Logo

VHP PUBLICATIONS

Hindu Vani


expand_more

ಸಂಸ್ಕೃತಿ

ಹೆಸರಿನಲ್ಲಿದೆ ಸಂಸ್ಕೃತಿ

ಉಗ್ರಶ್ರವ :

ಪುರಾಣಗಳನ್ನು ಓದುವ ರೋಮಹರ್ಷಣ (ಸೂತ ಮಹರ್ಷಿ)ರ ಮಗ.

ಉಗ್ರಸೇನ :

1) ಕಂಸನ ತಂದೆ, ಯದುವಂಶದ ರಾಜ ಆಹುಕನ ಮಗ, ಕಂಸನ ವಧೆಯ ನಂತರ ಕೃಷ್ಣನು ಉಗ್ರಸೇನನಿಗೆ ಮಥುರೆಯ ಪಟ್ಟವನ್ನು ಕಟ್ಟಿದನು. 2) ಅರ್ಜುನನ ಮೊಮ್ಮಗ ಪರೀಕ್ಷಿತನ ಮಗ ಅಂದರೆ ಜನಮೇಜಯನ ತಮ್ಮನ ಹೆಸರು ಕೂಡಾ ಉಗ್ರಸೇನ. ಉತ್ಕಲ : ಧ್ರುವ ಮತ್ತು ಇಲೆಯರ ಹಿರಿಯ ಮಗ. ಇವನ ತಮ್ಮ ವತ್ಸರ, ಅವನು ಧ್ರುವನ ನಂತರ ರಾಜನಾದ.

ಉತ್ತಮ :

ಉತ್ತಾನಪಾದ ಮತ್ತು ಸುರುಚಿಯರ ಮಗ.

ಉತ್ತರ :

ವಿರಾಟ ರಾಜನ ಮಗ, ಗೋಗ್ರಹಣದ ಯುದ್ಧದಲ್ಲಿ ಬ್ರಹನ್ನಳೆಯನ್ನು ಸಾರಥಿಯನ್ನಾಗಿಸಿ ಯುದ್ಧಕ್ಕೆ ಹೊರಟವನು.

ಉತ್ತರಾ :

ವಿರಾಟ ರಾಜನ ಮಗಳು. ಅಭಿಮನ್ಯುವಿನ ಹೆಂಡತಿ, ಪರೀಕ್ಷಿತನು ಇವರ ಮಗನು.

ಉತ್ತಾನಪಾದ :

ಸ್ವಾಯಂಭುವ ಮನುವಿನ ಕಿರಿಯ ಮಗ, ಈತನಿಗೆ ಸುನೀತಿ ಮತ್ತು ಸುರುಚಿಯರು ಪತ್ನಿಯರು. ಸುನೀತಿಯ ಮಗ ಧ್ರುವ, ಉತ್ತಮನು ಸುರುಚಿಯ ಮಗ.

ಉದಗ್ರ :

ಮಹಿಷಾಸುರನ ಸೇನಾಪತಿ, ಮಹಾಲಕ್ಷ್ಮಿಯು ಇವನನ್ನು ಕೊಂದಳು.

ಉದ್ದಾಲಕ :

ಆಪೋದ ಮುನಿಯ ಮಗನಾದ ದೌಮ್ಯ ಋಷಿಯ ಶಿಷ್ಯ. ಶ್ವೇತಕೇತು ಮತ್ತು ನಚಿಕೇತರು ಈತನ ಮಕ್ಕಳು. ಕಹೋಳ ಮುನಿಯ ಪತ್ನಿ ಸುಜಾತೆಯೂ ಇವನ ಮಗಳು. ಅಷ್ಟಾವಕ್ರನು ಸುಜಾತೆಯ ಮಗ.

ಉದ್ಧವ :

ಶ್ರೀಕೃಷ್ಣನ ಸ್ನೇಹಿತ. ವಸುದೇವನ ತಮ್ಮ ದೇವಭಾಗನ ಮಗ, ಕಂಸನನ್ನು ಕೃಷ್ಣನು ವಧಿಸಿದ ಸಮಾಚಾರವು ಗೋಕುಲಕ್ಕೆ ತಿಳಿದದ್ದು ಉದ್ದವನಿಂದ.

ಉಪದಾನವೀ :

ಮಯಾಸುರನ ಮಗಳು, ಮಂಡೋದರಿಯು ಈಕೆಯ ತಂಗಿ,

ಉಪಪಾಂಡವರು :

ದೌಪದಿಯ ಐವರು ಮಕ್ಕಳು. ಅವರ ಹೆಸರು ಪ್ರತಿವಿಂಧ್ಯ, ಶ್ರುತಸೋಮ, ಶ್ರುತಕೀರ್ತಿ, ಶತಾನೀಕ, ಶ್ರುತಸೇನ, ಮಹಾಭಾರತ ಯುದ್ಧವು ಮುಗಿದ ರಾತ್ರಿ ಶಿಬಿರದಲ್ಲಿ ಮಲಗಿದ ಇವರನ್ನು ಅಶ್ವತ್ಥಾಮನು ಕೊಂದನು.

ಉಪಮನ್ಯು :

ದೌಮ್ಯಋಷಿಯ ಶಿಷ್ಯ, ಗುರುಕುಲದ ಹಸುಗಳನ್ನು ನೋಡಿಕೊಳ್ಳುವ ಕೆಲಸವನ್ನು ಗುರುಗಳು ಆತನಿಗೆ ಕೊಟ್ಟಿದ್ದರು. ಅಶ್ವಿನಿ ದೇವತೆಗಳಿಂದ ತನ್ನ ಕಣ್ಣುಗಳ ದೃಷ್ಟಿಯನ್ನು ಪಡೆದನು.