Logo

VHP PUBLICATIONS

Hindu Vani


expand_more

ಕಾನೂನು

ಕಾನೂನು

ಮದುವೆ ಕ್ರೈಸ್ತನಂತೆ, ಮೀಸಲು ಮಾತ್ರ ಹಿಂದುವಾಗಿ: ಅಸಾಧ್ಯ ಎಂದಿತು ಉಚ್ಚನ್ಯಾಯಾಲಯ


ತಮಿಳುನಾಡಿನ ದೇರೂರು ನಗರ ಪಂಚಾಯಿತಿಯ ಜಾತಿ ಅಧ್ಯಕ್ಷರಾಗಲು ಕ್ರೈಸ್ತನಾಗಿದ್ದರೂ ಅನುಸೂಚಿತ (ಎಸ್.ಸಿ) ಮೀಸಲಿನಿಂದ ಪ್ರಯತ್ನಿಸಿದುದನ್ನು ಮದ್ರಾಸ್ ಉಚ್ಚನ್ಯಾಯಾಲಯದ ಮಧುರೆ ಪೀಠವು ತಳ್ಳಿ ಹಾಕಿದೆ.


ಸ್ವಇಚ್ಛೆಯಿಂದ 1872ರ ಕ್ರೈಸ್ತ ವಿವಾಹ ಕಾನೂನಿನ ಪ್ರಕಾರ ಮದುವೆಯಾದುದು ತನ್ನ ಮೂಲ ಧರ್ಮವನ್ನು ತ್ಯಜಿಸಿದಂತೆಯೇ ಸರಿ. ಕಾನೂನಿನ ಪರಿಧಿಯಲ್ಲಿ ಹೇಳಬೇಕೆಂದರೆ ಅದು ಮತಾಂತರವಾದಂತೆಯೇ, ಇವೆಲ್ಲ ಸಹಜವಾಗಿ ಸರಪಳಿಯಂತೆ ಜರುಗುತ್ತವೆ. ಜಸ್ಟಿಸ್ ಎಲ್. ವಿಕ್ಟೋರಿಯಾ ಗೌರಿಯವರ ಪೀಠವು ಈ ಕುರಿತು ಬಂದ ಮೇಲ್ಮನವಿಯೊಂದನ್ನು ಪುರಸ್ಕರಿಸಿ ನಡೆಸಿದ ವಿಚಾರಣೆಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಿದರು.

ದೇರೂರು ಪಂಚಾಯಿತಿಯ ಅಧ್ಯಕ್ಷಸ್ಥಾನಕ್ಕೆ ಸ್ಪರ್ಧಿಸಿದ್ದ ವಿ. ಅಮುಧ ರಾಣಿಯವರ ಆ ಸ್ಥಾನವು ಅನುಸೂಚಿತ ಜಾತಿಗೆ ಮೀಸಲಾಗಿದ್ದಿತು. ತಾನು ಕ್ರೈಸ್ತಳಾಗಿ ಮತಾಂತರಗೊಂಡರೂ ಆಕೆ ತನ್ನನ್ನು ಎಸ್.ಸಿ.ಯೆಂದು ಹೇಳಿದ್ದರು. ಇದರ ವಿರುದ್ಧ ಮೇಲ್ಮನವಿಯನ್ನು ಮಾಡಿದ್ದ ಡಿ.ಎಮ್.ಕೆ.ಯ ವಿ. ಅಯ್ಯಪ್ಪನ್ ಆಪಾದಿಸಿದಂತೆ ಮೊದಲು ಎಸ್.ಸಿ. ಜಾತಿಯ ಹಿಂದು ಪಲ್ಲನ್ ಜನಾಂಗಕ್ಕೆ ಸೇರಿದ ಅಮುಧಾರಾಣಿಯವರು ಕ್ರೈಸ್ತ ನಡಾವಳಿಗೆ ಅನುಸಾರವಾಗಿ ಕ್ರೈಸ್ತ ವ್ಯಕ್ತಿಯನ್ನು ಮದುವೆಯಾಗಿರುವರು. ಹಾಗಿರುವಾಗ ಅವರು ಕ್ರೈಸ್ತರು. ಮೀಸಲು ಲಾಭವನ್ನು ಪಡೆಯಲು ಸಾಧ್ಯವಿಲ್ಲ ಎಂದು ಮನವಿ ಮಾಡಿದ್ದರು.2005ರಲ್ಲಿ ಅಮುಧಾರಾಣಿಯವರು ಕುಲಶೇಖರಂ ಪುತ್ತೂರುನ ಸೈಂಟ್ ಆ್ಯಂಟನಿಸ್ ಚರ್ಚ್‌ನಲ್ಲಿ ಕ್ರೈಸ್ತ ವಿವಾಹ ಕಾನೂನಿನಂತೆ ಮದುವೆಯಾಗಿದ್ದರು. 2022ರ ಸ್ಥಾನೀಯ ಮೀಸಲು ಆಜ್ಞೆಯ ಪ್ರಕಾರ ಅನುಸೂಚಿತ ಜಾತಿಗೆಂದೇ ಮಿಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಅವರು ಸ್ಪರ್ಧಿಸಲಾಗದು. ಇದು ಕಾನೂನಿನ ಅಂಶ.

ಆದರೆ ಅಮುಧಾರಾಣಿಯವರು ವಾದಿಸುವಂತೆ ಆಕೆ ಕ್ರೈಸ್ತಳಾಗಿ ಮತಾಂತರಗೊಂಡಿಲ್ಲ. ತಾನು ಹಿಂದು ಪದ್ಧತಿಗಳನ್ನೇ ಪಾಲಿಸುತ್ತಿದ್ದೇನೆ ಎಂದು ಹೇಳಿದರು. ಆದರೆ ಇದನ್ನು ನ್ಯಾಯಾಲಯವು ಒಪ್ಪಲಿಲ್ಲ. ಮದುವೆಯ ರಿಜಿಸ್ಟಿಯನ್ನು ಪರೀಶೀಲಿಸಿದಾಗ ಅಮುದಾ ರಾಣಿಯವರು ಮತ್ತು ಅವರ ಪತಿಯಾಗಲಿದ್ದವರೂ ಇಬ್ಬರೂ ಕ್ರೈಸ್ತರೆಂದು ಘೋಷಿಸಿದ ಅಂಶವು ದಾಖಲುಗೊಂಡಿದ್ದಿತು. ಸಾಂಪ್ರದಾಯಿಕವಾದ ಬ್ಯಾಪ್ಟಿಸ್ ನಡೆಯದಿದ್ದರೂ ವಿವಾಹದ ಕ್ರೈಸ್ತ ಮತದ ವಿಧಿಗಳು ಸಾಮಾಜಿಕ ಮತ್ತು ಕಾನೂನಿನ ಅಂಶಗಳನ್ನು ಬದಲಿಸುತ್ತವೆ.

ನ್ಯಾಯಾಲಯವು ತೀರ್ಪುನೀಡಿದಂತೆ, ವಿವಾಹ ಸಂದರ್ಭದಲ್ಲಿ ವಧೂ-ವರರಲ್ಲಿ ಒಬ್ಬರು ಬ್ಯಾಪ್ಟಿಸ್ ವಿಧಿಯಲ್ಲಿ ಪಾಲ್ಗೊಳ್ಳದಿದ್ದರೂ, ಅವರಲ್ಲಿ ಒಬ್ಬರು ಕ್ರೈಸ್ತರಾಗದೆ ಇದ್ದು ಮತಾಂತರಗೊಳ್ಳದೆ ಇದ್ದರೂ, ಭಾರತೀಯ ಕ್ರೈಸ್ತ ವಿವಾಹ ಕಾನೂನಿನಡಿಯಲ್ಲಿ ಮದುವೆಯಾದ ಮಾತ್ರಕ್ಕೆ ಇಬ್ಬರೂ ಕ್ರೈಸ್ತರೆಂದೇ ಪರಿಗಣಿತರಾಗುವರು.

ನ್ಯಾಯಾಮೂರ್ತಿ ಗೌರಿಯವರ ತೀರ್ಪಿನಂತೆ ಕ್ರೈಸ್ತ ವಿವಾಹ ಕಾನೂನು ವಧೂ-ವರರಲ್ಲಿ ಒಬ್ಬರು ಕ್ರೈಸ್ತರಾಗದೆ ಇರುವುದನ್ನು ಒಪ್ಪುವುದಿಲ್ಲ. ಈ ವಿಧಿಯಲ್ಲಿ ಮದುವೆಯಾಗುವುದೆಂದರೆ ಇಬ್ಬರೂ ಕ್ರೈಸ್ತರೆನ್ನುವ ವಸ್ತುಸ್ಥಿತಿಯನ್ನು ಒಪ್ಪಿದಂತೆಯೇ ಸರಿ. ಇದಾಗುತ್ತಲೇ ಸಾಂವಿಧಾನಿಕ ಆಜ್ಞೆ 1950ರ ಅನುಸೂಚಿತ ಪಾತ್ರವನ್ನು ಅವರು ಕಳೆದುಕೊಳ್ಳುತ್ತಾರೆ. ಈ ಅನುಸೂಚಿತ ಜಾತಿಯು ಹಿಂದು, ಸಿಖ್ ಮತ್ತು ಬೌದ್ಧಮತಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಕ್ರೈಸ್ತ ಮತದಲ್ಲಿ ಅನುಸೂಚಿತ ಜಾತಿಯು ಇರುವುದಿಲ್ಲ.

ತಮಿಳುನಾಡು ಸರಕಾರಿ ನೌಕರರ ಸೇವಾ ಕಾನೂನು 2016, ಹಾಗೂ 2, ಸೆಲ್ವರಾಣಿ ಮತ್ತು ಜಿಲ್ಲಾ ಕಲೆಕ್ಟರ್ ಪ್ರಕರಣದಲ್ಲಿ ಸರ್ವೋಚ್ಚನ್ಯಾಯಾಲಯವು ನೀಡಿದ ತೀರ್ಪಿನಂತೆ ಮತಾಂತರಗೊಂಡ ಕ್ರೈಸ್ತಳಾಗಿ ಅಮುಧಾರಾಣಿಯವರು ಹಿಂದುಳಿದ ವರ್ಗದವರಾಗಬಲ್ಲರಲ್ಲದೆ ಎಸ್.ಸಿ. ಮೀಸಲಾತಿಯನ್ನು ಪಡೆಯುವವರಾಗಲು ಅಸಾಧ್ಯ. ಹೀಗಾಗಿ ಕ್ರೈಸ್ತಳಾಗಿರುವ ಈ 4ನೇ ಪ್ರತಿವಾದಿಗೆ ಅನುಸೂಚಿತ ಜಾತಿಯ ಸ್ಥಾನವನ್ನು ನೀಡುವುದು ಸಂವಿಧಾನಕ್ಕೆ ಮಾಡಿದ ಅಪಚಾರವಾಗುತ್ತದೆ. ಹೀಗಿದ್ದ ಅಮುಧಾರಾಣಿಯವರು ಅಧ್ಯಕ್ಷಸ್ಥಾನದಿಂದ ಅನರ್ಹರೆಂದು ಘೋಷಿಸಿ ತಮಿಳುನಾಡು ಜಿಲ್ಲಾ ಮುನ್ಸಿಪಾಲಿಟಿ ಕಾನೂನು 1920ರ ಪ್ರಕಾರ 50(1) (ADD) ಸೆಕ್ಷನಿನ ಅಡಿಯಲ್ಲಿ ಕ್ರಮಕೈಗೊಳ್ಳಲು ಆದೇಶಿಸಿದರು.

ಪ್ರಕರಣ: ವಿ. ಅಯ್ಯಪ್ಪನ್ ಮತ್ತು ಜಿಲ್ಲಾ ಕಲೆಕ್ಟರ್ ಕನ್ಯಾಕುಮಾರಿ, ವಾದಿಗಳ ಪರವಾಗಿ ಬಿ. ಸರವಣ್‌ರವರು ಮತ್ತು ಇತರರು ವಾದಿಸಿದ್ದರೆ; ಪ್ರತಿವಾದಿ ಅಮುಧಾರಾಣಿಯವರ ಪರವಾಗಿ ಹೆಚ್ಚುವರಿ ಎಡೋಕೆಟ್ ಜನರಲ್ ವಿ. ವೀರ ಕದಿರವಲ್ ವಾದಿಸಿದ್ದರು.

.

ಕಾನೂನು

.