Logo

VHP PUBLICATIONS

Hindu Vani


expand_more

ತೀರ್ಪು

ದೇವಸ್ಥಾನದ ಹಣ ದೇವರಿಗೆ -ಸರ್ವೋಚ್ಚ ನ್ಯಾಯಾಲಯ

ಭಕ್ತರು ದೇವಸ್ಥಾನಗಳಲ್ಲಿ ನೀಡಿದ ಹಣವು ದೇವರ ಸಂಪತ್ತು. ಅದನ್ನು ದೇವಸ್ಥಾನದ ಮತ್ತು ದೇವರ ಸಂಬಂಧದ ಕಾರ್ಯಗಳಿಗಾಗಿ ಮಾತ್ರ ವಿನಿಯೋಗಿಸಬೇಕು ಎನ್ನುವುದು ಭಕ್ತರ ಇಚ್ಛೆಯೂ ಹೌದು ಆಗ್ರಹವೂ ಹೌದು. ಉದಾಹರಣೆಗೆ; ಭಕ್ತರಿಗೆ ತಾವು ನೀಡುವ ಹಣವು ಆಸ್ಪತ್ರೆಯ ನಿರ್ಮಾಣಕ್ಕೆ ಉಪಯೋಗಿಸಬೇಕು ಎಂದಿದ್ದರೆ ಅಥವಾ ಶಾಲೆಯನ್ನು ಕಟ್ಟಲು ಖರ್ಚಾಗಲಿ ಎಂದಿದ್ದರೆ ಅಂತಹ ಕಾರ್ಯದಲ್ಲಿ ಆಸಕ್ತಿ ತೋರುವ ಹತ್ತಾರು ಸಂಘ ಸಂಸ್ಥೆಗಳಿಗೆ ನೇರವಾಗಿ ಅಲ್ಲಿ ತಮ್ಮ ದೇಣಿಗೆಯನ್ನು ನೀಡುತ್ತಿದ್ದರು. ಇಂತಹ ಹಲವು ಸಂಸ್ಥೆಗಳಿದ್ದು ಅವುಗಳಿಗೆ ತಮ್ಮ ಹಣವನ್ನು ಕೊಡಲು ವಿಪುಲ ಅವಕಾಶಗಳಿವೆ. ಹಾಗೆ ಮಾಡದೆ ಅವರು ದೇವಸ್ಥಾನಗಳಿಗೆ ಬಂದು ಈ ದೇಣಿಗೆಯನ್ನು ನೀಡಿದರು. ಅಥವಾ ಅಲ್ಲಿಯ ಹುಂಡಿಯಲ್ಲಿ ಆ ಕಾಣಿಕೆಯನ್ನು ಅರ್ಪಿಸಿದರು ಅಂದರೆ ಅವರ ಇಚ್ಛೆಯು ಅವರ ಆಸಕ್ತಿಯು ದೇವಕಾರ್ಯಗಳಲ್ಲೇ ಇದೆಯೆಂದಾಯಿತು.

ಈಚಿನ ಸರ್ವೋಚ್ಚ ನ್ಯಾಯಾಲಯದ ತೀರ್ಪು ಭಕ್ತರ ಇಂತಹ ಇಚ್ಚೆಯನ್ನು ಈಡೇರಿಸುವ ಸದುದ್ದೇಶವನ್ನು ಹೊಂದಿದೆ. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಸಿ.ಜೆ. ಸೂರ್ಯಕಾಂತ ಮತ್ತು ಜ್ಯೋತಿ ಮಾಲಾ ಬಾಗ್ನಿಯವರ ಪೀಠವು ಇದನ್ನು ಅಸಂದಿಗ್ಧವಾಗಿ ತಮ್ಮ ತೀರ್ಪಿನಲ್ಲಿ ವ್ಯಕ್ತಪಡಿಸಿದೆ.

'ಭಕ್ತರು ನೀಡಿದ ಹಣವು ದೇವಸ್ಥಾನದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಒಳಿತಿನ ಕಾರ್ಯಕ್ಕೆ ವಿನಿಯೋಗವಾಗಬೇಕು. ದೇವಸ್ಥಾನದ ಆಡಳಿತ ಮಂಡಳಿಯು ಈ ಮೂಲಕ ಮಾತ್ರವೇ ತಮ್ಮ ಮೇಲೆ ಸಾರ್ವಜನಿಕರು ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳಲು ಸಾಧ್ಯವಿದೆ. ದೇವಸ್ಥಾನದ ಹಣವನ್ನು ಉಳಿಸಿ ಅದನ್ನು ರಕ್ಷಿಸುವುದು ದೇವಸ್ಥಾನದ ಸಂಬಂಧಿತ ವಿಚಾರಗಳನ್ನು ನಡೆಸುವುದಕ್ಕಾಗಿ ಮಾತ್ರ ಪ್ರಕರಣದ ಹಿನ್ನೆಲೆ: ಕೇರಳ ರಾಜ್ಯದ ತಿರುವಲ್ಲ ದೇವಸ್ಥಾನದ ಠೇವಣಿಯ ಹಣವು ಸಹಕಾರಿ ಬ್ಯಾಂಕುಗಳಲ್ಲಿ ದ್ದಿತು. ಆದರೆ ದೇವಸ್ಥಾನದ ಕಾರ್ಯವಿಧಿಗಳ ಪ್ರಕಾರ ಅದನ್ನು ರಾಷ್ಟ್ರೀಯ ಬ್ಯಾಂಕುಗಳಲ್ಲಿ ಮಾತ್ರ ಇಡಲು ನಿಬಂಧಿಸಲಾಗಿದ್ದಿತು. ಆದರೆ ಸಹಕಾರ ಬ್ಯಾಂಕುಗಳಿಂದ ಆ ಠೇವಣಿಗಳನ್ನು ಹಿಂತೆಗೆದರೆ ಆ ಬ್ಯಾಂಕುಗಳು ನಷ್ಟದಲ್ಲಿ ಮುಂದುವರಿಯ ಬೇಕಾಗುತ್ತದೆ. ಆದುದರಿಂದ ಸಹಕಾರ ಬ್ಯಾಂಕುಗಳಿಂದ ಆ ಠೇವಣಿಗಳನ್ನು ಹಿಂತೆಗೆಯಬಾರದು ಎನ್ನುವುದು ಸರ್ಕಾರದ ವಾದವಾಗಿದ್ದಿತು.

ನ್ಯಾಯಾಲಯವು ಈ ವಾದವನ್ನು ನಿರಾಕರಿಸಿತು. ಠೇವಣಿಗಳನ್ನು ಆಕರ್ಷಿಸುವುದು ಆಯಾ ಬ್ಯಾಂಕುಗಳ ಕರ್ತವ್ಯವಾಗಿದೆ. ಬ್ಯಾಂಕುಗಳ ನಷ್ಟವನ್ನು ತುಂಬಲು ದೇವಸ್ಥಾನದ ಹಣವನ್ನು ವಿನಿಯೋಗಿಸುವುದು ಸರಿಯಲ್ಲ. ಗರಿಷ್ಟ ಬಡ್ಡಿಯ ದರವನ್ನು ನೀಡುವ ಆರ್ಥಿಕವಾಗಿ ಆರೋಗ್ಯಕರವಾಗಿರುವ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅವನ್ನು ವಿನಿಯೋಗಿಸುವುದನ್ನು ಏಕೆ ತಡೆಯುತ್ತಿದ್ದೀರಿ? ಎಂದ ನ್ಯಾಯಾಲಯವು ಸಹಕಾರಿ ಬ್ಯಾಂಕುಗಳಿಗೆ ಎಲ್ಲಾ ಠೇವಣಿಗಳನ್ನು 2 ತಿಂಗಳ ಒಳಗೆ ದೇವಸ್ಥಾನಕ್ಕೆ ಪಾವತಿಸುವಂತೆ ತೀರ್ಪು ನೀಡಿತು.