Hindu Vani
Index
ಪ್ರತಿಧ್ವನಿ
ಗೀತಾ ಪಾರಾಯಣ
ಬೆಂಗಳೂರಿನ 108 ಸ್ಥಾನಗಳಲ್ಲಿ ಪಾರಾಯಣ ಮಾಡುತ್ತಿರುವ ಗೀತಾ ಸಾಧಕರ ಚಿತ್ರಪಟವನ್ನು ಕಂಡರೆ ಮನಸ್ಸು ತುಂಬಿಬರುತ್ತದೆ. ನಗರದ ವಾತಾವರಣದಲ್ಲಿ ಇಷ್ಟು ಸಂಖ್ಯೆಯಲ್ಲಿ ಮಹಿಳೆಯರು ಸೇರಿದುದು ಉತ್ತಮ ಬೆಳವಣಿಗೆಯಾಗಿದೆ. ವಿಶ್ವ ಹಿಂದು ಪರಿಷತ್ತು ಭಕ್ತಿಯೊಂದಿಗೆ ಸಂಘಟನೆಯ ತತ್ವವನ್ನು ಸಮೀಕರಿಸಿ ಮಾಡುತ್ತಿರುವ ಪ್ರಯತ್ನವು ಸ್ವಾಗತಾರ್ಹ.
ಮಧುಸೂದನ ರಾವ್, ಕೋಲಾರ
ಕಾನೂನು ಮತ್ತು ಭಾರತದ ವಾಸ್ತವತೆ
ಹಿಂದುವಾಣಿಯಲ್ಲಿ ಪ್ರಕಟಿಸಿದ 5 ಲೇಖನಗಳು ಭಾರತದ ಸ್ಥಿತಿಗತಿಯಲ್ಲಿ ವಿಶ್ಲೇಷಿಸಿದ ವಾಸ್ತವತೆಯಂತೆ ಇದೆ. ದೇವಸ್ಥಾನಗಳ ಸಂಪತ್ತು ಸೆಕ್ಯುಲರ್ ಸರ್ಕಾರದ ಪಾಲಾದರೆ ಹೇಗೆ? ಬಹುಸಂಖ್ಯಾತ ಹಿಂದುಗಳನ್ನು ಅದುಮಿಡಲು ಪ್ರಯೋಗಿಸುತ್ತಿರುವ ಹೊಸ ಕಾನೂನುಗಳು, ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರೆಂದು ವಿಂಗಡಿಸುವ ಸ್ವಾರ್ಥ ರಾಜಕೀಯದ ಪರಿಣಾಮಗಳನ್ನು ಕರಾರುವಾಕ್ಕಾಗಿ ವರ್ಣಿಸಿದ ಲೇಖನಗಳು ಕಣ್ಮರೆಸುತ್ತಿವೆ. - - ಶಿವಮೂರ್ತಿ ಆರ್.ಎಸ್., ತುಮಕೂರು.
ಕ್ರಾಂತಿಯ ಕಣದಲ್ಲಿ
ಭಾರತ ಸ್ವಾತಂತ್ರ್ಯ ಹೋರಾಟದ ಕಣದಲ್ಲಿ ತ್ಯಾಗ ಬಲಿದಾನವನ್ನು ಮರೆಮಾಚುತ್ತ ಬಂದ ಪ್ರಯತ್ನಕ್ಕೆ ದೊಡ್ಡ ಇತಿಹಾಸವೇ ಇದೆ. ಹಿಂದುವಾಣಿಯ ಸಂಚಿಕೆಯಲ್ಲಿ 63 ದಿನಗಳ ಉಪವಾಸದ ಆಗ್ರಹವನ್ನು ನಡೆಸಿ ಸಾವನ್ನು ಆಹ್ವಾನಿಸಿದ ಜತಿನದಾಸರ ವ್ಯಕ್ತಿತ್ವವನ್ನು ನೆನೆದು ಕಣ್ಣುಗಳು ತುಂಬಿಬಂದವು. -ರಮಣರಾವ್, ಅನಂತಪುರ
ನಶಾ ಮುಕ್ತಿ ಅಭಿಯಾನ
ಚಳುವಳಿ ಪ್ರದರ್ಶನಗಳೊಂದಿಗೆ ಸಮಾಜ ಜಾಗೃತಿಗಾಗಿ ನಶಾ ಮುಕ್ತಿ ಅಭಿಯಾನವನ್ನು ಕೈಗೆತ್ತಿಕೊಂಡಿರುವ ವಿಶ್ವ ಹಿಂದು ಪರಿಷದ್‌ಗೆ ಅಭಿನಂದನೆಗಳು, -ಆನಂದರಮಣ, ಕುಮಟಾ