Logo

VHP PUBLICATIONS

Hindu Vani


expand_more

ವಿದೇಶ ನೀತಿ

ಬಾಂಗ್ಲಾ ಹಿಂದು ಯುವಕನ ಬರ್ಬರ ಹತ್ಯೆ

ಹಿಂದು ಸಮಾಜದ ವಿರುದ್ಧ ಹಿಂಸಾಚಾರ-ಸಹಿಸಲಾಗದು

ವಿಶ್ವ ಹಿಂದು ಪರಿಷದ್ ಅಂತಾರಾಷ್ಟ್ರೀಯ ಅಧ್ಯಕ್ಷರೂ ಸರ್ವೋಚ್ಚ ನ್ಯಾಯಾಲಯದ ಜೇಷ್ಠ ನ್ಯಾಯವಾದಿಗಳೂ ಆಗಿರುವ ಶ್ರೀಅಲೋಕ ಕುಮಾರರವರು ಬಾಂಗ್ಲಾ ದೇಶದ ಮೈಮನ್ ಸಿಂಗ್‌ನ ಹಿಂದು ಯುವಕ ದೀಪುಚಂದ್ರ ದಾಸರು ಮುಸ್ಲಿಂ ಗುಂಪುಧಾಳಿಯಲ್ಲಿ ಬರ್ಬರವಾಗಿ ಹತ್ಯೆಗೆ ಈಡಾದುದನ್ನು ಖಂಡಿಸಿದರು.

ವಿದೇಶ ನೀತಿ

ದೀಪು ಚಂದ್ರದಾಸರು “ವಿವಿಧ ಹೆಸರು ಹೊಂದಿದ್ದು ದೇವರೊಬ್ಬನೆ” ಎಂದು ಹೇಳಿದುದೇ ಮುಸ್ಲಿಂ ಮುಸ್ಲಿಂ ಮತದ ಖಂಡನೆ ಎಂದು ಹೆಸರಿಸಲಾಗಿದ್ದಿತು. ಈ ಕಾರಣದಿಂದಲೇ ಅವರನ್ನು ಜೀವಂತ ಸುಟ್ಟು ಕೊಲ್ಲಲಾಯಿತು. ಅತ್ಯಂತ ಅಪಾಯಕಾರಿಯಾದ ಈ ಕ್ರೂರ ನಿಲುವು ಭಾರತದಲ್ಲಿ ಚಾಲ್ತಿಯಲ್ಲಿರುವ ಜಾತ್ಯತೀತತೆಗೆ ಮೂಲಭೂತವಾಗಿ ವಿರುದ್ಧವಾಗಿರುತ್ತದೆ. ಆದರೆ ತಾವೆಲ್ಲ ಜಾತ್ಯತೀತರೆಂದು ಬೊಬ್ಬೆಯಿಡುವ ಮಂದಿ ಈಗ ಮೌನಕ್ಕೆ ಶರಣಾಗಿರುವರು.

ಬಾಂಗ್ಲಾದಿಂದ ನಿರ್ವಾಸಿತರಾದ ಲೇಖಕಿ ತಸ್ಲಿಮಾ ನಸೀನ್ ಈ ಬಗ್ಗೆ ಹೇಳಿಕೆಯನ್ನು ನೀಡಿ ದೀಪುಚಂದ್ರರ ಮೇಲೆ ಮತಖಂಡನೆಯ ಸುಳ್ಳು ಆಪಾದನೆಯನ್ನು ಹಾಕಲಾಗಿದೆ. ಪೊಲೀಸರ ರಕ್ಷಣೆಯಲ್ಲಿ ಇರಬೇಕಿದ್ದ ದೀಪುರನ್ನು ಪೊಲೀಸರೇ ಮುಸ್ಲಿಂದೊಂಬಿ ಜನರ ಕೈಗೆ ಒಪ್ಪಿಸಿದರು. ಸರ್ಕಾರದ ಹೊಣೆಗಾರಿಕೆಯನ್ನು ಕೈ ಬಿಟ್ಟ ಸರ್ಕಾರದಲ್ಲಿ ಕಾನೂನು ವ್ಯವಸ್ಥೆಯೇ ಕುಸಿದು ಹೋಗಿದೆ. ಬಾಂಗ್ಲಾದೇಶವೀಗ ಕಾನೂನಿನ ಅನಿಶ್ಚತತೆ ಅರಾಜ ಕತೆಯಲ್ಲಿದೆ. ಇಂತಹ ಗೊಂದಲದ ವಾತಾವರಣದಲ್ಲಿ ಮೂಲಭೂತವಾದಿ ಉಗ್ರಗಾಮಿ ಮುಸ್ಲಿಮರು ಯಾವುದೇ ಭಯವಿಲ್ಲದೆ ಹಿಂದು, ಸಿಖ್ ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ ನಡೆಸುತ್ತಿರುವರು.

ಈಗ ನಡೆದ ಹಿಂದು ತರುಣನ ಬರ್ಬರ ಹತ್ಯೆಯು ಎಲ್ಲೋ ನಡೆದ ಒಂದು ಕೊಲೆ ಮಾತ್ರವಲ್ಲ. ಇದು ಬಾಂಗ್ಲಾದಲ್ಲಿ ಬೆಳೆಯುತ್ತಿರುವ ಅಭದ್ರತೆ ಭಯ ಮತ್ತು ಅಲ್ಪಸಂಖ್ಯಾತರ ಮೇಲಿನ ವ್ಯವಸ್ಥಿತ ಹಿಂಸಾಚಾರವೇ ಆಗಿದೆ. ಇದು ಇಡಿಯ ಜಗತ್ತಿನ ಚಿಂತೆಯ ವಿಷಯವಾಗಿದೆ. ಅಂತಾರಾಷ್ಟ್ರೀಯ ಸಮೂಹದ ಮಾನವೀಯ ಮತ್ತು ನೈತಿಕ ಹೊಣೆಯ ವಿಚಾರವಾಗಿದೆ. ಬಾಂಗ್ಲಾದೇಶದಲ್ಲಿ ಮಾನವ ಹಕ್ಕುಗಳ ರಕ್ಷಣೆ ಮತ್ತು ಅಲ್ಪಸಂಖ್ಯಾತರ ಸುರಕ್ಷೆಗಾಗಿ ಅಂತಾರಾಷ್ಟ್ರೀಯ ಸಮೂಹವು ಕ್ರಮವನ್ನು ಕೈಗೊಳ್ಳಬೇಕಾಗಿದೆ. ಭಾರತವೀಗ ಈ ಸನ್ನಿವೇಶದಲ್ಲಿ ಪ್ರೇಕ್ಷಕನಾಗಿರಲು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ನೆಲೆಯಲ್ಲಿ ಅನ್ಯಾಯಕೊಳಗಾದ ಸಮೂಹದ ಪರವಾಗಿ ಭಾರತವು ನಿಂತಿರುವುದು ಭಾರತದ ಘೋಷಿತ ನಿಲುವೇ ಆಗಿದೆ. ಬಾಂಗ್ಲಾದೇಶದ ಅಲ್ಪಸಂಖ್ಯಾತರ ಸುರಕ್ಷೆ ಭದ್ರತೆ ಮತ್ತು ಮಾನರಕ್ಷಣೆಗಾಗಿ ಭಾರತವೀಗ ಎಲ್ಲಾ ರೀತಿಯ ರಾಜತಾಂತ್ರಿಕ ರಾಜಕೀಯ ಮತ್ತು ಮಾನವೀಯ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಶ್ವ ಹಿಂದು ಪರಿಷದ್ ಭಾರತ ಸರ್ಕಾರವನ್ನು ಆಗ್ರಹಿಸುತ್ತದೆ.

ಶ್ರೀ ಅಲೋಕಕುಮಾರವರು ಬಾಂಗ್ಲಾದೇಶದ ಮಹಮ್ಮದ್‌ ಯೂನಸ್‌ಗೆ ನೀಡಿದ ನೋಬೆಲ್ ಪ್ರಶಸ್ತಿಯನ್ನು ಈ ಕೂಡಲೇ ಹಿಂಪಡೆಯಲು ಒತ್ತಾಯಿಸಿದರು. ದೇಶದ ಅಲ್ಪಸಂಖ್ಯಾತರನ್ನು ರಕ್ಷಿಸಲಾಗದೇ ಕಾನೂನು ವ್ಯವಸ್ಥೆಯನ್ನು ಕಾಪಾಡಲು ಅಶಕ್ತವಾದ ನೇತೃತ್ವವು ಯಾವುದೇ ಅಂತರಾಷ್ಟ್ರೀಯ ಮಾನ ಸನ್ಮಾನಕ್ಕೆ ಪಾತ್ರವಾಗಬಾರದು. ಯೂನಸ್ ಈ ಮೊದಲು ಭೂಪಟವೊಂದನ್ನು ಪ್ರದರ್ಶಿಸಿ ಬೃಹತ್ ಬಾಂಗ್ಲಾದೇಶವೆಂದು ಕರೆದು ಭಾರತಕ್ಕೆ ಸವಾಲು ಒಡ್ಡಿದ್ದರು. ಉಸ್ಮಾನ್ ಹಾದಿಗೆ ಸರ್ಕಾರಿ ಅಂತ್ಯ ಸಂಸ್ಕಾರದ ಗೌರವನ್ನು ನೀಡಿದುದನ್ನೂ ಖಂಡಿಸಿದರು. ಉಸ್ಮಾನನ ಈ ಕೃತ್ಯದಿಂದ ಈಶಾನ್ಯ ಭಾರತ ಭಾಗದಲ್ಲಿ ಪ್ರಚೋದಕ ವಾತಾವರಣವು ಸೃಷ್ಟಿಯಾಗಿದೆ ಎಂದು ಅವರು ಹೇಳಿದರು.

ವಿದೇಶ ನೀತಿ

ವಿಶ್ವ ಹಿಂದು ಪರಿಷದ್ ಬಾಂಗ್ಲಾದೇಶದ ಈ ಹಿಂಸಾತ್ಮಾಕ ನಿಲುವನ್ನು ವಿರೋಧಿಸಿ ಅಂತಾರಾಷ್ಟ್ರೀಯ ಕಾರ್ಯಾಚರಣೆಯನ್ನು ಆಗ್ರಹಿಸುತ್ತದೆ. ಬಾಂಗ್ಲಾದಲ್ಲಿ ಪ್ರಜಾಪ್ರಭುತ್ವ, ಜಾತ್ಯತೀತ ಮೌಲ್ಯಗಳು ಮತ್ತು ಕಾನೂನಿನ ಆಡಳಿತವನ್ನು ನಿರೀಕ್ಷಿಸುತ್ತದೆ. ಬಾಂಗ್ಲಾದ ಜನರಿಗೆ ಮಾನವ ಹಕ್ಕುಗಳು ಸತತ ಆರ್ಥಿಕ ಪ್ರಗತಿ, ಶಾಂತಿಯು ದೊರಕಬೇಕಾಗಿದೆ. ಈ ದಿಶೆಯಲ್ಲಿ ಬಾಂಗ್ಲಾದೇಶದಲ್ಲಿ ಪರಸ್ಪರ ಸೌಹಾರ್ದತೆ ಭದ್ರತೆ, ಮತ್ತು ನ್ಯಾಯಸ್ಥಾಪನೆಗೆ ಭಾರತ ಸರ್ಕಾರವು ವಹಿಸುವ ನಿಲುವನ್ನು ಮುಂದುವರಿಸಲು ಕರೆ ನೀಡುತ್ತದೆ. ಈ ಮೂಲಕ ಪಾಶ್ಚಾತ್ಯ ರಾಷ್ಟ್ರಗಳ ಸ್ವಾರ್ಥಿ ರಾಜಕಾರಣದಿಂದ ಹೊರಬಂದು ದೂರಗಾಮಿ ಶಾಂತಿ ಸ್ಥಾಪನೆಗೆ ಭಾರತವು ಕಾರಣವಾಗಬೇಕೆಂದು ಬಯಸುತ್ತದೆ.

ವಿದೇಶ ನೀತಿ

.