Logo

VHP PUBLICATIONS

Hindu Vani


expand_more

ಪ್ರತಿಧ್ವನಿ

ಪ್ರತಿಧ್ವನಿ

ಆಗಸ್ಟ್ ಸಂಚಿಕೆಯ ಸಂಪಾದಕೀಯ

ಕಳೆದ ತಿಂಗಳ ಸಂಪಾದಕೀಯ ಹಿಂದು ವಿಘಟನೆಗೆ ಇನ್ನೊಂದು ಸನ್ನಾಹ ಯೋಚಿಸಬೇಕಾದ ವಿಚಾರ ಪೂರ್ಣ ಲೇಖನ. - ವಿಶ್ವೇಶ್ವರ ಗಾಯಿತ್ರಿ, ಬೆಂಗಳೂರು

ಅರ್ಥ ಗರ್ಭಿತ ಮುಖಪುಟ

ವಿಕಸಿತ ಭಾರತದ ಮುಖಪುಟವು ಅಹುದಹುದು ಎನ್ನುವಂತಿದೆ. - ಲಕ್ಷ್ಮೀನಾರಾಯಣ, ಉದ್ಯಾವರ

ಹಿಂದು ಧರ್ಮ ಭಾರತ ಮತ್ತು ಅಂಬೇಡ್ಕ‌ರ್

ಡಾ| ಬಾಬಾಸಾಹೇಬ ಅಂಬೇಡ್ಕರ್ ಅವರ ಹಲವು ಹೇಳಿಕೆಗಳು ಪ್ರಕಟವಾಗಲಿಲ್ಲ. ಇನ್ನು ಹಲವು ಬೆಳಕಿಗೆ ಬಂದರೂ ಅವು ತಪ್ಪು ತಪ್ಪಾಗಿ ಉಲ್ಲೇಖಗೊಂಡವು. ಅಂತಹ ಪರಿಸ್ಥಿತಿಯಲ್ಲಿ ಅವರು ಮತಾಂತರಗೊಳ್ಳುವ ನಿರ್ಧಾರದ ಅಕ್ಷರಶಃ ಹೇಳಿಕೆಯು ಹಿಂದುವಾಣಿಯಲ್ಲಿ ಪ್ರಕಟವಾದುದು ಸಮಯೋಚಿತವಾಗಿದೆ. ವಿಕ್ರಮಶೇಷ, ಯಡಿಯೂರು

ನೌಕಾಕ್ರಾಂತಿ

ಭಾರತದ ಸ್ವಾತಂತ್ರ್ಯಕ್ಕೆ ತಕ್ಷಣದ ಕಾರಣವಾದ ಅತಿ ಪ್ರಮುಖಘಟನೆ 'ನೌಕಾ ಕ್ರಾಂತಿ'ಯ ವಿವರಗಳು ಕೂತೂಹಲಕಾರಿಯಾಗಿದ್ದವು. ಸೀತಾರಾಮ ಶಾಸ್ತ್ರೀ, ಹುಬ್ಬಳ್ಳಿ

ಬಯ್ಯಪ್ಪನಹಳ್ಳಿ ಈಶ್ವರಯ್ಯ ಸುರೇಶ 

ಕಾರ್ಯಕರ್ತನೊಬ್ಬನ ವೈಯಕ್ತಿಕ ಹೊಣೆ, ವೃತ್ತಿ ವಲಯದಲ್ಲಿ ವರ್ತನೆ, ಸಂಬಂಧದ ಜವಾಬ್ದಾರಿ, ಕುಟುಂಬದ ಸದಸ್ಯರೊಡನೆ ವ್ಯಕ್ತಿಯ ನಿರ್ವಹಣೆ, ಮುಂಚೂಣಿಯಲ್ಲಿರುವ ಪ್ರಮುಖ ನಿರ್ಧಾರಗಳ ಕುರಿತು ಬರೆದ ಲೇಖನವು ಓರ್ವ ವ್ಯಕ್ತಿಯ ಕುರಿತು ಇರುವ ಮಾಹಿತಿಯೆಂದು ಕಾಣಲಿಲ್ಲ. ಸಾರ್ವಕಾಲಿಕ ವಿಚಾರವನ್ನು ಉಲ್ಲೇಖಿಸಿ ಬರೆದ ವಿಶ್ಲೇಷಣೆಯಂತಿತ್ತು. - ರಾಮ ನರಸಿಂಹ, ಮೈಸೂರು

ಸಂವಿಧಾನ ಶಬ್ದಾಡಂಬರದ ಸಂಪುಟವಲ್ಲ

ಡಾ| ಅಂಬೇಡ್ಕರ್‌ರವರು ಸೋಶಿಯಲಿಸ್ಟ್ ಮತ್ತು ಸೆಕ್ಯುಲರ್ ಶಬ್ದಗಳನ್ನು ಸಂವಿಧಾನದಲ್ಲಿ ಅಳವಡಿಸದಿರುವ ಕಾರಣವು ಹಿಂದುವಾಣಿಯ ಬರಹದಿಂದ ಅರ್ಥವಾಯಿತು.- ಅನಿರುದ್ಧ ರಾವ್, ಶಿವಮೊಗ್ಗ