Logo

VHP PUBLICATIONS

Hindu Vani


expand_more

ಸಂಸ್ಕೃತಿ

ಹೆಸರಿನಲ್ಲಿದೆ ಸಂಸ್ಕೃತಿ


ಅಥರ್ವ:

ಅಂಗೀರಸ ಮತ್ತು ಸತಿಯರ ಮಗ, ಅವನು ಒಬ್ಬ ಮಹರ್ಷಿಯಾದನು. ಕರ್ದಮ ಋಷಿಯ ಮಗಳಾದ ಶಾಂತಿಯನ್ನು ಮದುವೆಯಾದನು. ಇಬರಿಬ್ಬರ ಮಗನೇ ದಧೀಚಿ ಋಷಿ. ಇನ್ನೊಬ್ಬ ಮಗನ ಹೆಸರು ಅಶ್ವಶಿರ.


ಅದಿತಿ:

ದಕ್ಷನ ಮಗಳು. ಕಶ್ಯಪ ಋಷಿಯನ್ನು ಮದುವೆಯಾಗಿ ಇಂದ್ರ, ವಾಮನ ಮತ್ತು ದ್ವಾದಶಾದಿತ್ಯರಿಗೆ ತಾಯಿಯಾದಳು. ದೇವತೆಗಳಿಗೆ ಈಕೆಯೇ ತಾಯಿಯಾದುದರಿಂದ ಅವರಿಗೆಲ್ಲ ಆದಿತ್ಯರೆನ್ನುವ ಹೆಸರು ಬಂದಿತು.


ಅತ್ರಿ:

ಸಪ್ತ ಋಷಿಗಳಲ್ಲಿ ಒಬ್ಬರು. ಈತನ ಪತ್ನಿ ಅನಸೂಯೆ, ದತ್ತಾತ್ರೇಯ, ದೂರ್ವಾಸ, ಚಂದ್ರರು ಇವರಿಬ್ಬರ ಮಕ್ಕಳು.


ಅನಂತ:

ಸರ್ಪಗಳ ರಾಜ. ಕಶ್ಯಪ ಮತ್ತು ಕದ್ರುವಿನ ಮಗ


ಅನಿರುದ್ಧ:

ರುಕ್ಕಿಣಿ ಮತ್ತು ಕೃಷ್ಣರ ಮಗ, ಪ್ರದ್ಯುಮ್ನನು ಇವನ ತಂದೆ. ಇವನ ಪತ್ನಿ ಉಷೆ, ಆಕೆಯು ಬಾಣಾಸುರನ ಮಗಳು.


ಅನು:

ಚಂದ್ರವಂಶದ ಚಕ್ರವರ್ತಿ, ನಹುಷನ ಮಗ ಯಯಾತಿ ಮತ್ತು ಶರ್ಮಿಷ್ಠೆಯರ ಮಗ, ಯಯಾತಿಯು ತನ್ನ ಮುದಿತನವನ್ನು ಪರಸ್ಪರ ಬದಲಾಯಿಸಲು ಅವನನ್ನು ಕೇಳಿದಾಗ ಅವನು ಒಪ್ಪಲಿಲ್ಲ.


ಅನುವಿಂದ:

ವಸುದೇವನ ತಂಗಿ ರಾಜಾಧಿದೇವಿ ಮತ್ತು ಆವಂತಿಯ ರಾಜ ಜಯದೇವನ ಮಗ ಇವನು ಕುರುಕ್ಷೇತ್ರದಲ್ಲಿ ದುರ್ಯೋಧನದ ಪರವಾಗಿ ಯುದ್ಧ ಮಾಡಿ ಅರ್ಜುನನ ಕೈಯಲ್ಲಿ ಸತ್ತನು.


ಅನೂರು:

ಇವನಿಗೆ ಅರುಣನೆಂಬ ಹೆಸರೂ ಇದೆ. ಕಶ್ಯಪ ಮತ್ತು ವಿನತೆಯರ ಮಗ. ಗರುಡನ ಅಣ್ಣ. ಸೂರ್ಯನ ಸಾರಥಿ. ಈತನ ಪತ್ನಿ ತಾಮೆಯ ಮಗಳು ಶೈನಿ, ಸಂಪಾತಿ ಮತ್ತು ಜಟಾಯು ಇವರಿಬ್ಬರ ಮಕ್ಕಳು.


ಅಂತರಧಾನ:

ಪೃಥು ಎನ್ನುವ ಚಕ್ರವರ್ತಿಯ ಮಗ. ಇವನು ಉಳಿದವರಿಗೆ ಕಾಣದಂತೆ ಸಂಚರಿಸಬಲ್ಲನಾದ್ದರಿಂದ ಅವನಿಗೆ ಅಂತರಧಾನ ಎನ್ನುವ ಹೆಸರು ಬಂದಿತು. ಅವನ ಹೆಸರು ವಿಜಯಾಶ್ವವೆಂದಿದ್ದಿತು.


ಅಭಿಮನ್ಯು:

ಅರ್ಜುನ ಸುಭದ್ರೆಯರ ಮಗ, ಶ್ರೀಕೃಷ್ಣನಿಗೆ ಸೋದರಳಿಯ. ವಿರಾಟರಾಜನ ಮಗಳು ಉತ್ತರೆ ಈತನ ಪತ್ನಿ, ದ್ರೋಣನು ರಚಿಸಿದ ಪದ್ಮವ್ಯೂಹವನ್ನು ಹೊಕ್ಕು ಕೌರವಸೇನೆಯನ್ನು ತತ್ತರಗೊಳಿಸಿದವನು. ಇವನ ಮಗ ಪರೀಕ್ಷಿತ.


ಅಂಶುಮಂತ:

ಸಗರ ಚಕ್ರವರ್ತಿಯ ಮಗ ಅಸಮಂಜ, ಅವನ ಮಗನೇ ಅಂಶುಮಂತ. ಮತ್ತೆ ಅವನ ಮಗನು ದಿಲೀಪ.