Hindu Vani
Index
ಕ್ಷೇತ್ರದರ್ಶನ
ಕೊಪ್ಪದ ಶ್ರೀ ಕಮಂಡಲ ಗಣಪತಿ ಕ್ಷೇತ್ರ
ಶ್ರೀಕಂಠ ಮಾತು ಯಸ್ಯ ಜನನೀ ಸರ್ವಮಂಗಳಾ |
ಜನಕ ಶಂಕರೋ ದೇವಃ ತಮ್ ವಂದೇ ಕುಂಜರಾನನಂ ||
ಪ್ರಕೃತಿಯ ಮಡಿಲ ಮಗುವಾಗಿ ಮನುಷ್ಯನು ಅದರೊಂದಿಗೆ ಬದುಕನ್ನು ಕಟ್ಟಿಕೊಂಡಿದ್ದಾನೆ. ತನ್ನ ಅಸ್ತಿತ್ವಕ್ಕೆ ಕಾರಣವಾದ ಪ್ರಕೃತಿಯನ್ನು ಧನಾತ್ಮಕ ಶಕ್ತಿಯಾಗಿ ವಿವಿಧ ರೂಪದಲ್ಲಿ ಅರಾಧಿಸುತ್ತಾ, ಅದರ ಉಳಿವೇ ತನ್ನ ಉಳಿವು ಎಂಬುದನ್ನು ಮನಗಂಡಿದ್ದಾನೆ. ಆದರೆ ಕೆಲವೊಮ್ಮೆ ಅದನ್ನು ಮರೆತು ಪ್ರಕೃತಿಯೊಡನೆ ಸ್ಪರ್ಧೆಗೆ ಇಳಿದು ತನ್ನ ಅಳಿವಿಗೆ ತಾನೇ ಕಾರಣನೂ ಆಗಿದ್ದಾನೆ.
ಪ್ರಕೃತಿಯೇ ತನ್ನ ಜೀವ, ಜೀವನದ ಮೂಲ ನಾಡಿ ಎಂಬುದನ್ನು ಅರಿತವರು ಅದರ ಉಳಿವಿನ ಬಗ್ಗೆ ಜಾಗೃತರಾಗಿರಲು ಅಲ್ಲಲ್ಲಿ ಗಾಳಿ, ನೀರು, ಮಣ್ಣು, ಕಲ್ಲು, ಬೆಟ್ಟಗುಡ್ಡ, ಮರಗಿಡಗಳನ್ನು ವಿವಿಧ ಹೆಸರಿನಿಂದ ಆರಾಧಿಸುವ ಪರಿಪಾಠ ಮಾಡಿಕೊಂಡಿದ್ದಾರೆ.
ವೈಜ್ಞಾನಿಕ ಕಾರಣಗಳನ್ನೊಳಗೊಂಡ ಇಂತಹ ಘಟನೆಗಳು ಮನುಷ್ಯನ ಧಾರ್ಮಿಕ ನಂಬಿಕೆಯೊಂದಿಗೆ ಆಧ್ಯಾತ್ಮಿಕ ನೆಲೆಯಲ್ಲೂ ಮಹತ್ವ ಪಡೆದಿದೆ. ಇಂತಹ ಮಹತ್ವದ ಘಟನೆಗೆ ಕಾರಣವಾದ ಕೊಪ್ಪದ ಶ್ರೀ ಕಮಂಡಲ ಗಣಪತಿ ಕ್ಷೇತ್ರವು. ಕರ್ನಾಟಕ ರಾಜ್ಯದ ಚಿಕ್ಕ ಮಗಳೂರಿನ ಕೊಪ್ಪ ಕ್ಷೇತ್ರದಲ್ಲಿದೆ. ಈ ದೇಗುಲವು ಬ್ರಾಹ್ಮನದಿಯ ಉಗಮ ಸ್ಥಾನವಾಗಿ, ಕಮಂಡಲದಿಂದ ತೀರ್ಥೋದ್ಭವದ ಕಾರಣ ಇಲ್ಲಿನ ಗಣಪನಿಗೆ ಕಮಂಡಲ ಗಣಪನೆಂದು ಕರೆಯಲಾಗುತ್ತದೆ.
ಪೌರಾಣಿಕ ಹಿನ್ನೆಲೆ:
ಒಮ್ಮೆ ಪರಶಿವನ ಪತ್ನಿ ಪಾರ್ವತಿಯು ಶನಿದೆಸೆಯಿಂದ ಸಂಕಷ್ಟಕ್ಕೆ ಸಿಲುಕಿದಳು. ಈ ಶನಿ ದೋಷದಿಂದ ಪಾರಾಗಲು ದೇವಾನು ದೇವತೆಗಳ ಸಲಹೆಯ ಮೇರೆಗೆ ತಪಸ್ಸು ಕೈಗೊಳ್ಳಲು ನಿರ್ಧರಿಸಿದಳು. ಅದರಂತೆ ಭೂಮಿಯ ವಿವಿಧ ಸ್ಥಳಗಳಲ್ಲಿ ಸಂಚರಿಸಿ, ಪ್ರಶಸ್ತ ಸ್ಥಳಕ್ಕಾಗಿ ಹುಡುಕಾಡುತ್ತಾ ಭೂಲೋಕವನ್ನು ತಲುಪಿದಳು. ಈ ಕ್ಷೇತ್ರದಿಂದ ಸುಮಾರು 18 ಕಿ.ಮೀ ದೂರದಲ್ಲಿನ ಮೃಗವಧೆ'ಯೆಂಬಲ್ಲಿ ತಪಸ್ಸನ್ನು ಕೈಗೊಂಡು, ಎಳ್ಳು ಅಮಾವಾಸ್ಯೆಯ ದಿನ ಶ್ರೀ ಗಣಪನನ್ನು ಇಲ್ಲಿ ಪ್ರತಿಷ್ಟಾಪಿಸಿ ಪೂಜಿಸಲು ಮುಂದಾದಳು. ಆದರೆ ಇಲ್ಲಿ ನೀರಿನ ಕೊರತೆಯುಂಟಾಗಲು ಬ್ರಹ್ಮ ದೇವನು ಈಕೆಯ ಸಹಾಯಕ್ಕೆ ಆಗಮಿಸಿದನು. ಕಮಂಡಲವೊಂದರಲ್ಲಿ ಪವಿತ್ರ ತೀರ್ಥವನ್ನು ಇಲ್ಲಿ ಪ್ರೋಕ್ಷಿಸಿದನಂತೆ.
ಹೀಗೆ ಪ್ರೋಕ್ಷಿಸಿದ 'ಕರ್ನಾಟಕದ ಕಾಶ್ಮೀರ' ವೆನಿಸಿದ ಸಮುದ್ರ ಮಟ್ಟದಿಂದ ಸುಮಾರು 763 ಮೀಟರ್ ಎತ್ತರದಲ್ಲಿರುವ ಸಹ್ಯಾದ್ರಿ ಬೆಟ್ಟಗಳ ತಪ್ಪಲಿನಲ್ಲಿರುವ ಚಿಕ್ಕ ಮಗಳೂರಿನ ಕೊಪ್ಪ ಕ್ಷೇತ್ರವು 1000 ವರ್ಷಗಳ ಇತಿಹಾಸವನ್ನು ಹೊಂದಿದೆ. ಕೊಪ್ಪದಿಂದ 4 ಕಿ.ಮೀ ದೂರದಲ್ಲಿರುವ ಈ ದೇಗುಲವು 'ಕಮಂಡಲ ತೀರ್ಥ' ಕ್ಷೇತ್ರವಾಗಿ ಕರ್ನಾಟಕದ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ.
ಶ್ರೀ ಕಮಂಡಲ ಗಣಪತಿ ದೇಗುಲ:
ಬ್ರಹ್ಮನಿಂದ ಸೃಷ್ಟಿಯಾದ ಬ್ರಾಹ್ಮ ನದಿಯು 8 ದಳದ ಕಮಂಡಲಾಕೃತಿಯ ಕಲ್ಲು ಬಂಡೆಯ ಮಧ್ಯೆ ಉಕ್ಕಿ ಹರಿಯುತ್ತಿದ್ದಾಳೆ. ಮಳೆಗಾಲದಲ್ಲಿ ತಾನು ಹರಿಯುವಾಗ ಇಲ್ಲಿ ಪಾರ್ವತಿದೇವಿಯಿಂದ ಪೂಜಿಸಲ್ಪಟ್ಟ ಗಣಪನ ಪಾದವನ್ನು ಸ್ಪರ್ಶಿಸುತ್ತಾಳೆ. ಹೀಗೆ ಇಲ್ಲಿನ ಗಣಪನು ಕಮಂಡಲ ಗಣಪನಾಗಿ ಪೂಜಿಸಲ್ಪಟ್ಟಿದ್ದಾನೆ. ಅಷ್ಟೇನು ವಿಶಾಲವಾಗಿಲ್ಲದ ಸುಂದರ ಕಂಬಗಳ ಪುಟ್ಟ ಮಂಟಪದಲ್ಲಿ ವಿಶೇಷ ಶಿಲೆಯಲ್ಲಿ ಗಣಪನು ಒಂದು ಕೈಯಲ್ಲಿ ಮೋದಕ ಮತ್ತೊಂದು ಅಭಯಹಸ್ತನಾಗಿ, ಯೋಗ ಮುದ್ರೆಯ ಸುಖಾಸನನಾಗಿ ಕುಳಿತ ಭಂಗಿಯಲ್ಲಿ ನೆಲೆ ನಿಂತಿದ್ದಾನೆ. ಕಮಂಡಲ ತೀರ್ಥದಲ್ಲಿ ಮಿಂದು ಇವನನ್ನು ಪೂಜಿಸಿದರೆ ಶನಿದೋಷ ನಿವಾರಣೆಯಾಗುತ್ತದೆ.
ಕಮಂಡಲ ತೀರ್ಥ:
ಬ್ರಹ್ಮನಿಂದ ಪ್ರೋಕ್ಷಣೆಗೊಂಡ ನೀರು ಕಮಂಡಲ ರೂಪದ ಶಿಲೆಯ ಮಧ್ಯೆ ನದಿಯಾಗಿ ಉಕ್ಕಿ ಹರಿಯುತ್ತಿದೆ. ಶನಿದೋಷ ನಿವಾರಣೆಗಾಗಿ ಪಾರ್ವತಿ ದೇವಿಯು ತಪಗೈದು ಪೂಜಿಸಿದ ಗಣಪನ ಪಾದದ ಬಳಿಯಲ್ಲಿರುವ ಕಮಂಡಲದಲ್ಲಿ ಉಕ್ಕುತ್ತಿರುವ ತೀರ್ಥವೇ ಕಮಂಡಲ ತೀರ್ಥ ಎಂದು ಕರೆಯಲಾಗಿದೆ. ಈ ನದಿಯಲ್ಲಿ ಮಿಂದು ಗಣಪನನ್ನು ಪೂಜಿಸಿದರೆ ಶನಿದೋಷ ನಿವಾರಣೆ ಯಾಗುತ್ತದೆಂದು ಭಕ್ತ ಜನರಿಂದ ನಂಬಲಾಗಿದೆ. ಅದಕ್ಕೆಂದೇ ವಿವಿಧ ಸ್ಥಳಗಳಿಂದ ಜನರು ಇಲ್ಲಿಗೆ ಬರುತ್ತಾರೆ.
ವಿದ್ಯಾರ್ಥಿಗಳು ಈ ತೀರ್ಥವನ್ನು ಸೇವಿಸಿದರೆ ವಿದ್ಯೆ ಉತ್ತಮವಾಗುತ್ತದೆಂದು ನಂಬಲಾಗುತ್ತದೆ. ಅಂತೆಯೇ ವಿದ್ಯಾಗಣಪನೆಂದು ಕರೆಯುತ್ತಾರೆ.
ಯಾತ್ರಿಕರಿಗೆ ಹೆಚ್ಚಿನ ಮಾಹಿತಿ
* ಈ ಕ್ಷೇತ್ರವು ಬೆಂಗಳೂರಿನಿಂದ ಸುಮಾರು 352 ಕಿ.ಮೀ ದೂರದಲ್ಲಿದೆ.
* ಕೊಪ್ಪ ಬಸ್ ನಿಲ್ದಾಣದಿಂದ ಸುಮಾರು 4 ಕಿ.ಮೀ ದೂರದಲ್ಲಿದೆ.
* ಈ ದೇಗುಲವು ಬೆಳಿಗ್ಗೆ 8 ಗಂಟೆಯಿಂದ 12 ರವರೆಗೆ ಮಾತ್ರ ತೆರೆದಿರುತ್ತದೆ. * ಪೂಜೆಗೆ ಬೆಳಗಿನ ವೇಳೆ ಉತ್ತಮ.
* ಗ್ರಹದೋಷ ನಿವಾರಣೆ, ವಿದ್ಯಾಭಿವೃದ್ಧಿಗೆ ಇಲ್ಲಿಗೆ ಭೇಟಿ ನೀಡುವುದರಿಂದ ಉತ್ತಮ ಫಲ ಎಂಬ ನಂಬಿಕೆ.
* ಸಂಕಷ್ಟ ಚತುರ್ಥಿಯಂದು ವಿಶೇಷ ಪೂಜೆ ನೆರವೇರುತ್ತದೆ.
* ಮಾರ್ಗಶಿರ ಮಾಸದ ಎಳ್ಳು ಅಮಾವಾಸ್ಯೆ ಇಲ್ಲಿ ವಿಶೇಷ ಮಹತ್ವ ಪಡೆದಿದೆ.
* ಇಲ್ಲಿಗೆ ಶೃಂಗೇರಿ, ಜೋಗ, ಹೊರನಾಡು, ಭದ್ರಾ ವನ್ಯಜೀವಿ ಸಂರಕ್ಷಣಾ ಕೇಂದ್ರ, ಹೆಬ್ಬೆ ಜಲಪಾತ, ಕಲ್ಲತ್ತಗಿರಿ ಜಲಪಾತ, ಹರಿಹರಪುರ, ಚಿಕ್ಕಮಗಳೂರುಗಳು ಹತ್ತಿರವಿರುವ ಪ್ರೇಕ್ಷಣೀಯ ಸ್ಥಳಗಳು,
ಯಾವುದಕ್ಕೆ ಈ ಆಧಾರ ಆಧಾರವಾಗಬೇಕು?
20250 ಮೇ 31ರಲ್ಲಿ ಭಾರತದ ಜನಸಂಖ್ಯೆಯು ಅಧಿಕೃತವಾಗಿ 141,22,25,700 ಅದೇ ದಿನದಲ್ಲಿ ಚಲಾವಣೆಯಲ್ಲಿದ್ದ ಆಧಾರ ಕಾರ್ಡುಗಳ ಸಂಖ್ಯೆಯು 142,20,62,032 ಅಂದರೆ ಜನಸಂಖ್ಯೆಗಿಂತಲೂ ಹೆಚ್ಚಿದ ಕಾರ್ಡುಗಳ ಸಂಖ್ಯೆ 98,32,332. ಪಶ್ಚಿಮ ಬಂಗಾಳ ರಾಜ್ಯದಲ್ಲಿ 10ಕೋಟಿ 42 ಲಕ್ಷ ಜನಸಂಖ್ಯೆಯಿದ್ದರೆ; ಆಧಾರ ಕಾರ್ಡುಗಳು 10 ಕೋಟಿ 99ಲಕ್ಷ. ಅಂದರೆ ರಾಜ್ಯದ ಜನಸಂಖ್ಯೆಗಿಂತ 57ಲಕ್ಷ ಆಧಾರ ಕಾರ್ಡುಗಳು ಹೆಚ್ಚಾಗಿ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಉಪಯೋಗದಲ್ಲಿವೆ.
ಈ ವಿಪರೀತವನ್ನು ಗಮನದಲ್ಲಿರಿಸಿಕೊಂಡೇ ಚುನಾವಣಾ ಆಯೋಗವು ಆಧಾರ ಕಾರ್ಡ್‌ನ್ನು ಚುನಾವಣಾ ವಿಚಾರದಲ್ಲಿ ಆಧಾರವಾಗಲು ಸಾಧ್ಯವಾಗದು ಎಂದಿದೆ. ಇದಕ್ಕಾ ಗಿಯೇ ರಾಜ್ಯದ ಮುಖ್ಯಮಂತ್ರಿಯು ಚುನಾವಣಾ ಆಯೋಗವು ಬಂಗಾಳಿಗಳ ವಿರೋಧಿ ಎಂದು ಕರೆದಿರುವುದು. ಈಗಿನ ಮಮತಾ ಸರ್ಕಾರವೂ ಹಿಂದಿನ ಎಡಚರ ಸರ್ಕಾರವೂ ಲಕ್ಷಾವಧಿ ಬಂಗ್ಲಾದೇಶಿ ಮುಸ್ಲಿಮರಿಗೆ ರೇಷನ್ ಕಾರ್ಡು, ವೋಟರ್ ಕಾರ್ಡು ಮತ್ತು ಕೊನೆಯದಾಗಿ ಆಧಾರ್ ಕಾರ್ಡುಗಳನ್ನು ವಿತರಿಸಿದೆ. ಇದು ಬಂಗ್ಲಾದೇಶೀ ನುಸುಳುಕೋರರು ಕರಾವಳಿ ಜಿಲ್ಲೆಗಳಲ್ಲೂ, ಗಡಿ ಜಿಲ್ಲೆಗಳಲ್ಲೂ ಅವರಿಚ್ಛೆಯಂತೆ ಬಂದು ನೆಲಸಲು ಆಸ್ಪದ ನೀಡಿದೆ. ಕೇಂದ್ರ ಸರ್ಕಾರವು ಈ ಕಾರಣದಿಂದಲೇ ರೋಹಿಂಗ್ಯಾ ಜನರೂ, ಬಂಗ್ಲಾದೇಶ ಮುಸ್ಲಿಮರೂ ಮತದಾತರಾಗುವುದನ್ನು ಕಟ್ಟು ನಿಟ್ಟಾಗಿ ವಿರೋಧಿಸುತ್ತದೆ.