Logo

VHP PUBLICATIONS

Hindu Vani


expand_more

ಪರಿಹಾರ

By - ಕಟೀಲು ದಿನೇಶ ಪೈ, ಮಂಗಳೂರು

ದೇವಸ್ಥಾನಗಳ ಆಡಳಿತಕ್ಕೆ-ಹಿಂದೂ ಟೆಂಪಲ್ ಸ್ಟೀಮ್

ಸರಕಾರಿ ನಿಯಂತ್ರಿತ ದೇವಸ್ಥಾನಗಳನ್ನು ಹಿಂದೂ ಸಮಾಜಕ್ಕೆ ಹಸ್ತಾಂತರಿಸುವ ಯೋಜನೆಯೇ ಹಿಂದೂ ಟೆಂಪಲ್ ಸ್ಟೀಮ್. ದೇವಸ್ಥಾನಗಳು ನಮ್ಮ ದೇಶದ ಜೀವಾಳ. ದೇವಸ್ಥಾನದಲ್ಲಿ ಪೂಜೆಗಳು ಚೆನ್ನಾಗಿ ನಡೆದರೆ ಅಲ್ಲಿ ದೇವ ಸಾನ್ನಿಧ್ಯ ಬಲಿಷ್ಠವಾಗುತ್ತದೆ. ದೇವ ಸಾನ್ನಿಧ್ಯ ಬಲಿಷ್ಠವಾದಂತೆ ಅದಿರುವ ಗ್ರಾಮ, ರಾಜ್ಯ, ದೇಶಗಳು ಸುಖ ಶಾಂತಿ ನೆಮ್ಮದಿಯಿಂದ ಕೂಡಿ ಸುಭಿಕ್ಷವಾಗುತ್ತವೆ. ದೇವಸ್ಥಾನಗಳಲ್ಲಿ ದೇವ ಸಾನ್ನಿಧ್ಯ ಬಲಿಷ್ಠವಾಗಬೇಕಾದರೆ ಉತ್ತಮ ಅರ್ಚಕರು ಇರಬೇಕು. ಪೂಜೆಯನ್ನು ನಿರ್ಭೀತಿಯಿಂದ ನಿರ್ವಹಿಸಬೇಕು. ಉತ್ತಮ ಆಡಳಿತವೂ ಬೇಕು. ಇದು ಸರಕಾರ ನಿಯಂತ್ರಿತ ದೇವಸ್ಥಾನಗಳಿಂದ ಸಾಧ್ಯವಿಲ್ಲ. ಆದ್ದರಿಂದ ಈಗ ದೇಶಾದ್ಯಂತ ಇರುವ ಎಲ್ಲಾ ಸರಕಾರಿ ಸಮಾಜಕ್ಕೆ ಹಸ್ತಾಂತರವಾಗಬೇಕು. ಇದು ಇಡೀ ನಿಯಂತ್ರಿತ ದೇವಸ್ಥಾನಗಳು ಹಿಂದೂ ಹಿಂದೂ ಸಮಾಜದ ಒತ್ತಾಯವಾಗಿದೆ, ಪ್ರಸ್ತುತ ದೇಶದಲ್ಲಿ ಸುಮಾರು 7 ಲಕ್ಷ ದೇವಸ್ಥಾನಗಳಿದ್ದು ಅವುಗಳಲ್ಲಿ ಅಂದಾಜು 2 ಲಕ್ಷ ದೇವಸ್ಥಾನಗಳು ವಿವಿಧ ರಾಜ್ಯ ಸರಕಾರಗಳ ನಿಯಂತ್ರಣದಲ್ಲಿದ್ದು ಸ್ಥಳೀಯ ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಹಿಂದೂ ಧರ್ಮಾದಾಯಿ ದತ್ತಿ ಕಾಯಿದೆಗಳನ್ವಯ ನಡೆಯುತ್ತಿದ್ದು ಆಡಳಿತಕ್ಕೆ ಬಹುತೇಕ ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನು ಅವರಿಗೆ ದೇವರ ಮೇಲೆ ಶ್ರದ್ಧೆ ಇದ್ದರೂ ಇಲ್ಲದಿದ್ದರೂ ನೇಮಕ ಮಾಡಲಾಗುತ್ತಿದೆ. ಹಲವು ಸಂದರ್ಭಗಳಲ್ಲಿ ದೇವಸ್ಥಾನದ ಆಡಳಿತಕ್ಕೆ ಸರಕಾರವು ತನ್ನ ಅಧಿಕಾರಿಗಳನ್ನು ನೇಮಕ ಮಾಡುತ್ತಿದೆ. ಈ ನೇಮಕಾತಿ ವ್ಯವಸ್ಥೆಯ ಮೂಲಕ ಸರಕಾರವು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಬೇಕಾದಂತೆ ದೇವಸ್ಥಾನಗಳನ್ನು ನಿಯಂತ್ರಿಸುತ್ತದೆ. ಇದರ ಪರಿಣಾಮವಾಗಿ ದೇವಸ್ಥಾನಗಳು ಹಲವಾರು ಕಡೆ ಧಾರ್ಮಿಕ ಕೇಂದ್ರಗಳಾಗುವ ಬದಲು ಭ್ರಷ್ಟಾಚಾರದ ಕೇಂದ್ರಗಳಾಗಿವೆ.

ಪರಿಹಾರ

.

ತಮಿಳನಾಡು ಒಂದರಲ್ಲೇ 50 ಸಾವಿರ ಎಕರೆಗಳಿಗೂ ಮಿಕ್ಕಿ ಜಮೀನು ಅತಿಕ್ರಮಣವಾಗಿ ಅನ್ಯ ಉದ್ದೇಶಗಳಿಗೆ, ಖಾಸಗಿ ಕಾರ್ಯಕ್ಕೂ ದುರುಪಯೋಗವಾಗುತ್ತಿದೆ. 1200 ದೇವಸ್ಥಾನಗಳ ಮೂರ್ತಿಗಳು ಕದ್ದು ಹೋಗಿವೆ. ಇನ್ನೂ ಸಾವಿರಾರು ದೇವಸ್ಥಾನಗಳಲ್ಲಿ ಪ್ರತಿಷ್ಠೆಗೊಂಡ ಅತಿ ಬೆಲೆಬಾಳುವ ಮೂರ್ತಿಗಳನ್ನು ನಕಲಿ ಮೂರ್ತಿಗಳಿಂದ ಬದಲಾಯಿಸಲಾಗಿದೆ. ಇನ್ನೂ ಸಾವಿರಾರು ದೇವಸ್ಥಾನಗಳು ಸರಿಯಾದ ಅಡಳಿತವಿಲ್ಲದೆ ಕೆಲವೇ ಸಮಯದಲ್ಲಿ ಮುಚ್ಚುವ ಸ್ಥಿತಿಯಲ್ಲಿವೆ. ಇತರ ರಾಜ್ಯಗಳಲ್ಲಿಯೂ ಭೀಕರ ಪರಿಣಾಮಗಳಾಗಿದ್ದು ದೇವಸ್ಥಾನಗಳ ನೈವೇದ್ಯಕ್ಕೆ ಸಹಿತ, ಮತ್ತು ಇತರ ದೇವತಾ ಕಾರ್ಯಗಳ ಸಾಮಗ್ರಿ ಖರೀದಿಯಲ್ಲಿ ಸರಕಾರೀ ಹಸ್ತಕ್ಷೇಪಗಳಾಗಿದೆ. ತಿರುಪತಿ ತಿರುಮಲ ದೇವಸ್ಥಾನಗಳಲ್ಲಿ ಅಪವಿತ್ರವಾಗಿರುವ ಚರ್ಬಿ ಮಿಶ್ರಿತ ತುಪ್ಪದಿಂದ ಲಡು ತಯಾರಿಸುತ್ತಿದ್ದ ಹಗರಣ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಇದೆಲ್ಲವನ್ನು ಸರಿಪಡಿಸಿ ದೇವರಿಗೆ ಉತ್ತಮ ಪೂಜೆ ನೆರವೇರಬೇಕಾದರೆ ಸರಕಾರದ ಕೈಯಿಂದ ದೇವಸ್ಥಾನಗಳು ಹಿಂದೂ ಸಮಾಜಕ್ಕೆ ಹಸ್ತಾಂತರಿಸಬೇಕಾಗಿದೆ. ಇಂದು ಹಲವಾರು ಆರ್ಥಿಕ ದುರ್ಬಲ ದೇವಸ್ಥಾನಗಳಿಗೆ ನಿತ್ಯ ಪೂಜೆಗೂ ಆರ್ಥಿಕ ಸಂಕಷ್ಟ ಒದಗಿದೆ. ಆದಾಗ್ಯೂ ಕೆಲವೇ ಶ್ರೀಮಂತ ದೇವಸ್ಥಾನಗಳ ವಾರ್ಷಿಕ ಆದಾಯಗಳು ಸಾವಿರಾರು ಕೋಟಿ ಇದ್ದು ಆ ಹಣವನ್ನು ಸರಕಾರವು ಧಾರ್ಮಿಕೇತರ ಕಾರ್ಯಗಳಿಗೆ ಉಪಯೋಗಿಸುತ್ತಿದೆ. ಶ್ರೀಮಂತ ಅಥವಾ ಆರ್ಥಿಕ ದುರ್ಬಲ ದೇವಸ್ಥಾನಗಳು ಇಡೀ ಹಿಂದೂ ಸಮಾಜಕ್ಕೆ ಸೇರಿದ್ದು ಶ್ರೀಮಂತ ದೇವಸ್ಥಾನಗಳ ಉಳಿಕೆ ದುಡ್ಡು ಎಲ್ಲ ದೇವಸ್ಥಾನಗಳಿಗೆ ಹಂಚಿ ಎಲ್ಲ ಕಡೆಯೂ ಉತ್ತಮ ಪೂಜೆ ನೆರವೇರುವಂತಾಗಬೇಕಾದರೆ ದೇವಸ್ಥಾನಗಳು ಇಡೀ ಹಿಂದೂ ಸಮಾಜಕ್ಕೆ ಹಸ್ತಾಂತರಗೊಳ್ಳಬೇಕಾಗಿದೆ. ಇದೀಗ ನ್ಯಾಯಾಲಯದ ಆದೇಶಗಳಂತೆ, ಸಂವಿಧಾನದತ್ತ ಧಾರ್ಮಿಕ ಸ್ವಾತಂತ್ರ್ಯ ದಂತೆ ದೇವಸ್ಥಾನಗಳು ಸರಕಾರಿ ನಿಯಂತ್ರಣಗಳಿಂದ ಹಿಂದೂ ಸಮಾಜಕ್ಕೆ ಕೊಡಬೇಕಾಗಿದೆ ಆದರೆ ಕೊಡುವುದು ಯಾರು? ಕೊಡುವುದು ಯಾರಿಗೆ? ಎಂಬ ಪ್ರಶ್ನೆ ಇದ್ದೆ ಅದಕ್ಕೆ ಉತ್ತರವಾಗಿ ಇಡೀ ದೇಶದ ದೇವಸ್ಥಾನಗಳನ್ನು ಏಕ ಕಾನೂನಿನಲ್ಲಿ ಎಲ್ಲ ದೇವಸ್ಥಾನಗಳನ್ನು ಹಿಂದೂ ಸಮಾಜಕ್ಕೆ ಬಿಟ್ಟು ಕೊಡಲು ಹಿಂದೂ ದೇವಸ್ಥಾನಗಳ (ಸ್ವಯಂ ಆಡಳಿತ) ಕಾಯಿದೆಯನ್ನು ತರಲು ಕರಡು ಕಾಯಿದೆಯೊಂದನ್ನು ಇಲ್ಲಿ ಖಾಸಗಿಯಾಗಿ ರಚಿಸಲಾಗಿದೆ.

ಇದರ ಬಗ್ಗೆ ವಿಶ್ವ ಹಿಂದು ಪರಿಷತ್ತಿನ ಮಂಗಳೂರು ಕಾರ್ಯಾಲಯ ವಿಶ್ವಶ್ರೀಯಲ್ಲಿ ಆಹ್ವಾನಿತ ವಕೀಲರುಗಳ ಬಳಿ ಚರ್ಚೆ ನಡೆಯಿತು. ಈ ಕರಡು ಕಾಯಿದೆಯ ಸಾರಾಂಶ ಹೀಗಿದೆ. ಕಾಯಿದೆಯು ಇಡೀ ದೇಶಕ್ಕೆ ಅನ್ವಯಿಸುವುದು. ದೇಶದಲ್ಲಿ ಮೊದಲು ಕೇಂದ್ರ ಸರಕಾರವು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯನ್ನು ಸ್ಥಾಪಿಸತಕ್ಕದ್ದು. ಈ ಇಲಾಖೆಯು ಇಡೀ ದೇಶದಲ್ಲಿರುವ ದೇವಸ್ಥಾನಗಳನ್ನು ಎ. ಬಿ. 2. ಎನ್ ಎಂದು ವಾರ್ಷಿಕ ಆದಾಯವನ್ನಾಧರಿಸಿ ವರ್ಗೀಕರಿಸತಕ್ಕದ್ದು. ನಂತರ ಕಾಯಿದೆಯಲ್ಲಿ ಪ್ರಸ್ತಾವಿಸಿರುವ ಹಿಂದೂ ಟೆಂಪಲ್ ಸ್ಟೀಮ್ ನಂತೆ ರಾಷ್ಟ್ರೀಯ, ರಾಜ್ಯ, ಜಿಲ್ಲಾ ಹಿಂದು ಧಾರ್ಮಿಕ ಪರಿಷತ್ತುಗಳನ್ನು ಪ್ರಜಾಪ್ರಭುತ್ವದ ರೀತಿಯಲ್ಲಿ ಸ್ಥಾಪಿಸಬೇಕು. ಸಿ ದೇವಸ್ಥಾನಕ್ಕೆ ಆಡಳಿತ ಸಮಿತಿಯನ್ನು ಸ್ಥಳೀಯ ದೇವಸ್ಥಾನ ವ್ಯಾಪ್ತಿಯ ಹಿಂದೂಗಳು ಮಾತ್ರ ಮತದಾರರಾಗಿ ಚುನಾಯಿಸುತ್ತಾರೆ. ಹಾಗೆ ಸಿ ವರ್ಗದ ದೇವಸ್ಥಾನಗಳ ಆಡಳಿತ ಸಮಿತಿ ಸದಸ್ಯರು ಜಿಲ್ಲಾ ಹಿಂದೂ ಧಾರ್ಮಿಕ ಪರಿಷದ ಸದಸ್ಯರನ್ನು ಆಯ್ಕೆ ಮಾಡುತ್ತಾರೆ. ಬಿ ವರ್ಗದ ದೇವಸ್ಥಾನಗಳನ್ನು ಆಯಾ ದೇವಸ್ಥಾನ ಇರುವ ಜಿಲ್ಲೆಯ ಸಿ ವರ್ಗದ ದೇವಸ್ಥಾನಗಳ ಆಡಳಿತ ಸಮಿತಿಯ ಸದಸ್ಯರು ಹಾಗೂ ಜಿಲ್ಲಾ ಹಿಂದೂ ಧಾರ್ಮಿಕ ಪರಿಷದ ಸದಸ್ಯರು ಆಯ್ಕೆ ಮಾಡುತ್ತಾರೆ. ಅದೇ ರೀತಿ ಎ ವರ್ಗ ದೇವಸ್ಥಾನಕ್ಕೆ ಆಯಾ ದೇವಸ್ಥಾನಗಳಿರುವ ಜಿಲ್ಲೆಯ ಬಿ ಮತ್ತು ಸಿ ವರ್ಗ ದೇವಸ್ಥಾನದ ಸದಸ್ಯರು ಹಾಗೂ ಜಿಲ್ಲಾ ಧಾರ್ಮಿಕ ಪರಿಷದ ಸದಸ್ಯರು ಮತ್ತು ರಾಜ್ಯ ಹಿಂದೂ ಧಾರ್ಮಿಕ ಪರಿಷದನ ಜಿಲ್ಲಾ ಪ್ರತಿನಿಧಿ ಇವರುಗಳು ಸೇರಿ ಆಯ್ಕೆ ಮಾಡುತ್ತಾರೆ. ಇದೆ ರೀತಿ ರಾಜ್ಯ, ರಾಷ್ಟ್ರೀಯ ಹಿಂದೂ ಧಾರ್ಮಿಕ ಪರಿಷದ, ಏನ್ ವರ್ಗದ ದೇವಸ್ಥಾನಕ್ಕೆ ಆಡಳಿತ ಸಮಿತಿ ಸದಸ್ಯರ ಆಯ್ಕೆ ಆಗುತ್ತದೆ.

ಆನುವಂಶಿಕ ದೇವಸ್ಥಾನಗಳು, ಖಾಸಗಿ ದೇವಸ್ಥಾನಗಳು, ಮಠ ಮಂದಿರಗಳ ಆಡಳಿತದ ಬಗ್ಗೆಯೂ ಚರ್ಚಿಸಲಾಗಿದೆ. ಯಾವುದೇ ಕಾರಣಕ್ಕೆ ಹಿಂದೂ ಧಾರ್ಮಿಕ ಪರಿಷದ್‌ಗಳ ಸದಸ್ಯತನಕ್ಕೆ ಆಗಲಿ, ದೇವಸ್ಥಾನಗಳ ಆಡಳಿತ ಸಮಿತಿ ಸದಸ್ಯತನಕ್ಕಾಗಲಿ ಸರಕಾರದಿಂದ ಅಥವಾ ಇನ್ಯಾವ ರೀತಿಯ ನೇಮಕ ಪ್ರಕ್ರಿಯೆ ಇರುವುದಿಲ್ಲ. ಸದಸ್ಯರಾರು ಯಾವುದೇ ಪಕ್ಷ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರಬಾರದು. ಹೀಗೆ ಹಸ್ತಾಂತರಿತ ದೇವಸ್ಥಾನಗಳೆಲ್ಲವೂ ಹಿಂದೂ ಸಮಾಜದ ಆಸ್ತಿಯಾಗಿದೆ. ಶ್ರೀಮಂತ ದೇವಸ್ಥಾನದ ಉಳಿಕೆ ಆದಾಯವನ್ನು ಆರ್ಥಿಕ ದುರ್ಬಲ ದೇವಸ್ಥಾನಗಳಿಗೆ ವಿತರಿಸಲು ಹಿಂದೂ ದೇವನಿಧಿಯನ್ನು ಪ್ರಸ್ತಾವಿಸಲಾಗಿದೆ. ಆಡಳಿತವನ್ನು ಹಸ್ತಾಂತರಿಸುವ ಪ್ರಕ್ರಿಯೆಯನ್ನು ಹಿಂದೂ ಟೆಂಪಲ್ ಟಾಸ್ಕ್ ಫೋರ್ಸ್ ನಿರ್ವಹಿಸಲಿದೆ. ಯಾವುದೇ ತಕರಾರನ್ನು ನಿರ್ವಹಿಸಲು ಹಿಂದೂ ನ್ಯಾಯಮಂಡಲಿಯನ್ನು ಸ್ಥಾಪಿಸಲು ಪ್ರಸ್ಥಾಪಿಸಲಾಗಿದೆ. ದೇವಸ್ಥಾನಗಳ ಚಿನ್ನ ಬೆಳ್ಳಿ ಸಹಿತ ಅಮೂಲ್ಯ ವಸ್ತುಗಳ ಮತ್ತು ಜಮೀನು, ಕಟ್ಟಡಗಳ ಭೌತಿಕ ಆಡಿಟನ್ನು ಸರಕಾರದ ಪ್ರತಿನಿಧಿ, ಹಿಂದೂ ಧಾರ್ಮಿಕ ಪರಿಷದ ಪ್ರತಿನಿಧಿಗಳ ಸಮಕ್ಷಮ ಪ್ರತಿ ವರ್ಷ ನಡೆಸಲು ಪ್ರಸ್ತಾವಿಸಲಾಗಿದೆ. ಭಾರತೀಯ ಸಂವಿಧಾನದ ಆಶಯದಂತೆ ರಚಿಸಲಾಗಿರುವ ಈ ವ್ಯವಸ್ಥೆ ಚೆನ್ನಾಗಿ ನಡೆದಾಗ ಇಡೀ ಹಿಂದೂ ಸಮಾಜ ಒಗ್ಗಟ್ಟಾಗಿ ಬಲಿಷ್ಠವಾಗುವುದು ಖಚಿತ.

ಲೋಕಾಃ ಸಮಸ್ತಾ ಸುಖಿನೋ ಭವಂತು

(ಹೆಚ್ಚಿನ ವಿವರಗಳಿಗೆ ಇದೇ ಲೇಖಕರ “Mandir Mukthi ಪುಸ್ತಕವನ್ನು ಓದಬಹುದು)


ಪರಿಹಾರ

.