Logo

VHP PUBLICATIONS

Hindu Vani


expand_more

ವಾದ-ಪ್ರತಿವಾದ

ವಕ್ಷ ವಿಚಾರಣೆಯಲ್ಲಿ ಮಧ್ಯಂತರ ವಾದ


ವಕ್ಸ್ ಎನ್ನುವುದು ಇಸ್ಲಾಮಿನ ಧಾರ್ಮಿಕ ಆಚರಣೆಯ ಭಾಗವಲ್ಲ. ಅದೊಂದು ದಾನದ ಕ್ರಿಯಾ ಭಾಗ, ಹೇಗೆಂದರೆ ಒಬ್ಬ ಮುಸ್ಲಿಂ ವಕ್ಷ ಮಾಡದಿದ್ದರೆ ಅಂದರೆ ದಾನವನ್ನು ಮಾಡದಿದ್ದರೆ ಅವನು ಮುಸ್ಲಿಂ ಆಗಲಾರ ಎಂದಾಗದು. ಅಲ್ಲದಿದ್ದರೆ ಅವನೇನಾದರೂ ಕಡಿಮೆ ಮುಸ್ಲಿಮನಾಗಿ ಪರಿಗಣಿಸಲ್ಪಡುವನೆಂದು ಕೂಡಾ ಹೇಳುವಂತಿಲ್ಲ ಅಂದರೆ ವಕ್ಸ್ ಮುಸ್ಲಿಂ ಧರ್ಮದ ಬಿಡಿಸಲಾಗದ ಭಾಗವಲ್ಲ.

ಕಾನೂನು, ಧರ್ಮದ ಸೆಕ್ಯುಲರ್ ಆಡಳಿತಾತ್ಮಕ ವಿಚಾರದ ಬಗ್ಗೆ ಮಾತ್ರ ಆಸಕ್ತಿಯನ್ನು ತೋರುತ್ತದೆ. ಇಸ್ಲಾಮಿನ ಆಚರಣೆ ಮತ್ತು ನಂಬಿಕೆಯ ಬಗ್ಗೆ ಅಲ್ಲ. ಇಸ್ಲಾಮಿನ ಸೆಕ್ಯುಲರ್ ಚಟುವಟಿಕೆ, ಆರ್ಥಿಕ ವ್ಯವಹಾರ, ಆಸ್ತಿಯ ಆಡಳಿತ ಅದರ ಪಾರದರ್ಶಕತೆಗಾಗಿ ಮಾತ್ರ ಈ ವಿಚಾರಣೆ. ಧಾರ್ಮಿಕ ಸ್ವಾತಂತ್ರ್ಯ, ಅಲ್ಪ ಸಂಖ್ಯಾತರ ಹಕ್ಕುಗಳು ಸೇರಿದ ಅನುಚ್ಛೇದ 25 ಅಥವಾ 26ರ ಬಗ್ಗೆ ಇಲ್ಲಿ ವಿವರಗಳು ಅಗತ್ಯವಿಲ್ಲ.

ಆಸ್ತಿಯ ಅನುಭೋಗದಿಂದ ಕೆಲವೊಂದು ಹಕ್ಕುಗಳು ಲಭ್ಯವಾಗುತ್ತವೆ ನಿಜ. ವಕ್ಸ್ ಬೈ ಯೂಜರ್ ಎನ್ನುವುದು ಕಾನೂನಿನ ಮಾನ್ಯತೆಯನ್ನು ಪಡೆದಿರುವುದು ನಿಜವೆ. ಆದರೆ ಅದನ್ನು ಕಾನೂನಿನಿಂದ ತೆಗೆದಿರುವುದೂ ಇದೆ. ಉದಾಹರಣೆಗೆ ಹಿಂದು ಎಂಡೋಮೆಂಟ್ ಕಾನೂನು ಎನ್ನುವುದಿದೆ. ಅವುಗಳಿಂದ ಹಲವು ಆಚರಣೆಗಳನ್ನು ಕಿತ್ತು ಹಾಕಲಾಗಿದೆ. ವಂಶಪಾರಂಪರ್ಯವಾಗಿ ಬಂದ ಪೂಜೆಯ ಹಕ್ಕನ್ನಾಗಲೀ, ವಿಶ್ವಸ್ಥರ ನೇಮಕವನ್ನಾಗಲೀ ಅದು ಸಂವಿಧಾನದ ತತ್ವಗಳಿಗೆ ವಿರುದ್ಧವೆನಿಸುವುದಾದರೆ ಅವನ್ನು ತೆಗೆದು ಬಿಡಲಾಗಿದೆ. ಅಷ್ಟೇ ಅಲ್ಲ ವಕ್ಷನ ಈ ಬೈ ಯೂಸರ್‌ನ ಬಗ್ಗೆ ಮುಸ್ಲಿಮರು ಕೂಡಾ ದೂರು ನೀಡಿರುವರು. ಒತ್ತುವರಿಯ ಆಪಾದನೆಗಳು ಹಲವಿವೆ. ಇದನ್ನು ವಿಚಾರಿಸಲು ಸರ್ಕಾರಿ ಅಧಿಕಾರಿಗಳ ನೇಮಕವಾಗುತ್ತದೆ. ಸರ್ಕಾರವು ಕೊನೆಯದಾಗಿ ತನ್ನ ಕೆಲಸಗಳನ್ನು ಪೂರ್ಣಗೊಳಿಸುವುದು ತನ್ನ ಅಧಿಕಾರಿಗಳ ಮೂಲಕವೇ. ಹಾಗಿರುವಾಗ ಸರ್ಕಾರದ ಯಾವುದೇ ಕಾರ್ಯವಿಭಾಗದಲ್ಲಿ ಅಧಿಕಾರಿಗಳು ಇರಬಾರದು ಎನ್ನುವ ಹಾಗಿಲ್ಲ. ಅವರೇನಾದರೂ ತಮ್ಮ ಕಾರ್ಯ ಭಾರದಲ್ಲಿ ತಪ್ಪಿದಾಗ ಆ ಬಗ್ಗೆ ವಿಚಾರಿಸಲೆಂದೇ ಟ್ರಿಬ್ಯೂನಲ್‌ಗಳಿವೆ. ಉಚ್ಚ ನ್ಯಾಯಾಲಯಗಳಿವೆ ಅಥವಾ ಸರ್ವೋಚ್ಚನ್ಯಾಯಾಲಯವು ಇರುತ್ತದೆ. ಆದುದರಿಂದ ವಕ್ಷನಿಗಮದಲ್ಲಿ ಸರ್ಕಾರಿ ಅಧಿಕಾರಿಗಳು ಇರಬಾರದೆಂದು ಹೇಳುವಂತಿಲ್ಲ.

ವಕ್ಸ್ ಆಸ್ತಿಯು ಅದರ ಅನುಭೋಗದ ಕಾರಣದಿಂದ ಉಂಟಾಗಿದೆ ಎನ್ನುವ ತರ್ಕದ ವಿಚಾರಣೆಯು ಸರ್ವೋಚ್ಚ ನ್ಯಾಯಾಲಯದ ಮೊದಲ ಚರ್ಚೆಯಲ್ಲಿ ಬಂದಿತು. ಅಂತಿದ್ದರೂ 1923ರ ಮುಸಲ್ಮಾನ್ ವಕ್ಸ್ ಆಕ್ಸ್‌ನ ಕಾಲದಿಂದಲೂ ವಕ್ಸ್ ಆಸ್ತಿಗಳನ್ನು ನೋಂದಾಯಿಸಬೇಕೆಂಬ ಕಡ್ಡಾಯವಿದ್ದಿತು. ಸ್ವಾತಂತ್ರ್ಯಾ ನಂತರ 1954ರ ವರ್ ಆಕ್ಟ್ ಇದೇ ನೋಂದಾಯಿಸುವ ಅವಕಾಶವನ್ನು ಮುಂದುವರೆಸಿತ್ತು. 1995ರಲ್ಲಿ ಕೂಡಾ ವಕ್ಸ್ ಆಕ್ಟ್ ಮತ್ತೆ ನೋಂದಾಯಿಸುವುದನ್ನು ಕಡ್ಡಾಯವಾಗಿಸಿತು. ಅದು ವಕ್ಸ್ ಬೈ ಯೂಜ‌ ಬಗ್ಗೆಯೂ ನೋಂದಾವಣೆಯನ್ನು ಕಡ್ಡಾಯವಾಗಿಸಿತು. ಕಾನೂನಿನ 4ನೇ ಭಾಗದಲ್ಲಿ ಈ ರೀತಿ ನೋಂದಾಯಿಸದ ವಕ್ಷಗಳನ್ನು ಗುರುತಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವನ್ನೂ ನೀಡಲಾಯಿತು.

ದಾನಧರ್ಮವೆನ್ನುವುದು ಹಿಂದೂ ಧರ್ಮದಲ್ಲಿ ಮಾತ್ರ ಇರುವುದು. ಇಸ್ಲಾಂನಲ್ಲಿ ದಾನಧರ್ಮವಿಲ್ಲ ಎಂದು ದುಷ್ಯಂತದವೆ ಎಂದರು. ಅದನ್ನು ಪೀಠದಲ್ಲಿದ್ದ ನ್ಯಾಯಮೂರ್ತಿಯೊಬ್ಬರು ಹಾಗೇನಿಲ್ಲ ದಾನಧರ್ಮವು ಕ್ರೈಸ್ತಮತದಲ್ಲೂ ಇದೆ. ಎಂದರು. ಸರ್ವೋಚ್ಚ ನ್ಯಾಯಾಲಯವು ಹೇಳಿದಂತೆ ಈ ಕಾನೂನು; ನಿಯಮದಂತೆ ಕ್ರಮಬದ್ಧವಾಗಿ ಅಂಗಿಕಾರಗೊಂಡು ಬಂದಿದೆ. ಈ ಕಾನೂನಿನಲ್ಲಿ ಸಾಂವಿಧಾನಿಕವಾಗಿ ಬಹು ದೊಡ್ಡ ಲೋಪ ಇದೆ ಎಂದು ಕಂಡು ಬಂದರೆ ಮಾತ್ರ ಅದಕ್ಕೆ ಮಧ್ಯಂತರ ತಡೆಯಾಜ್ಞೆ ಕೊಡಲಾಗುವುದು ಎಂದು ಮೊದಲಿನಿಂದಲೂ ನ್ಯಾಯಾಲಯವು ಹೇಳುತ್ತಲೇ ಬಂದಿದೆ.

ಹಾಡಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ


19-5-2025ರಂದು ವಿಶ್ವ ಹಿಂದು ಪರಿಷತ್ತಿನ ಧರ್ಮ ಪ್ರಸಾರ ವಿಭಾಗ ಮತ್ತು ವನವಾಸಿ ಕಲ್ಯಾಣದ ಕುಶಾಲನಗರ ತಾಲೂಕಿನ ತ್ಯಾಗತ್ತೂರು ಬುಡಕಟ್ಟು ಜನಾಂಗದ ಹಾಡಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಂತರ ಪಾದಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಹಾಗೂ ಇದೇ ಸಂದರ್ಭದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಸೋಲಾರ್‌ ಲ್ಯಾಂಪ್‌ಗಳನ್ನು ವಿತರಣೆ ಮಾಡಲಾಯಿತು. ರಾಜೇಶನಾಥ ಸ್ವಾಮೀಜಿಯವರು ಆಗಮಿಸಿದ ಸಂದರ್ಭದಲ್ಲಿ ಹಾಡಿಯ ಮಹಿಳೆಯರು ಪೂರ್ಣ ಕುಂಭದೊಂದಿಗೆ ಸ್ವಾಗತ ಮಾಡಿ ಸುಮಾರು ಒಂದು ಕಿಲೋಮೀಟರ್ ಸ್ವಾಮೀಜಿ ಅವರ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಯಿತು.

ಬುಡಕಟ್ಟು ಜನಾಂಗದ ಯುವಕರು ಮಹಿಳೆಯರು ಬಹಳ ಸಂಭ್ರಮದಿಂದ ತಮ್ಮ ಊರುಕೇರಿ ರಸ್ತೆಯನ್ನು ಗುಡಿಸಿ ಶೃಂಗಾರ ಮಾಡಿ ತೋರಣಗಳಿಂದ ಅಲಂಕಾರ ಮಾಡಿದ್ದರು. ಧರ್ಮಪ್ರಸಾರ ವಿಭಾಗದ ಸೂರ್ಯನಾರಾಯಣ ಹಾಗೂ ರಾಜೇಶ ನಾಥ ಸ್ವಾಮಿಜಿಯವರು ಬುಡಕಟ್ಟು ಜನಾಂಗದ ಎಲ್ಲಾ ಮನೆಮನೆಗಳಿಗೆ ತೆರಳಿ ಯಾರು ಕೂಡ ಮತಾಂತರಕ್ಕೆ ಒಳಗಾಗಬಾರದು ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಾಂತ್ವನ ನೀಡಿದರು. ಈ ಹಾಡಿಯಲ್ಲಿ ಕ್ರೈಸ್ತರ ಪ್ರಭಾವವಿದ್ದು, ಎಂಟು ಕುಟುಂಬಗಳು ಈಗಾಗಲೇ ಮತಾಂತರಗೊಂಡಿವೆ. ಅವರನ್ನು ವಾಪಾಸ್ ಕರೆತರುವ ಹಾಗೂ ಉಳಿದವರನ್ನು ಮತಾಂತರ ಆಗದಂತೆ ತಡೆಯುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮತಾಂತರಗೊಂಡ ಮೂರು ಕುಟುಂಬಗಳನ್ನು ಮಾತನಾಡಿಸಿ ಪುನಃ ಮಾತೃ ಧರ್ಮಕ್ಕೆ ಬರುವಂತೆ ಮಾತನಾಡಿಸಲಾಯಿತು. ಬಳಿಕ ನಡೆದ ಅನ್ನಸಂತರ್ಪಣದಲ್ಲಿ 150 ಜನರು ಅನ್ನಪ್ರಸಾದವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಧರ್ಮ ಪ್ರಸಾರ ಕೊಡಗು ಜಿಲ್ಲಾ ಸಹ ಪ್ರಮುಖ ರಮೇಶ್‌, ಜಿಲ್ಲಾ ಗೋರಕ್ಷಾ ಗತಿ ವಿಧಿ ಪ್ರಮುಖ ಪ್ರದೀಪ್ ಜಿ. ಊರಿನ ಪ್ರಮುಖರಾದ ಕಿರಣ್, ಮಹಿಳಾ ಪ್ರಮುಖ್ ವನಿತಾ, ಅನಿತ್, ವಿನು, ತಂಬಿ, ಭಗೀರಥ ರಾಧಿಕಾ ಮುಂತಾದವರು ಪಾಲ್ಗೊಂಡಿದ್ದರು.