Hindu Vani
Index
ಜಾಲತಾಣ
ಜಾಲತಾಣದ ಚುಟುಕುಗಳು
ಭಾರತದ ನ್ಯಾಯಾಂಗ ವ್ಯವಸ್ಥೆಯ ಅವ್ಯವಸ್ಥೆ
2000ದ ಇಸವಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್ ಇ ತೊಯಿಬಾ ದೆಹಲಿಯ ಕೆಂಪು ಕೋಟೆಯಲ್ಲಿ ಬೀಡು ಬಿಟ್ಟ ಸೇನೆಯ ರಜಪೂತಾನ್ ರೈಫಲ್ಸ್‌ನ ಘಟಕದ ಮೇಲೆ ಧಾಳಿ ಮಾಡಿತು. ಮೂರು ಸೈನಿಕರು ಈ ಪ್ರಸಂಗದಲ್ಲಿ ಸಾವಿಗೀಡಾದರು.
ನಾಲ್ವೇ ದಿನಗಳಲ್ಲಿ ಪೊಲೀಸರು ಈ ಧಾಳಿಯ ಸೂತ್ರಧಾರನಾದ ಅಶ್ಚಕ್‌ನನ್ನು ಬಂಧಿಸಿದರು. ದೆಹಲಿಯ ವಿಚಾರಣಾ ನ್ಯಾಯಾಲಯವು ಅವನಿಗೆ ಗಲ್ಲು ಶಿಕ್ಷೆಯನ್ನೇನೋ ನೀಡಿತು. ಆದರೆ ಅದಕ್ಕೆ 5 ವರ್ಷ ಕಾಲವನ್ನು ತೆಗೆದುಕೊಂಡು 2005ರಲ್ಲಿ ಶಿಕ್ಷೆಯನ್ನು ನೀಡಿತು. ದೆಹಲಿಯ ಉಚ್ಚ ನ್ಯಾಯಾಲಯವು 2 ವರ್ಷಗಳ ನಂತರ 2007ರಲ್ಲಿ ಈ ಶಿಕ್ಷೆಯನ್ನು ಪುರಸ್ಕರಿಸಿತು.
ಸರ್ವೋಚ್ಚನ್ಯಾಯಾಲಯವು 2011ರಲ್ಲಿ ಈ ಶಿಕ್ಷೆಗೆ ತನ್ನ ಸಮ್ಮತಿಯನ್ನು ನೀಡಲು 4 ವರ್ಷಗಳನ್ನು ತೆಗೆದುಕೊಂಡಿತು. ಅಶ್ಚಕ್ ಗಲ್ಲು ಶಿಕ್ಷೆಯ ವಿರುದ್ಧ ಪುನರ್ವಿಮರ್ಶೆಯ ಅರ್ಜಿಯನ್ನು ಹಾಕಿದನು. ಸರ್ವೋಚ್ಚ ನ್ಯಾಯಾಲಯವು ಈ ಅರ್ಜಿಯನ್ನು ತಿರಸ್ಕರಿಸಲು 1 ವರ್ಷ ತೆಗೆದುಕೊಂಡು ನಂತರ 2012ರಲ್ಲಿ ತಾನು ನೀಡಿದ ಶಿಕ್ಷೆಯನ್ನು ಖಾಯಂಗೊಳಿಸಿತು.
ಈ ತೀರ್ಪಿನ ವಿರುದ್ಧ ಅಶ್ಕ್ ಮರು ಪರಿಶೀಲನಾ ಅರ್ಜಿಯನ್ನು ಹಾಕಿದನು. 25 ವರ್ಷಗಳ ನಂತರ ಸರ್ವೋಚ್ಚ ನ್ಯಾಯಾಲಯವು 2014ರಲ್ಲಿ ಅವನ ಅರ್ಜಿಯನ್ನು ತಿರಸ್ಕರಿಸಿ ಶಿಕ್ಷೆಯನ್ನು ಖಾತ್ರಿಗೊಳಿಸಿತು.
2014 ಸೆಪ್ಟೆಂಬರ್‌ನಲ್ಲಿ ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠವು “ಉಚ್ಚ ನ್ಯಾಯಾಲಯವೇನಾದರೂ ಮರಣ ದಂಡನೆಯನ್ನು ವಿಧಿಸಿದ್ದರೆ ಸರ್ವೊಚ್ಚ ನ್ಯಾಯಾಲಯದ 3 ನ್ಯಾಯಾಧೀಶರು ಅದನ್ನು ಪುನವಿಮರ್ಶಿಸಬೇಕೆಂದು ಹೇಳಿದುದನ್ನು ಅನುಸರಿಸಿ ಪಾಕಿಸ್ತಾನದ ಈ ಭಯೋತ್ಪಾದಕನು ತನ್ನ ಪುನವಿಮರ್ಶಾ ತೀರ್ಪನ್ನು ಮತ್ತೆ ಪರಿಶೀಲಿಸಿಕೊಳ್ಳುವ ಸೌಲಭ್ಯವನ್ನು ಪಡೆದನು.
ಇದನ್ನು ವಿಮರ್ಶಿಸಿದ 3 ನ್ಯಾಯಾಧೀಶರ ಸರ್ವೋಚ್ಚ ನ್ಯಾಯಾಲಯದ ಪೀಠವು 8 ವರ್ಷಗಳ ನಂತರ 2022ರಲ್ಲಿ ಅಶ್ವಕನ ಅರ್ಜಿಯನ್ನು ನಿರಾಕರಿಸಿತು.
ಈ ಅಶ್ಚಕ್ ಇದರ ನಂತರ ರಾಷ್ಟ್ರಾಧ್ಯಕ್ಷರಿಗೆ ಕ್ಷಮಾದಾನದ ಅರ್ಜಿಯನ್ನು ಸಲ್ಲಿಸಿದನು. ಅವರು ಜೂನ್ 2024 ರಲ್ಲಿ ಅದನ್ನು ತಿರಸ್ಕರಿಸಿದರು.
ಅಲ್ಲಿಗೆ ಅದು ಮುಗಿಯಲಿಲ್ಲ 3 ಭಾರತೀಯ ಸೈನಿಕರನ್ನು ಹತ್ಯೆಗೈದ ಕೊಲೆಗಾರನು 24 ವರ್ಷಗಳಿಂದ ಭಾರತದ ತೆರಿಗೆದಾರರು ನೀಡಿದ ಹಣದಲ್ಲಿ ಹೊಟ್ಟೆ ಹೊರೆದುಕೊಂಡು ಮರಣ ದಂಡನೆಯನ್ನು ತಪ್ಪಿಸಿಕೊಂಡು ಬದುಕುತ್ತಿದ್ದಾನೆ.
ಎ.ಎಮ್. ಸಿಂಫ್ಟಿ, ಕಪಿಲ್ ಸಿಬಲ್, ಸಲ್ಮಾನ್ ಋರ್ಷಿದ ರಂತಹ ವಕೀಲರಿರುವಾಗ ಅಫ್ರಿಕ್ ಮರಣ ದಂಡನೆಯಿಂದ ಪಾರಾಗಿ ಜೈಲಿನಿಂದ ಹೊರ ಬರಲೂ ಸಾಧ್ಯವಿದೆ!