Logo

VHP PUBLICATIONS

Hindu Vani


expand_more

ಪ್ರಥಮ

ಬೃಹತ್ ಭಾರತವನ್ನು ನೆನಪಿಸುವ ಪ್ರಸಂಗ

ಐ.ಎನ್.ಎಸ್. ಕೌಂಡಿನ್ಯದ ಪ್ರಥಮ ಪರ್ಯಟನ

ಐ.ಎನ್.ಎಸ್. ಕೌಂಡಿನ್ಯವು ಭಾರತೀಯ ನೌಕಾಪಡೆಯಿಂದ ನಿರ್ಮಿತವಾದ ಸಾಂಪ್ರದಾಯಿಕ ಹಾಯಿ ಹಡಗು. ಸ್ವದೇಶೀ ಜ್ಞಾನ ಮತ್ತು ಸಂಶೋಧನೆಯನ್ನು ಈಗ ಮತ್ತೆ ನೆನಪಿಸುವ ಪ್ರಯತ್ನವಿದು. 5ನೇ ಶತಮಾನದ ಸಮುದ್ರ ವ್ಯಾಪಾರ ನೌಕೆಗಳ ಮಾದರಿಯನ್ನು ಮರುಕಳಿಸಿದ ಈ ಹಡಗು; ಬೀಸುವ ಗಾಳಿಯನ್ನು ಚಲನೆಗೆ ಅಳವಡಿಸುತ್ತದೆ. ಲೋಹದ ಉಪಯೋಗವಿಲ್ಲದೆ ನಿರ್ಮಾಣಗೊಂಡ ಈ ನೌಕೆಯಲ್ಲಿ ಪ್ರಾಕೃತಿಕ ವಸ್ತುಗಳೇ ಬಳಕೆಗೊಂಡಿವೆ. ಮರದ ಹಲಗೆಗಳನ್ನು ಜೋಡಿಸಲು ನಾರಿನ ಹಗ್ಗಗಳು, ರಾಳು ಗೋಂದುಗಳು; ಗಾಳಿಯು ಬೀಸುವ ದಿಕ್ಕಿಗೆ ಅನುಗುಣವಾಗಿ ತಿರುಗುವ ಬೃಹದ್ ಹಾಯಿ ಪಟಗಳು ಪ್ರಾಚೀನ ಸಮುದ್ರಯಾನದ ಅಪ್ಪಟ ಅನುಭವವನ್ನು ನೀಡುತ್ತದೆ. 15ನೇ ಶತಮಾನದ ಅಜಂತಾ ಗುಹೆಯಲ್ಲಿನ ವರ್ಣ ಚಿತ್ರದಿಂದ ಸ್ಪೂರ್ತಿಗೊಂಡು ಕೈಗೊಂಡ ಕಾರ್ಯಕ್ರಮಕ್ಕಾಗಿ ನಿರ್ಮಿತಗೊಂಡಿರುವುದು ಈ ಕೌಂಡಿನ್ಯ ನೌಕೆ.

ಭಾರತೀಯ ನೌಕಾಪಡೆಯ ಸ್ಪೂರ್ತಿ, ಮದ್ರಾಸ್.ಐ.ಐಟಿಯ ಹೈಡೋ ಡೈನಾಮಿಕ್ ವಿಭಾಗದ ಅನುಭವ, ಕೇರಳದ ಹೊದಿ ಇನ್ನೋವೇಷನ್ಸ್ ಎನ್ನುವ ಸಂಸ್ಥೆಯ ಪರಿಶ್ರಮವು ಸೇರಿ, ಬಾಬು ಶಂಕರನ್‌ರವರ ನೇತೃತ್ವದಲ್ಲಿ ಈ ಕುತೂಹಲಕಾರಿ ಕಾರ್ಯಕ್ರಮವೂ ನಿರ್ಮಾಣವೂ ರೂಪುಗೊಂಡಿದೆ.

ಪ್ರಥಮ

ಹರಪ್ಪಾ ಮತ್ತು ಮೊಹೆಂಜದಾರೋ ಕಾಲದ ನಾಗರಿಕ ಜೀವನದ ಅಧ್ಯಾಯವು ಪ್ರಾರಂಭಗೊಂಡು, ಅಲ್ಲಿಂದ ಉಡುಪು, ಆಭರಣಗಳು, ಖನಿಜ ವಸ್ತುಗಳು, ಯಂತ್ರೋಪಕರಣಗಳು, ಕೃಷಿ ಸಾಮಗ್ರಿಗಳು ಮಧ್ಯಪ್ರಾಚ್ಯ ದೇಶಗಳಿಗೆ ಸಮುದ್ರ ಮಾರ್ಗವಾಗಿ ಸಾಗುತ್ತಿದ್ದವು. ಅಲ್ಲಿಂದ ಸುಗಂಧ ವಸ್ತುಗಳು, ಖರ್ಜೂರ, ತಾಮ್ರ, ಆಮದಾಗುತ್ತಿದ್ದವು. ಆಗ ಓಮನ್ ದೇಶದ ಮಸ್ಕತ್, ಮಧ್ಯಂತರ ರೇವು ಆಗಿನ ಭಾರತದ ಲೋಥಾಲ್, ಬಟ್ಟೆ, ದಂತ, ನಂತರ ಗುಜರಾಥಿನ ದ್ವಾರಕೆಯು ಕೂಡಾ ಪಟ್ಟಣವಾಗಿದ್ದಿತು. ಕ್ರಿ.ಪೂ. 3000ದ ಕಾಲಖಂಡದಲ್ಲೇ ಪಾತ್ರೆ ಪಗಡಿಗಳ ದಾಸ್ತಾನು ಕೇಂದ್ರವಾಗಿದ್ದಿತು. ಪ್ರಮುಖ ಬಂದರು ಪಟ್ಟಣವಾಯಿತು.

ಈಗ ನಿರ್ಮಿತವಾದ ಐ.ಎನ್.ಎಸ್. ಕೌಂಡಿನ್ಯವು ಗುಜರಾತಿನ ಸೋರ್‌ಬಂದರಿನಿಂದ ಮಸ್ಕತ್‌ಗೆ ತನ್ನ ಮೊದಲ ಪರ್ಯಟನವನ್ನು ಮಾಡಲಿದೆ. ಪ್ರಾಚೀನ ಸಾಗರಯಾನದ ನೆನಪನ್ನು ಕಣ್ಣ ಮುಂದಿಡುವ ಪ್ರಯಾಣಕ್ಕೆ ನೌಕಾ ಪಡೆಯ ವೈಸ್ ಅಡ್ಮಿರಲ್ ಕೃಷ್ಣಸ್ವಾಮಿನಾಥನ್ ಹಸಿರು ನಿಶಾನೆಯನ್ನು ತೋರಿಸುವರು. ಮಧ್ಯಪ್ರಾಚ್ಯ ದೇಶಗಳೊಂದಿಗಿನ ನಮ್ಮ ಐತಿಹಾಸಿಕ ವ್ಯಾಪಾರ ಸಂಪರ್ಕದ ಪುನರ್‌ ಅನ್ವೇಷಣೆಯ ಈ ಯಾನಕ್ಕೆ ಸುಗಮ ಸುರಕ್ಷಿತ ಶುಭಾಕಾಂಕ್ಷೆಗಳನ್ನು ಪ್ರಧಾನಿ ಮೋದಿಯವರು ಸಲ್ಲಿಸಿದರು. ಓಮನ್ ದೇಶದ ರಾಯಭಾರಿ ಇಸ್ಸಾ ಸಾಲೇಹ್ ಅಲ್‌ಶಬಾನಿಯವರು ಈ ಸಮಾರಂಭದಲ್ಲಿ ಉಪಸ್ಥಿತರಿರುವರು.

ಕಮಾಂಡ‌ ವಿಕಾಸ್ ಶಿವನ್ ಮತ್ತು ಕಮಾಂಡರ್ ಹೇಮಂತಕುಮಾರ್ ಈ ಹಾಯಿನೌಕೆಯ ಕಪ್ತಾನರಾಗಿರುವರು. ಇಂದಿಗೂ ಮುಂದುವರೆಯುತ್ತಿರುವ ಗುಜರಾತ್ ಮತ್ತು ಓಮನ್ ದೇಶಗಳ ನಡುವಿನ ಸಾಗರಯಾನದ ಪರಂಪರೆ ಮತ್ತು ಸಾಂಸ್ಕೃತಿ ತಿಕ ಸಂಬಂಧ; ಪರಸ್ಪರ ಸಹಕಾರಗಳ ಗಾಢ ನೆನಪುಗಳೊಂದಿಗೆ ಈ ವಿಶಿಷ್ಟಯಾನವು ರೂಪುಗೊಂಡಿದೆ. ಪ್ರಾಚೀನ ವಾಣಿಜ್ಯ ಮತ್ತು ಸಾಂಸ್ಕೃತಿಕ ಕೊಡು-ಕೊಳ್ಳುವಿಕೆಯ ಸಾಂಕೇತಿಕ ಗ್ರಹಿಕೆಗಾಗಿ ಈ ಕಾರ್ಯಕ್ರಮವಿದೆ.

ಈ ನೌಕೆಯು 1400 ಕಿ.ಮೀಟರ್‌ ಪ್ರಯಾಣವನ್ನು 15 ದಿನಗಳಲ್ಲಿ ಪೂರೈಸುವುದು. ಇತಿಹಾಸದಲ್ಲಿ ಮೌರ್ಯರು, ಗುಪ್ತರಾಜರು, ಚೋಳ ಅರಸರು ಕೈಗೊಳ್ಳುತ್ತಿದ್ದ ಪ್ರಾಚೀನ ಸಮುದ್ರ ಮಾರ್ಗದಲ್ಲೇ ಕೌಂಡಿಣ್ಯ ನೌಕೆಯು ಸಾಗಲಿದೆ. ಒಂದು ಸಾವಿರ ವರ್ಷ ಆಬಾಧಿತವಾಗಿ ನಡೆದ ಈ ಸಮುದ್ರ ವ್ಯಾಪಾರದಲ್ಲಿ ಬೃಹತ್‌ ನೌಕೆಗಳು ಪಾಲ್ಗೊಳ್ಳುತ್ತಿದ್ದವು. ಆಗ ಭಾರತವು ಜಗತ್ತಿನ ಸಮುದ್ರ ವ್ಯಾಪಾರದ ಶೇ 34ರಷ್ಟು ಪಾಲನ್ನು ನಿರ್ವಹಿಸುತ್ತಿದ್ದಿತು. ಇದು ಆಗಿನ ಯುರೋಪು ದೇಶಗಳ ಒಟ್ಟು ಉತ್ಪಾದನೆಯ ಮೂರುಪಟ್ಟು ಹೆಚ್ಚಾಗಿದ್ದಿತು.

(2025 ಫೆಬ್ರವರಿ ತಿಂಗಳ ಹಿಂದೂವಾಣಿ ಸಂಚಿಕೆಯಲ್ಲಿ ಐ.ಎನ್. ಕೌಂಡಿಣ್ಯ ನೌಕೆಯ ಬಗ್ಗೆ ವಿಶೇಷ ಲೇಖನವಿದ್ದಿತು)