Hindu Vani
Index
ಪ್ರತಿಧ್ವನಿ
ಡಾ|| ಎಸ್. ಎಲ್. ಭೈರಪ್ಪ ಎಂದರೆ ಸ್ವಾನುಭವ ಮತ್ತು ಅಧ್ಯಯನ
ಕನ್ನಡವಷ್ಟೇ ಅಲ್ಲದೆ ಹಲವು ಭಾರತೀಯ ಭಾಷಿಗರ ಸಾಹಿತ್ಯ ಸಂವೇದನೆಯನ್ನು ತಿದ್ದಿ ತೀಡಿದವರು ಡಾ| ಎಸ್.ಎಲ್. ಭೈರಪ್ಪನವರು. ಸ್ವಾನುಭವ, ಅಪಾರ ಅಧ್ಯಯನಗಳಿಂದ ಭಟ್ಟಿ ಇಳಿಸಿದಂತಹ ಬರಹ ಅವರದ್ದು. ಕನ್ನಡ ಸಾಹಿತ್ಯ ಮತ್ತು ಕನ್ನಡದ ಮನಸ್ಸು ಅವರಿಂದ ಶ್ರೀಮಂತವಾಯಿತು. ಅವರ ಕೃತಿಗಳ ಇನ್ನಷ್ಟು ಉಲ್ಲೇಖಗಳನ್ನು ಕೊಡಬಹುದಿತ್ತು.
- ಲಕ್ಷ್ಮೀನಾರಾಯಣ, ಗದಗ
ಕುಸ್ತಿ ಸೋತಿತು ದಂಗೆ ಎದ್ದಿತು
ಭೂಪಾಳಂರಂತಹ ಹಿರಿಯರು ಬರೆದ ಐತಿಹ್ಯದಿಂದ ದಂಗೆಗೆ ಕಾರಣವಾಗುವ ವಿಚಾರವು ವಿದಿತವಾಗುತ್ತದೆ. ಅದನ್ನು ಬೆಳೆಯಲು ಬಿಡುವ ದೊಂಬಿಯ ಮನಸ್ಸು ಮತ್ತು ವಿನಾಕಾರಣ ಹಾಹಾಕಾರವನ್ನು ಕಂಡು ಆನಂದಿಸುವ ಜಾಯಮಾನಗಳು ಅವರ ಲೇಖನ 'ಶಿವಮೊಗ್ಗಾ ಮುಸ್ಲಿಂ ದಂಗೆ'ಯಲ್ಲಿ ಕಾಣಬರುತ್ತದೆ. ಎಲ್ಲರಿಗೂ ತಿಳಿ ಹೇಳುವ ಹಿರಿಯರ ಪಾತ್ರವನ್ನು ಅದು ಉಲ್ಲೇಖಿಸುತ್ತದೆ. ದಂಗೆಯ ನೈಜ ಚಿತ್ರಣವನ್ನು ಕೊಡುವ ಲೇಖನ.
-- ಮೂಡಲಗಿರಿ ಗೌಡ, ನಾಗಮಂಗಲ
ಅಬ್ಬಕ್ಕರಾಣಿ
ಸಮಯೋಚಿತವಾದ ಕವನ ಈ 'ಮಣ್ಣಿನ ಮಗಳು'.
- ಉಷಾ ರಾವ್
ವೀಣೆ ಸುಬ್ಬಣ್ಣ
ಮಕ್ಕಳ ಮನಸ್ಸು ಸುಂದರವಾಗಿ ರೂಪುಗೊಳ್ಳುವಂತೆ ಬೇಕಾದ ಬೋಧ ಕತೆಗಳು. ಸ್ನೇಹ, ಪರಿಶ್ರಮ, ಸ್ವಾಭಿಮಾನ, ಔದಾರ್ಯ, ಆತ್ಮ ವಿಶ್ವಾಸಗಳಂತಹ ಗುಣಗಳು ಬೆಳೆಯುವ ವಯಸ್ಸಿನಲ್ಲಿ ಸ್ಪೂರ್ತಿ ನೀಡುವ ಅಂಶಗಳು. ಹಿಂದುವಾಣಿಯ ಕತೆಗಳ ಆಯ್ಕೆ ಯುಕ್ತವಾಗಿದೆ.
- ಸೌದಾಮಿನಿ ಪ್ರಕಾಶ, ಬೆಳ್ತಂಗಡಿ