Hindu Vani
Index
ಹೆಸರಿನಲ್ಲಿದೆ ಸಂಸ್ಕೃತಿ
ಆರುಷಿ:
ಮನುವಿನ ಮಗಳು. ಚ್ಯವನ ಮಹರ್ಷಿಯ ಪತ್ನಿ, ಇವರಿಬ್ಬರ ಮಗನೇ ಚೌರ ಈ ಚೌತ್ವ ಖುಷಿಯ ಮಗಳು ಋಜೀಕ, ಮಗಳು ಕಂದಳಿ ದೂರ್ವಾಸ ಮುನಿಯ ಪತ್ನಿಯಾದಳು.
ಕೀರ್ತಿಮತಿ:
ಶುಕ್ರಾಚಾರ್ಯರ ಮಗಳು. ಈಕೆಯನ್ನು ಕೃತಿಯೆಂದು ಕರೆದರು. ಇವಳ ಮಗ ಬ್ರಹ್ಮದತ್ತ.
ಕುಮುದ್ವತೀ:
ಶ್ರೀರಾಮನ ಮಗ ಕುಶನ ಪತ್ನಿ. ಇವರಿಬ್ಬರ ಮಗ ಅತಿಥಿ.
ಬೃಗು:
ಒಬ್ಬ ಬ್ರಹ್ಮರ್ಷಿ. ಇವನ ಮಗ ಕವಿ. ಇನ್ನೊಬ್ಬ ಮಗ ಚ್ಯವನ. ಭಗುವಿನ ಪತ್ನಿ ಖ್ಯಾತಿ. ಮಗಳು ಭಾರ್ಗವಿ.
ಮದನ:
ಮನ್ಮಥ, ಇವನ ಪತ್ನಿ ರತಿ.
ಯಜ್ಞದತ್ತ:
ನರಕಾಸುರನ ಮಗನಾದ ಭಗದತ್ತನ ಮಗ. ಇವನು ಪ್ರಾಗ್‌ಜ್ಯೋತಿಷದ ರಾಜ.
ಯದು:
ಯಯಾತಿಯ ಮಗ. ದೇವಯಾನಿ ಇವನ ತಾಯಿ.
ರಂಭಾ:
ಕಶ್ಯಪ ಮತ್ತು ಪ್ರಾಧೆಯರ ಮಗಳು. ಈಕೆಯ ಪತಿ ತುಂಬುರು ಎಂಬ ಗಂಧರ್ವ.
ಲೋಪಾಮುದ್ರಾ:
ಅಗಸ್ಯ ಮುನಿಯ ಪತ್ನಿ, ಈಕೆಗೆ ಸತ್ಯವತಿಯೆಂದೂ ಹೆಸರಿದೆ. ಇವರಿಬ್ಬರ ಮಗ ದೃಢಸ್ಸು.
ವಿಜಯಾ:
ಮದ್ರದೇಶದ ರಾಜ ಶಲ್ಯನ ಮಗಳು. ಸಹದೇವನ ಪತ್ನಿ ಇವರಿಬ್ಬರ ಮಗ ಸುಹೋತ್ರ
ವಿತಸ್ತಾ:
ಈಗಿನ ಸಿಂಧೂನದಿಯ ಉಪನದಿ ಜೀಲಮ್.
ವಿಪಾಶಾ:
ಈಗಿನ ಬೀಯಾಸ್, ಇದು ಕೂಡಾ ಸಿಂಧೂ ನದಿಯ ಉಪನದಿ.
ಶ್ರದ್ಧಾ:
ದಕ್ಷಬ್ರಹ್ಮನ ಮಗಳು. ಇವಳ ಪತಿ ಧರ್ಮ ಎನ್ನುವ ಋಷಿ,
ಶ್ರುತ:
ದ್ರುಪದನ ಮಗ,
ಸಂವರ್ತ:
ಅಂಗೀರಸನ ಮಗ, ಬ್ರಹ್ಮಸ್ಪತಿ ಮತ್ತು ಉಚಥ್ಯರು ಇವನ ಸಹೋದರರು.
ಸುದೇಷ್ಣಾ:
1) ಶಿಬಿರಾಜನ ಮಗನಾದ ಬಲಿರಾಜನ ಪತ್ನಿ, ಈಕೆಯ ಪತಿ ಧೀರ್ಘತಮ.
2) ಗಾಂಧಾರಿಯ ತಂಗಿಯ ಹೆಸರು ಕೂಡಾ ಸುದೇಷ್ಣ.
3) ಮತ್ಸ್ಯ ದೇಶದ ರಾಜ ವಿರಾಟನ ಪತ್ನಿ, ಉತ್ತರ ಕುಮಾರ ಮತ್ತು ಉತ್ತರೆಯರು ಈಕೆಯ ಮಕ್ಕಳು.