Hindu Vani
Index
ಇತಿಹಾಸ
ಭಾರತದ ಇತಿಹಾಸದಲ್ಲಿ ಹಾಸುಹೊಕ್ಕಾಗಿ ಬಂದ ಮುಸ್ಲಿಂ ಕ್ರೌರ್ಯದ ಅಧ್ಯಾಯಗಳನ್ನು ಸ್ವಾತಂತ್ರ್ಯಗಳಿಕೆಯ ನಂತರ ಮರೆಮಾಚುವುದರೊಂದಿಗೆ ಹಿಂದು ಸಮಾಜವು ರಾಷ್ಟ್ರವನ್ನು ಕಟ್ಟಲು ಮಾಡಿದ ತ್ಯಾಗ ಪರಿಶ್ರಮಗಳನ್ನು ಜಾಣತನದಿಂದ ದೂರವಿಡಲಾಯಿತು. ಹಿಂದು ಸಂಸ್ಕೃತಿಯನ್ನು ಮೌಡ್ಯ ಕಂದಾಚಾರಗಳೆಂದು ಹೀಗಳೆದು ಆಕ್ರಮಣಕಾರರೆಲ್ಲರೂ ಶ್ರೀಮಂತ ಸಂಸ್ಕೃತಿಯನ್ನು ತಂದು ಕೊಟ್ಟವರೆಂದು ಬಿಂಬಿಸಲಾಯಿತು. ಹೀಗೆ ಹಿಂದು ತನ್ನತನವನ್ನೇ ನಾಶಮಾಡಲು ಸ್ವಾತಂತ್ರೋತ್ತರ ಕೇಂದ್ರ ಸರ್ಕಾರದ ಶಿಕ್ಷಣ ಖಾತೆಯ ಮುಸ್ಲಿಂ ಮಂತ್ರಿಗಳು ಉದ್ದೇಶ ಪೂರ್ವಕವಾಗಿ ತಾವೇ ತಮಗೆ ಸರಿಯಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಿಕೊಂಡರು.
ಕೇಂದ್ರದಲ್ಲಿ ಮುಸ್ಲಿಂ ಶಿಕ್ಷಣ ಮಂತ್ರಿಗಳ ಕಾರುಬಾರೇ ನಡೆದಿರುವುದು ಭಾರತ ಇತಿಹಾಸದ ವಿಕೃತಿಗೆ ಪ್ರಮುಖ ಕಾರಣವಾಗಿಬಿಟ್ಟಿತು. ಮುಸ್ಲಿಂ ಮಂತ್ರಿಗಳ ಅಧಿಕಾರದ ಕಾಲಾವಧಿ ಹೀಗಿದ್ದಿತು.
* ಮೌಲಾನಾ ಅಬುಲ್ ಕಲಾಮ್ ಆಜಾದ್ - 1947 ರಿಂದ 1958
* ಹುಮಾಯೂನ್ ಕಬೀರ್ 1958 ರಿಂದ 1963
* ಮಹಮ್ಮದಾಲಿ ಕರೀಮ್ ಚಾಗ್ಲಾ - 1963 ರಿಂದ 1966
* ಫಕ್ರುದ್ದೀನ್ ಆಲಿ ಮಹಮದ್ 1966 ರಿಂದ 1967
* ಸಯ್ಯದ್ ನೂರುಲ್ ಹಸನ್ 1971 ರಿಂದ 1977
ಮೊದಲ ಶಿಕ್ಷಣ ಮಂತ್ರಿ ಮೌಲಾನ ಅಬುಲ್ ಕಲಾಮ್ ಆಜಾದ್ ಜನಿಸಿದ್ದು ಮಕ್ಕಾದಲ್ಲಿ. ಮುಸ್ಲಿಂ ಕಟ್ಟರ್ ಪಂಥವಾದ ದೇವಬಂದಿ ಮತ್ತು ಜಮಾತೆ ಉಲೇಮಾ ಹಿಂದ್‌ನೊಂದಿಗೆ ಒಡನಾಟವಿದ್ದ ಇಸ್ಲಾಮಿ ಪಂಡಿತರಾಗಿದ್ದವರು ಅಬುಲ್‌ಲಾಮ್.
ಅಬುಲ್ ಕಲಾಮ್ ಆಜಾದ್ ಭಾರತ ವಿಭಜನೆಯನ್ನು ವಿರೋಧಿಸಿದರು. ಅವರ ಪ್ರಕಾರ ಭಾರತವು ಆಂಗ್ಲ ಆಡಳಿತ ಕಾಲದಲ್ಲಿ ಬಿಟ್ಟರೆ ಇತಿಹಾಸದುದ್ಧಕ್ಕೂ ದಾರುಲ್ ಇಸ್ಲಾಂ ಮುಸ್ಲಿಮ್ ರಾಜ್ಯವೇ ಆಗಿದ್ದಿತು. ಆದುದರಿಂದ ಸ್ವಲ್ಪ ದಿನಗಳಲ್ಲೇ ಭಾರತವು ಮುಸ್ಲಿಂ ದೇಶವಾಗಿ ಬಿಡುತ್ತದೆ. ಹಾಗಿರುವಾಗ ವಿಭಜಿತ ದೇಶ ಏಕೆ ಆಗಬೇಕು? ಅಖಂಡ ಭಾರತವೇ ಮುಸ್ಲಿಂ ರಾಷ್ಟ್ರವಾಗಿ ಬಿಡುವ ಅವಕಾಶವಿರುವಾಗ ಈ ವಿಭಜನೆಯನ್ನೇಕೆ ಮಾಡಬೇಕು? ಎನ್ನುವುದು ಅವರ ನಿಲುವಾಗಿದ್ದಿತು. ವಿಭಜನೆಯಾದುದರಿಂದ ಭಾರತವು ಹಿಂದು ಬಹುಸಂಖ್ಯಾತ ದೇಶವಾಗಿ ಬಿಟ್ಟಿತು ಎನ್ನುವುದು ಅವರ ವ್ಯಥೆಯಾಗಿದ್ದಿತು. ಅವರ ಈ ಇಸ್ಲಾಮೀ ನಿಲುವು ಭಾರತದ ಮುಗ್ಧ ಹಿಂದು ವಾತಾವರಣದಲ್ಲಿ ದೇಶವಿರೋಧಿ ಎನಿಸುವ ಬದಲು ಭಾರತ ಪ್ರೇಮಿ ಧೋರಣೆ ಎಂದು ಹೆಸರು ಪಡೆಯಿತು. ಅವರ ಕಾಲದಲ್ಲಿ ಮುಸ್ಲಿಂ ಸುಲ್ತಾನರ ಆಡಳಿತ ಕಾಲವು ಪ್ರಜಾಪ್ರೇಮಿ ಮತ್ತು ಸೆಕ್ಯುಲರ್ ಎನಿಸುವಂತೆ ಪಠ್ಯ ಪುಸ್ತಕಗಳನ್ನು ಪ್ರಕಟಗೊಳಿಸಲಾಯಿತು.
ಅಬುಲ್ ಕಲಾಮರ ಕಾಲದಲ್ಲಿ ಬರೆಸಿದ ಚರಿತ್ರೆಯ ಪುಸ್ತಕಗಳು ಇಸ್ಲಾಮಿ ಆಕರಗಳೇ ವಿವರಿಸಿದ ದೇವಸ್ಥಾನಗಳ ಧ್ವಂಸ, ಬಲಾತ್ಕಾರದ ಮತಾಂತರಗಳು ಮತ್ತು ರಕ್ತಪಾತಗಳನ್ನು ಮರೆಮಾಡಿದವು. ಘಜನಿ ಮಹಮ್ಮದ, ಮಹಮ್ಮದ ಬಿನ್ ಕಾಸಿಮ್, ಅಲ್ಲಾವುದೀನ್ ಖಿಲ್ಲಿ ಮೊದಲಾದ ನರಹಂತಕರ ಅಸಲಿ ಪರಿಚಯವು ನಿಧಾನವಾಗಿ ಯೋಜನಾ ಬದ್ಧವಾಗಿ ಮರೆಮಾಚಲ್ಪಟ್ಟವು. ಅಲ್ಲೆಲ್ಲಾ ಮುಸ್ಲಿಂ ಸುಲ್ತಾನರು ಸಂಸ್ಕೃತಿಯ ಪೋಷಕರೆಂದು ಬಣ್ಣಿಸಲಾಯಿತು. ಘಜನಿಯ ಸೋಮನಾಥ ಧಾಳಿಯು ಹಿಂದು ನೆನಪಿನಿಂದ ಅಳಿಸುವಂತೆ ಅದನ್ನು ಎಲ್ಲೂ ಉಲ್ಲೇಖಿಸದಂತೆ ಮಾಡಲಾಯಿತು.
1193 ರಲ್ಲಿ ಬಕ್ತಿಯಾರ್ ಖಿಲ್ಲಿಯು ನಲಂದಾ ವಿಶ್ವವಿದ್ಯಾಲಯವನ್ನು ಸುಟ್ಟು ಹಿಂದು ಮತ್ತು ಬೌದ್ಧ ಜ್ಞಾನವನ್ನು ಕುಂಠಿತಗೊಳಿಸಿದುದು ಮಕ್ಕಳ ಗಮನಕ್ಕೆ ಬರದಿರಲು ಅದರ ಬದಲು ಮೊಗಲ್ ವಾಸ್ತು ವೈಭವವನ್ನು ಅಲ್ಲಿ ತುಂಬಿಸಲಾಯಿತು. ಆರಿಸಿದ ಕತೆಗಳನ್ನು ಹೇಳಲು ಮುಸ್ಲಿಂ ಕಾಲವು ಸ್ವರ್ಣಯುಗವೆನ್ನುವ ಸಂದರ್ಭವನ್ನು ಉಪಯೋಗಿಸಲಾಯಿತು.
ಮೌಲಾನಾ ಕಾಲದಲ್ಲಿ ಅವರು ಸಂಸ್ಕೃತವನ್ನು ಬದಿಗೊತ್ತಿ ಉರ್ದುವನ್ನು ಮುನ್ನೆಲೆಗೆ ತಂದರು. ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಹಿಂದು ಗುರುಕುಲಗಳನ್ನು ಮೂಲೆಗುಂಪು ಮಾಡಿದರು. ಗುರುಕುಲಗಳ ಸನಾತನ ಪರಂಪರೆಯೂ ಮೌಡ್ಯದ ಉದಾಹರಣೆಗಳಾದವು. ಮುಂದೆ ಮಂತ್ರಿಗಳಾದ ಹುಮಾಯೂನ್ ಕಬೀರ್ ಇದೇ ಧೋರಣೆಯನ್ನು ಮುಂದುವರೆಸಿದರು. 1961ರಲ್ಲಿ ಅವರು ಸ್ಥಾಪಿಸಿದ ಎನ್. ಸಿ. ಈ. ಆರ್.ಟಿ.ಯು ಪಠ್ಯ ಪುಸ್ತಕಗಳನ್ನು ಬರೆಯಿತು. ಹಿಂದು ಸ್ವಾತಂತ್ರ್ಯ ಹೋರಾಟದ ಉದಾಹರಣೆಗಳೆಲ್ಲವೂ ಬದಿಗೊತ್ತಲ್ಪಟ್ಟವು. ಅಕ್ಷರನ ಆಡಳಿತ, ತಾಜಮಹಲಿನ ಸೌಂದರ್ಯಗಳು ಇತಿಹಾಸದ ಪ್ರಮುಖ ಅಧ್ಯಾಯಗಳಾದವು. ಚೋಳ ಸಾಮ್ರಾಜ್ಯದ ಜಾಗತಿಕ ಮಹತ್ವ, ವಿಜಯನಗರದ ಸಿರಿಸಂಪತ್ತು, ಗಜಪತಿ ರಾಜರ ಸಮುದ್ರವ್ಯಾಪಾರ, ಅಹೋಂ ಸಾಮ್ರಾಜ್ಯವು ಅಸ್ಸಾಮಿಗೆ ಮೊಗಲರ ವಿಸ್ತರಣಾ ಪ್ರಯತ್ನವನ್ನು 17ಬಾರಿ ವಿಫಲಗೊಳಿಸಿದುದು, ಟಿಪ್ಪಣಿಗಳಿಗೆ ಸೀಮಿತಗೊಂಡವು. ಎಲ್ಲವೂ ಮುಸ್ಲಿಂ ಕೇಂದ್ರಿತ ಪಠ್ಯಗಳಾದವು.
ಅಲ್ಪಸಂಖ್ಯಾತ ಶಿಕ್ಷಣಕ್ಕೆ ಕೊಡುವ ಪ್ರಾಶಸ್ತ್ರ ಮತ್ತು ಮುಸ್ಲಿಂ ಆಸಕ್ತಿಗಳಿಗೆ ಮಹತ್ವಗಳು ಹುಮಾಯೂನ್ ಕಬೀರರ ಕಾಲದ ಧೋರಣೆಯಾಯಿತು. ಆ ಮೂಲಕ ಎಲ್ಲವನ್ನೂ ಅಹಿಂದು ಕರಣಗೊಳಿಸುವುದು ಪ್ರಾರಂಭವಾಯಿತು. ಹಿಂದು ವಿದ್ಯಾರ್ಥಿಗಳು ಹಿಂದು ವಿಚಾರವೆಲ್ಲವನ್ನು, ಹಿಂದು ಮೂಢನಂಬಿಕೆಗಳೆಂದು ನಂಬುವಂತೆ ಹಣೆಪಟ್ಟಿ ಕಟ್ಟುವ ಪ್ರಯತ್ನಗಳಾದವು. ಮುಸ್ಲಿಂ ವಿಚಾರಗಳೆಲ್ಲವೂ, ಪ್ರಗತಿಪರವೆಂದು ವರ್ಣಿಸಲಾಯಿತು. 1398ರಲ್ಲಿ ದೆಹಲಿಯ ಮೇಲಾದ ತೈಮೂರನ ಆಕ್ರಮಣವನ್ನು ಚರಿತ್ರೆಯ ಪುಸ್ತಕದಿಂದ ತೆಗೆದು ಹಾಕಿದುದು ಅವರು ಮಂತ್ರಿಯಾದ ಕಾಲದಲ್ಲೇ.
ಸೈಯದ್ ನೂರುಲ್ ಹಸನ್ 1971 ರಿಂದ ಕುಪ್ರಸಿದ್ಧ ತುರ್ತು ಪರಿಸ್ಥಿತಿಯ 1977ರವರೆಗೆ ಶಿಕ್ಷಣ ಮಂತ್ರಿಗಳಾಗಿದ್ದರು. ಜಾತ್ಯತೀತವೆನ್ನುವ ಹಿಂದು ವಿರೋಧದ ಜೊತೆಗೆ ಅದಕ್ಕೆ ಕಮ್ಯೂನಿಸ್ಟ್ ಸಿದ್ಧಾಂತದ ಮೆರುಗನ್ನು ನೀಡುತ್ತ ಈ ಧೋರಣೆಗೆ ಸಾಂಸ್ಥಿಕ ರೂಪವನ್ನು ನೂರುಲ್ ಹಸನ್ ನೀಡಿದರು. ಮಾರ್ಕ್ಸಿಸ್ಟ್ ಇತಿಹಾಸಕಾರರಾದ ರೊಮಿಲಾ ಥಾಪರ್ ಮತ್ತು ಇರ್ಫಾನ್ ಹಬೀಬರಿಗೆ ಚರಿತ್ರೆಯನ್ನು ತಿದ್ದಿ ಬರೆಯಲು ಅಧಿಕೃತವಾದ ಅಧಿಕಾರವನ್ನು ನೀಡಿದರು. ಹಿಂದು ಸಂಸ್ಕೃತಿ, ನಾಗರಿಕತೆ ಮತ್ತು ಧರ್ಮವನ್ನು ಹೀಗಳೆಯುವ ಶೈಕ್ಷಣಿಕ ಕಥನವು ಇಲ್ಲಿಂದ ಪ್ರಾರಂಭವಾಯಿತು.
ಆ ಭಾರತದ ಪ್ರಾಚೀನ ಇತಿಹಾಸ ಮತ್ತು ಮಧ್ಯಯುಗೀನ ಚರಿತ್ರೆಗೆ ಮಾರ್ಕ್ಸ್‌ನ ಕಾಲ್ಪನಿಕ ವರ್ಗ ಸಂಘರ್ಷದ ಬಣ್ಣವನ್ನು ತೊಡಿಸಿ ಪ್ರದರ್ಶನಕ್ಕಿಡುವುದು ಪ್ರಾರಂಭವಾಯಿತು. ಸೆಕ್ಯುಲರ್ ಹೆಸರಿನಲ್ಲಿ ಶಿಕ್ಷಣವು ಇತಿಹಾಸವನ್ನು ಇಸ್ಲಾಮೀಕರಣಗೊಳಿಸಿತು. ಹಿಂದುತ್ವವನ್ನು ಆ ಮೂಲಕ ಸ್ಥಾನ ಪಲ್ಲಟಗೊಳಿಸಿತು. ಉದಾಹರಣೆಗೆ ಔರಂಗಜೇಬನು ಕಾಶಿ ವಿಶ್ವನಾಥ ದೇವಸ್ಥಾನವನ್ನು ಮಸೀದಿಯಾಗಿಸಿದ ಕಾಲದ ಸಾಕ್ಷಾಧಾರಗಳನ್ನು ಅಲಕ್ಷಿಸಿ ಅವನ ಸಾಹಿತ್ಯ ಪ್ರಿಯತೆಯನ್ನು ಹೊಗಳುವ ಇತಿಹಾಸ ಕಥನವು ಪ್ರಾರಂಭಗೊಂಡಿತು. ಬಾಬರನ ಅಯೋಧ್ಯೆಯ ಆಕ್ರಮಣವು ಪಠ್ಯದಿಂದ ಹೊರತಾಗಿಬಿಟ್ಟು ಅದರ ಬದಲು ಅವನ ಜೀವನ ಬಾಬರ್‌ನಾಮಾದ ಸಾಹಿತ್ಯಕ ಶ್ರೇಷ್ಟತೆಯನ್ನು ಅಲ್ಲಿ ಅನ್ವೇಷಿಸಲಾಯಿತು. ಒಂದು ವಿಚಾರವೇ ಸೋಲಿನ ಕಥೆಯೆನಿಸಿತು. ಹಿಂದು ಧರ್ಮದ ತಾತ್ವಿಕ ಹಿರಿಮೆಯನ್ನು ಅಲ್ಲಗಳೆದು ಜಾತಿಜಾತಿಗಳ ಭೇಧಗಳನ್ನು ಸಾರುವುದು ಇತಿಹಾಸದ ಉದ್ದೇಶವೆನಿಸಿತು. ಹಿಂದು ವಿರೋಧಿಗಳೆನಿಸಿದ ಇತಿಹಾಸ ಪ್ರಧ್ಯಾಪಕರು ಎನ್. ಸಿ. ಈ. ಆರ್. ಟಿ. ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟೋರಿಕಲ್ ರಿಸರ್ಚ್‌ನೊಳಗೆ ನುಗ್ಗಿ ಬಿಟ್ಟರು. ವಿದ್ಯಾರ್ಥಿಗಳ ಹಲವು ತಲೆ ಮಾರುಗಳು ವಿಕೃತ ಕಥನಗಳ ಪರಿಣಾಮಗಳಿಗೆ ಬಲಿಯಾದರು. ಇಂದಿಗೂ ಶಿಕ್ಷಣ ಕ್ಷೇತ್ರದ ಹಲವು ವಿಭಾಗಗಳಲ್ಲಿ ಇವೇ ನಿಲುವುಗಳು ಮುಂದುವರೆಯುತ್ತಿವೆ. ಇದು ಇಂದಿನ ವಿಪರ್ಯಾಸ.