Hindu Vani
Index
ಸಂಸ್ಕೃತಿ
ಹೆಸರಿನಲ್ಲಿದೆ ಸಂಸ್ಕೃತಿ
ಅಭಿಜಿತ್ತು:
ದಕ್ಷನ ಮಗಳು. ಚಂದ್ರನ ಹೆಂಡತಿ, ರೋಹಿಣಿ ನಕ್ಷತ್ರದ ಪಕ್ಕದಲ್ಲಿ ಇರುವ ನಕ್ಷತ್ರ. ಅಭಿಸಾರ: ತಕ್ಷಶಿಲೆಯ ಉತ್ತರದಲ್ಲಿರುವ ಆಗಿನ ದೇಶ. ಇದು ಈಗ ಇರಾನದ ಹಯಾರಾನಾ ಎಂದಿರಬಹುದು ಎಂದು ಊಹಿಸಲಾಗಿದೆ. ಮಹಾಭಾರತ ಕಾಲದಲ್ಲಿ ಇದನ್ನು ಚಿತ್ರಸೇನನೆಂಬ ರಾಜನು ಆಳುತ್ತಿದ್ದನು. ರಾಜಸೂಯ ಯಾಗದಲ್ಲಿ ಅರ್ಜುನನು ಇವನನ್ನು ಸೋಲಿಸಿ ಕಪ್ಪಕಾಣಿಕೆಗಳನ್ನು ತೆಗೆದುಕೊಂಡನು.
ಅಂಬರೀಷ:
ಸೂರ್ಯವಂಶದ ರಾಜ. ವೈವಸ್ವತ ಮನುವಿನ ಮಗನಾದ ನಾಭಾಗನ ಮಗ. ಇವನು ದಾನಶೂರನೆಂದು ಹೆಸರುಗಳಿಸಿದ್ದನು. ಇವನಿಗೆ ವಿರೂಪ, ಶಂಭು ಕೇತುಮಂತರೆಂದು ಮೂವರು ಮಕ್ಕಳು. ಈತನ ಮಗಳು ಶ್ರೀಮತಿ.
ಅಂಶುಮಂತ:
ಸೂರ್ಯವಂಶದ ಸಗರ ಚಕ್ರವರ್ತಿಯ ಮಗನಾದ ಅಸಮಂಜನ ಮಗ, ಗಂಗೆಯನ್ನು ಭೂಮಿಗಿಳಿಸಿ ತನ್ನ ಚಿಕ್ಕಪ್ಪಂದಿರಿಗೆ ಸದ್ಧತಿಯನ್ನು ನೀಡಲು ನಿರ್ಧರಿಸಿದನು. ಅದಕ್ಕಾಗಿ ತನ್ನ ಮಗನಾದ ದಿಲೀಪನಿಗೆ ಪಟ್ಟವನ್ನು ಕಟ್ಟ ತಾನು ಗಂಗೆಯನ್ನು ತರಲು ತಪಸ್ಸು ಮಾಡಿದನು. ಕೊನೆಗೂ ಭಗೀರಥನು ಕಠಿಣ ತಪಸ್ಸನ್ನು ಮಾಡಿ ಶಿವನನ್ನು ಒಪ್ಪಿಸಿ ಗಂಗೆಯು ಭೂಮಿಗೆ ಇಳಿದು ಬರುವಂತೆ ಮಾಡಬೇಕಾಯಿತು.
ಇಂದ್ರಸೇನೆ:
ಮೌಲ್ಯ ಋಷಿಯ ಹೆಂಡತಿ. ಈಕೆ ಶಿವನನ್ನು ಕುರಿತು ತಪಸ್ಸು ಮಾಡಿ ದೌಪದಿಯಾಗಿ ಜನಿಸಿದಳು. ನಳದಮಯಂತಿಯರ ಮಗಳ ಹೆಸರು ಕೂಡಾ ಇಂದ್ರಸೇನೆಯೆಂದಿದೆ.
ಕಯಾಧು:
ಹಿರಣ್ಯ ಕಶ್ಯಪುವಿನ ಹೆಂಡತಿ, ಪ್ರಹ್ಲಾದನ ತಾಯಿ. ಇವಳ ತಂದೆ ಜಂಭಾಸುರ. ಗಾರ್ಗ್ಯ: ಒಬ್ಬ ಋಷಿ, ಅಂಗಿರಸ ಋಷಿಯ ವಂಶದವನು. ಇವನು ಕೇಕಯ ದೇಶದ ರಾಜ ಕೈಕೇಯಿಯ ಅಣ್ಣ ಯುಧಾಜಿತನ ಪುರೋಹಿತನು.
ಗಾಲವ:
ವಿಶ್ವಾಮಿತ್ರ ಋಷಿಯಿಂದ ಶುಕ್ಲ ಯುಜುರೇದವನ್ನು ಅಧ್ಯಯನವನ್ನು ಮಾಡಿದ್ದನು.
ತಾರಾ:
ಬ್ರಹಸ್ಪತಿಯ ಹೆಂಡತಿ, ಸ್ವಾಹಾ ಇವಳ ಮಗಳು. ವಾಲಿಯ ಹೆಂಡತಿ, ಸುಷೇಣನೆಂಬ ವಾನರನ ಮಗಳು.
ತ್ರಿಪಥಗಾ:
ಗಂಗೆ ಮೂರು ಲೋಕಗಳಲ್ಲೂ ಹರಿಯುವವಳಾದುದರಿಂದ ಆಕೆಗೆ ಈ ಹೆಸರು.
ದೇವಯಾನಿ:
ಶುಕ್ರಾಚಾರ್ಯ ಮತ್ತು ಊಜ್ಜಿಸ್ವತಿಯರ ಮಗಳು. ಯಯಾತಿಯನ್ನು ಮದುವೆಯಾದಳು. ಇವಳಿಗೆ ಸವತಿಯಾಗಿ ಬಂದವಳು ಶರ್ಮಿಷ್ಠೆ. ಆಕೆಯು ಯಯಾತಿಯನ್ನು ಮದುವೆಯಾಗಿ ಅರಮನೆಗೆ ಬರುವುದು ದೇವಯಾನಿಗೆ ಸುತರಾಂ ಇಷ್ಟವಿರಲಿಲ್ಲ.