Logo

VHP PUBLICATIONS

Hindu Vani


expand_more

ಇತಿಹಾಸ

By ಸಂಜಯ, ವಿಭಾಗ ಸಂಘಟನಾ ಕಾರ್ಯದರ್ಶಿ, ತುಮಕೂರು
ಇತಿಹಾಸ

ಔರಂಗಜೇಬನ ಕೊನೆಯ ಪರಾಜಯ


ಶಿವಾಜಿ ಮಹಾರಾಜನ ಮಗ ಶಂಭಾಜಿಯನ್ನು ಬಂಧನದಲ್ಲಿಟ್ಟು ನಡೆಸಿಕೊಂಡ ರೀತಿಯನ್ನು ಕೇಳಿದ ಹಿಂದವಿ ಸ್ವರಾಜ್ಯದ ಸರದಾರರು ಅದಕ್ಕೆ ತಕ್ಕಂತೆ ಔರಂಗಜೇಬನ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ಕೊಂಡರು. ಶಂಭೂ ಮಹಾರಾಜನ ಅಂಗಾಂಗಗಳನ್ನು ಛೇಧಿಸಿ ಚಿತ್ರಹಿಂಸೆಯನ್ನು ನೀಡಿ 39 ದಿನಗಳ ನಂತರ ಅವನ ತಲೆಯನ್ನು ಕಡಿದು ಕೊಂದ ಅವರ್ಣನೀಯ ಕೌರ್ಯವನ್ನು ಅದೇ ರೀತಿಯ ಪ್ರತಿಕಾರದಿಂದ ಹಿಂದವಿ ಸೈನ್ಯವು ತೀರಿಸಿಕೊಂಡಿತು.

ತಮ್ಮ ಮಹಾರಾಜನ ಸಾವಿನ 13ನೇ ದಿನದಂದು ಔರಂಗಜೇಬನ ಸೇನಾಪತಿ ಜುಕರ್‌ ಖಾನ್ ರಾಜಗಡ ಕೋಟೆಯನ್ನು ವಶಪಡಿಸಿಕೊಂಡು ಶಂಭಾಜಿಯ ಪತ್ನಿ ಇನ್ನೂ ಬಾಯಿಯನ್ನೂ ಆಕೆಯ ಮಗುವನ್ನೂ ಬಂಧಿಸಿ ಸೆರೆಮನೆಗೆ ಸೇರಿಸುತ್ತಾನೆ. ಇದಾಗುತ್ತಲೇ ಶಿವಾಜಿ ಮಹಾರಾಜರ ಇನ್ನೊಬ್ಬ ರಾಜಕುಮಾರ ರಾಜಾರಾಮನು ಛತ್ರಪತಿಯಾಗಿ ಸಿಂಹಾಸನವನ್ನು ಏರುತ್ತಾನೆ. ಎಲ್ಲಾ ಹಿಂದವಿ ಸರದಾರರು ತಮ್ಮ ನಡುವಿನ ವೈಮನಸ್ಸನ್ನು ಬಿಟ್ಟು ಹಿಂದು ಏಕತೆಗಾಗಿ ಒಂದಾಗುತ್ತಾರೆ.

ಅಂದು 10ಸಾವಿರ ಮೊಗಲ ಸೈನ್ಯವನ್ನು ಛತ್ರಪತಿ ಶಂಭಾಜಿಯು ತನ್ನ 200 ಮಂದಿ ಸೈನಿಕರ ಬಲದಿಂದ ಎದುರಿಸಿದ್ದನು. ಸಂಗಮೇಶ್ವರದಲ್ಲಿ ನಡೆದ ಈ ಯುದ್ಧದಲ್ಲಿ ತನ್ನ ಕೊನೆಯ ಉಸಿರಿರುವವರೆಗೆ ಕಾಡಿಸಿದವನು ಮಾಲೋಜಿ ಘೋರ್ಪಡೆ. ತನ್ನ ತಂದೆಯ ಪರಾಕ್ರಮದ ಸಾಕ್ಷಿಯಾಗಿದ್ದ ಅವನ ಮಗ ಶಾಂತಾಜಿ ಘೋರ್ಪಡೆಯು ಔರಂಗಜೇಬನ ಕೊನೆಯನ್ನು ಕಾಣುವೆನೆಂದು ಪಣತೊಡುತ್ತಾನೆ. ಧನಾಜಿ ಯಾದವನೊಂದಿಗೆ ಶಾಂತಾಜಿ ತುಲಾಪುರ ಕೋಟೆಯ ಮೇಲೆ ಲಗ್ಗೆಯಿಡುತ್ತಾನೆ.

ಶಂಭಾಜಿಯ ಹತ್ಯೆ ನಡೆದುದು ಇದೇ ಕೋಟೆಯಲ್ಲಿ, ಔರಂಗಜೇಬನಿಗೆ ಆದ ಆಶ್ಚರ್ಯವೆಂದರೆ ಕೋಟೆಯನ್ನು ರಕ್ಷಿಸುತ್ತಿದ್ದ 1 ಲಕ್ಷ ಮೊಗಲ ಸೈನಿಕರನ್ನು ಎದುರಿಸಲು ಎದೆಗಾರಿಕೆ ತೋರಿಸಿದವರು 3 ಸಾವಿರ ಸೈನಿಕರು. ಹಿಂದವಿ ಸೈನಿಕರು ಕರುಣೆ ಇಲ್ಲದ ಸಿಂಹಗಳಂತೆ ಮೊಗಲ ಸೈನಿಕರನ್ನು ಕತ್ತರಿಸತೊಡಗಿದರು. ತುಲಾಪುರದ ಯುದ್ಧದ ನಂತರ ಮೊಗಲ ಸೈನಿಕರಿಗೆ ಹಿಂದವಿ ಸೈನಿಕರೆಂದರೆ ಯಮದೂತರಂತೆ ಕಾಣತೊಡಗಿದರು. ಯುದ್ಧದಲ್ಲಿ ಔರಂಗಜೇಬನು ಪ್ರಾಣ ಉಳಿಸಿಕೊಳ್ಳಲು ಕೋಟೆಯಿಂದ ತಪ್ಪಿಸಿಕೊಂಡು ಹೋಗಬೇಕಾಯಿತು. ಅಲ್ಲಿಗೆ ಮೊಗಲ ಸಾಮ್ರಾಜ್ಯದ ವೈಭವವು ಮಣ್ಣುಪಾಲಾಯಿತು. ಮರುದಿನ ಕೋಟೆಯ ತುಂಬ ಮೊಗಲ ಸೈನಿಕರ ತುಂಡರಿಸಿದ ಶವಗಳೇ ತುಂಬಿದ್ದವು.

ಇತಿಹಾಸ

ಎರಡು ದಿನಗಳು ಕಳೆಯುತ್ತಲೇ ಶಾಂತಾಜಿಯು ರಾಯಗಡ ಕೋಟೆಯ ಕಡೆಗೆ ಹೊರಟನು. ಶಂಭಾಜಿಯ ರಾಣಿಯನ್ನೂ ರಾಜಕುಮಾರನನ್ನೂ ಬಂಧಿಸಿದ ಜುಲಿಕ‌ ಖಾನನನ್ನು ಹಿಂದವಿ ಸೈನ್ಯವು ಸುತ್ತುವರಿಯಿತು. ಅಲ್ಲೆಲ್ಲಾ ಮೊಗಲರ ಹತ್ಯಾಕಾಂಡವು ನಡೆಯಿತು. ಅಲ್ಲಿಯ ಸಂಪತ್ತು, ಕುದುರೆಗಳು, ಆನೆಗಳೆಲ್ಲವೂ ಒಂದು ಸೈನ್ಯದ ಪಾಲಾಯಿತು. ಮುಂದಿನ ಸರದಿ ಮುಕಾರಾಮ್ ಖಾನನದ್ದು. ಅವನೇ ಶಂಭಾಜಿ ಮಹಾರಾಜನನ್ನು ಮೋಸದಿಂದ ಬಂಧಿಸಿದವನು. ಅದಕ್ಕಾಗಿ ಔರಂಗಜೇಬನು ಅವನಿಗೆ 20ಸಾವಿರ ಹೊನ್ನುಗಳ ಬಹುಮಾನವನ್ನು ನೀಡಿದ್ದನು. ಅಷ್ಟೇ ಅಲ್ಲದೆ ಅವನನ್ನು ಕೊಲ್ಲಾಪುರ ಮತ್ತು ಕೊಂಕಣದ ಗವರ್ನರನನ್ನಾಗಿ ನೇಮಿಸಿದ್ದನು. ಅವನನ್ನು ಜೀವ ಸಹಿತ ಬಿಡಲಾರೆವು ಎಂದು ಹಿಂದವಿ ಸೈನ್ಯವು ಪ್ರತಿಜ್ಞೆ ತೊಟ್ಟಿತು.

1698ರ ದಶಂಬರದಲ್ಲಿ ಶಾಂತಾಜಿ ಘೋರ್ಪಡೆಯು ಮುಕಾರಾಂ ಖಾನನನ್ನು ಎದುರಿಸಿದನು. ಅವನು ಸ್ವತಃ ತಾನೇ ಖಾನನ ಮೇಲೆ ಎರಗಿದನು. ಅವನ ಮೇಲೆ ನಡೆದ ಖಡ್ಗದ ಆಘಾತಗಳಿಂದ ಖಾನನು ಅರಣ್ಯದಲ್ಲಿ ಅವಿತಿರುವಾಗ ಪ್ರಾಣ ಬಿಟ್ಟನು.

ಛತ್ರಪತಿ ರಾಜಾರಾಮನು ಶಂತಾಜಿ ಘೋರ್ಪಡೆಯನ್ನು ಹಿಂದವಿ ಸೈನ್ಯದ ಸೇನಾಪತಿಯನ್ನಾಗಿ ನೇಮಿಸಿದನು. ಅದಾಗುತ್ತಲೇ ಶಂತಾಜಿಯು ತನ್ನ 15 ಸಾವಿರ ಸೈನಿಕರೊಂದಿಗೆ ಹೊರಟವನು ಮೊಗಲ ಸಾಮ್ರಾಜ್ಯದ ಕೋಟೆಗಳ ಮೇಲೆ ಭಗವಾ ಧ್ವಜವನ್ನು ಹಾರಿಸಲು ಶಕ್ತನಾದನು. 27ವರ್ಷ ದಕ್ಷಿಣದಲ್ಲಿದ್ದು ಶಿವಾಜಿ ಮಹಾರಾಜರ ಸಾಮ್ರಾಜ್ಯವನ್ನು ನಾಶಮಾಡುವನೆಂದು ಹೊರಟ ಔರಂಗಜೇಬನು ಬೀದಿ ನಾಯಿಯಂತೆ ಪ್ರಾಣ ಉಳಿಸಲು ಕೋಟೆ ಕೋಟೆಗಳನ್ನು ಸುತ್ತಿ ಇರಬೇಕಾಯಿತು. ಕೊನೆಗೂ ಔರಂಗಜೇಬನು ತನ್ನ ಪ್ರಾಣ ಉಳಿಸಲು ಓಡಾಡುತ್ತಾ ದಕ್ಷಿಣದಲ್ಲೇ ಪ್ರಾಣ ಬಿಡಬೇಕಾಯಿತು.

ಇತಿಹಾಸ

.