Logo

VHP PUBLICATIONS

Hindu Vani


expand_more

ಪ್ರತಿಧ್ವನಿ

ಪ್ರತಿಧ್ವನಿ

ಸೂಕ್ತಿ ಶ್ರೀ ಹೇಳಿದ ದಾಕ್ಷಿಣ್ಯಗಳು


ಈ ಕೆಲವೊಂದು ಸತ್ಯಗಳು ಹೇಳಿದಾಗ, ಓದಿದಾಗ ಹೌದೌದು ಎಂದೆನಿಸುತ್ತದೆ. ಅದರಂತೆ ಸಂಚಿಕೆಯಲ್ಲಿ ವಿವರಿಸಿದ ದಾಕ್ಷಿಣ್ಯಗಳು. ಇಂತಹ ಕುತೂಹಲಕಾರಿ ವಿಚಾರಗಳಿಗೆ ಹಿಂದುವಾಣಿಯು ನೀಡುವ ಪ್ರಾಶಸ್ತ್ರವು ವಿಶೇಷವಾದುದು.

ಸೋಮಶೇಖರಯ್ಯ, ದಾವಣಗೆರೆ


ಬೇಕಷ್ಟು ಆಹಾರವಿದೆ ಹಸಿವು ಅಸಾಧ್ಯವಾಗಿದೆ

ಪೋಲಾಗುತ್ತಿರುವ ಆಹಾರ ಮತ್ತು ಹೆಚ್ಚುತ್ತಿರುವ ಜಗತ್ತಿನ ಹಸಿವುಗಳ ದ್ವಂದ್ವವನ್ನು ಲೇಖನವು ತೀಕ್ಷ್ಮವಾಗಿ ವಿಮರ್ಶಿಸಿದೆ. ಇಂತಹ ಲೇಖನಗಳ ಅಗತ್ಯವಿದೆ. ನಡುವಿನ ಪಟಗಳು. -- ಶ್ರೀಕುಮಾರ, ಸಿಂಧಗಿ

ನಡುವಿನ ಪುಟಗಳು

ಸಮೃದ್ಧ ಮಾಹಿತಿ, ಶಬ್ದಭಂಡಾರದ ಕೀಲಿಕೈ, ಗೀತೆ ಕವನಗಳು, ಬಾಲಬೋಧೆಯ ಸರಳ ಕಥೆಗಳು ಸೇರಿದಂತೆ ಮನೋರಂಜಕವಾಗುತ್ತಿದೆ ಹಿಂದುವಾಣಿ.-- ಸೀತಾ ಶೈಲೇಶ, ಶಿವಮೊಗ್ಗ

ಕ್ಷೇತ್ರ ದರ್ಶನದ ವಿಶೇಷ

ಈ ಸಂಚಿಕೆಯ ಹಯಗ್ರೀವ ಕ್ಷೇತ್ರ ಪರಿಚಯವು ಅತ್ಯುತ್ತಮ ಲೇಖನವಾಗಿದೆ. ಹಯಗ್ರೀವ ಅವತಾರದ ಹೃದಯಂಗಮ ಹಿನ್ನೆಲೆಯಲ್ಲಿ ಪ್ರಸಿದ್ಧ ಹಯಗ್ರೀವ ಕ್ಷೇತ್ರಗಳನ್ನು ವಿವರಿಸಿರುವುದು, ಸುಂದರ ಮಾಹಿತಿಗಳ ಆಗರವಾಗಿದೆ.-- ಶ್ರೀ ಲಕ್ಷ್ಮೀ, ದೇವನೂರು 33

ರೈಲು ಪ್ರಯಾಣ

ರೈಲಿನ ಪ್ರಯಾಣ ಈಚೆಗೆ ಸುಖಕರವಾಗುವಂತೆ ರೂಪಿಸಲಾಗುತ್ತಿದೆ. ಆದರೆ ಕೆಲವೊಮ್ಮೆ ಸಂಭವಿಸುವಂತೆ ಎಡವಟ್ಟುಗಳು ಅತಿರೇಕಗಳನ್ನೇ ನಿರ್ಮಿಸಿ ಬಿಡುತ್ತವೆ. ಕಳೆದ ಸಂಚಿಕೆಯ ಪ್ರಸ್ತುತ ಲೇಖನವು ಉತ್ತಮವಾಗಿಯೇ ಪ್ರಾರಂಭವಾಗಿದ್ದು ಕುತೂಹಲಕಾರಿ ಹಂತದಲ್ಲಿ ನಿಲುಗಡೆಯಾಗಿದೆ. ಕುತೂಹಲದಿಂದ ಕಾಯುತ್ತಿದ್ದೇನೆ.- - ನೀರಜಾ ಸುಕುಮಾರ, ಯಡಿಯೂರು