Logo

VHP PUBLICATIONS

Hindu Vani


expand_more

ಪ್ರತಿಧ್ವನಿ

ಪ್ರತಿಧ್ವನಿ

ವೈಚಾರಿಕ ಸಂಚಿಕೆ

ಈ ತಿಂಗಳ ಹಿಂದುವಾಣಿಯು ಪೂರ್ಣವಾಗಿ ಓದುಗರಿಗೆ ವೈಚಾರಿಕ ಸಂಚಿಕೆಯಾಗಿ ವಿಪುಲವಾದ ಬೌದ್ಧಿಕ ವಸ್ತು ವಿಚಾರಗಳನ್ನು ನೀಡಿದೆ. ಮಂದಿರವನ್ನು ಕಟ್ಟುವ ಸಂಕಲ್ಪವು ಈಡೇರಿದುದೂ ಅದನ್ನು ಕಾಣಲು ಬದುಕಿದ ಜೀವನವು ಸಾರ್ಥಕವೆಂದ ಸಣ್ಣ ಟಿಪ್ಪಣಿಯು ಹೃದಯಸ್ಪರ್ಶವೆನಿಸಿತು.

“ಕಾಲಃ ಪಚತಿ ಭೂತಾನಿ' ಎನ್ನುವ ಕಾಲದ ಮಹಿಮೆ, ಬಜರಂಗದಳ ಮತ್ತು ದುರ್ಗಾ ವಾಹಿನಿಗಳ ಅಭಿಯಾನ 'ನಶಾಮುಕ್ತಿ, ಮಾರೀಚ ವೇಷದ ಸೋನಮ್ ವಾಂಗ್‌ಚುಕ್, ಆನಂದರಂಗನಾಥರ ವಿಶೇಷ ಅನಿಸಿಕೆ, ಮದ್ರಾಸ್ ಉಚ್ಚನ್ಯಾಯಾಲದ ತೀರ್ಪು, ಬೆಳಕು ನೀಡಬಲ್ಲ ಬಾಳು ಕಮರಿ ಹೋಗದಂತೆ ಆಶಿಸುವ ಪ್ರಸ್ತುತ ಅಂಕಣಗಳೆಲ್ಲವೂ ಸುಂದರ ಲೇಖನಗಳು.

-- ಸ್ವಾಮಿನಾಥನ್, ಸರ್ಜಾಪುರ

ರಕ್ತ ದಾನವೂ ನಶಾಮುಕ್ತಿಯೂ

ಬಜರಂಗ ದಳದಿಂದ ರಾಜ್ಯಾದ್ಯಂತ ನಡೆದ ರಕ್ತದಾನ ಶಿಬಿರಗಳೂ, ಮಾದಕ ದ್ರವ್ಯಗಳಿಂದ ಯುವಜನರನ್ನು ದೂರಮಾಡುವ ನಶಾಮುಕ್ತಿ ಅಭಿಯಾನದ ಭಾವಚಿತ್ರಗಳೂ ಮುಂದಿನ ದಿನಗಳು ಸುರಕ್ಷಿತವೆನಿಸಬಹುದು ಎನ್ನುವ ವಿಶ್ವಾಸವನ್ನು ಹುಟ್ಟಿಸುತ್ತದೆ.

-ಕಾಮಾಕ್ಷಿ ಹರಿಹರ

ಬಾಲದಿನದ ಹೊಸ ವಿಶ್ಲೇಷಣೆ

ಗುರುಗೋವಿಂದ ಸಿಂಹರ ಹಸುಳೆ ಮಕ್ಕಳ ವೀರೋಚಿತ ಬಲಿದಾನವನ್ನು ನೆನಪಿಸುವ ವೀರ ಬಾಲದಿನ ಲೇಖನವು ಹೃದಯ ಸ್ಪರ್ಶಿಯೆನಿಸಿತು. ಇದರೊಂದಿಗೆ ದೇಶಕ್ಕಾಗಿ ಬದುಕಿದ ಕಾರ್ನಾಡು ಸದಾಶಿವ ರಾವ್ ಮತ್ತು ಧರ್ಮಕ್ಕಾಗಿ ಹೋರಾಡಿದ ಸರ್ಜೇರಾವ್ ಜೇಧೆಯವರಂತಹ ಮಹಾವ್ಯಕ್ತಿಗಳ ಕಥೆಯೂ ಮನಮಿಡಿಯುವಂತಿತ್ತು.

- ಶ್ರೀಮತಿ ರಾಜಶೇಖರ, ತುಮಕೂರು

ಬಜರಂಗದಳದ ರಕ್ತದಾನ

ತರುಣರು ರಕ್ತದಾನಿಗಳಾಗಿ ಸಮಾಜಕ್ಕೆ ಉಪಕಾರಿಗಳಾಗುವುದು ಹೃದಯಸ್ಪರ್ಶಿ ವಿಚಾರ.

- ನರಸಿಂಹನ್, ಕೋಲಾರ