Logo

VHP PUBLICATIONS

Hindu Vani


expand_more

ವಿಶ್ವಹಿಂದು ವಾರ್ತೆ

ವಿಶ್ವಹಿಂದು ವಾರ್ತೆ

ವಿಶ್ವ ಹಿಂದು ಪರಿಷದ್ ದಕ್ಷಿಣ ಪ್ರಾಂತ

91, ಧರ್ಮಶ್ರೀ, ಶಂಕರಮಠ ಸಮಾನಾಂತರ ರಸ್ತೆ, ಬೆಂಗಳೂರು

ಪ್ರಾಂತ ಬೈಠಕ್ ಚಿತ್ರದುರ್ಗ ಆಗಸ್ಟ್ 02-03, 2025

- ಬಿ ಈ ಸುರೇಶ, ಬೆಂಗಳೂರು, ಪ್ರಾಂತ ಕಾರ್ಯದರ್ಶಿ, ಕರ್ನಾಟಕ ದಕ್ಷಿಣ ಪ್ರಾಂತ


ವಿಶ್ವ ಹಿಂದು ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ ಬೈಠಕ್ ಚಿತ್ರದುರ್ಗದಲ್ಲಿ ಆಗಸ್ಟ್ 02 ಮತ್ತು 03, 2025 ರಂದು ಸಂಪನ್ನ ವಾಯಿತು. ಕೇಂದ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಸ್ಥಾನು ಮಾಲಯನ್ ಪರಿಷದ್ ಅಧ್ಯಕ್ಷರಾದ ದೀಪಕ್ ರಾಜಗೋಪಾಲ್, ಉಪಾಧ್ಯಕ್ಷರಾದ ಟಿ ಎ ಪಿ ಶೆಣಯ್ ಮತ್ತು ಕುಸುಮ, ಕ್ಷೇತ್ರ ಧರ್ಮ ಪ್ರಸಾರ ಪ್ರಮುಖ್ ಸೂರ್ಯನಾರಾಯಣ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯವಾಹ ಜಯಪ್ರಕಾಶ್, ಕ್ಷೇತ್ರೀಯ ಅಧಿಕಾರಿಗಳಾದ ಮಹಾಬಲೇಶ್ವರ, ಜಗನ್ನಾಥ ಶಾಸ್ತ್ರಿ ಮತ್ತು ಪ್ರಾಂತ ಕಾರ್ಯದರ್ಶಿ ಹಾಗು ಸಹ ಕಾರ್ಯದರ್ಶಿಗಳೆಲ್ಲರೂ ಉಪಸ್ಥಿತರಿದ್ದರು. ಪ್ರಾಂತ, ವಿಭಾಗ, ಜಿಲ್ಲಾ ಪದಾಧಿಕಾರಿಗಳೆಲ್ಲರೂ ಸೇರಿ ಒಟ್ಟು 293 ಕಾರ್ಯಕರ್ತರು ಎರಡು ದಿನಗಳ ಕಾಲ ಭಾಗವಹಿಸಿದ್ದರು.

ಆಗಸ್ಟ್ 2 ರಂದು ಬೆಳಿಗ್ಗೆ 10 ಗಂಟೆಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಂತ ಸೇವಾ ಲಾಲ ಸ್ವಾಮೀಜಿ ಅವರು ಮಾತನಾಡಿ, ಹಿಂದುಗಳೆಲ್ಲರೂ ಒಗ್ಗಟ್ಟಾಗಬೇಕು, ಇಲ್ಲವಾದರೆ ಧರ್ಮಕ್ಕೆ ಉಳಿಗಾಲವಿಲ್ಲ, ಚಿತ್ರದುರ್ಗದ ಹಿಂದೂ ಮಹಾಗಣಪತಿ ಪ್ರಾರಂಭದ ಮೊದಲು, ಭಯದಲ್ಲಿ ಜೀವನ ಮಾಡುವ ಸ್ಥಿತಿ ನಮ್ಮಲ್ಲಿ ಇದ್ದಿತು. ಆಗ ನಾವು ಕೇವಲ 15 ಜನ ಇದ್ದೆವು. ಈಗ 3 ಲಕ್ಷ ಜನ ಭಾಗವಹಿಸುತ್ತಾರೆ. ಹಿಂದೂ ಗಳಿಗೆ ಸ್ವಾಬಿಮಾನ ಜಾಗೃತವಾಗಿದೆ ಈಗ ಎಲ್ಲ ಕಾರ್ಯಕರ್ತರು ಉತ್ಸಾಹ ದಿಂದ ಕೆಲಸ ಮಾಡಬೇಕೆಂದು ಕರೆ ನೀಡಿದರು. ಪ್ರಾಂತ ಕಾರ್ಯದರ್ಶಿಗಳಾಗಿದ್ದ ಜಗನ್ನಾಥ ಶಾಸ್ತ್ರೀ ಅವರು ಆರು ತಿಂಗಳ ವರಿಷದ್ ವರದಿ ನೀಡಿದರು. ಹೊಸ ಕಾರ್ಯದರ್ಶಿ ಬಿ .ಈ. ಸುರೇಶ ಅವರಿಗೆ ಜವಾಬ್ದಾರಿ ಯನ್ನು ಹಸ್ತಾಂತರಿಸಿದರು. ಅಧ್ಯಕ್ಷರಾದ ದೀಪಕ್ ರಾಜಗೋಪಾಲ್ ಅವರು ಮಾತಾಡಿ ಚಿತ್ರದುರ್ಗದ ಕೋಟೆಯಂತೆ ಹಿಂದೂಗಳ ಒಗ್ಗಟಿನ ಎಳು ಸುತ್ತಿನ ಕೋಟೆಯನ್ನು ನಾವು ಎಲ್ಲ ಸೇರಿ ಕಟ್ಟೋಣ ಎಂದು, ಮುಂದೆ ಇರುವುದು ಸುವರ್ಣ ಅವಕಾಶ ಎಂದು ಹೇಳಿದರು.

2. ಮುಂದಿನ ಅವಧಿಯಲ್ಲಿ ಬಜರಂಗದಳ, ದುರ್ಗಾ ವಾಹಿನಿ, ಮಾತೃ ಶಕ್ತಿ, ಧರ್ಮ ಪ್ರಸಾರ, ವಿಶೇಷ ಸಂಪರ್ಕ, ಮಂದಿರ ಅರ್ಚಕ ಪುರೋಹಿತ್‌ ಸಂಪರ್ಕ, ಪ್ರಚಾರ ಪ್ರಸಾರ ಆಯಾಮಗಳು ಆರು ತಿಂಗಳ ವರದಿ ನೀಡಿದವು.

ನಂತರ ಅವಧಿಯನ್ನು ತೆಗೆದುಕೊಂಡ ಜಯಪ್ರಕಾಶ್ ಅವರು ಮಾತನಾಡುತ್ತಾ ಸಂಘವು ಮಾಡುತ್ತದೆ ಎಂದಿಲ್ಲ. ಕಾರ್ಯಕರ್ತನು ಎಲ್ಲವನ್ನು ಮಾಡುತ್ತಾನೆ. ಮಾಡು ಇಲ್ಲವೇ ಮಡಿ ಎನ್ನುವುದು ನಮ್ಮ ಸಿದ್ಧಾಂತ ವಲ್ಲ. ಮಾಡು ಮತ್ತು ಜೀವಿಸು ಇದು ನಮ್ಮ ಸಿದ್ಧಾಂತ, ಈ ದೇಶದ ಸಂಸ್ಕೃತಿಯನ್ನು ನಾಶ ಮಾಡಲು ಪ್ರಯತ್ನಿಸಿ ಸ್ವಲ್ಪ ಯಶಸ್ವಿಯೂ ಆದ "I have travelled all over India, there are no beggars and thieves in this country, but I will see that they will be produced by our english system” ಎಂದು ನುಡಿದು ಸ್ವಲ್ಪ ಯಶಸ್ವಿಯೂ ಆದ. ಈಗ ನಮ್ಮ ಸಂಸ್ಕೃತಿಯನ್ನು ಪರಂಪರೆ ಯನ್ನು ನಾವೇ ಉಳಿಸಬೇಕು. ನಮ್ಮ ದರ್ಶನ ಶಾಸ್ತ್ರಗಳು, ಉಪನಿಷದ್ ಎಲ್ಲವು ಸಂವಾದ ಮಾಡುತ್ತಾ ಮಾಡುತ್ತ ಹೊಸದನ್ನು ನೀಡಿವೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರನೇ ವರ್ಷದ ಈ ಕಾಲದಲ್ಲಿ ನಾವೆಲ್ಲರೂ, ಸಾಮಾಜಿಕ ಸದ್ಭಾವನಾ ಬೈಠಕ್. ಯುವಕರ ಸಮಾವೇಶ, ವಸತಿಶಃ ಹಿಂದೂ ಸಮಾವೇಶ, ಪಥ ಸಂಚಲನ, ಮನೆ ಮನೆ ಸಂಪರ್ಕ ಎಲ್ಲದರಲ್ಲೂ ಕಾರ್ಯಕರ್ತರಾಗಿ ದುಡಿದರೆ ನಮ್ಮ ಸಂಘಟನೆಗೆ ಹೊಸ ಕಾರ್ಯಕರ್ತರು ದೊರಕುತ್ತಾರೆ ಎಂದು ನುಡಿದರು.

ಮುಂಬರುವ ಪರಿಷದ್ ಸ್ಥಾಪನಾ ದಿನ, ಅಖಂಡ ಭಾರತ ದಿನ, ದುರ್ಗಾಷ್ಟಮಿ. ಡಿಸೆಂಬರ್ ನಲ್ಲಿ ಶೌರ್ಯ ದಿವಸ, ಧರ್ಮ ರಕ್ಷಕ ದಿನ, ಸಾಮರಸ್ಯ ದಿನ ಇವುಗಳ ಬಗ್ಗೆ ವಿವರಗಳು ದೊರೆತವು. ಮುಂದೆ ಆಯಾಮಗಳ ಬೈಠಕ್ ನಡೆಯಿತು. ಸತ್ಸಂಗ ಹಾಗು ವಿಭಾಗಶಃ ಬೈಠಕ್ ನಡೆಯಿತು. ಭಾನುವಾರದಂದು ಬೆಳಿಗ್ಗೆ ಏಕಾತ್ಮತಾ ಸ್ತೋತ್ರದೊಂದಿಗೆ ಕಲಾಪಗಳು ಪ್ರಾರಂಭವಾದವು.

ಸ್ಥಾಣು ಮಾಲಯನ್ ಅವರು ಕೇಂದ್ರ ಬೈಠಕ್‌ನ ವರದಿ ಯನ್ನು ಹೇಳಿದರು. ಕೇಂದ್ರದಲ್ಲಿ ಈಗ 1210 ಜಿಲ್ಲೆಗಳು ಇವೆ. 10444 ಪ್ರಖಂಡಗಳು ಇವೆ. ಒಟ್ಟು ಸಮಿತಿಗಳು 80143. ನಮ್ಮ ಆಯಾಮಗಳು ಈಗ ಹೆಚ್ಚಾಗುತ್ತಿವೆ. ಎಲ್ಲ ಆಯಾಮಗಳಿಗೂ ನಾವು ಕಾರ್ಯಕರ್ತರನ್ನು ಹುಡುಕಬೇಕು. ಖಂಡ ಮಟ್ಟದ ಸಮಿತಿ, ಸತ್ಸಂಗಗಳನ್ನು ಹೆಚ್ಚಿಸಬೇಕು ಎಂದು ಮಾರ್ಗದರ್ಶನ ಮಾಡಿದರು.

ವಿಶ್ವಹಿಂದು ವಾರ್ತೆ

ಬೆಳಿಗ್ಗೆ 10 ಗಂಟೆಗೆ ಟಿ. ಎ .ಪಿ ಶೆಣಯ್ ಅವರು ರಾಷ್ಟ್ರ ವಾದ ದ ಬಗ್ಗೆ ಬೌದ್ಧಿಕ್ ನೀಡಿದರು. ನಮ್ಮೆಲ್ಲರಿಗೂ ಬಹಳ ಹತ್ತಿರವಾದ ವ್ಯಕ್ತಿ ತಾಯಿ. ಎತ್ತರವಾಗಿ ಕಾಣುವವರು ತಂದೆ. ಈ ಭಾರತ ನಮಗೆ ತಾಯಿ, ದೇಶವನ್ನು ಅಮ್ಮ ಎನ್ನುವುದು ನಾವು ಮಾತ್ರ. ಇವಳಿಗಾಗಿ ನಾವು ಜೀವಿಸಬೇಕು. ರಾಷ್ಟ್ರದ ಅಸ್ತಿತ್ವವು ಒಂದು ಪ್ರಜ್ಞೆ ಆಥರ್ವ ವೇದದಲ್ಲಿ ರಾಷ್ಟ್ರ ಅನ್ನುವುದು ಬರುತ್ತದೆ, ಉತ್ತರಂ ಯತ್ ಸಮುದ್ರಸ್ಯ ಎನ್ನುವುದು ವಿಷ್ಣು ಪುರಾಣದಲ್ಲಿ ಬರುತ್ತದೆ. ಹಿಂದೆ ಯಾವ ಹುಚ್ಚ ಈ ದೇಶವನ್ನು ಹಿಂದೂ ರಾಷ್ಟ್ರ ಎನ್ನುತ್ತಾನೆ ಎಂದಾಗ, ನಾನು ಡಾ|| ಕೇಶವ ಬಲಿರಾಮ ಹೆಡಗೇವಾರ್ ಘೋಷಿಸುತ್ತೇನೆ ಇದು ಹಿಂದೂ ರಾಷ್ಟ್ರ ಎಂದು ಪ್ರಥಮ ಸರ ಸಂಘಚಾಲಕರು ನುಡಿದರು. ಸುಲ್ತಾನರು ಕಾಶಿ ವಿಶ್ವನಾಥನ ದರ್ಶನಕ್ಕೆ ಜೆಜಿಯ ತೆರಿಗೆ ಹಾಕಿದ್ದರು. ಹೊಯ್ಸಳ ರಾಜ ವೀರ ಬಲ್ಲಾಳನು ಕಾಶಿ ದರ್ಶನಕ್ಕೆ ಕೊಡಬೇಕಾದ ಜೆಜಿಯ ತೆರಿಗೆಯನ್ನು ಎಲ್ಲ ಭಕ್ತರ ಪರವಾಗಿ ಕಟ್ಟುತ್ತಿದ್ದ. ಸಿಖ್ ರಾಜ ರಣಜಿತ್ ಸಿಂಹ ಕಾಶಿ ವಿಶ್ವೇಶ್ವರನ ಗೋಪುರಕ್ಕೆ ಹದಿನಾಲ್ಕು ಮಣ ಚಿನ್ನದ ಹೊದಿಕೆ ಹೊದಿಸಿದ. ಶಿವಾಜಿ ತಾನು ಕೊಂದ ಆಫೂಲ್ ಖಾನನ ದೇಹದ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದರೆ, ವಿಜಯನಗರದ ಎಪ್ಪತ್ತೆಂಟು ವರ್ಷದ ರಾಮರಾಯನನ್ನು ಕೊಂದ ಸುಲ್ತಾನರು ಅವನ ತಲೆಯನ್ನು ಚರಂಡಿಯ ನೀರು, ಅವನ ಬಾಯಿಯಲ್ಲಿ ಹೋಗುವಂತೆ ಇಟ್ಟಿದ್ದರು. ಇದು ನಮ್ಮ ಹಾಗು ಅವರ ಸಂಸ್ಕೃತಿ ಗೆ ಇರುವ ವ್ಯತ್ಯಾಸ. ರಾಷ್ಟ್ರೀಯತೆಯನ್ನು ಉಳಿಸಲು ನಾವೆಲ್ಲಾ ಕಟಿ ಬದ್ಧರಾಗೋಣ ಎಂದು ನುಡಿದರು.

ಎಲ್ಲ ಜಿಲ್ಲಾ ಕಾರ್ಯದರ್ಶಿಗಳು ತಮ್ಮ ಜಿಲ್ಲೆಯ ಆರು ತಿಂಗಳ ವರದಿಯನ್ನು ನೀಡಿದರು. ನಂತರ ಪ್ರಾಂತ ದ ಕೆಳಗಿನ ಮೂರು ನಿರ್ಣಯಗಳನ್ನು ಪ್ರಸ್ತಾವಿಸಿ ಅನುಮೋದಿಸಲಾಯಿತು.

ಬಡವರಿಗೆ ನೀಡುವ ವಸತಿ ಕಟ್ಟಡ ಹಾಗೂ ಗುತ್ತಿಗೆ ನೀಡುವ ಪ್ರಕ್ರಿಯೆಯಲ್ಲಿ, ಅಸಂವಿಧಾನಿಕ ಮುಸ್ಲಿಂ ಮೀಸಲಾತಿಯನ್ನು ಕರ್ನಾಟಕ ರಾಜ್ಯ ಸರ್ಕಾರ ಹಿಂತೆಗೆದು ಕೊಳ್ಳಬೇಕು. ಹಿಂದೂ ದೇವಾಲಯಗಳನ್ನು ಸರ್ಕಾರ ತನ್ನ ಹಿಡಿತದಿಂದ ಕೈ ಬಿಟ್ಟು, ಹಿಂದೂ ಸಮಾಜವೇ ನಿರ್ವಹಣೆ ಮಾಡಲು ಅವಕಾಶ ಮಾಡಿಕೊಡಬೇಕು.

ಹಿಂದೂ ಸಮಾಜದ ವಿಘಟನೆಗಾಗಿ ಪ್ರಯತ್ನಿಸುತ್ತಿರುವ ಎಲ್ಲ ದೇಶ ದ್ರೋಹಿ ಶಕ್ತಿಗಳ ವಿರುದ್ಧ ಎಲ್ಲ ಹಿಂದೂ ಗಳು ಎಚ್ಚರಗೊಂಡು ಸಶಕ್ತ ಸಂಘಟಿತ ಶಕ್ತಿ ಯಾಗಿ ಹೊರಹೊಮ್ಮಬೇಕು.

ಸಾಯಂಕಾಲ ಸಮಾರೋಪ ಕಾರ್ಯಕ್ರಮದಲ್ಲಿ ಮಾದಾರ ಚೆನ್ನಯ ಮಠದ ಪೂಜ್ಯ ಸ್ವಾಮೀಜಿ ಅವರು ಧರ್ಮಕಾಯಕಲ್ಪಕ್ಕೆ ಕರೆ ನೀಡಿದರು.

ಸಮಾರೋಪದಲ್ಲಿ ಶ್ರೀ ದೀಪಕ್ ರಾಜಗೋಪಾಲ್ ಅವರು, ಎರಡು ದಿನಗಳ ಬೈಠಕ್ ನಲ್ಲಿ, ಮಾತೆಯರು ತಮ್ಮ ಸ್ವಂತ ಮನೆ. ಕೆಲಸ ಬಿಟ್ಟು ಸ್ವಂತ ಖರ್ಚಿನಲ್ಲಿ ಬಂದು ಭಾಗವಹಿಸಿದ್ದಕ್ಕೆ ಅಭಿನಂದಿಸಿದರು. ನಮ್ಮ ಕೆಲಸ ಕಾರ್ಯಗಳ ಜೊತೆಗೆ ಸಂಘಟನೆಗಾಗಿ ಹೆಚ್ಚು ಹೆಚ್ಚು ಸಮಯ ಜೋಡಿಸಿಕೊಳ್ಳಲು ಕರೆ ನೀಡಿದರು. ಸ್ಥಾನು ಮಾಲಯನ್ ಅವರು ಸಮಾರೋಪ ಬೌದ್ಧಿಕ್ ನಡೆಸಿಕೊಟ್ಟರು

ಎಲ್ಲ ಪ್ರತಿನಿಧಿ ಗಳ ಭೋಜನ, ವಸತಿ ವ್ಯವಸ್ಥೆಗಳನ್ನು ಚಿತ್ರದುರ್ಗದ ಕಾರ್ಯಕರ್ತರು ಅಚ್ಚು ಕಟ್ಟಾಗಿ ಮಾಡಿದ್ದರು.

ಘೋಷಣೆಯಾದ ಜವಾಬ್ದಾರಿಗಳು


ಪ್ರಾಂತ ಸಹ ಪ್ರಚಾರ ಪ್ರಸಾರ ಪ್ರಮುಖ್ - ಪ್ರದೀಪ್‌ ಸರಿಪಲ್ಲ  

ಪ್ರಾಂತ ಸಹ ಪ್ರಚಾರ ಪ್ರಸಾರ ಪ್ರಮುಖ್ - ಪ್ರಣವ್ ಭರದ್ವಾಜ

ಪ್ರಾಂತ ಸಹ ಸಾಮರಸ್ಯ ಪ್ರಮುಖ್ - ಕಶ್ಯಪ್

********************

ಬೆಂಗಳೂರು ದಕ್ಷಿಣ ವಿಭಾಗ 

ಸತ್ಸಂಗ ಪ್ರಮುಖ್‌ - ಕಮಲಮ್ಮ

ಬಜರಂಗ ದಳ ಸಂಯೋಜಕ್ - ಭರತ್

ಮೈಸೂರು ವಿಭಾಗ 

ವಿಶೇಷ ಸಂಪರ್ಕ ಪ್ರಮುಖ್ - ಶಿವರಾಂ

ತುಮಕೂರು ವಿಭಾಗ 

ಬಜರಂಗದಳ ಸಂಯೋಜಕ್ - ಕೆ.ಎನ್. ಕಿರಣ್

ಹಾಸನ ವಿಭಾಗ 

ಬಜರಂಗದಳ ಸಹ ಸಂಯೋಜಕ್ - ಶ್ಯಾಮ್

********************

ಯಲಹಂಕ ಜಿಲ್ಲಾ 

ಸಹ ಕಾರ್ಯದರ್ಶಿ - ಅಶೋಕ್ ರಾಜ್

ದಾಸರ ಹಳ್ಳಿ ಜಿಲ್ಲೆ 

ಕಾರ್ಯಕಾರಣಿ ಸದಸ್ಯ - ಸ್ವಾಮಿನಿ ಉತ್ತೇಷ ಭಾರತೀ 

ದುರ್ಗಾವಾಹಿನಿ - ಐಶ್ವರ್ಯ

ಹೆಬ್ಬಾಳ ಜಿಲ್ಲೆ 

ಮಾತೃ ಶಕ್ತಿ ಸಂಯೋಜಕಿ - ಶ್ಯಾಮಲಾ

ಮಂದಿರ ಅರ್ಚಕ ಪುರೋಹಿತ್‌ ಸಂಪರ್ಕ  - ಅಂಬರೀಶ್

ಬಜರಂಗದಳ ಸಂಯೋಜಕ  - ಸುಧಾಕರ

ಬಜರಂಗದಳ ಸಹ ಸಂಯೋಜಕ - ಭಾಸ್ಕರ

ಗೋರಕ್ಷಾ ಪ್ರಮುಖ - ಹರಿಸಿಂಗ್

ವಿಶೇಷ ಸಂಪರ್ಕ ಪ್ರಮುಖ್‌ - ಭಗವಾನ್ ಮಂಗಳ


ವಿಜಯ ನಗರ ಜಿಲ್ಲೆ 

ಸಹ ಸತ್ಸಂಗ ಪ್ರಮುಖ - ಶೋಭಾ ದೇವಿ


ಮಾರತ್ ಹಳ್ಳಿ ಜಿಲ್ಲೆ 

ಸತ್ಸಂಗ ಪ್ರಮುಖ್‌ - ಕನಿಷ್ಠ ಭಟ್

ಪ್ರಚಾರ ಪ್ರಸಾರ ಪ್ರಮುಖ್ - ಸಾಮ್ರಾಟ್

ಗೋರಕ್ಷ - ಉಮೇಶ್


ಚಂದಾಪುರ ಜಿಲ್ಲೆ

ಉಪಾಧ್ಯಕ್ಷರು - ತ್ಯಾಗರಾಜ್ 

ಕೋಶಾಧ್ಯಕ್ಷರು  - ರಾಮಮೂರ್ತಿ 

ಕಾರ್ಯದರ್ಶಿ - ಗಣಪತಿ ಭಟ್


ಬನಶಂಕರಿ ಜಿಲ್ಲೆ 

ಮಾತೃ ಶಕ್ತಿ ಪ್ರಮುಖ್ - ಪುಷ್ಪ

ಧರ್ಮ ಪ್ರಸಾರ  - ಅರುಣ್

ದುರ್ಗಾವಾಹಿನಿ ಸಂಯೋಜಕಿ - ಅಪೂರ್ವ


ಹಲಸೂರು ಜಿಲ್ಲೆ 

ಮಂದಿರ ಅರ್ಚಕ ಪುರೋಹಿತ್ ಸಂಪರ್ಕ - ಸುಧಾಕರ


ಮಲ್ಲೇಶ್ವರ ಜಿಲ್ಲೆ 

ಮಂದಿರ ಅರ್ಚಕ ಪುರೋಹಿತ್‌ ಸಂಪರ್ಕ - ಸುರೇಶ ಬಾಬು


ಬಸವೇಶ್ವರ ಜಿಲ್ಲೆ 

ಸತ್ಸಂಗ ಪ್ರಮುಖ್‌ - ವಿಜಯ್ ಪೆನಕೊಂಡ

ದುರ್ಗಾವಾಹಿನಿ - ಶಾರ್ವರಿ


ಬೆಂಗಳೂರು ಗ್ರಾಮಾಂತರ 

ಮಾತೃ ಶಕ್ತಿ ಸಂಯೋಜಕಿ - ವೀಣಾ

ದುರ್ಗಾವಾಹಿನಿ - ರಂಜಿತಾ

ಧರ್ಮ ಪ್ರಸಾರ - ಮಹೇಶ್

ಪ್ರಚಾರ ಪ್ರಸಾರ - ಕುಶಾಲ್

ಗೋರಕ್ಷಾ - ಗಂಗಾಧ‌ರ್‌


ಶಂಕರಪುರ ಜಿಲ್ಲೆ

ಸಹ ಕಾರ್ಯದರ್ಶಿ - ಮಣಿಕಂಠ

ಬಜರಂಗದಳ ಸಂಯೋಜಕ್ - ರವಿಚಂದ್ರ

ಸಹ ಸಂಯೋಜಕ್ - ಸಾಗ‌ರ್‌


ಶಿವಮೊಗ್ಗ ಜಿಲ್ಲಾ 

ಬಜರಂಗದಳ ಸಂಯೋಜಕ್ - ಸಂದೀಪ್


ಚಿಕ್ಕಮಗಳೂರು ಜಿಲ್ಲಾ

ಜಿಲ್ಲಾ ಉಪಾಧ್ಯಕ್ಷರು - ಸಾಲುಮರದ ಮಹೇಶ್

ಜಿಲ್ಲಾ ಮಾತೃ ಶಕ್ತಿ - ಪುಷ್ಪ ಮೋಹನ್

ವಿಶೇಷ ಸಂಪರ್ಕ - ಮಂಜುನಾಥ್ ಜೈನ

ಧರ್ಮಾಚಾರ್ಯ ಸಂಪರ್ಕ - ಶಿವಣ್ಣ


ಹಾಸನ ಜಿಲ್ಲೆ 

ಕೋಶಾಧ್ಯಕ್ಷರು - ಸಾಯಿ ಪ್ರಸಾದ್


ರಾಮನಗರ ಜಿಲ್ಲೆ

ಜಿಲ್ಲಾ ಕಾರ್ಯದರ್ಶಿ - నిధి  

ಜಿಲ್ಲಾ ಬಜರಂಗದಳ ಸಂಯೋಜಕ್ - ರಮೇಶ್ ನಾಯಕ್

ಜಿಲ್ಲಾ ಬಜರಂಗದಳ ಸಹ ಸಂಯೋಜಕ್ - ಭರತ್ ಗೌಡ 

ಜಿಲ್ಲಾ ಸಾಮರಸ್ಯ - ಜಯಣ್ಣ


ಮೈಸೂರು ಗ್ರಾಮಾಂತರ ಜಿಲ್ಲೆ

ಮಾತೃ ಶಕ್ತಿ ಸಹ ಪ್ರಮುಖ್ - ಭಾಗ್ಯ


ತುಮಕೂರು ಜಿಲ್ಲೆ

ಕಾರ್ಯದರ್ಶಿ - ಎಸ್ ಆರ್ ಸುಧೀರ್


ತಿಪಟೂರು ಜಿಲ್ಲೆ 

ಕಾರ್ಯದರ್ಶಿ - ಉದಯ ಕುಮಾರ


ಸಾಗರ ಜಿಲ್ಲೆ 

ಜಿಲ್ಲಾ ಉಪಾಧ್ಯಕ್ಷರು  - ಅಣ್ಣಪ್ಪ 

‌ ಜಿಲ್ಲಾ ಕೋಶಾಧ್ಯಕ್ಷರು  - ಪ್ರೇಮಕುಮಾರ್

ಜಿಲ್ಲಾ ಸಾಮರಸ್ಯ  - ವೀಣಾ ನಿರಂಜನ್ 

ಜಿಲ್ಲಾ ಧರ್ಮ ಪ್ರಸಾರ  - ನೇತ್ರ ಉಡುಪ 

ಜಿಲ್ಲಾ ಸಹ ಸತ್ಸಂಗ - ಗಾಯತ್ರಿ 

ಜಿಲ್ಲಾ ಕಾರ್ಯಕಾರಿಣಿ - ಪುಷ್ಪ ಪೈ


ಚಿತ್ರದುರ್ಗ ಜಿಲ್ಲೆ

ಉಪಾಧ್ಯಕ್ಷರು - ಲಕ್ಷ್ಮಿ ಶ್ರೀವತ್ಸ 

ಮಾತೃ ಶಕ್ತಿ - ರಾಧಾ ರಂಗನಾಥ್ 

ವಿಧಿ ಪ್ರಕೋಷ್ಟ - ಶ್ರೀನಿವಾಸ್ 

ಸಹ ಕಾರ್ಯದರ್ಶಿ - ವೆಂಕಟೇಶ್

ಬಜರಂಗದಳ ಸಹ ಸಂಯೋಜಕ್ - ದಿನೇಶ್ 

ಬಜರಂಗದಳ ಸಹ ಸಂಯೋಜಕ್  - ರಾಮಾಂಜನೇಯ

ಧರ್ಮಯಾತ್ರಾ ಪ್ರಮುಖ್  - ಈ. ಈರಣ್ಣ 

ಜಿಲ್ಲಾ ಕಾರ್ಯಕಾರಿಣಿ - ಶ್ರೀನಿವಾಸ್


ಮಂಡ್ಯ ಜಿಲ್ಲೆ

ಉಪಾಧ್ಯಕ್ಷರು - ನೈದಿಲೆ ಚಂದ್ರು 

ಕೋಶಾಧ್ಯಕ್ಷ - ರಾಜಶೇಖರ

ಸಾಮಾಜಿಕ ಸಾಮರಸ್ಯ - ಲೋಕೇಶ್


ಮೈಸೂರು ಜಿಲ್ಲೆ 

ಸಹ ಕಾರ್ಯದರ್ಶಿ - ಅರುಣಾ ಚಲಂ

ಸಹ ಸತ್ಸಂಗ ಪ್ರಮುಖ್ - ಸುಮತಿ

ಸಾಮರಸ್ಯ ಪ್ರಮುಖ್ - ಕುಮಾರಣ್ಣ 

ಸೇವಾ ಪ್ರಮುಖ್ - ವಿಜಯೇಂದ್ರ

ವಿಶೇಷ ಸಂಪರ್ಕ ಪ್ರಮುಖ್ - ಲೋಕೇಶ್

ಧರ್ಮಾಚಾರ್ಯ ಸಂಪರ್ಕ - ಪುನೀತ್

ಮಂದಿರ ಅರ್ಚಕ ಪುರೋಹಿತ್‌ ಸಂಪರ್ಕ - ಪುರೋಹಿತ್‌ ಲಕ್ಷ್ಮೀಶ

ಸಹ ಧರ್ಮ ಪ್ರಸಾರ - ಮಹೇಶ್


ಕೋಲಾರ ಜಿಲ್ಲೆ

ಉಪಾಧ್ಯಕ್ಷರು  - ಬಾಬು 

ಕಾರ್ಯದರ್ಶಿ - ಆರ್ಮುಗಂ 

ಸಹ ಕಾರ್ಯದರ್ಶಿ - ವೇಣುಗೋಪಾಲ್ 

ಭಾರತ ಸಂಸ್ಕೃತಿ ಪ್ರತಿಷ್ಠಾನ - ಆನಂದ ಬಾಬು 

ಪ್ರಚಾರ ಪ್ರಸಾರ - ಚಂದ್ರಶೇಖರ್


ಅರಸೀಕೆರೆ ಜಿಲ್ಲೆ

ಉಪಾಧ್ಯಕ್ಷರು - ಸಂಪತ್

ಕಾರ್ಯದರ್ಶಿ - ಪುರುಶೋತಮ್

ಬಜರಂಗದಳ ಸಂಯೋಜಕ್ - ಸುನಿಲ್


ಚಿಕ್ಕಬಳ್ಳಾಪುರ

ಉಪಾಧ್ಯಕ್ಷರು - ಚಂದ್ರಶೇಖರ್ 

ಪ್ರಚಾರ ಪ್ರಸಾರ - ಗೌತಮ್


ದಾವಣಗೆರೆ ಜಿಲ್ಲೆ

ಅಧ್ಯಕ್ಷರು - ಮಹೇಂದ್ರ ಕ‌ರ್ 

ಉಪಾಧ್ಯಕ್ಷರು - ಅಶೋಕ ಮುಳಾದ 

ಉಪಾಧ್ಯಕ್ಷರು - ಎಂ ಜಗದೀಶ್‌

ಸತ್ಸಂಗ ಪ್ರಮುಖ್‌ - ಹೇಮಕ್ಕ

ಸಹ ಸತ್ಸಂಗ ಪ್ರಮುಖ್ - ವಾಣಿ


ಭಾರತೀಯ ಗೋ ಸಂರಕ್ಷಣಾ ಸಂವರ್ಧನಾ ಸಮಿತಿ

ಅಧ್ಯಕ್ಷರು - ಮಂಜುನಾಥ್‌ 

ಕಾರ್ಯದರ್ಶಿ -ಮನೋಹರ್ ಸುವರ್ಣ 

ಕೋಶಾಧ್ಯಕ್ಷರು - ಎಸ್.ಆರ್. ಸುಧೀರ್ 

ವಿಶ್ವಸ್ಥರು: ಸುನಿಲ್ ದುಗ್ಗಡ, ಕೆ.ಆರ್. ಸುನಿಲ್, ಸುಲೋಚನಾ, ಮತ್ತು ಮೃದುಲ್ ಎಂ. ವೈಷ್ಣವ್