Logo

VHP PUBLICATIONS

Hindu Vani


expand_more

ಪ್ರತಿಧ್ವನಿ

ಪ್ರತಿಧ್ವನಿ

ಅರ್ಥಪೂರ್ಣ ಕೊಡುಗೆ

ಸಂಸ್ಕೃತಿಯನ್ನೊಳಗೊಂಡ ಹೆಸರುಗಳನ್ನು ಪರಿಚಯಿಸುತ್ತಿರುವ ಹಿಂದುವಾಣಿ ಪತ್ರಿಕೆ ಉಪಯುಕ್ತವಾದ ಮಹತ್ವದ ಕೊಡುಗೆಯನ್ನು ನೀಡುತ್ತದೆ. -- - ಭಾರತೀ ಗಂಗಾಧರ, ಬೆಂಗಳೂರು


ಸಂಗ್ರಹಯೋಗ್ಯ ಸಂಚಿಕೆ

ಬಿಸ್ಮಿಲ್ ತಂಡದ ದೇಶಪ್ರೇಮ ಮತ್ತು ಸಾಹಸದ ವೃತ್ತವನ್ನು ಓದುತ್ತ ಮೈ ಝಂ ಅನಿಸಿತು. ಉತ್ತಮ ಲೇಖನಗಳ ಸಂಗ್ರಹಯೋಗ್ಯ ಸಂಚಿಕೆ. -- ವಿಶ್ವೇಶ್ವರ ಗಾಯತ್ರಿ, ಬೆಂಗಳೂರು


ಜನಸೇವೆಯ ತತ್ಪರತೆ-ವಿನಮ್ರತೆ

ಸಾತ್ವಿಕ ಜೀವನ, ಜನಸೇವೆ ಮತ್ತು ಜೊತೆಗೂಡಿದ ವಿನಮ್ರತೆ ಡಾ|| ದೇಶಮಾನೆಯವರ ಜೀವನದಲ್ಲಿ ಹಾಸುಹೊಕ್ಕಾಗಿ ಬಂದ ಗುಣಸ್ವಭಾವಗಳು. ಅವರಿಗೆ ನೀಡಿದ ಪದ್ಮ ಪ್ರಶಸ್ತಿಯು ಸೂಕ್ತ ವ್ಯಕ್ತಿಗೆ ಸೂಕ್ತಕಾಲದಲ್ಲಿ ನೀಡಿದ ಗೌರವ ಸಮ್ಮಾನ. ಈಗಿನ ಕೇಂದ್ರ ಸರ್ಕಾರಕ್ಕೆ ಸಲ್ಲಬೇಕು ಶುಭಾಶಯಗಳು. -- ರಾಮನರಸಯ್ಯ, ಶ್ರೀರಂಗಪಟ್ಟಣ

ಚಿಟಕೆಯಲ್ಲಿ ಪರಮಾರ್ಥ

ಸಂತ ಶ್ರೀ ಸಿದ್ಧೇಶ್ವರ ಸ್ವಾಮಿಗಳ ಕುರಿತು ಪುಟ್ಟ ಲೇಖನ ಮನಸ್ಸು ತುಂಬುವಂತಿದೆ. “ಕೆಲವರು ಸಂಸಾರವನ್ನೂ ಜಗತ್ತನ್ನೂ ಪ್ರೀತಿಸುತ್ತಾರೆ. ಆದರೆ ಇನ್ನು ಕೆಲವರ ಪ್ರೀತಿಯ ಪರಿಧಿ ಅವೆರಡನ್ನು ಮೀರಿ ವ್ಯಾಪಿಸಿರುತ್ತದೆ. ಅವರು ಮುಕ್ತರು, ಸಂತರು, ಅನುಭಾವಿಗಳು. ಬಂಧನವಿಲ್ಲದ ಸಹಜಸಿದ್ದರು ಅವರು” ಎನ್ನುವ ಸ್ವಾಮಿಗಳ ಮಾತು ಅಪರೂಪದ ಅನುಭವ. ಇಂತಹ ಮಹಾನುಭಾವರಿಂದಲೇ ಮಳೆ ಬೆಳೆ ಇದೆ ಎನ್ನುವುದು. ಅವರ ನುಡಿ ಅದ್ಭುತ ಅನುಭವವನ್ನು ತುಂಬುತ್ತದೆ. ತಮಗೆ ಧನ್ಯವಾದಗಳು. - ರಮೇಶ ಕದಂ, ಧಾರವಾಡ ವಿಭಾಗ ಕಾರ್ಯದರ್ಶಿ

ಹೊಸ ವ್ಯಾಖ್ಯಾನ

*ಬೆಳಗಲಿದೆ ಆ ಪ್ರಭಾತ' ಎನ್ನುವ ಭಾರತದ ಸ್ವರ್ಣಯುಗವನ್ನು ನೆನಪಿಸುವ ಐ.ಎನ್. ಎಸ್. ಕೌಂಡಿಣ್ಯದ ಲೋಕಾರ್ಪಣೆಯ ಸಂದರ್ಭವು ಮತ್ತೊಮ್ಮೆ ಅಂತಹ ವಾಸ್ತವತೆಯನ್ನು ಕಾಣುವಂತಾಗಲಿ.-- ವಿಶ್ವನಾಥ, ಹೊಸಪೇಟೆ