Logo

VHP PUBLICATIONS

Hindu Vani


expand_more

ರಾಜಕೀಯ

By ವಿಕಾಸ ಕುಮಾರ್‌, ಹಾವೇರಿ
ರಾಜಕೀಯ

ಬೊಗಳೆ ಮಾತು ಕಪಟ ರಾಜಕೀಯ


20240 ನವೆಂಬರ್ ತಿಂಗಳಲ್ಲಿ ಮಹಾರಾಷ್ಟ್ರ ಶಾಸನ ಸಭೆಯ ಚುನಾವಣೆ ನಡೆಯಿತು. ಬಿ.ಜೆ.ಪಿ ನೇತೃತ್ವದ ಮಹಾಯುತಿ ಸರ್ಕಾರ ಆಯ್ಕೆಯಾಯಿತು. ಮತ್ತೊಮ್ಮೆ ಈ ಸರ್ಕಾರ ಬಂದುದೇ ವಿರೋಧ ಪಕ್ಷಗಳಿಗೆ ಸಹಿಸಲಾಗದ ಸಂಕಟವುಂಟಾಯಿತು. ಹಾಗಾಗಿ ಹಲವು ಬಗೆಯ ಆರೋಪಗಳು ಸಿದ್ಧವಾಗಿ ಬಿಟ್ಟವು. ಮಹಾವಿಕಾಸ ಅಘಡಿಯೆಂಬ ಈ ವಿರೋಧಿ ಗುಂಪುಗಳ ಪ್ರಮುಖ ಆಪಾದನೆಯೆಂದರೆ 20240 ಮೇ ತಿಂಗಳಲ್ಲಿ ನಡೆದ ಲೋಕಸಭೆಯ ಚುನಾವಣೆಯ ನಂತರ ಈ ಚುನಾವಣೆಯ ನಡುವೆ ಅಸಹಜವೆನ್ನುವಂತೆ ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರಿಸಲಾಗಿದೆ ಎಂದು.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ತಮ್ಮ ಭಾಷಣವನ್ನು ಮಾಡಿ ಮಹಾರಾಷ್ಟ್ರ ಚುನಾವಣೆಗೆ ಮೊದಲು 39ಲಕ್ಷ ಹೊಸ ಹೆಸರುಗಳನ್ನು ಮತದಾರ ಪಟ್ಟಿಗೆ ಸೇರಿಸಲಾಯಿತು ಎಂದರು. ಇದೇನು ಹೊಸ ವರಸೆಯಲ್ಲ. ವಿರೋಧ ಪಕ್ಷಗಳು ಚುನಾವಣೆಯಲ್ಲಿ ಸೋತಾಗಲೆಲ್ಲ ಮೊದಲಾಗಿ ಹೇಳುವ ಮಾತು ಇ.ವಿ.ಎಂ. ಮತದಾನ ಯಂತ್ರಗಳನ್ನು ತಮಗೆ ಬೇಕಾದಂತೆ ತಿದ್ದಿ ಇಡಲಾಗಿದೆ ಎಂದು. ನಂತರದ ಮಾತು ಈಗ ಹೇಳಿದಂತೆ ಮತದಾರರ ಪಟ್ಟಿಯಲ್ಲಿ ಮೋಸವಾಗಿದೆ ಎನ್ನುವುದು. ಇಂತಹ ಆರೋಪಗಳಿಗೆ ಕೊನೆಮೊದಲಿಲ್ಲ. ಹೋಗಲಿ ಚುನಾವಣೆಗೆ ಮೊದಲೊಮ್ಮೆ ಚುನಾವಣೆ ಆಯೋಗವು ಪ್ರತಿಯೊಂದು ಕ್ಷೇತ್ರಗಳ ಮತದಾರರ ಯಾದಿಯನ್ನು ಚುನಾವಣೆಗೆ ಬಹಳ ಮೊದಲೇ ಮತದಾರರ ಅವಗಾಹನೆಗಾಗಿ ಪ್ರಕಟ ಪಡಿಸುತ್ತದೆ. ಅದರ ಉದ್ದೇಶವೇ ಅದರಲ್ಲಿ ತಪ್ಪುಗಳಿದ್ದರೆ ಅವುಗಳನ್ನು ಬದಲಿಸಲು ಮನವಿ ಮಾಡಲಿ ಎಂದು ಆದರೆ ಈ ಅವಕಾಶವನ್ನು ಪಕ್ಷಗಳು ಎಂದೂ ಕೂಡಾ ಉಪಯೋಗಿಸಿಕೊಂಡು ತಾವು ಮುಂದೆ ಮಾಡಲಿರುವ ಆರೋಪಗಳ ಅವಕಾಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ.

ಮುಖ್ಯ ಚುನಾವಣಾ ಅಧಿಕಾರಿಗಳ ಪ್ರಕಾರ ಮತದಾರ ಪಟ್ಟಿಯಲ್ಲಿ ಬದಲಾವಣೆಯನ್ನು ಕೋರಿ ಅವರವರ ರಾಜ್ಯಗಳಲ್ಲಿ ಚುನಾವಣೆಗೆ ಮೊದಲು 89ಕ್ಕೂ ಹೆಚ್ಚು ಪ್ರಾಥಮಿಕ ಮನವಿಗಳನ್ನು ಮಾಡಲು ಅವಕಾಶ ನೀಡಲಾಗಿದ್ದಿತು. ಅಷ್ಟೇ ಅಲ್ಲ ನಂತರ ಮೇಲ್ಮನವಿಯನ್ನು ಮಾಡಲು ಕೂಡಾ ಅವಕಾಶವಿದ್ದಿತು. 2024ರ ಜನವರಿ7ರವರೆಗೆ ಇಂತಹ ಮನವಿಗಳಿಗೆ ಚುನಾವಣಾ ಆಯೋಗವು ಅವಕಾಶವನ್ನು ನೀಡಿದ್ದಿತು. ಆದರೆ ಆಯೋಗದ ಹೇಳಿಕೆಯಂತೆ ಯಾವುದೇ ರಾಜಕೀಯ ಪಕ್ಷಗಳು ಈ ಬಗ್ಗೆ ಆಸಕ್ತಿಯನ್ನು ತೋರಿಸಿರಲಿಲ್ಲ.

ಸಾಮಾನ್ಯವಾಗಿ ಮುಖ್ಯ ಚುನಾವಣಾ ಅಧಿಕಾರಿಗಳು ದೇಶದ 10.50 ಲಕ್ಷ ಮತದಾನ ಕೇಂದ್ರಗಳ ಮತ್ತು ಎಲ್ಲ 4123 ಶಾಸನ ಸಭೆಯ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡೇ ತಮ್ಮ ಚುನಾವಣಾ ಕಾರ್ಯಕ್ರಮವನ್ನು ರೂಪಿಸುತ್ತಾರೆ. ಇದರಲ್ಲಿ 2024ರ ಲೋಕಸಭಾ ಚುನಾವಣೆಯ ನಂತರ ನಡೆದ ಮಹಾರಾಷ್ಟ್ರ, ಹರಿಯಾಣ ಮತ್ತು ದೆಹಲಿಯ ಶಾಸನ ಸಭೆಗಳೂ ಸೇರಿದ್ದವು. ಮತದಾರ ಪಟ್ಟಿ ಪರಿಷ್ಕರಣೆಯ ಕಾರ್ಯವು ವರ್ಷವಿಡೀ ನಡೆಯುತ್ತಿರುತ್ತದೆ. ಇದಕ್ಕಾಗಿ ಸಂಬಂಧಿತ ದಿನಗಳನ್ನಾಗಿ ಜನವರಿ, ಏಪ್ರಿಲ್, ಜುಲೈ ಮತ್ತು ಆಕ್ಟೋಬರ್ ತಿಂಗಳ ಮೊದಲ ದಿನವನ್ನು ನಿಗದಿ ಪಡಿಸಲಾಗಿದೆ. ಆದರೆ ಮತದಾರ ಪಟ್ಟಿಯ ಬಿಡುಗಡೆಯ ನಿಗದಿಗಾಗಿ ಆಯಾ ವರ್ಷಗಳ ಜನವರಿ ತಿಂಗಳ 1ನೇ ತಾರೀಕನ್ನು ನಿಯತಿಗೊಳಿಸಿದೆ.

1961ರ ಜನಪ್ರಾತಿನಿಧ್ಯ ಕಾಯಿದೆಯ 24ನೇ ಸೆಕ್ಷನ್, ಮತದಾರರ ಹೆಸರನ್ನು ಸೇರಿಸಲು ಅಥವಾ ತೆಗೆಸಲು ಮಾಡುವ ಆಗ್ರಹವನ್ನು ಜಿಲ್ಲಾ ನ್ಯಾಯಾಧೀಶರಿಗೂ ನಂತರ ಮುಖ್ಯ ಚುನಾವಣಾ ಅಧಿಕಾರಿಗಳಿಗೂ ನೀಡಬೇಕು. ಈ ರೀತಿ ಜಿಲ್ಲಾ ನ್ಯಾಯಾಧೀಶರಿಗೆ ಕೊಡುವ ತಗಾದೆ ಮನವಿಯನ್ನು ಮತದಾರ ಪಟ್ಟಿಯ ನೊಂದಣಿ ಅಧಿಕಾರಿಯು ಮಾಡಿದ ಆಜ್ಞೆಯ 15 ದಿನಗಳೊಳಗೆ ನೀಡಬೇಕು. ಎರಡನೇ ಮನವಿಯನ್ನು ಜಿಲ್ಲಾ ನ್ಯಾಯಾಧೀಶರ ಆಜ್ಞೆಯ 30 ದಿನಗಳೊಳಗೆ ಚುನಾವಣಾಧಿಕಾರಿಗೆ ನೀಡಬೇಕು. ಆದರೆ ವಿಳಂಬವಾಗಿ ನೀಡುವುದಾದರೆ ಅದಕ್ಕೆ ಜಿಲ್ಲಾ ನ್ಯಾಯಾಧೀಶರು ಒಪ್ಪಿಗೆಯನ್ನು ನೀಡಬೇಕು ಅಷ್ಟೆ.

ಇಷ್ಟೆಲ್ಲಾ ಅವಕಾಶಗಳಿದ್ದೂ ಈ ವಿಚಾರಗಳನ್ನು ಅಲಕ್ಷಿಸುವ ರಾಜಕೀಯ ಮುಖಂಡರಿಗೆ ಆಪಾದನೆಗಳನ್ನು ಮಾಡುವುದರಲ್ಲಿ ಆಸಕ್ತಿ ಇದೆಯಲ್ಲದೆ, ಸ್ವಚ್ಚ ಮತದಾನ ಪ್ರಕ್ರಿಯೆಯು ನಡೆಯಲ್ಲಿ ಇದ್ದಂತಿಲ್ಲ.

ರಾಜಕೀಯ

ಹಿಂದುವಾಣಿಗೆ ಚಂದಾದಾರರಾಗಲು ವಾರ್ಷಿಕ ಚಂದಾ ರೂ. 130/- ಅಥವಾ ದೈವಾರ್ಷಿಕ ಚಂದಾ ರೂ. 250/-ರ ಎಂ.ಓ./ಡಿ.ಡಿ.ಗಳನ್ನು "ಹಿಂದುವಾಣಿ" ಹೆಸರಿನಲ್ಲಿ ಕಳುಹಿಸಬಹುದು ಅಥವಾ ಕರ್ನಾಟಕ ಬ್ಯಾಂಕ್, ಚಾಮರಾಜಪೇಟೆ ಶಾಖೆ, ಬೆಂಗಳೂರು.

ಖಾತೆ ಹೆಸರು : "ಹಿಂದುವಾಣಿ" A/c No.: 0582500102391901 I.F.S.C. Code: KARB0000058

ನಂತರ 9663881653 ಮೊಬೈಲಿಗೆ ಅಥವಾ ದೂರವಾಣಿ 080-26604641ಕ್ಕೆ ಕರೆ ಮಾಡಿ ತಮ್ಮಪೂರ್ಣ ವಿಳಾಸವನ್ನು ತಿಳಿಸಬೇಕು.