Hindu Vani
Index
ವಾದ-ಪ್ರತಿವಾದ
ಗೋರಕ್ಷಾ ಪತ್ರಿಕಾಗೋಷ್ಠಿ
(ದಕ್ಷಿಣ ಪ್ರಾಂತ ಗೋರಕ್ಷಾ ಪ್ರಮುಖ ಶ್ರೀ ಸುನಿಲ್ ಕೆ ಆರ್ ಇವರ ಪತ್ರಿಕಾಗೋಷ್ಠಿಯ ಟಿಪ್ಪಣಿ ಮತ್ತು ಗೋವಂಶದ ಕುರ್ಬಾನಿ ಆಗದ ಹಾಗೆ ಹಾಗೂ ಹಿಂಸಾತ್ಮಕ ಗೋಸಾಗಾಟ ತಡೆಯಲು ಮನವಿ) ರಾಜ್ಯ ಮತ್ತು ದೇಶದ ಕಾನೂನಿನನ್ವಯ ಹಾಗೂ Animal welfare board of India ಇದರ ಸುತ್ತೋಲೆ ಅನ್ವಯ ಹಾಗೂ ಸುಪ್ರೀಂ ಕೋರ್ಟ್ ಆದೇಶದನ್ವಯ ಬಕ್ರೀದ್ ಮತ್ತಿತರ ಹಬ್ಬ ಸಂದರ್ಭಗಳಲ್ಲಿ, ಜಾನುವಾರು ಮತ್ತು ಇತರೆ ಪ್ರಾಣಿಗಳ ಹತ್ಯೆ ನಿಷೇಧವಿದ್ದು ಅದನ್ನು ಕಟ್ಟು ನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಲು ಮನವಿ ಮಾಡಲಾಯಿತು. ರಾಜ್ಯದಲ್ಲಿ ಕರ್ನಾಟಕ ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣ ಕಾಯಿದೆ ಜಾರಿಯಲ್ಲಿದ್ದು ಅದರ ಪ್ರಕಾರ ಕುರ್ಬಾನಿಗೆ (ಯಾವುದೇ ರೀತಿಯ ಹತ್ಯೆ) ನಿಷೇಧವಿದೆ. ಹಾಗೂ ಕುರ್ಬಾನಿಗೆ ಜಾನುವಾರು ಸಾಗಾಟವೂ ಶಿಕ್ಷಾರ್ಹ ಅಪರಾಧವಾಗಿದೆ. ಕುರ್ಬಾನಿ ಕೊಟ್ಟ ಸ್ಥಳವನ್ನು ಸರಕಾರದ ಮುಟ್ಟುಗೋಲಿಗೆ ಅವಕಾಶವಿದೆ. ರಾಜ್ಯದಲ್ಲಿ ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯಿದೆ 1959 ತಿದ್ದುಪಡಿ 1975 ಇದರ ಪ್ರಕಾರವೂ ಜಾನುವಾರು ಬಲಿ (ಕುರ್ಬಾನಿ) ನಿಷೇಧವಿರುತ್ತದೆ.
ಸುಪ್ರೀಂ ಕೋರ್ಟ್ WP (Civil) 309:2003 ದಿನಾಂಕ 30.01.2014 ರ ತೀರ್ಪಿನ ಆದೇಶ ದಿನಾಂಕ 06.01.2009 WP 1443/2008 ಹಾಗೂ ಕಾಲ ಕಾಲಕ್ಕೆ ಸರಕಾರದ ವಿವಿಧ ಆದೇಶಗಳಂತೆ ರಾಜ್ಯದಲ್ಲಿ ಜಾನುವಾರುಗಳ ಕುರ್ಬಾನಿ ಕಟ್ಟು ನಿಟ್ಟಾಗಿ ತಡೆಯಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.
ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ಜಾನುವಾರ ಸಾಗಾಟವಾಗದಂತೆ ನಾಕಾಬಂದಿ ಹಾಕಬೇಕು. ಕಿವಿಯೋಲೆ ಇಲ್ಲದ ಜಾನುವಾರುಗಳನ್ನು ಸಾರ್ವಜನಿಕ ಜಾಗದಲ್ಲಿ ಶೇಖರಿಸಿ ಇಡದಂತೆ, ಮೇಯಲು ಬಿಡದಂತೆ, ಸೂರ್ಯಾಸ್ತದಿಂದ ಸೂರ್ಯೋದಯವರೆಗೆ ಕಾಲ್ನಡಿಗೆಯಲ್ಲಿ ಜಾನುವಾರು ಸಾಗಾಟ ನಿಷೇಧವಿದ್ದು ಆ ಸಮಯದಲ್ಲಿ ಸಾಗಾಟ ಮಾಡದಂತೆ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ಮಾಧ್ಯಮದ ಮೂಲಕ ಪ್ರಚಾರ ಮಾಡಬೇಕು. ಅದನ್ನು ಉಲ್ಲಂಘಿಸಿ ಬಿಟ್ಟ ಜಾನುವಾರುಗಳನ್ನು ವಶಪಡಿಸಿ, ಜಾನುವಾರು ನಿಷೇಧ ಕಾಯಿದೆ 2020 ರಂತೆ ಪ್ರಕರಣ ದಾಖಲಿಸಬೇಕು. ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಕಸಾಯಿಖಾನೆ ನಡೆದಲೆಲ್ಲ ನಿಗಾ ಇಡುತ್ತಾ, ಪ್ರಾರ್ಥನಾ ಮಂದಿರಗಳಲ್ಲಿಯೂ ಜಾನುವಾರು ಶೇಖರಿಸಿ ಇಡದಂತೆ ನಿಗಾ ಇಡಲು ಸೂಚಿಸಬೇಕು.
ಕಾಯಿದೆಯಂತೆ ಜಾನುವಾರು ಹತ್ಯೆ ತಡೆಯುವ ಅಧಿಕಾರ ಸಾರ್ವಜನಿಕರಿಗೂ ಇದ್ದು ಅದಕ್ಕೂ ಮೊದಲೇ ಪೊಲೀಸರು ಅಕ್ರಮ ಜಾನುವಾರು ಸಾಗಾಟ, ಶೇಖರಣೆ, ಹತ್ಯೆ ತಡೆಯಲು ಸಾರ್ವಜನಿಕರು ತಮ್ಮ ಅಧಿಕಾರ ಉಪಯೋಗಿಸಲು ಅವಕಾಶ ಸಿಗದಂತೆ ಎಚ್ಚರ ವಹಿಸಬೇಕು. ಈ ಎಲ್ಲಾ ಕಾರ್ಯಗಳಲ್ಲಿ ಕಾನೂನುಬದ್ಧವಾಗಿ ಸಹಕರಿಸಲು ನಾವು ಸದಾ ಸಿದ್ಧರಿದ್ದೇವೆ ಎಂದು ಸುನೀಲ್ ಕೆ.ಆರ್ ಆಗ್ರಹಿಸಿದರು.
ರಕ್ತದಾನ ಶಿಬಿರ
ಯಲಹಂಕ: 22.06.2025 ಭಾನುವಾರ ಉಪನಗರದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ರಾಷ್ಟೋತ್ಥಾನ ರಕ್ತ ಕೇಂದ್ರ ಮತ್ತು ಯಲಹಂಕ IT ಮಿಲನ್ ಅವರ ಸಹಯೋಗವಿತ್ತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಶಶಿಧರ್ (ಮುಖ್ಯಸ್ಥರು, ಮಾನಸ ಸಮೂಹ ಆಸ್ಪತ್ರೆಗಳು) ಅವರನ್ನು ಆಹ್ವಾನಿಸಲಾಗಿತ್ತು. ಪ್ರಾಂತ ವಿಶೇಷ ಸಂಪರ್ಕ ಪ್ರಮುಖರಾದ ಮಂಜುನಾಥ ಸ್ವಾಮಿ, ಜಿಲ್ಲಾಧ್ಯಕ್ಷ ಡಾ. ರತ್ನಾಕರ ಭಟ್, ಉಪಾಧ್ಯಕ್ಷರಾದ ಡಾ. ಯೋಗಿ ದೇವರಾಜ್, ವಿಭಾಗ ಕಾರ್ಯದರ್ಶಿ ವೆಂಕಟೇಶ್ ಅವರ ಉಪಸ್ಥಿತಿ ಇತ್ತು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಮಂಜುನಾಥ ಸ್ವಾಮಿಯವರು, ಮಾನವ ಜೀವನದಲ್ಲಿ ರಕ್ತದಾನವೇ ಶ್ರೇಷ್ಠದಾನ ಏಕೆ ಎಂದು ತಿಳಿಸಿದರು. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಪಾತ್ರವನ್ನು ವಿವರಿಸಿದರು. ಡಾ. ಶಶಿಧರ್ ಅವರು “ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳು, ಸವಾಲುಗಳು, ಆಧುನಿಕ ತಂತ್ರಜ್ಞಾನದ ಮೂಲಕ ಉನ್ನತ ಮಟ್ಟದ ಶಸ್ತ್ರ ಚಿಕಿತ್ಸೆಗಳ ಬಗ್ಗೆ ವಿವರಿಸಿದರು. ಯಾವುದೇ ಶಸ್ತ್ರಚಿಕಿತ್ಸೆ ಮಾಡಬೇಕಾದರೂ ರಕ್ತದ ಅವಶ್ಯಕತೆ ಅತಿ ಮಹತ್ವದ್ದು, ರಕ್ತದ ಕೊರತೆ ನಿವಾರಿಸಲು ರಕ್ತದಾನ ಕಾರ್ಯಕ್ರಮಗಳು ಅತ್ಯವಶ್ಯಕ” ಎಂದು ತಿಳಿಸಿದರು.
ಸಾರ್ವಜನಿಕರ ಪ್ರತಿಕ್ರಿಯೆ ಶ್ರೇಷ್ಠಮಟ್ಟದ್ದಾಗಿತ್ತು. ಒಟ್ಟು 235 ಯೂನಿಟ್‌ಗಳ ರಕ್ತ ಸಂಗ್ರಹವಾಯಿತು. ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಹಾಗೂ ವಿವಿಧ ಆಯಾಮಗಳ ಜಿಲ್ಲಾ ಮತ್ತು ಪ್ರಖಂಡ ಸಮಿತಿಗಳ ಪ್ರಮುಖರೂ, ಕಾರ್ಯಕರ್ತರೂ ಭಾಗವಹಿಸಿದ್ದರು. RSS IT ಮಿಲನ್‌ನ ಯಲಹಂಕ ಭಾಗದ ಮುಖ್ಯಸ್ಥರು, ಕಾರ್ಯಕರ್ತರು ಭಾಗವಹಿಸಿದ್ದರು. (ಭಾವಚಿತ್ರ ರಕ್ಷಾಪುಟ 3)
- ಮಂಜುನಾಥ, ಯಲಹಂಕ ಜಿಲ್ಲಾ ಕಾರ್ಯದರ್ಶಿ