Hindu Vani
Index
ದೇವಸ್ಥಾನ
17 ಮೇ 1944ರಲ್ಲಿ ಸೈನಿಕರನ್ನುದ್ದೇಶಿಸಿ
ಟ್ಯಾಂಕ್ ಕಮಾಂಡರ್ ಪ್ಯಾಟನ್ ಮಾಡಿದ ಭಾಷಣ
ಸ್ನೇಹಿತರೇ, ಸಾಂಪ್ರದಾಯಿಕವಾಗಿ ಮಾತನಾಡುವುದಾದರೆ ಅಮೇರಿಕಾ ಎಂದರೆ ಹೋರಾಟ. ಅದು ಹೋರಾಟವನ್ನು ಪ್ರೀತಿಸುತ್ತದೆ. ನಿಜವಾದ ಎಲ್ಲ ಅಮೇರಿಕನ್ನರು ಯುದ್ಧವನ್ನು ಬಯಸುತ್ತಾರೆ. ಗೆಲ್ಲುವವರನ್ನು ಪ್ರೀತಿಸುತ್ತಾರೆ. ಹೇಡಿಗಳನ್ನು ದೂರವಿಡುತ್ತಾರೆ.ಆಮೇರಿಕನ್ನರು ಗೆಲ್ಲಲೆಂದೇ ಆಟವಾಡುತ್ತಾರೆ. ಅಂತೆಯೇ ಅಮೇರಿಕಾ ಎಂದೂ ಸೋತಿಲ್ಲ. ಮುಂಬರುವ ದಿನಗಳಲ್ಲಿ ಸೋಲುವ ಯಾವ ಲಕ್ಷಣಗಳೂ ಇಲ್ಲ.
ಒಂದು ನೀವೆಲ್ಲರೂ ಸಾಯಲೂ ಹೊರಟಿಲ್ಲ ಗೆಳೆಯರೇ, ಯಾವುದೋ ದೊಡ್ಡ ಯುದ್ಧದಲ್ಲಿ ಈ ಅಪಾರ ಸೈನ್ಯದ ಸಂಖ್ಯೆಯಲ್ಲಿ ಕೇವಲ 2% ಅಮೇರಿಕನರು ಸಾಯಬಹುದೇನೋ, ಸಾವಿಗಾಗಿ ಹೆದರಬೇಕಿಲ್ಲ. ಜೀವನದ ಒಂದು ನಿಶ್ಚಿತಘಟ್ಟದಲ್ಲಿ ಸಾವು ನಿಶ್ಚಿತವಾಗಿ ಜರುಗುವುದೇ ಆಗಿದೆ. ಪ್ರತಿಯೊಬ್ಬನೂ ತನ್ನ ಪ್ರಥಮ ಹೋರಾಟದಲ್ಲಿ ಭಯಗ್ರಸ್ಥನಾಗಿರುತ್ತಾನೆ. ಇಲ್ಲ, ನನಗೆ ಯಾವ ಭಯವೂ ಇರಲಿಲ್ಲ ಎಂದು ಯಾರಾದರೂ ಹೇಳುತ್ತಿದ್ದರೆ, ಆತ ಸುಳ್ಳು ಹೇಳುತ್ತಿದ್ದಾನೆ ಎಂದೇ ಅರ್ಥ. ಕೆಲವರು ಹೇಡಿಗಳಾಗಿದ್ದಾರೆ. ಹೌದು, ಆದಾಗ್ಯೂ ಅವರು ಹೋರಾಡುತ್ತಾರೆ ಮತ್ತು ನರಕವನ್ನು ತಮ್ಮಿಂದ ದೂರವಿರಿಸುತ್ತಾರೆ.
ಹೌದು ನಿಜವಾದ ಹೀರೊ ಎಂಥಹ ಮನುಷ್ಯನಾಗಿರುತ್ತಾನೆಂದರೆ ಆತ ಭಯದಲ್ಲಿದ್ದರೂ ಹೋರಾಟಕ್ಕೆ ಇಳಿಯುತ್ತಾನೆ. ಕೆಲವರು ಕ್ಷಣಾರ್ಧದಲ್ಲಿ ಹೋರಾಟಕ್ಕೆ ಸಿದ್ಧರಾಗುತ್ತಾರೆ. ಕೆಲವರಿಗೆ ಗಂಟೆಗಳು ಬೇಕು, ಮತ್ತೆ ಕೆಲವರಿಗೆ ದಿನಗಳು. ಆದರೆ ನಿಜವಾದ ಶೂರ ಸಾವಿನ ಭಯ ತನ್ನನ್ನು ಎಂದೂ ಆಳದಂತೆ ನೋಡಿಕೊಳ್ಳುತ್ತಾನೆ. ಭಯ ತನ್ನ ಗೌರವವನ್ನು, ಕರ್ತವ್ಯವನ್ನು, ರಾಷ್ಟ್ರವನ್ನು, ಮಾನವ ಸಮಾಜವನ್ನು, ಆವರಿಸದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುತ್ತಾನೆ.
.
ಪ್ರಧಾನಿ ಮೋದಿಯವರಿಗೆ ಪೇಜಾವರ ಶ್ರೀಗಳ ಪತ್ರ
ಬಾಂಗ್ಲಾದೇಶದ ಹಿಂದುಗಳನ್ನು ರಕ್ಷಿಸಿ
ಉಡುಪಿ: ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಯುತ್ತಿರುವ ಭೀಭತ್ಸ ಕ್ರೌರ್ಯಗಳನ್ನು ನಿಲ್ಲಿಸಲು ಕೇಂದ್ರ ಸರ್ಕಾರ ತಡ ಮಾಡದೆ ಕಾರ್ಯಪ್ರವೃತ್ತರಾಗಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಶ್ರೀಗಳು ಜಗತ್ತಿನ ಸಮಸ್ತರ ಒಳತಿಗಾಗಿ ಹಿಂದು ಸಮಾಜ ನಿರಂತರ ಸ್ಪಂದಿಸಿದೆ. ತಾನೇ ತಾನಾಗಿ ಇನ್ನೊಬ್ಬರ ಮೇಲೆ ಪಾರಮ್ಯ ಸಾಧಿಸಲು ಹಿಂಸೆಯನ್ನು ಹಿಂದು ಸಮಾಜ ಯಾವತ್ತೂ ಅಸ್ತವಾಗಿ ಮಾಡಿಕೊಂಡಿಲ್ಲ. ಶಾಂತಿ ಸಹಬಾಳ್ವೆಯ ತತ್ವಗಳನ್ನು ನಮ್ಮ ಎಲ್ಲೆ ಮೀರಿ ಅನುಷ್ಠಾನಿಸಿದ್ದೇವೆ. ಆದರೆ ನಮ್ಮ ನೆರೆಯ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಹಿಂಸೆ, ಕೊಲೆ ಅತ್ಯಾಚಾರಗಳನ್ನು ಕಂಡು ಭಾರತದ ಹಿಂದುಗಳು ತೀವ್ರ ದುಃಖಿತರಾಗಿದ್ದಾರೆ. ಅಲ್ಲಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದ ದೇಶ ಬಿಟ್ಟು ಬಂದ ಮಾಜಿ ಪ್ರಧಾನಿ ಶೇಖ್ ಹಸೀನಾರಿಗೆ ಎಳ್ಳಷ್ಟೂ ಹಾನಿಯಾಗದಂತೆ ರಾಜಾಶ್ರಯ ಕೊಟ್ಟು ಭಾರತ ರಕ್ಷಣೆ ಕೊಟ್ಟಿದೆ.
ಈಗ ಸಂತ್ರಸ್ತ ಹಿಂದುಗಳಿಗೆ ಶೀಘ್ರ ರಕ್ಷಣೆ ಮತ್ತು ಇಡೀ ಜಗತ್ತಿನಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡಬೇಕಾಗಿದೆ.