Hindu Vani
Index
ಸಂಸ್ಕೃತಿ
ಹೆಸರಿನಲ್ಲಿದೆ ಸಂಸ್ಕೃತಿ
ಆಪಸ್ತಂಬ :
ಬೃಗುವಂಶದ ಮಹರ್ಷಿ, ಅಕ್ಷಸೂತ್ರೆ ಈತನ ಪತ್ನಿ, ಇವರ ಮಗ ಕರ್ಕಿ. 18 ಮಂದಿ ಸ್ಮೃತಿಕಾರರಲ್ಲಿ ಇವರೂ ಒಬ್ಬರು. ಆಮೋದ : ಕಾವ್ಯ ಋಷಿಯ ಇನ್ನೊಂದು ಹೆಸರು. ಉಪಮನ್ಯು, ಆರುಣಿ, ಬೈದರು ಈ ಋಷಿಯ ಶಿಷ್ಯರು.
ಆಯತಿ:
ನಹುಷ ರಾಜ ಮತ್ತು ವಿರಜೆಯರ ಮಗ, ಯಯಾತಿಯ ತಮ್ಮ.
ಆಯು:
ಪುರೂರವ ಊರ್ವಶಿಯರ ಮಗ, ಇವನ ಪತ್ನಿ ಸ್ವರ್ಭಾನವಿ ಇವರ ಐವರು ಮಕ್ಕಳಲ್ಲಿ ನಹುಷನೂ ಒಬ್ಬ.
ಆರುಷಿ:
ಮನುವಿನ ಮಗಳು. ಚ್ಯವನನನ್ನು ಮದುವೆಯಾದಳು. ಇವರಿಬ್ಬರ ಮಗ ಔರ್ವ.
ಆರ್ಯಕ:
ಸರ್ಪಗಳ ತಾಯಿ ಕದ್ರುವಿನ ಮಗ. ತನ್ನ ಮಗಳು ಭೋಜೆಯನ್ನು ಯದುವಂಶದ ಶೂರರಾಜನಿಗೆ ಮದುವೆ ಮಾಡಿಕೊಟ್ಟನು. ಕುಂತಿ ಮತ್ತು ವಸುದೇವರು ಭೋಜೆಯ ಮಕ್ಕಳು, ದುರ್ಯೋಧನನು ಮುಂದೆ ಭೀಮನಿಗೆ ವಿಷವುಣ್ಣಿಸಿ ಕೊಲ್ಲಲು ಪ್ರಯತ್ನಿಸಿ ನದಿಗೆ ತಳ್ಳಿ ಬಿಟ್ಟಿದ್ದನು. ಆದರೆ ಆರ್ಯಕನು ಭೀಮನು ತನ್ನ ಮರಿಮಗನಾದುದರಿಂದ ಅವನನ್ನು ತನ್ನ ನಾಗಲೋಕಕ್ಕೆ ಕರೆದೊಯ್ದು ಅವನಿಗೆ ಅಮೃತವನ್ನು ಕುಡಿಸಿ ಹತ್ತು ಸಾವಿರ ಆನೆಗಳ ಶಕ್ತಿಯು ಬರುವಂತೆ ಮಾಡಿ ಭೂಲೋಕಕ್ಕೆ ಕಳುಹಿಸಿದನು.
ಆಶ್ವಲಾಯನ:
ವಿಶ್ವಾಮಿತ್ರ ಋಷಿಯ ಮಗ, ಸ್ಮೃತಿಕಾರರಲ್ಲಿ ಒಬ್ಬರು.
ಇಂದುಮತಿ:
ವಿದರ್ಭದ ರಾಜ ಭೋಜನ ಮಗಳು. ಇಕ್ಷಾಕು ವಂಶದ ರಾಜ ಅಜನನ್ನು ಮದುವೆಯಾಗಿ ದಶರಥನನ್ನು ಹೆತ್ತಳು.
ಇಂದ್ರ:
ದೇವತೆಗಳ ರಾಜ. ಇದು ಅಧಿಕಾರದ ಮತ್ತು ಹುದ್ದೆಯ ಹೆಸರು. ವ್ಯಕ್ತಿಯ ಹೆಸರಲ್ಲ. 14ಮಂದಿ ಇಂದ್ರರು ಇದ್ದಾರೆ. ಅವರಲ್ಲಿ ಏಳನೆಯವನು ಪುರಂದರ, ಈಗಿನ ಇಂದ್ರನು ಪುರಂದರ, ಇವನ ವಾಹನವಾದ ಆನೆಯ ಹೆಸರು ಐರಾವತ. ಇವನ ಆಯುಧವು ವಜ್ರ,
ಇಂದ್ರಾಣಿ:
ಇಂದ್ರನ ಪತ್ನಿ, ಈಕೆಯ ಹೆಸರು ಶಚಿದೇವಿ.
ಇರಾ:
ಕಶ್ಯಪ ಮುನಿಯ ಪತ್ನಿಯರಲ್ಲಿ ಒಬ್ಬಳು. ಸಸ್ಯ ಸಂಪತ್ತನ್ನು ಸೃಷ್ಟಿಸಿದವಳು.
ಈಶಾನ:
ಅಷ್ಟದಿಕ್ಷಾಲಕರಲ್ಲಿ ಒಬ್ಬ. ಈತನು ಇರುವ ದಿಕ್ಕಿಗೆ ಈಶಾನ್ಯವೆಂದು ಹೆಸರು. ಅಗಸ್ಯ: ಉತ್ತರದಿಂದ ದಕ್ಷಿಣಕ್ಕೆ ಬಂದು ಇಲ್ಲೇ ನೆಲೆಸಿದ ಋಷಿ, ವಾತಾಪಿ ಮತ್ತು ಇಲ್ವಲ ಎನ್ನುವ ಸಹೋದರರ ರಾಕ್ಷಸರನ್ನು ಜೀರ್ಣಿಸಿ ಕೊಂದವರು. ಇವರ ಪತ್ನಿ ಲೋಪಾ ಮುದ್ರೆ, ರಾಮಾಯಣದಲ್ಲಿ ರಾವಣ ಸಂಹಾರಕ್ಕಾಗಿ ರಾಮನಿಗೆ ಆದಿತ್ಯಹೃದಯ ಮಂತ್ರವನ್ನು ಉಪದೇಶಿಸಿ ಹುರಿದುಂಬಿಸಿದವರು.