Logo

VHP PUBLICATIONS

Hindu Vani


expand_more

ಉತ್ಸವ

By - ಮಧುರಾ ಬಸವರಾಜ್

ಜ್ಞಾನಭಾರತಿಯ ಶರದ್ ನವರಾತ್ರಿ

ಬೆಂಗಳೂರು ವಿಜಯನಗರ ಜಿಲ್ಲೆ ಜ್ಞಾನಭಾರತಿ ಪ್ರಖಂಡದಲ್ಲಿ ಮಾತೃಶಕ್ತಿ ವಿಭಾಗದ ಕಾರ್ಯಕ್ರಮಗಳ ಸಂಭ್ರಮ ಮತ್ತು ಅಚ್ಚುಕಟ್ಟುತನಗಳ ವೈಖರಿಯೇ ವಿಶೇಷ. ಭಕ್ತಿಯೊಡಗೂಡಿದ ಉತ್ಸವಗಳಿಗೆ ಈ ದಿನಗಳ ಅಭಿರುಚಿಯ ವಿನ್ಯಾಸಗಳನ್ನು ಜೋಡಿಸಿ ಅವನ್ನು ಜನಪ್ರಿಯವಾಗಿಸುವ ರೀತಿಯನ್ನು ಅಲ್ಲೇ ನೋಡಬೇಕು. ಕಾರ್ಯಕ್ರಮಗಳ ವೇಳಾಪಟ್ಟಿಯ ಕ್ಲುಪ್ತತೆಯಿಂದಾಗಿ ಅದಕ್ಕೆ ಒಗ್ಗಿಕೊಳ್ಳುವ ಸಮೂಹವನ್ನು ರೂಢಿಸಿಕೊಳ್ಳುವ ಅಲ್ಲಿಯ ಕಾರ್ಯಕರ್ತರ ತತ್ಪರತೆಯು ಅನುಕರಣೀಯವೆನಿಸುತ್ತದೆ.

ನವರಾತ್ರಿಯ ದಿನಗಳ ಉತ್ಸವಗಳೆಲ್ಲವೂ ಪ್ರತಿ ವರ್ಷವೂ ಭಕ್ತಿಯಿಂದ ಒಡಗೂಡಿದ ಸಾಂಸ್ಕೃತಿಕ ಹಬ್ಬಗಳಾಗಿ ಅಲ್ಲಿ ಆಚರಿಸಲ್ಪಡುತ್ತವೆ. ಕನ್ನಡ ನಾಡಿನ ನಾಡಹಬ್ಬವಾದ ದಸರಾದ ಹತ್ತು ದಿನಗಳಲ್ಲೂ ಅಲ್ಲಿ ಮಾತೃದೇವತೆ ಪಾರ್ವತಿಯು ಶಿವಾನಿಯೂ ಮೃಢಾನಿ, ರುದ್ರಾಣಿ, ಶರ್ವಾಣಿಯಾಗಿ ಕಂಗೊಳಿಸುತ್ತಾಳೆ. ಸರಸ್ವತಿಯು ಶಾರದೆ, ಬ್ರಾಹ್ಮ, ವಿದ್ಯಾ, ಭಾರತಿಯಾಗಿ ಆಗಮಿಸುತ್ತಾಳೆ. ಲಕ್ಷ್ಮಿಯು ವರಲಕ್ಷ್ಮಿ, ಗಜಲಕ್ಷ್ಮಿ, ಯ ರೂಪತಾಳಿ ಅಷ್ಟಲಕ್ಷ್ಮಿಯಾಗುತ್ತಾಳೆ. ಭುವನೇಶ್ವರಿಯು ಸಪ್ತಮಾತೃಕೆಯರಾಗಿ ಬ್ರಾಹ್ಮ, ಮಾಹೇಶ್ವರಿ, ಕೌಮಾರಿಯಾದಿಯಾಗಿ ಅಲಂಕೃತಗೊಳ್ಳುತ್ತಾಳೆ.

ಮೊದಲದಿನದ ಉತ್ಸವವು ನಿವೇದಿತಾ ನೆಲೆಯ ಮಕ್ಕಳ ಮಕ್ಕಳ ಪ್ರಾರ್ಥನೆಯಿಂದ ಪ್ರಾರಂಭಗೊಂಡಿತು. ಪ್ರಾಂತದ ಉಪಾಧ್ಯಕ್ಷರೂ ಹಿಂದುವಾಣಿ ಪತ್ರಿಕೆಯ ಸಂಪಾದಕರೂ ಆಗಿರುವ ಟಿ.ಎ.ಪಿ ಶೆಣೈಯವರು 'ಮಾತೃದೇವತೆಯ ಕುರಿತು ಉಪನ್ಯಾಸದೊಂದಿಗೆ ಉತ್ಸವವು ಮೊದಲುಗೊಂಡಿತು. ಮರುದಿನದ ಪೂಜೆಯು ಭಗವತಿ ಭಜನಾ ಮಂಡಳಿಯ ಕಾರ್ಯಕರ್ತೆಯರಿಂದ ದುರ್ಗಾಸಪ್ತಶತಿ ಪಾರಾಯಣದೊಂದಿಗೆ ಪ್ರಾರಂಭಗೊಂಡಿತು. ಕ್ಷೇತ್ರೀಯ ಸತ್ಸಂಗ ಪ್ರಮುಖರಾದ ಮಹಾಬಲೇಶ್ವರರವರು ಸಾಮೂಹಿಕ ಸತ್ಸಂಗಗಳಿಂದ ಉಂಟಾಗುವ ಸಾತ್ವಿಕ ಪರಿಣಾಮವನ್ನು ಅಂದು ವಿವರಿಸಿದರು.

ಮುಂದಿನ ದಿನದಂದು ಶ್ರೀಮತಿ ಗಂಗಮ್ಮನವರು ಸುಮಧುರ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ತುಂಬಿದ ಸಭಾಂಗಣದಲ್ಲಿ ಆಸ್ತಿಕರೆಲ್ಲರೂ ಈ ಸುಂದರ ಕಾರ್ಯಕ್ರಮದಲ್ಲಿ ಧ್ವನಿಗೂಡಿಸಿದರು. ನಾಲ್ಕನೇ ದಿನದಂದು ಶ್ರೀಮತಿ ಕೋಮಲಾ ಮತ್ತು ಜೊತೆಗಾರರಿಂದ ಭಕ್ತಿಗೀತೆಗಳ ಹಾಡುಗಾರಿಕೆಯಿದ್ದಿತು. ನಂತರದ ದಿನದಂದು ಜಗನ್ನಾಥ ಶಾಸ್ತ್ರೀಯವರ ಉಪಸ್ಥಿತಿಯಿದ್ದಿತು. ಕುಮಾರಿ ಶಾಂಭವಿ ಲಾವಟ್ಟೆ ಅವರಿಂದ ಸುಗಮ ಸಂಗೀತವೂ ಜಗದೀಶ ತಂಡದಿಂದ ಕೀರ್ತನೆಗಳ ಹಾಡುಗಾರಿಕೆಯೂ ನಡೆದವು.

ಆರನೇಯ ದಿನ ಶ್ರೀಮತಿ ವಿದ್ಯಾಲಕ್ಷ್ಮೀಯವರು ಸುಂದರ ಭರತನಾಟ್ಯದ ಅವಧಿಯನ್ನು ನಡೆಸಿಕೊಟ್ಟರು. ಅಂದು ಶ್ರೀಮತಿ ಕವಿತಾರವರು ಭಜನಾ ಸತ್ಸಂಗವನ್ನು ನಿರ್ವಹಿಸಿದ್ದರು. 28ನೇ ತಾರೀಕಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಕಣ್ಮನಗಳನ್ನು ಗೆದ್ದವು. ಎಂಟನೇಯ ದಿನದ ಶ್ರೀಮತಿ ಸವಿತಾ ಹರೀಶರು ನಡೆಸಿಕೊಟ್ಟ ಭಕ್ತಿಗೀತೆಗಳ ಪ್ರಸ್ತುತಿಯಲ್ಲಿ ಸಭಾಂಗಣವು ಕಿಕ್ಕಿರಿದು ತುಂಬಿದ್ದಿತು. ನವ ರಾತ್ರಿಯಂದು ವಿಶೇಷ ಕನ್ಯಾ ಪೂಜೆಯ ಸುಂದರ ಭಾವುಕ ಉತ್ಸವವಿದ್ದಿತು. ಎರಡು ನೂರಕ್ಕೂ ಹೆಚ್ಚು ಮನೆಗಳಿಂದ ಬಂದ ಆಸ್ತಿಕರು ಪುಟ್ಟ ಲಕ್ಷ್ಮಿಯರನ್ನು ಕುಳ್ಳಿರಿಸಿ ಪೂಜಿಸುವ ಸುಂದರ ದೃಶ್ಯವು ಅನನ್ಯವೆನಿತು. ಬಾಲಲಕ್ಷ್ಮಿಯರು ವಿವಿಧ ಉಡುಗೊರೆಗಳೊಂದಿಗೆ ನಲಿದಾಡಿದರು.

ಅಕ್ಟೋಬರ್ 1 ರಂದು ಶಾಸ್ಪೋಕ್ತವಾಗಿ ನಡೆದ ಶಸ್ತ್ರಪೂಜೆಯಲ್ಲಿ ತಾಯಂದಿರೆಲ್ಲರೂ ಪೂಜಾ ವಿಧಿಗಳನ್ನು ನಡೆಸಿ ಧನ್ಯರಾದರು. ದಸರಾದ ವಿಜಯದಶಮಿಯ ಬನ್ನಿಪೂಜೆ, ಸುಂದರ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸ್ವಾದಿಷ್ಟ ಭೋಜನ ಪ್ರಸಾದದೊಂದಿಗೆ ವರ್ಷದ ನಾಡಹಬ್ಬವು ಸಂಪನ್ನಗೊಂಡಿತು.

ದಿನವೂ ನೂರಕ್ಕೂ ಹೆಚ್ಚು ಆಸ್ತಿಕ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಂಡ ನವರಾತ್ರಿಯು ದೇವಸ್ಥಾನದ ಸಭಾಂಗಣವು ಕಿಕ್ಕಿರಿದು ತುಂಬುವಂತೆ ಮಾಡಿತು. ಭಕ್ತಿಭಾವದ ವಾತಾವರಣಕ್ಕೆ ಕಳೆಕೊಟ್ಟ ಋತ್ವಿಜರ ಮಂತ್ರ ಘೋಷವೂ ದೇವಿಯ ಷೋಡಶೋಪಚಾರ ಪೂಜೆ ಮತ್ತು ಮಹಾ ಆರತಿಗಳೂ ಎಲ್ಲರ ಮನಸ್ಸುಗಳನ್ನು ಬೆಳಗಿದವು.

ವಿಭಾಗ ಅಧಿಕಾರಿಗಳಾದ ಕಮಲಮ್ಮನವರ ಕಲ್ಪನೆಗಳಿಗೆ ಮಾತೃಶಕ್ತಿ ಪ್ರಮುಖ್ ಮಧುರಾ ಬಸವರಾಜ್ ಭಾಗ್ಯ, ಸಿ.ಪ್ರೇಮಾ ಮುಂತಾದ ಕಾರ್ಯಕರ್ತೆಯರ ಬೆಂಬಲವು ಜನಪ್ರಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನೆರವಾಗುತ್ತಿವೆ.

ಉತ್ಸವ

ಮಯಾ ಗಾವೋ ಗೋಪತಿನಾ ಸಚಧ್ವಮಯಂ ವೋ ಗೋಷ್ಠ ಇಹ ಪೋಷಯಿಷ್ಣುಃ |

ರಾಯಸ್ಪೋಷಣ ಬಹುಲಾ ಭವಂತೀರ್ಜಿವಾ ಜೀವಂತೀರುವ ವಃ ಸದೇಮ ||

“ಎಲೈ ರಾಜನೇ, ಗೋವುಗಳು ನಿನ್ನ ಮತ್ತು ಪ್ರಜೆಗಳ ತಾಯಿಯೆಂದು ತಿಳಿಯಿರಿ. ಅವುಗಳು ನಿಮ್ಮನ್ನು ಮಕ್ಕಳಂತೆ ಪಾಲಿಸುತ್ತವೆ. ನಿಮ್ಮೊಂದಿಗೆ ಕೂಡಿಕೊಂಡು ಆನಂದ ಅನುಭವಿಸುತ್ತವೆ. ರಾಜನೇ, ಪಶುಪ್ರಿಯನಾದ ರಾಜನು ಪಶುಪತಿಯೆನಿಸಿಕೊಳ್ಳುತ್ತಾನೆ. ಈ ರೀತಿಯಲ್ಲಿ ಆರೋಗ್ಯ ಸೂತ್ರ ರೀತ್ಯಾ ಕೂಡ ಗೋವುಗಳನ್ನು ಎಚ್ಚರಿಕೆಯಿಂದ ಪಾಲಿಸಿ, ತಾತ್ಕಾಲಿಕ ಬರಗಾಲದಿಂದ ಹೊರಬಂದು ಯಕ್ಷೇಶ್ವರನಂತೆ ಬೆಳಗು. ಜ್ಞಾನಿಗಳೂ, ತಪೋನಿಷ್ಠರೂ, ವಿದ್ವಜ್ಜನರ ಸಹಕಾರದೊಂದಿಗೆ ಇದನ್ನು ಸಾಧಿಸಿಕೊ ಯಶೋವಂತನಾಗು,” ಎಂದನು.