Logo

VHP PUBLICATIONS

Hindu Vani


expand_more

ಸಂಸ್ಕೃತಿ

ಹೆಸರಿನಲ್ಲಿದೆ ಸಂಸ್ಕೃತಿ


ಅಜ : ಇಕ್ಷಾಕು ವಂಶದ ರಾಜ, ದಶರಥನ ತಂದೆ ಈತನ ಪತ್ನಿ ಇಂದುಮತಿ. ಅತ್ರಿ : ಸಪ್ತರ್ಷಿಗಳಲ್ಲಿ ಒಬ್ಬರು. ಇವರ ಪತ್ನಿ ಅನಸೂಯೆ, ದತ್ತಾತ್ರೇಯ, ದುರ್ವಾಸ, ಚಂದ್ರರು ಇವರ ಮಕ್ಕಳು.

ಆರುಣಿ : ಇವನ ಇನ್ನೊಂದು ಹೆಸರು ಉದ್ಧಾಲಕ. ಇವನ ಗುರುಗಳು ದೌಮ್ಯ ಮಹರ್ಷಿ. ಆರುಷಿ : ಮನು ಚಕ್ರವರ್ತಿಯ ಮಗಳು. ಪತಿ ಚ್ಯವನ ಋಷಿ. ಇವರಿಬ್ಬರ ಮಗ ಚೌರ್ವ, ಆಸ್ತಿಕ : ಜರತ್ಕಾರು ಮಹರ್ಷಿ ಮತ್ತು ವಾಸುಕಿಯ ತಂಗಿ ಜರತ್ಕಾರುವಿನ ಮಗ. ಜನಮೇಜಯನ ಸರ್ಪಯಾಗವನ್ನು ತಡೆದವನು.

ಉತ್ತರಾ : ವಿರಾಟ ರಾಜನ ಮಗಳು. ಅಭಿಮನ್ಯುವಿನ ಹೆಂಡತಿ. ಇವರಿಬ್ಬರ ಮಗ ಪರೀಕ್ಷಿತ.

ಊರ್ವಿ : ಭೂಮಿ, ಪರುಶರಾಮನು ಭೂಮಿಯನ್ನು ಆಳುತ್ತಿದ್ದ ರಾಜರನ್ನೆಲ್ಲಾ ಗೆದ್ದು ಭೂಮಿಯನ್ನು ಕಶ್ಯಪ ಋಷಿಗೆ ದಾನ ಮಾಡಿದನು. ಭೂಮಿಯ ಮೇಲಿದ್ದ ಜೀವಿಗಳ ಪಾಪದ ಭಾರದಿಂದ ಅದು ಪಾತಾಳಕ್ಕೆ ಕುಸಿದಾಗ ಕಶ್ಯಪ ಋಷಿಯು ತನ್ನ ಊರುಗಳ (ತೊಡೆಗಳು) ಶಕ್ತಿಯಿಂದ ಭೂಮಿಯನ್ನು ಮೇಲೆ ತಂದನು. ಆದುದರಿಂದ ಭೂಮಿಗೆ ಊರ್ವಿ, ಕಾಶ್ಯಪೀ ಎಂದು ಹೆಸರುಗಳಿವೆ.

ಉಷಾ. ಬಾಣಾಸುರನ ಮಗಳು. ಉಷೆಯು ತನ್ನ ಅಪ್ಪನಿಗೆ ತಿಳಿಯದಂತೆ ಶ್ರೀಕೃಷ್ಣನ ಮಗನಾದ ಪ್ರದ್ಯುಮ್ನನ ಮಗ ಅನಿರುದ್ಧನನ್ನು ಮದುವೆಯಾದಳು.

ಕೃತಪ್ರಜ್ಞ: ಪ್ರಾಗೋತಿಷಪುರದ ರಾಜ ನರಕಾಸುರನ ಮೊಮ್ಮಗ. ಇವನ ತಂದೆ ಭಗದತ್ತ. ಭಗದತ್ತನು ಕುರುಕ್ಷೇತ್ರ ಯುದ್ಧದಲ್ಲಿ ದುರ್ಯೋಧನನ ದುರ್ಯೋಧನನ ಪರವಾಗಿ ಯುದ್ಧ ಮಾಡಿ ಅರ್ಜುನನಿಂದ ಹತನಾದನು.


ಸಂಸ್ಕೃತಿ

ಕೃಷ್ಣನ ಎಂಟು ರಾಣಿಯರು: 1) ಭೀಷ್ಮಕ ರಾಜನ ಮಗಳು ರುಕ್ಷ್ಮಿಣಿ 2) ಸತ್ರಾಜಿತನ ಮಗಳು ಸತ್ಯಭಾಮೆ. 3) ಕೋಸಲ ರಾಜ ನಗ್ನಜಿತನ ಮಗಳು ನೀಲೆ 4) ಕೇಕಯದ ದೃಷ್ಟಕೇತುವಿನ ಮಗಳು ಭದ್ರೆ, ಇವಳ ತಾಯಿ ವಸುದೇವನ ತಂಗಿ ಶೃತಕೀರ್ತಿ, 5) ಆವಂತಿದೇಶದ ರಾಜ ಜಯತೇನನ ಮಗಳು ಮಿತ್ರವಿಂದೆ. ಇವಳ ತಾಯಿ ಕೃಷ್ಣನ ಇನ್ನೊಬ್ಬಳು ಸೋದರತ್ತೆ ರಾಜಾಧಿದೇವಿ. 6) ಸೂರ್ಯನ ಮಗಳು ಕಾಳಿಂದಿ. 7) ಮದ್ರರಾಜನ ಮಗಳು ಲಕ್ಷಣೆ. 8. ಜಾಂಬವಂತನ ಮಗಳು ಜಾಂಬವತಿ.