Hindu Vani
Index
ಸಂಸ್ಕೃತಿ
ಹೆಸರಿನಲ್ಲಿದೆ ಸಂಸ್ಕೃತಿ
ಹರಣಿ:
ಹಿರಣ್ಯ ಕಶ್ಯಪುವಿನ ಮಗಳು. ಅನಿಯನ್ನು ಈಕೆ ಮದುವೆಯಾದಳು.
ಸ್ಥಾಣು:
ಶಿವ, ಏಕಾದಶ ರುದ್ರರಲ್ಲಿ ಒಬ್ಬ.
ಸ್ಕಂದ:
ಸುಬ್ರಹ್ಮಣ್ಯ ಸ್ವಾಮಿ. ಇವರಿಗೆ ಕುಮಾರ, ಗುಹ, ಷಣ್ಮುಖ, ತಾರಕ ಎನ್ನುವ ಹೆಸರುಗಳಿವೆ.
ಸುರಭಿ:
ದೇವಲೋಕದ ಹಸು. ಕಾಮಧೇನು.
ಸುದಕ್ಷಿಣಾ:
ದೀಲಿಪನ ಹೆಂಡತಿ,
ಸುಜಾತಾ:
ಉದಾಲಕ ಮುನಿಯ ಮಗಳು. ಕಹೋಳ ಮುನಿಯ ಹೆಂಡತಿ, ಅಷ್ಟಾವಕ್ರನ ತಾಯಿ.
ಸುಕನ್ಯಾ:
ಶರ್ಯಾತಿ ರಾಜನ ಮಗಳು. ಚ್ಯವನ ಋಷಿಯ ಪತ್ನಿ, ಇವರ ಮಗ ಪ್ರಮತಿ.
ಸರ್ವದಮನ:
ದುಷ್ಯಂತನ ಮಗ, ಭರತನೆಂಬ ಹೆಸರೂ ಇದೆ.
ಸವ್ಯಸಾಚಿ:
ಅರ್ಜುನನ ಹೆಸರು. ಎಡಗೈಯಿಂದಲೂ ಬಾಣ ಪ್ರಯೋಗ ಮಾಡುತ್ತಿದ್ದುದರಿಂದ ಬಂದ ಹೆಸರು.
ಸಾಂದೀಪನಿ:
ಅವಂತಿಯಲ್ಲಿ ಗುರುಕುಲದ ಕುಲಪತಿ, ಬಲರಾಮ, ಕೃಷ್ಣ, ಸುಧಾಮರು ಇಲ್ಲಿ ವಿದ್ಯಾಭ್ಯಾಸ ಮಾಡಿದರು.
ಸತ್ಯಾ:
1) ಬೃಹದ್ರಥನ ಹಿರಿಯ ಹೆಂಡತಿ,
2) ಶ್ರೀಕೃಷ್ಣನ ಅಷ್ಟಮಹಿಷಿಯರಲ್ಲಿ ಒಬ್ಬಳು. ನೀತಿಯೆಂದೂ ಈಕೆಯ ಹೆಸರು.
ಸಂಹ್ರಾದ:
1) ಪ್ರಹ್ಲಾದನ ತಮ್ಮ. ಈತನ ಹೆಂಡತಿ ಕೃತಿ. ಮಗನ ಹೆಸರು ಪಂಚಜನ.
ಸಂವರ್ತ:
ಅಂಗೀರಸನ ಮಗ, ಉಚಥ್ಯ ಮತ್ತು ಬೃಹಸ್ಪತಿ ಈತನ ಸಹೋದರರು.
ಸಂಜ್ಞಾ :
ವಿಶ್ವಕರ್ಮನ ಮಗಳು. ಇನ್ನೊಂದು ಹೆಸರು ಸುರೇಣು, ಸೂರ್ಯನನ್ನು ಮದುವೆಯಾದಳು. ವೈವಸ್ಥತ ಮತ್ತು ಯಮ ಇಬ್ಬರು ಪುತ್ರರು. ಯಮುನೆ ಮಗಳು.
ಶ್ರುತ:
ದ್ರುಪದನ ಮಗ, ಕುರುಕ್ಷೇತ್ರದ ಯುದ್ಧದಲ್ಲಿ ಅಶ್ವತ್ಥಾಮನಿಂದ ಹತನಾದ.
ಶ್ರುತದೇವಾ:
ಯದುವಂಶದ ಶೂರರಾಜನ ಮಗಳು. ಕುಂತಿಯ ತಂಗಿ ದಂತ ವಕ್ರನ ತಾಯಿ.
ಶ್ರುತಃಶ್ರವಾ:
ಕುಂತಿಯ ಇನ್ನೊಬ್ಬ ತಂಗಿ. ಚೇದಿಯ ರಾಜ ದಮಘೋಷನ ಹೆಂಡತಿ. ಶಿಶುಪಾಲನ ತಾಯಿ.
.