Logo

VHP PUBLICATIONS

Hindu Vani


expand_more

ಕತೆಕತೆ ಕಾರಣ

ಪರರ ಒಳಿತಿಗಾಗಿ ಪ್ರಾಣ ಕೊಟ್ಟರು

ಅದೊಂದು ಕಾಲದಲ್ಲಿ ಒಳ್ಳೆಯ ಕೆಲಸ ಮಾಡುವವರನ್ನು, ಸತ್ಯವನ್ನೇ ನುಡಿಯುವವರನ್ನು ಮತ್ತು ಸಜ್ಜನರನ್ನು ದೇವತೆಗಳು ಎಂದು ಕರೆಯುತ್ತಿದ್ದರು. ಕ್ರೂರಿಗಳು, ಹಿಂಸೆ ಮಾಡುವವರು, ತಮ್ಮ ಲಾಭಕ್ಕಾಗಿ ಉಳಿದವರಿಗೆ ನೋವು ಕೊಡುವವರನ್ನು ರಾಕ್ಷಸರು ಎಂದು ಕರೆಯುತ್ತಿದ್ದರು. ಸಜ್ಜನರಿಗೂ ದುರ್ಜನರಿಗೂ, ನ್ಯಾಯಕ್ಕೂ, ಅನ್ಯಾಯಕ್ಕೂ ಹಗೆತನವಿರುವಂತೆ ದೇವತೆಗಳಿಗೂ ರಾಕ್ಷಸರಿಗೂ ಯಾವಾಗಲೂ ಯುದ್ಧಗಳಾಗುತ್ತಿದ್ದವು.

ಪ್ರತಿ ಯುದ್ಧದಲ್ಲೂ ದೇವತೆಗಳು, ಹೊಸ ಹೊಸ ಆಯುಧಗಳನ್ನು ತಯಾರಿಸುತ್ತಿದ್ದರು. ಆದರೆ ರಾಕ್ಷಸರು ಅವುಗಳನ್ನು ಪತ್ತೆಹಚ್ಚಿ ಅದೇ ರೀತಿಯ ಆಯುಧಗಳನ್ನು ತಾವೂ ಸಿದ್ಧಗೊಳಿಸುತ್ತಿದ್ದರು. ಮತ್ತು ಮತ್ತೆ ಯುದ್ಧಕ್ಕೆ ಬರುತ್ತಿದ್ದರು. ದೇವತೆಗಳಿಗೆ ತಮ್ಮ ಆಯುಧಗಳನ್ನು ರಾಕ್ಷಸರು ಹೋಗದ ಕಡೆ ಸುರಕ್ಷಿತವಾಗಿ ಇಡುವುದೇ ಬಹಳ ದೊಡ್ಡ ಪ್ರಶ್ನೆಯಾಗಿಬಿಟ್ಟಿತು.

ಕೊನೆಗೆ ಅವರಿಗೆ ದಧೀಚಿ ಋಷಿಯ ನೆನಪಾಯಿತು. ದಧೀಚಿ ಋಷಿಯು ಅಥರ್ವಣನೆಂಬ ಮಹರ್ಷಿಯ ಮಗ, ಅವರು ತಪಸ್ಸು ಮಾಡುವಲ್ಲಿ ಯಾವ ಕ್ರೂರಪ್ರಾಣಿಗಳು ಬರುತ್ತಿರಲಿಲ್ಲ. ಹಲವು ಕಾಡು ಮೃಗಗಳು ಅವನ ಆಶ್ರಮದ ಬಳಿ ಸ್ನೇಹದಿಂದ ಬದುಕುತ್ತಿದ್ದವು. ಅಲ್ಲಿಗೆ ರಾಕ್ಷಸರು ಹೋಗಲಾರರು ಎನ್ನುವ ನಂಬಿಕೆ ದೇವತೆಗಳದ್ದು. ಸರಿ ಅಲ್ಲಿಯೇ ತಮ್ಮ ಶಸ್ತ್ರಾಸ್ತ್ರಗಳನ್ನು ಇಟ್ಟುಬಿಡೋಣವೆಂದು ದೇವತೆಗಳು ನಿರ್ಧರಿಸಿದರು.

ಕತೆಕತೆ ಕಾರಣ

ತಮ್ಮ ಶಸ್ತ್ರಾಸ್ತ್ರಗಳನ್ನು ದಧೀಚಿ ಋಷಿಯ ಬಳಿ ತಂದ ದೇವತೆಗಳು “ಮಹರ್ಷಿಗಳೇ ನಮ್ಮ ಅಸ್ತ್ರಶಸ್ತ್ರಗಳನ್ನು ನಿಮ್ಮ ಆಶ್ರಮದಲ್ಲಿ ಇಟ್ಟುಬಿಡುತ್ತೇವೆ. ಅವುಗಳು ಇಲ್ಲಿದ್ದರೆ ಮಾತ್ರ ನಾವು ನಿರಾತಂಕವಾಗಿ ಇರಬಹುದು. ಯುದ್ಧದ ಸಮಯ ಬಂದರೆ ನಾವೇ ಬಂದು ಅವುಗಳನ್ನು ಕೊಂಡೊಯ್ಯುತ್ತೇವೆ. ಆವರೆಗೆ, ಅವು ಇಲ್ಲಿಯೇ ಇರಲಿ” ಎಂದರು. ದಧೀಚಿ ಋಷಿಗಳು 'ಸರಿ ಇರಲಿ ಬಿಡಿ' ಎಂದರು. ಬಹಳ ವರ್ಷಗಳೇ ಕಳೆದವು. ಯುದ್ಧಗಳೇ ನಡೆಯಲಿಲ್ಲ. ಏಕೆಂದರೆ ಹೊಸ ಆಯುಧಗಳ ಗುಟ್ಟು ರಾಕ್ಷಸರಿಗೆ ಸಿಗಲಿಲ್ಲ. ಆದರೆ ಇತ್ತ ದಧೀಚಿ ಋಷಿಗಳಿಗೆ ತೊಂದರೆಗಿಟ್ಟುಕೊಂಡಿತು. ಆಯುಧಗಳಿಗಾಗಿ ರಾಕ್ಷಸರು ಆಗೊಮ್ಮೆ ಈಗೊಮ್ಮೆ ಅವರ ಆಶ್ರಮದ ಬಳಿ ಹೊಂಚು ಹಾಕುತ್ತಿರುವುದು ಅವರಿಗೆ ತಿಳಿದುಬಂದಿತು.

ಅಷ್ಟೇ ಅಲ್ಲದೆ ದಿನಗಳೆದಂತೆ ಆಯುಧಗಳಿಗೆ ತುಕ್ಕು ಹಿಡಿಯುತ್ತದೆ ಎಂದು ದಧೀಚಿ ಋಷಿಗಳಿಗೆ ಅನಿಸಿತು. ಆಯುಧಗಳನ್ನು ಉಳಿಸಿಕೊಳ್ಳಬೇಕಾದರೆ, ಕೆಟ್ಟ ರಾಕ್ಷಸರ ಕಾಟ ಕಳೆಯಬೇಕಾದರೆ ಋಷಿಗಳಿಗೆ ಕಂಡುದು ಒಂದೇ ದಾರಿ! ಅವರು ತಮ್ಮ ತಪಸ್ಸಿನ ಶಕ್ತಿಯಿಂದ ಆ ಆಯುಧಗಳನ್ನು ಕರಗಿಸಿಬಿಟ್ಟರು. ಕರಗಿಸಿದ ಆಯುಧಗಳ ನೀರನ್ನು ಕುಡಿದು ಬಿಟ್ಟರು. ಈಗಂತೂ ಆಯುಧಗಳು ಋಷಿಯ ಎಲುಬುಗಳಲ್ಲಿ ಸೇರಿಹೋದವು. ಇನ್ನು ಯಾರೂ ಅವುಗಳನ್ನು ಕದಿಯುವಂತಿಲ್ಲ.

ಮತ್ತೆ ವರ್ಷಗಳೇ ಕಳೆದವು. ರಾಕ್ಷಸರು ದೇವತೆಗಳ ಬಳಿ ಆಯುಧಗಳೇ ಇಲ್ಲವೆಂದುಕೊಂಡರು. ಇದೇ ಸಮಯವೆಂದುಕೊಂಡು ಯುದ್ಧಕ್ಕೆ ಬಂದುಬಿಟ್ಟರು. ದೇವತೆಗಳೆಲ್ಲ ದಧೀಚಿ ಋಷಿಯ ಬಳಿ ಓಡೋಡಿ ಬಂದರು. “ಋಷಿಗಳೇ ನಮ್ಮ ಅಯುಧಗಳನ್ನು ಕೊಟ್ಟುಬಿಡಿ” ಎಂದರು. “ಈಗೆಲ್ಲಿವೆ ಆಯುಧಗಳು? ಅವನ್ನು ಕರಗಿಸಿ ನಾನು ಕುಡಿದುಬಿಟ್ಟೆ” ಎಂದರು ಋಷಿಗಳು. ದೇವತೆಗಳಿಗಂತೂ ಕಣ್ಣು ಕತ್ತಲೆ ಬಂದಂತಾಯಿತು. “ಇಲ್ಲ ಮಹರ್ಷಿಗಳೇ ನೀವು ಹೀಗೆಂದರೆ ನಾವು ಸೋತಂತೆಯೇ ಸರಿ” ಎಂದರು.

ಕತೆಕತೆ ಕಾರಣ

ಮಹರ್ಷಿ ಅವರ ಕಷ್ಟವನ್ನು ದಧೀಚಿ ಅರ್ಥಮಾಡಿಕೊಂಡರು. ಈ ಸಮಯದಲ್ಲಿ ಒಳ್ಳೆಯವರ ಕೈ ಬಿಡಬಾರದು ಎಂದುಕೊಂಡರು. ಒಂದು ಉತ್ತಮ ಉಪಾಯವನ್ನು ತಿಳಿಸಿಕೊಟ್ಟರು. ಅದರಿಂದ ದೇವತೆಗಳಿಗೆ ಆಯುಧಗಳೇನೋ ಸಿಗುತ್ತವೆ ಆದರೆ ಮಹರ್ಷಿಯು ತನ್ನ ಪ್ರಾಣ ಬಿಡಬೇಕಾಗುತ್ತದೆ. ಅದು ಹೇಗೆ? ದೇವತೆಗಳಿಗೆ ದಧೀಚಿ ಮಹರ್ಷಿ ಹೇಳಿದರು. “ಆ ಆಯುಧಗಳೆಲ್ಲ ಈಗ ನನ್ನ ಎಲುಬುಗಳಲ್ಲಿ ಸೇರಿಹೋಗಿವೆ. ನಾನೀಗ ಯೋಗ ತಪಸ್ಸಿನಲ್ಲಿ ಕೂತು ಈ ದೇಹದಿಂದ ಪ್ರಾಣವನ್ನು ಬಿಟ್ಟುಬಿಡುವೆ. ಆಗ ದೇಹವು ಸಾಯುತ್ತದೆ. ನೀವು ನನ್ನ ಎಲುಬುಗಳಿಂದಲೂ ಬೆನ್ನುಮೂಳೆಗಳಿಂದಲೂ ನಿಮ್ಮ ಆಯುಧವನ್ನು ಸಿದ್ಧಪಡಿಸಿ” ಎಂದರು. ಹಾಗೆಯೇ, ಹೇಳಿದಂತೆ ಮಾಡಿದರು ಕೂಡಾ!

ದೇವತೆಗಳಿಗೆ ಋಷಿಯ ಪರೋಪಕಾರದ ಗುಣವನ್ನು ಕಂಡು ಮಾತೇ ಹೊರಡಲಿಲ್ಲ. ಜೊತೆಗೆ ದುಃಖವೂ ಆಯಿತು. ಆದರೇನು ಮಾಡುವುದು? ಅವರು ದಧೀಚಿ ಋಷಿಯ ಎಲುಬುಗಳನ್ನು ತಮ್ಮ ಆಯುಧಗಳ ನಿರ್ಮಾಣ ಮಾಡುವ ತಂತ್ರಜ್ಞನಾದ ವಿಶ್ವಕರ್ಮನಿಗೆ ಕೊಟ್ಟರು. ವಿಶ್ವಕರ್ಮನು ಅವುಗಳಿಂದ ವಿವಿಧ ಆಯುಧಗಳನ್ನೂ, ಋಷಿಯ ಬೆನ್ನು ಮೂಳೆಯಿಂದ ವಜ್ರಾಯುಧವನ್ನೂ, ಸಿದ್ಧಪಡಿಸಿಕೊಟ್ಟನು.

ಕತೆಕತೆ ಕಾರಣ

ಆಗ ರಾಕ್ಷಸರ ನಾಯಕನಾಗಿದ್ದವನು ವೃತ್ರನೆಂಬುವನು. ಅವನು ಮಹಾ ಬಲಶಾಲಿ. ಅವನು ಭೂಮಿಯಿಂದ ಆಕಾಶದ ಅಗಲವನ್ನೆಲ್ಲ ಆವರಿಸುವಂತೆ ತನ್ನ ದೇಹವನ್ನು ಬೆಳೆಸಿದನು. ಅದು ಆಕಾಶವನ್ನು ಒಂದು ಜಮಖಾನೆಯಂತೆ, ಮುಚ್ಚಿಬಿಟ್ಟಿತು. ಎಲ್ಲೆಲ್ಲೂ ಕತ್ತಲು. ಅಂಧಕಾರ, ಕಪ್ಪು ಮೋಡವು ಕವಿದಂತೆ ಎಲ್ಲೂ ಬೆಳಕಿಲ್ಲ, ಗಾಳಿಯಿಲ್ಲ, ಎಲ್ಲರೂ ದಿಗ್ಗಾಂತರಾದರು.

ಆದರೆ ವಜ್ರಾಯುಧಕ್ಕೆ ಯಾವುದು ಎದುರು? ದೇವತೆಗಳು ಇಂದ್ರನ ನಾಯಕತ್ವದಲ್ಲಿ ಯುದ್ಧಕ್ಕೆ ಹೊರಟರು. ಇಂದ್ರನು ಕುಳಿತಿರುವುದು ಐರಾವತವೆಂಬ ಮಹಾ ಬಲಶಾಲಿ ಆನೆ. ಕೈಯಲ್ಲಿ ಹಿಡಿದುದು ಯಾರ ಬಳಿಯೂ ಇಲ್ಲದ ವಜ್ರಾಯುಧ. ಇಂದ್ರನು ವಜ್ರಾಯುಧವನ್ನು ಸೆಳೆದುದೇ ತಡ ಎಲ್ಲೆಲ್ಲೂ ಮಿಂಚಿನಂತೆ ಬೆಳಕು ಹರಿಯಿತು. ವೃತ್ತನ ದೇಹ ಪರ್‌ಪ‌ ಎಂದು ಸತ್ತ, ರಾಕ್ಷಸರು ಕಾಲಿಗೆ ಬುದ್ಧಿ ಹೇಳಿದರು. ಮತ್ತೆ ಬೆಳಕು ಬಂತುಋಷಿಯಿಂದ. ತನಗೆ ಕಷ್ಟವಾದರೂ ನೋವಾದರೂ ಅದನ್ನು ಉಪಕಾರವನ್ನು ತ್ಯಾಗ ಎಂದು ಕರೆಯುವರು.