Logo

VHP PUBLICATIONS

Hindu Vani


expand_more

ಸಂವಾದ

'ಧಾರ್ಮಿಕ ಅಲ್ಪಸಂಖ್ಯಾತರು'

ಎನ್ನುವುದರ ತಾರ್ಕಿಕ ವಾಖ್ಯೆಯ ಅಗತ್ಯ

'ಧಾರ್ಮಿಕ ಅಲ್ಪಸಂಖ್ಯಾತರು' ಎನ್ನುವ ಪ್ರತ್ಯೇಕ ವಿಂಗಡಣೆಯ ಔಚಿತ್ಯವೇನು ಎನ್ನುವುದರ ಸೃಷ್ಟಿಕರಣವು ಈಗ ಬೇಕಾಗಿದೆ. ಭಾರತದಲ್ಲಿ 'ಅಲ್ಪಸಂಖ್ಯಾತ' ಎಂದು ಕರೆಸಿಕೊಳ್ಳುವ ಸ್ಥಾನವನ್ನು ಕಲ್ಪಿಸಿಕೊಟ್ಟು ಕೆಲವು ವಿಶೇಷ ಸಮುದಾಯಗಳಿಗೆ ಧರ್ಮದ ಆಧಾರದಲ್ಲಿ ಸೌಲಭ್ಯಗಳನ್ನು ಹಾಗೂ ಅಧಿಕಾರಗಳನ್ನು ನೀಡಲಾಗಿದೆ. ಆದರೆ ಈ ಅನುಕೂಲತೆಗಳನ್ನು ಅವು ದುರುಪಯೋಗ ಮಾಡಿಕೊಂಡಿರುವುದು ಈಗ ಗಮನಿಸಿಬೇಕಾಗಿದೆ. ಫರೀದಾಬಾದಿನ ಅಲ್. ಫಲಾಹ್ ವಿಶ್ವ ವಿದ್ಯಾಲಯದ ವೈದ್ಯಕೀಯ ಕಾಲೇಜು ಅಲ್ಪಸಂಖ್ಯಾತ ಸೌಕರ್ಯಗಳನ್ನು ಪಡೆದು ಅಲ್ಲಿ ಪ್ರತ್ಯೇಕತೆಯ, ಉಗ್ರಗಾಮಿ ದೇಶ ವಿರೋಧಿ ಚಟುವಟಿಕೆಗಳಿಗೆ ತರಬೇತಿಯನ್ನು ನೀಡುತ್ತಿರುವುದು ಬೆಳಕಿಗೆ ಬಂದಿದೆ.

'ಅಲ್ಪಸಂಖ್ಯಾತ' ಎನ್ನುವ ನೆಲೆಯಲ್ಲಿ ಪ್ರಾರಂಭವಾದ ಶಿಕ್ಷಣ ಸಂಸ್ಥೆಗಳ ಆಡಳಿತ ಸಮಿತಿಯ ಸದಸ್ಯರು ಮಾತ್ರ ಅಲ್ಪಸಂಖ್ಯಾತ ಸಮುದಾಯದವರಾದರೆ ಸಾಲದು. ಅಲ್ಲಿ ಓದುವ ವಿದ್ಯಾರ್ಥಿಗಳೂ ಶೇಕಡಾ75ರಷ್ಟು ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾಗಿರಬೇಕು. ಆದರೆ ಇಂತಹ ಸಂಸ್ಥೆಗಳಲ್ಲಿ ಇರುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಭಾಗದ ಸಂಖ್ಯೆಯು ಬಹುಸಂಖ್ಯಾತರೇ ಆಗಿರುತ್ತಾರೆ.

1992ರಲ್ಲಿ ಆಗಿನ ಕಾಂಗ್ರೆಸ್ ಸರ್ಕಾರವು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗವನ್ನು ರಚಿಸಿತು. ಈ ಆಯೋಗವು ಅಲ್ಪಸಂಖ್ಯಾತರಿಗೆ ಅಪರಿಮಿತ ಸ್ವಾತಂತ್ರ್ಯವನ್ನೂ ಸೌಲಭ್ಯವನ್ನೂ ಒದಗಿಸಿತು. ಈ ಮೂಲಕ ಅವರ ಪ್ರಾರ್ಥನಾ ಸ್ಥಳಗಳು, ಶಿಕ್ಷಣ ಕೇಂದ್ರಗಳು ಮತ್ತು ಪಠ್ಯಕ್ರಮಗಳಲ್ಲಿ ಸರ್ಕಾರವು ಹಸ್ತಕ್ಷೇಪ ಮಾಡುವಂತಿಲ್ಲ. ಇದರಿಂದ ಓಟ್ ಬ್ಯಾಂಕ್ ಎಂಬ ಕೊಳಕು ರಾಜಕೀಯವು ನಿರ್ಮಾಣವಾಯಿತು. ಅಷ್ಟೇ ಅಲ್ಲ ದೇಶದ ಅಖಂಡತೆಗೂ ಮಾರಕವಾದ ಪರಿಣಾಮಗಳು ಕಂಡು ಬಂದವು.

ನಮ್ಮ ಸಂವಿಧಾನ ಕರ್ತರಿಗೆ ಭಾರತವೆಂದರೆ ಅದು ಒಂದು ಸಮುದಾಯ ಒಂದು ರಾಷ್ಟ್ರವೆನ್ನುವ ಕಲ್ಪನೆಯಿದ್ದಿತು. ಆದರೆ ಅಲ್ಪಸಂಖ್ಯಾತರಿಗೆ ದೊರಕುವ ಸೌಲಭ್ಯಗಳನ್ನು ಕಂಡ ಹಲವು ಹಿಂದು ಸಮಾಜದ ವರ್ಗಗಳು ಇಂತಹ ಸೌಲಭ್ಯಗಳಿಗಾಗಿ ವಿಧವಿಧದ ಅಲ್ಪಸಂಖ್ಯಾತ ಹಣೆ ಪಟ್ಟಿಯನ್ನು ಪಡೆಯಲು ಪೈಪೋಟಿಗೆ ಇಳಿದವು. ಆ ಮೂಲಕ ಸಮಾಜದಲ್ಲಿ ವಿವಿಧ ವಿಭಾಗಗಳು ಪ್ರಾರಂಭವಾದವು.

ಭಾರತ ಸಂವಿಧಾನದಲ್ಲಿ ಅಲ್ಪಸಂಖ್ಯಾತರೆನ್ನುವ ವರ್ಗೀಕರಣಕ್ಕೆ ಆಸ್ಪದವೇ ಇಲ್ಲ. ಮುಸ್ಲಿಂ ಮತ್ತು ಕ್ರೈಸ್ತ ಮತಗಳಿಂದಾಗಿ ಭಾರತದಲ್ಲಿ ಧರ್ಮಾಧಾರಿತ ಪ್ರತ್ಯೇಕತೆಗಳು ಪ್ರಾರಂಭವಾದವು. ಈ ಎರಡು ಮತಾವಲಂಬಿಗಳ ಸಂಖ್ಯಾವೃದ್ಧಿಯು ಉಳಿದ ಸಮುದಾಯಗಳ ಹೆಚ್ಚಳಕ್ಕಿಂತಲೂ ಅಧಿಕ. ಹಾಗಿರುವಾಗ ಅವುಗಳನ್ನು ಹೇಗೆ ಅಲ್ಪಸಂಖ್ಯಾತರೆನ್ನಬಹುದು?.

ಸಂವಿಧಾನವು ಭಾಷೆ, ಪ್ರದೇಶ, ಲಿಂಗ ಮತ್ತು ಪೂಜಾ ಪದ್ಧತಿಯ ವ್ಯತ್ಯಾಸಗಳನ್ನು ಮೀರಿ ಎಲ್ಲರಿಗೂ ಸಮಾನ ಅಧಿಕಾರ, ಹಕ್ಕುಗಳನ್ನು ನೀಡಿದೆ. ಹಾಗಿರುವಾಗ ದೇಶದ ನಾಗರಿಕರನ್ನು ಅಲ್ಪಸಂಖ್ಯಾತರು ಅಥವಾ ಬಹುಸಂಖ್ಯಾತರೆಂದು ವರ್ಗಿಕರಿಸುವುದರ ಔಚಿತ್ಯವಿಲ್ಲ.

ಈ ಕೆಳಗಿನವರನ್ನು ಅಲ್ಪಸಂಖ್ಯಾತರು ಎನ್ನಬಹುದೇ?

1. ಜಗತ್ತಿನ ಜನಸಂಖ್ಯೆಯ ಮೊದಲ ಮತ್ತು ಎರಡನೇ ಸ್ಥಾನದಲ್ಲಿರುವವರು ಕ್ರೈಸ್ತರು ಮತ್ತು ಮುಸ್ಲಿಮರು ಅವರು ಅಲ್ಪಸಂಖ್ಯಾತರೆನಿಸುವರೇ?

2. ಬಹುದೇಶಗಳ ಧರ್ಮವೆನಿಸಿಕೊಂಡು ಜಗತ್ತಿನ ಜನಸಂಖ್ಯೆಯಲ್ಲಿ ಪ್ರಭಾವ ಬೀರುತ್ತಿರುವ ಮತಾವಲಂಬಿಗಳು ಅಲ್ಪಸಂಖ್ಯಾತರಾಗುವರೇ?

3. ಯಾರ ಸಂಖ್ಯೆಯು ಭಾರತದಲ್ಲೂ ಮತ್ತು ಜಗತ್ತಿನ ಇತರ ದೇಶಗಳಲ್ಲೂ ಹೆಚ್ಚುತ್ತಲೇ ಇದೆಯೋ ಅವು ಅಲ್ಪಸಂಖ್ಯಾತ ವೆನಿಸುವುದೇ?

4. ಯಾರು ಧರ್ಮದ ಆಧಾರದಲ್ಲಿ ಅಲ್ಪಸಂಖ್ಯಾತರೆಂದು ಕರೆಯಬಹುದೇ. ಸಂತ್ರಸ್ಥರೆನಿಸಿಕೊಂಡಿಲ್ಲವೋ ಅವರನ್ನು

ಇಂತಹ ಹಲವು ವಿರೋಧಾಭಾಸಗಳಿರುವಾಗ ಅಲ್ಪಸಂಖ್ಯಾತ ಎನ್ನುವುದಕ್ಕೆ ಸರಿಗಟ್ಟಾದ ತಾರ್ಕಿಕ ವಿವರಣೆಯ ಅವಶ್ಯವೀಗ ಇದೆ. ಈಗಾಗಲೇ ಸರ್ವೋಚ್ಚ ನ್ಯಾಯಾಲಯವು ಸರ್ಕಾರವನ್ನು ಈ ಶಬ್ದದ ಕುರಿತು ಅದರ ಅಭಿಪ್ರಾಯವನ್ನು ವಿವರಿಸಲು ಆಗ್ರಹಿಸಿದೆ. ಅಷ್ಟೇ ಅಲ್ಲ ಅಲ್ಪಸಂಖ್ಯಾತವಾದದ ಅಪಾಯದ ಕುರಿತು ಕೂಡಾ ಎಚ್ಚರಿಸಿದೆ.

ಸಂವಿಧಾನದ 30ನೇ ವಿಧಿಯು ಅಲ್ಪಸಂಖ್ಯಾತರಿಗೆ ಯಾವ ಯಾವ ಅಧಿಕಾರವನ್ನು ಸೌಲಭ್ಯವನ್ನೂ ನೀಡಿದೆಯೋ ಅವೆಲ್ಲವನ್ನೂ ಸಂವಿಧಾನದ ಒಂದು ರಾಷ್ಟ್ರ ಒಂದು ಜನಾಂಗವೆನ್ನುವ ಮೂಲ ಆಶಯಕ್ಕೆ ಅನುಗುಣವಾಗಿ ಸಂಪೂರ್ಣ ಭಾರತೀಯ ಧಾರ್ಮಿಕ ಸಮುದಾಯಗಳಿಗೂ ದೊರಕಬೇಕಾಗಿದೆ.

ವಿಶ್ವ ಹಿಂದು ಪರಿಷತ್ತಿನ ಪ್ರಾಂತ ಬೈಠಕ್ ದೇಶದ ಪ್ರಾಜ್ಞರಲ್ಲಿ ಈ ವಿಚಾರದ ಕುರಿತು ಚರ್ಚೆ ಮತ್ತು ಸಂವಾದಗಳು ನಡೆಯಲಿ ಎಂದು ಬಯಸುತ್ತದೆ. ಭಾರತದ ಸಂಸತ್ತು ಮತ್ತು ಸರ್ಕಾರವು ಅಲ್ಪಸಂಖ್ಯಾತ ಎನ್ನುವ ಶಬ್ದಕ್ಕೆ ಯೋಗ್ಯ ಮತ್ತು ತಾರ್ಕಿಕ ಸ್ಪಷ್ಟ ಮತ್ತು ನಿಖರ ಪರಿಭಾಷೆಯನ್ನು ಒದಗಿಸಲು ಮನವಿಯನ್ನು ಮಾಡುತ್ತದೆ.

ಸಂವಾದ

.