Hindu Vani
Index
ವಿಹಿಂಪ ವರದಿ
ಭಾರತ ಸಿಂದೂರ ಕೃತಿ ಲೋಕಾರ್ಪಣೆ
ಶ್ರೀರಾಮ ಜನ್ಮಭೂಮಿ ಆಂದೋಲನದ ಸಂಘರ್ಷ ಭಾಗವು ತೀವ್ರವಾಗಿದ್ದ ವರ್ಷಗಳಲ್ಲಿ ಬೆಂಗಳೂರು ಮಹಾನಗರದ ಸಂಘಟನಾ ಕಾರ್ಯದರ್ಶಿಯಾಗಿದ್ದು ಮಹತ್ತರ ಪಾತ್ರವನ್ನು ವಹಿಸಿದ್ದ ಚಿ.ನಾ. ಸೋಮೇಶರ ಕೃತಿ 'ಭಾರತ ಸಿಂಧೂರ'ವು ಇತ್ತೀಚೆಗೆ ಮಡಿಕೇರಿಯಲ್ಲಿ ಲೋಕಾರ್ಪಣೆಗೊಂಡಿತು. ಈ ಕೃತಿಯನ್ನು ಗ್ರಾಮೋತ್ಥಾನ ಭಾರತ ಪ್ರಕಾಶನವು ಪ್ರಕಟಿಸಿದೆ. ಈ ಕೃತಿಯಲ್ಲಿ ಹಲವು ದೇಶ ಭಕ್ತರ ಪರಿಚಯ ಮತ್ತು ಅವರ ಇತಿಹಾಸದಲ್ಲಿನ ಪಾತ್ರವನ್ನು ಪ್ರಭಾವಿಯಾಗಿ ಚಿತ್ರಿಸಲಾಗಿದೆ.
916 ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶರಾದ ಚೊಟ್ಟಕೊರಿಯಂಡ ಕೆ. ಬಾಲಕೃಷ್ಣರವರು ಕೃತಿಯ ಲೋಕಾರ್ಪಣೆಯನ್ನು ಮಾಡಿದರು. ಹಿರಿಯರಾದ ರಾಜಲಕ್ಷ್ಮೀ ಗೋಪಾಲಕೃಷ್ಣ ಆಕಾಶವಾಣಿಯ ವಿಶಾಲಾಕ್ಷಿ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಭಾಗವಹಿಸಿದ್ದರು.
.
ಕೃತಿ: ಭಾರತ ಸಿಂಧೂರ ; ಲೇಖಕರು: ಚಿ, ನಾ. ಸೋಮೇಶ ; ಮೊ: 94494 75632 ; ಪ್ರಕಾಶನ: ಗ್ರಾಮೋತ್ಥಾನ ಭಾರತ ಪ್ರಕಾಶನ ; ಪುಟಗಳು: 156 ; ಬೆಲೆ: 200 ರೂ.
ಅಕ್ಷರಭ್ಯಾಸ ಮತ್ತು ವಿವೇಕಾನಂದ ಪ್ರತಿಮೆ ಲೋಕಾರ್ಪಣೆ
- ನಯನಾ, ಶಿಕ್ಷಕಿ, ಸ್ವಾಮಿ ವಿವೇಕಾನಂದ ವಿದ್ಯಾಕುಲ
ಸಬ್ಬನ ಹಳ್ಳಿ ಮೈಸೂರು: 18.06.2025 ಬುಧವಾರ ಸ್ವಾಮಿ ವಿವೇಕಾನಂದ ವಿದ್ಯಾಕುಲದಲ್ಲಿ ಇಮ್ಮಡಿ ಸಂಭ್ರಮ. ಹೊಸದಾಗಿ ಪ್ರವೇಶಕೋರಿದ ಪುಟಾಣಿಗಳು ಪ್ರಥಮ ಅಕ್ಷರಭ್ಯಾಸ ಮಾಡಿದರು. ಇದರೊಂದಿಗೆ ಶಾಲೆಯ ಆವರಣದಲ್ಲಿ ಸಿಡಿಲ ಸಂತನೆಂದು ಹೆಸರಾದ ಯುವ ಜನಾಂಗದ ಆದರ್ಶ, ಸ್ವಾಮಿ ವಿವೇಕಾನಂದರ ಆಳೆತ್ತರದ ಪ್ರತಿಮೆಯು ಲೋಕಾರ್ಪಣೆಗೊಂಡಿತು.
ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಮುಕ್ತಿದಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದು, “ಮೈಸೂರು ಸಂಸ್ಥಾನದ ಚಾಮರಾಜ ಒಡೆಯರ್‌ರವರು ಸ್ವಾಮಿ ವಿವೇಕಾನಂದರ ಅಮೇರಿಕಾ ಪ್ರವಾಸಕ್ಕೆ ಕಾರಣರಾದವರು.
.ಭಾರತಕ್ಕೆ ಮರಳಿದ ನಂತರವೂ ಸ್ವಾಮೀಜಿ ಅವರಿಗೆ ತಮ್ಮ ಪ್ರವಾಸದ ಅನುಭವಗಳನ್ನು ಪತ್ರ ಮೂಲಕ ತಿಳಿಸಿದ್ದರು. ಇಂದಿನ ಸಮಾರಂಭವು ಅಂದಿನ ಪ್ರಸಂಗಗಳ ಫಲಶ್ರುತಿ' ಎಂದು ಅಶೀರ್ವದಿಸಿದರು. ವಿವೇಕಾನಂದರ ಮೂಲ ಆಶಯವಾದ ಅಜ್ಞಾನದಿಂದ ಮುಕ್ತಿ ಮತ್ತು ಆ ಮೂಲಕ ಸಶಕ್ತತೆಯನ್ನೂ ಶಾಲೆಯು ಮಕ್ಕಳಿಗೆ ನೀಡಲಿ ಎಂದರು. ವಿದ್ಯಾಭಾರತಿಯ ಉಪಾಧ್ಯಕ್ಷರಾದ ಶ್ರೀಪತಿಯವರು ವಿವೇಕಾನಂದರನ್ನು ನಮಿಸಿ ತರಗತಿಗೆ ಹೋಗುವುದು ಆದರ್ಶ ವಿದ್ಯಾರ್ಥಿ ಜೀವನದ ಮಾದರಿ ಎಂದು ಪ್ರಶಂಸಿದರು.
ವಿಶ್ವ ಸೃಷ್ಟಿಯ ಆದಿ ಅಕ್ಷರವಾದ ಓಂಕಾರವನ್ನು ಕೈಹಿಡಿದು ಬರೆಸಿ ತಮ್ಮ ಮಕ್ಕಳನ್ನು ಶಿಕ್ಷಣದ ಮಾಧ್ಯಮಕ್ಕೆ ಶ್ರೀಕಾರ ಮಾಡಿದ ಪೋಷಕರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹಳ ಸಂತೋಷಪಟ್ಟರು. ಶಾಲೆಯ ಕಟ್ಟಡಗಳ ನಿರ್ಮಾಣದಲ್ಲಿ ಸದಾ ಸಹಕಾರ ನೀಡುತ್ತಲೇ ಬರುತ್ತಿರುವ ಮಹಾದೇವರನ್ನು ಸನ್ಮಾನಿಸಲಾಯಿತು. ಧೀರನಿಲುವು ಮತ್ತು ದೇಶ ಪ್ರೇಮದ ಮೂರ್ತಿಯೇ ಆದ ಸ್ವಾಮಿ ವಿವೇಕಾನಂದರ ವಿಗ್ರಹವು ಎಲ್ಲರ ಮನಸ್ಸನ್ನು ಸೆಳೆಯುತ್ತಿತ್ತು. ವಿಗ್ರಹದ ಶಿಲ್ಪಿ ಅಜಯರವರನ್ನೂ ಸನ್ಮಾನಿಸಲಾಯಿತು.
ರಾಮಾಯಣ ಮಹಾಭಾರತ ಪರೀಕ್ಷಾ ಪರಿಚಯ
ಸರ್ಕಾರಿ ಮಲ್ಲಸಂದ್ರ, ಬೆಂಗಳೂರು: 18-6-25 ಬುಧವಾರ ಪ್ರೌಢಶಾಲೆಯಲ್ಲಿ ರಾಮಾಯಣ ಮತ್ತು ಮಹಾಭಾರತ ಕಾವ್ಯಗಳ ಬಗ್ಗೆ, ಮಕ್ಕಳಿಗೆ ಪರೀಕ್ಷೆ ನಡೆಸುವ ಬಗ್ಗೆ ಅಲ್ಲಿನ ಮುಖ್ಯಶಿಕ್ಷಕರು ಹಾಗೂ ಸಂಬಂಧಿಸಿದ ಶಿಕ್ಷಕರಿಗೆ ತಿಳಿಸುವ ಕಾರ್ಯಕ್ರಮವಿದ್ದಿತು. ದಾನಿಗಳಿಂದ ಸಂಗ್ರಹಿಸಲಾದ ಸಂಪನ್ಮೂಲಗಳನ್ನು ಪುಸ್ತಕಗಳ ಮೂಲಕ ಮಕ್ಕಳಿಗೆ ವಿತರಿಸಿ ವಿಚಾರ ಸಂಕೀರ್ಣವನ್ನು ಮಾನ್ಯ ಟಿ.ಎ.ಪಿ. ಶೆಣೈಯವರು ನಡೆಸಿದರು. ಕಿಶೋರ ಭಾರತ, ಎಳೆಯರ ರಾಮಾಯಣ ಪುಸ್ತಕಗಳ ಬಗ್ಗೆ ಕಿರುಪರಿಚಯವನ್ನು ಮಕ್ಕಳಿಗೆ ಮಾಡಿಕೊಡುವುದರ ಮೂಲಕ ಕಾವ್ಯಗಳ ಪರಿಚಯವನ್ನು ಹೇಗೆ ಮಾಡಿಕೊಳ್ಳಬೇಕೆಂಬುದರ ಬಗ್ಗೆ ತಿಳಿಸಲಾಯಿತು.
ಶಿಕ್ಷಕರು ಉತ್ತಮ ಸಹಕಾರವನ್ನು ನೀಡಿ ಮಕ್ಕಳನ್ನು ಪರೀಕ್ಷೆಗೆ ಪ್ರೋತ್ಸಾಹಿಸುತ್ತೇವೆಂದು ತಿಳಿಸಿದರು. ದಾಸರಹಳ್ಳಿ ವಿಶ್ವ ಹಿಂದೂ ಪರಿಷತ್ ಪದಾಧಿಕಾರಿಗಳು ಭಾಗವಹಿಸಿದ್ದರು.
ನಾಗರಾಜ ಆಚಾರ್ ಕಾರ್ಯದರ್ಶಿಗಳು, ದಾಸರಹಳ್ಳಿ ಜಿಲ್ಲೆ
ಮುರುಗ ಭಕ್ತರ ಸಭೆ, ಮಧುರೈಯಲ್ಲಿ....
230 ಕೋಟಿ ಇದ್ದ ಕ್ರೈಸ್ತರ ಸಂಖ್ಯೆಗೆ ಈ 10 ವರ್ಷಗಳಲ್ಲಿ 10ಕೋಟಿ ಕ್ರೈಸ್ತರು ಹೆಚ್ಚಾಗಿ ಸೇರಿ ಬಿಟ್ಟರು. 200ಕೋಟಿ ಮುಸ್ಲಿಮರು ಈಗ 235ಕೋಟಿಯಾದರು. ಯುರೋಪಿನಲ್ಲಿರುವ ಕ್ರೈಸ್ತರಿಗಿಂತ ಈಗ ಆಫ್ರಿಕಾದ ಉತ್ತರ ಭಾಗದ ದೇಶಗಳಲ್ಲೇ ಅವರ ಸಂಖ್ಯೆ ಹೆಚ್ಚಿದೆ. ನಾವು ಹಿಂದುಗಳೀಗ 120ಕೋಟಿ ಇದ್ದೇವೆ. ನಾವೀಗ ಜಗತ್ತಿನಲ್ಲಿ 4ನೇ ಸ್ಥಾನದಲ್ಲಿದ್ದೇವೆ. ನಮ್ಮಿಂದ ಒಬ್ಬನೂ ಮತಾಂತರವಾಗಬಾರದು. ಮತಾಂತರಗೊಂಡವರೀಗ ಹಿಂದಿರುಗಿಬರಬೇಕು.
- ಕೆ. ಅಣ್ಣಾಮಲೈ, ಬಿಜೆಪಿ ಪ್ರಧಾನ ಕಾರ್ಯದರ್ಶಿ
ಒಬ್ಬ ಕ್ರೈಸ್ತನು ತಾನು ಕ್ರೈಸ್ತನಾಗಿ ಬದುಕಬಹುದು. ಅದೇರೀತಿ ಮುಸ್ಲಿಮನೊಬ್ಬ ಕೆಚ್ಚಿನಿಂದ ಮುಸ್ಲಿಮನೆಂದು ಸಾರಿ ಹೇಳಬಹುದು ಆದರೆ ಅವರಿಗೆ ಹಿಂದುವೊಬ್ಬನು ನಾನು ಹಿಂದು ಎಂದರೆ ಏಕೆ ಸಹಿಸಲಾಗುವುದಿಲ್ಲ? ನೀವೇನಾದರೂ ನಾನು ಹಿಂದು ಎಂದರೆ ನಿಮ್ಮನ್ನು ಅವರು ಕೋಮುವಾದಿ ಎನ್ನುವರು. ಹಿಂದು ಧರ್ಮಿಯರನ್ನು ಬಿಟ್ಟು ಇನ್ನಾವುದೇ ಮತೀಯರನ್ನು ಹಾಗೆ ಕೋಮುವಾದಿಯೆಂದು ಕರೆಯಲು ಅವರಿಗೆ ಧೈರ್ಯವಿಲ್ಲ.
- ಪವನ್ ಕಲ್ಯಾಣ್, ಆಂಧ್ರ ಪ್ರದೇಶ, ಉಪ ಮುಖ್ಯಮಂತ್ರಿ
.