು ಹಾಗೂ ತೆಂಗಿನಕಾಯಿಯನ್ನು ನಾವು ಪೂಜೆಗೆ ಉಪಯೋಗಿಸುವ ಕಾರಣವೆಂದರೆ ಈ ಎರಡು ಗಿಡಗಳು ತಿಂದು ಬಿಸಾಕಿರುವುದರಿಂದಾಗಲಿ ಅಥವಾ ಎಂಜಲು ಮಾಡಿದ ಬೀಜದಿಂದ ಆಗಲಿ ಬೆಳೆದಿರುವುದಿಲ್ಲ.
ಬಾಳೆಹಣ್ಣಿನ ಗಿಡವು ಒಂದರ ಪಕ್ಕ ಒಂದರಂತೆ ಗಡ್ಡೆಯಿಂದ ಬೆಳೆಯುತ್ತದೆ. ಯಾವುದೇ ರೀತಿಯ ಎಂಜಲು ಮಾಡಿದ ಅಥವಾ ಬಿಸಾಕಿದ ಬೀಜದಿಂದ ಬಾಳೆಹಣ್ಣಿನ ಗಿಡವು ಬೆಳೆಯುವುದಿಲ್ಲ. ಒಂದು ಬಾಳೆಹಣ್ಣಿನ ಗಿಡದಲ್ಲಿ ಒಂದೇ ಬಾಳೆಹಣ್ಣಿನ ಗೊನೆಯನ್ನು ನಾವು ಕಾಣಬಹುದು. ಅದಾಗುತ್ತಲೇ ಈ ಗಿಡದ ಬೆಳೆಯು ಮುಕ್ತಾಯ ಗೊಳ್ಳುತ್ತದೆ.
ತೆಂಗಿನ ಮರವೂ ಹಾಗೆಯೇ! ಪೂರ್ಣಫಲದ ಮೊಳಕೆ ಒಡೆದ ತೆಂಗಿನಕಾಯಿಯಿಂದ ಮರ ಚಿಗುರುತ್ತದೆ. ಹಾಗಾಗಿ ಯಾವುದೇ ರೀತಿಯಲ್ಲಿ ಯಾವ ಪ್ರಾಣಿ, ಪಕ್ಷಿ, ಮನುಷ್ಯರು ಅದನ್ನು ಉಪಯೋಗಿಸಿ ಇರುವುದಿಲ್ಲ. ಹೀಗಾಗಿ ಬಾಳೆಹಣ್ಣು ಹಾಗೂ ತೆಂಗಿನಕಾಯಿಗಳನ್ನು ದೇವರ ಪೂಜೆಗೆ ವಿಶೇಷವಾಗಿ ಬಳಸುವ ವೈಶಿಷ್ಟ್ಯವು ನಮ್ಮ ಸನಾತನ ಧರ್ಮದಲ್ಲಿ ನಾವು ಕಾಣುತ್ತೇವೆ.
ಇದರ ಜೊತೆಗೆ ಹೋಮಕ್ಕೆ ನಾವು ತೆಂಗಿನ ಚಿಪ್ಪನ್ನು ಬಳಸುತ್ತೇವೆ. ಏಕೆಂದರೆ, ಚಿಪ್ಪನ್ನು ಸಹ ಯಾವುದೇ ಪ್ರಾಣಿಯಾಗಲಿ, ಪಕ್ಷಿಯಾಗಲಿ, ಮನುಷ್ಯನಾಗಲಿ. ತಿನ್ನಲು ಉಪಯೋಗಿಸುವುದಿಲ್ಲ. ಹೋಮಕ್ಕೆ ಉಪಯೋಗಿಸುವ ಮರದ ತುಂಡುಗಳು ಸಹ ಯಾವುದೇ ರೀತಿಯಲ್ಲೂ ಎಂಜಲಾಗದ ವಸ್ತುವಾಗಿರುವುದರಿಂದ ಶ್ರೇಷ್ಠವಾದ ಮರದ ತುಂಡುಗಳು ಹಾಗೂ ತೆಂಗಿನಕಾಯಿ ಚಿಪ್ಪನ್ನು ಯಾಗಗಳಲ್ಲಿ ಉಪಯೋಗಿಸುವ ರೂಢಿ ನಮ್ಮ ಧರ್ಮದ ಅನುಷ್ಟಾನಗಳಲ್ಲಿ ನಾವು ವಿಶೇಷವಾಗಿ ಕಾಣಬಹುದು.
ಒಟ್ಟಿನಲ್ಲಿ ಸನಾತನ ಧರ್ಮವೆಂದರೆ ಹಿಂದುಗಳಿಗೆ ಪ್ರತಿಯೊಂದು ಕ್ಷಣವೂ, ಪ್ರತಿಯೊಂದು ಆಚರಣೆಯೂ ಆಶ್ಚರ್ಯ ಹಾಗೂ ಅದ್ಭುತಗಳ ವಿಶೇಷ ಅನುಭವಗಳ ಭಕ್ತಿ ಶ್ರದ್ಧೆಗಳ ಗುಂಪುಗೋಷ್ಠಿ.
ರಾಮ ಶೋಭಾಯಾತ್ರೆ
ರಾಮಮೂರ್ತಿ ನಗರ(ಕೃಷ್ಣರಾಜಪುರ ಜಿಲ್ಲೆ): ಶ್ರೀರಾಮೋತ್ಸವದ ಮಂಗಳ ಕಾರ್ಯಕ್ರಮವಾಗಿ ಬೃಹತ್ ಶೋಭಾಯಾತ್ರೆಯನ್ನು, ಜಿಲ್ಲಾ ಸಮಿತಿಯು ಹಮ್ಮಿಕೊಂಡಿತ್ತು. ಶ್ರೀ ಕೃಷ್ಣ ಗೋಸೇವಾಶ್ರಮದ ಹಿರಿಯರಾದ ಫುರಾಜ ಮಹಾರಾಜರವರು ತಮ್ಮ ಸಾನ್ನಿಧ್ಯದಿಂದ ಕಾರ್ಯಕ್ರಮವನ್ನು ದಿವ್ಯವನ್ನಾಗಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಪ್ರಚಾರ ಟೋಳಿಯ 18011 ಗಿರಿಧರ ಉಪಾಧ್ಯಾಯರವರು ಪ್ರಮುಖ ವಕ್ತಾ ಆಗಿ ಆಗಮಿಸಿದ್ದರು.
ವಿಶ್ವ ಹಿಂದು ಪರಿಷತ್ತಿನ ಪ್ರಾಂತ ಅಧ್ಯಕ್ಷರೂ ಕೇಂದ್ರಿಯ ಕೋಶಾಧ್ಯಕ್ಷರೂ ಆದ ದೀಪಕ ರಾಜಗೋಪಾಲರವರೂ ಪ್ರಾಂತ ಉಪಾಧ್ಯಕ್ಷರೂ ಆದ ಕುಸುಮಾ ನಾರಾಯಣಚಾರ್ಯ ಹಾಗೂ ಬೆಂಗಳೂರು ಉತ್ತರ ವಿಭಾಗ ಕಾರ್ಯದರ್ಶಿಗಳಾದ ವೆಂಕಟೇಶರವರು ಕಾರ್ಯಕ್ರಮದಲ್ಲಿ ಪೂರ್ಣ ಉಪಸ್ಥಿತರಿದ್ದರು.
ಉತ್ಸಾಹ, ವೈಭವ ಮತ್ತು ವಿಜೃಂಭಣೆಯ ಶೋಭಾಯಾತ್ರೆಯಲ್ಲಿ ಬಜರಂಗದಳ ಮತ್ತು ಹಿಂದು ಜಾಗರಣ ವೇದಿಕೆಯ ಯುವಕರೂ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಭಗಿನಿಯರೂ ಸೇರಿದಂತೆ ಸಾರ್ವಜನಿಕರು ಬಂದು ಪಾಲ್ಗೊಂಡಿದ್ದರು.
-- ನಿತೀಶ್ ಕುಮಾರ್, ಕಾರ್ಯದರ್ಶಿ, ಕೆ.ಆರ್.ಪುರ