Hindu Vani
Index
ಕಾನೂನು
ದ್ವೇಷ ಭಾಷಣ ಮಸೂದೆ 2025 ವಿರೋಧವೇಕೆ?
ಕರ್ನಾಟಕ ಸರಕಾರ ವಿಧಾನ ಸಭೆಯಲ್ಲಿ ಮಂಡಿಸಿದ ದ್ವೇಷ ಭಾಷಣ ಕಾಯಿದೆಯ ಉದ್ದೇಶವೇ ದ್ವೇಷ ಸಾಧಿಸಲು (ವಿರೋಧಿಗಳ ಮೇಲೆ ಪ್ರಯೋಗಿಸಲು ಒಂದು ಅಸ್ತ್ರ' ಎಂದು ಬಹಳಷ್ಟು ರಾಜಕೀಯ ಮತ್ತು ಸಾಮಾಜಿಕ ಚಿಂತಕರು, ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಹಾಗೆ ಅಭಿಪ್ರಾಯಕ್ಕೆ ಬರಲು ಕಾರಣ ಏನಿರಬಹುದು ನೋಡೋಣ |
ಸಾಮಾನ್ಯವಾಗಿ ಯಾವುದೇ ಕಾಯಿದೆಯ ಉದ್ದೇಶ ಸಮಾಜದಲ್ಲಿ ಪ್ರಜೆಗಳು ಹೇಗೆ ವರ್ತಿಸಬೇಕು? . ಹೇಗೆ ವರ್ತಿಸಬಾರದು?” ಎಂದು ತಿಳಿಸುತ್ತಾ, ಯಾವುದು ಅಪರಾಧ ಎಂದು ನಿಖರವಾಗಿ ತಿಳಿಸುವುದು. ಮತ್ತೆ ಆ ಅಪರಾಧ ಮಾಡದಂತೆ ಮಾರ್ಗವನ್ನು ಹುಡುಕುವುದು. ಅಪರಾಧ ಮಾಡಿದ್ದು ಸಾಬೀತಾದರೆ ಶಿಕ್ಷಿಸುವುದು.
ದ್ವೇಷ ವನ್ನು ಹಿಂದೂ ಸಮಾಜ ಒಪ್ಪುವುದಿಲ್ಲ. ಆದರೆ ದ್ವೇಷ ಅಲ್ಲದ ವಿಚಾರವನ್ನು ದುರುದ್ದೇಶದಿಂದ ದ್ವೇಷ ಎಂದು ಪರಿಗಣಿಸಲು ಹೇಳುತ್ತಿರುವುದಕ್ಕೆ ಈ ಮಸೂದೆಯನ್ನು ಹಿಂದೂ ಸಮಾಜ ವಿರೋಧಿಸುತ್ತಿದೆ.
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳು (ತಡೆಗಟ್ಟುವಿಕೆ)2025ರ ಮಸೂದೆ ಅಪರಾಧದ ನಿಖರತೆ ಕೊಟ್ಟಿದೆಯೇ ಎಂದು ಆ ಮಸೂದೆಯಲ್ಲಿನ ಸಂಬಂಧ ಪಟ್ಟ ವ್ಯಾಖ್ಯಾನದ ಸೆಕ್ಷನ್ ನೋಡಿದರೆ ತಿಳಿಯಬಹುದು. ಸದರಿ ಮಸೂದೆಯ ಸೆಕ್ಷನ್ 2(1) ರಂತೆ ದ್ವೇಷ ಭಾಷಣದ ವ್ಯಾಖ್ಯಾನ ಹೀಗಿದೆ ದ್ವೇಷ ಭಾಷಣ ಎಂದರೆ ಮಾತನಾಡುವ ಅಥವಾ ಬರೆಯುವ ಪದಗಳಲ್ಲಿ ಅಥವಾ ಸಂಕೇತಗಳ ಮೂಲಕ ಅಥವಾ ಗೋಚರ ಉದಾಹರಣೆಗಳ ಮೂಲಕ, ಎಲೆಕ್ಟ್ರಾನಿಕ್ ಸಂವಹನದ ಮೂಲಕ ಅಥವಾ ಬೇರೆ ರೀತಿಯಲ್ಲಿ, ಸಾರ್ವಜನಿಕವಾಗಿ ಜೀವಂತ ಅಥವಾ ಸತ್ತ ವ್ಯಕ್ತಿ ವರ್ಗ ಅಥವಾ ವ್ಯಕ್ತಿಗಳ ಗುಂಪು ಅಥವಾ ಸಮುದಾಯದ ವಿರುದ್ಧ ನೋವು, ಅಸಂಗತತೆ ಅಥವಾ ದ್ವೇಷ ಅಥವಾ ದ್ವೇಷದ ಭಾವನೆಗಳನ್ನು ಉಂಟುಮಾಡುವ ಉದ್ದೇಶದಿಂದ, ಯಾವುದೇ ಪೂರ್ವಾಗ್ರಹ ಪೀಡಿತ ಹಿತಾಸಕ್ತಿಯನ್ನು ಪೂರೈಸಲು ಮಾಡಿದ ಪ್ರಕಟಿಸಿದ ಅಥವಾ ಪ್ರಸಾರ ಮಾಡಿದ ಯಾವುದೇ ಅಭಿವ್ಯಕ್ತಿಯನ್ನು ಒಳಗೊಂಡಿದೆ;
2(ii) 'ಪೂರ್ವಾಗ್ರಹ ಪೀಡಿತ ಹಿತಾಸಕ್ತಿ' ಎಂದರೆ, - (ಎ) ಧರ್ಮ, (ಬಿ) ಜನಾಂಗ, (ಸಿ) ಜಾತಿ ಅಥವಾ ಸಮುದಾಯ; (ಡಿ) ಲಿಂಗ, (ಇ) ಲಿಂಗ, (ಎಫ್) ಲೈಂಗಿಕ ದೃಷ್ಟಿಕೋನ, (ಜಿ) ಹುಟ್ಟಿದ ಸ್ಥಳ, (ಎಚ್) ನಿವಾಸ, (ಐ) ಭಾಷೆ, (ಜೆ) ಅಂಗವೈಕಲ್ಯ, ಅಥವಾ (ಕೆ) ಬುಡಕಟ್ಟುಗಳ ಆಧಾರದ ಮೇಲೆ ಪಕ್ಷಪಾತ ಮಾಡುವುದು.
ಮಸೂದೆಯಲ್ಲಿ ದ್ವೇಷ ಅಪರಾಧ ಹಾಗೂ ಸಂವಹನ: ಈ ಅಪರಾಧಗಳನ್ನು ಭಾರತೀಯ ನ್ಯಾಯ ಸಂಹಿತೆಯಲ್ಲಿ ಕೂಡಾ ಅಪರಾಧವೆಂದು ಪರಿಗಣಿಸಲಾಗಿದ್ದರೂ ಕರ್ನಾಟಕದ ಮಸೂದೆಗೆ ಬಂದ ವಿರೋಧ ಅದಕ್ಕೆ ಬಂದಿರುವುದಿಲ್ಲ. ಕರ್ನಾಟಕ ದ್ವೇಷ ಭಾಷಣ ವಾದಿಸುವ ಮತ್ತು ದ್ವೇಷ ಅಪರಾಧಗಳು (ತಡೆಗಟ್ಟುವಿಕೆ) ಮಸೂದೆ, 2025 ಅನ್ನು ಅದರ ಅಸ್ಪಷ್ಟ ಮತ್ತು ವಿಶಾಲವಾದ ವ್ಯಾಖ್ಯಾನಗಳು, ಕಠಿಣ ದಂಡಗಳು ಮತ್ತು ಪೊಲೀಸರಿಗೆ ಕೊಟ್ಟಿರುವ ವಿಶಾಲವಾದ ಅಧಿಕಾರಗಳಿಂದಾಗಿ ವಿರೋಧಿಸಲಾಗಿದೆ. ವಿಮರ್ಶಕರು ಪ್ರಕಾರ, ಈ ಮಸೂದೆ ಅಡಳಿತದ ವಿರೋಧಿಗಳ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಬಹುದು. ಇಂತಹ ವ್ಯಾಖ್ಯಾನ ಅವರವರಿಗೆ ಬೇಕಾದಂತೆ ವಿರೋಧಿಗಳನ್ನು ಬಗ್ಗು ಬಡೆಯಲು ಅನುಕೂಲಕರವಾಗಿ ಅರ್ಥೈಸಿ ಪ್ರಕರಣ ದಾಖಲಿಸಬಹುದು.
ಕರ್ನಾಟಕ ಮಸೂದೆಯನ್ನು ಅಸ್ತಿತ್ವದಲ್ಲಿರುವ ಕೇಂದ್ರ ಕಾನೂನುಗಳಿಂದ ಪ್ರತ್ಯೇಕಿಸುವ ಪ್ರಮುಖ ವಿವಾದದ ಅಂಶಗಳು:
ವಿಶಾಲ ಅಸ್ಪಷ್ಟ ಮತ್ತು ವ್ಯಕ್ತಿನಿಷ್ಠ ವ್ಯಾಖ್ಯಾನಗಳು:
ಕರ್ನಾಟಕ ಮಸೂದೆಯು ದ್ವೇಷ ಭಾಷಣವನ್ನು “ಅಸಂಗತತೆ,” “ದುರುದ್ದೇಶ” ಮತ್ತು “ಭಾವನೆಗಳಿಗೆ ಹಾನಿ” ಯಂತಹ ಪದಗಳೊಂದಿಗೆ ವ್ಯಾಖ್ಯಾನಿಸುತ್ತದೆ. ವಿಧೇಯಕದ ವಿಭಾಗ 4 ಮತ್ತು 5 ಕಾರ್ಯಾಂಗಕ್ಕೆ ಅನಿಯಂತ್ರಿತ ಅಧಿಕಾರವನ್ನು ನೀಡುತ್ತವೆ. ಇದು ವಿಧಿ 19(1)(ಎ), ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸಿದ ಕಾನೂನು ಮತ್ತು ಮೂಲ ರಚನೆಯನ್ನು ಉಲ್ಲಂಘಿಸುತ್ತವೆ.
“ದ್ವೇಷ ಭಾಷಣ”, “ದ್ವೇಷದ ಅಪರಾಧ” ಮತ್ತು “ಪೂರ್ವಾಗ್ರಹ ಪ್ರೇರಿತ ಹಿತಾಸಕ್ತಿ” ಎಂಬ ವ್ಯಾಖ್ಯಾನಗಳು ಅಸ್ಪಷ್ಟತೆ ಮತ್ತು ವ್ಯಾಪಕತೆಯಿಂದ ಕೂಡಿದ್ದು, ಯಾವುದೇ ಹಾನಿಕಾರಕ ಉದ್ದೇಶ ಅಥವಾ ತಕ್ಷಣದ ಹಿಂಸಾಚಾರದ ಲಕ್ಷಣಗಳಿಲ್ಲದಿದ್ದರೂ ಭಾಷಣವನ್ನು ಅಪರಾಧೀಕರಿಸಲು ಅವಕಾಶ ನೀಡುತ್ತವೆ. ಇದು ಅಧಿಕಾರಿಗಳು ಮನಬಂದಂತೆ, ತಾರತಮ್ಯದಿಂದ ಮತ್ತು ಪಕ್ಷಪಾತದಿಂದ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲು ದಾರಿ ಮಾಡಿಕೊಡುತ್ತದೆ. ಈ ಕಾಯಿದೆ ಯಾರಿಗೆ ಹೇಗೆ ಅನ್ವಯಿಸಬೇಕು ಎಂಬ ಬಗ್ಗೆ ಅಸ್ಪಷ್ಟತೆ ಇದೆ.
ಅಸ್ಪಷ್ಟತೆಗೆ ಉದಾಹರಣೆ ಎಂದರೆ
1. ಕರ್ನಾಟಕಕ್ಕೆ ಹೊರ ರಾಜ್ಯದ ಮುಖ್ಯ ಮಂತ್ರಿಗಳು, ಮಂತ್ರಿಗಳು, ಕೇಂದ್ರದ ಮಂತ್ರಿಗಳು, ಗಣ್ಯರು, ಧಾರ್ಮಿಕ ಮುಖಂಡರು ಮುಂತಾದವರು ಸಹಜ ಭಾಷಣ ಮಾಡಿದರೂ ಅದು ಅಧಿಕಾರ ಹೊಂದಿದ ವ್ಯಕ್ತಿಗಳಿಗೆ ದ್ವೇಷ ಭಾಷಣ ಎಂದು ಅನ್ನಿಸಿದರೆ ತಕ್ಷಣ ಬಂಧಿಸಬಹುದು. ಮತ್ತು ಪ್ರಕರಣ ದಾಖಲಿಸಬಹುದು.
(ಸಂಜ್ಞೆಯ ಹಾಗೂ ಜಾಮೀನು ರಹಿತ ಕ್ರಿಮಿನಲ್ ಅಪರಾಧ ಸಂದರ್ಭ ಮುಖ್ಯಮಂತ್ರಿ, ಶಾಸಕರುಗಳ ಮೇಲೆ ಪ್ರಕರಣ ದಾಖಲಿಸಲು ಪೂರ್ವಾನುಮತಿ ಅಗತ್ಯವಿಲ್ಲ.)
2. ಬೇರೆ ರಾಜ್ಯದಲ್ಲಿ ಒಬ್ಬ ಮುಖ್ಯ ಮಂತ್ರಿ ದ್ವೇಷ ಭಾಷಣ ಮಾಡಿದಲ್ಲಿ ಅದರ ಆಡಿಯೋ ಯಾ ವಿಡಿಯೋವನ್ನು ಕರ್ನಾಟಕದಲ್ಲಿ ಯಾರಾದರೂ ಫಾರ್ವಡ್ ಮಾಡಿದರೆ ಅದು ಅಪರಾಧವಾಗುತ್ತದೆಯೇ? ಕಾಯಿದೆ ಅಸ್ಪಷ್ಟ ಇದೆ. ಮತ್ತು ಬೇಕಾದಂತೆ ದುರುಪಯೋಗ ಮಾಡಲು ಅವಕಾಶ ಇದೆ.
3. ಕರ್ನಾಟಕದಲ್ಲಿ ದಾಖಲಾದ ಮೊಬೈಲ್‌ನ್ನು ಇತರ ರಾಜ್ಯಕ್ಕೆ ಹೋದಾಗ ಅಲ್ಲಿ ದ್ವೇಷ ಭಾಷಣ ಫಾರ್ವಡ್ ಮಾಡಿದರೆ ಅದು ಕರ್ನಾಟಕ ಕಾಯಿದೆಯನ್ವಯ ಅಪರಾಧವೆ?
4. ಧರ್ಮ, ಸಮುದಾಯ ಇತ್ಯಾದಿಗಳ ಬಗ್ಗೆ ಸತ್ಯ ಮಾಹಿತಿ ಹಂಚಿಕೊಂಡಾಗ ಅದು ದ್ವೇಷಕ್ಕೆ ಕಾರಣವಾದರೆ ಅದು ಅಪರಾಧವೆ?
5. ಧರ್ಮ ಎನ್ನುವ ಪದಕ್ಕೆ ಸ್ಪಷ್ಟ ವ್ಯಾಖ್ಯಾನ ಇದುವರೆಗೆ ಬಂದಿಲ್ಲ. ಅಂತಹ ಸಂದರ್ಭದಲ್ಲಿ ಧರ್ಮದ ಆಧಾರದಲ್ಲಿ ಪಕ್ಷಪಾತವಾಗಿ ಮಾತನಾಡಿದ್ದಾರೆ ಎಂದು ಅರ್ಥೈಸಿ ಅಪರಾಧ ಎಂದು ಪರಿಗಣಿಸುವುದು ಹೇಗೆ?
ಬಹುತೇಕ ಅಧಿಕಾರಿಗಳು ರಾಜಕಾರಣಿಗಳ ಒತ್ತಡದಂತೆ ಪ್ರಕರಣ ದಾಖಲಿಸುವುದು ಎಲ್ಲರಿಗೂ ತಿಳಿದಿರುವ ವಿಷಯ. ಅಂತಹ ಸಂದರ್ಭದಲ್ಲಿ ವಿರೋಧ ಪಕ್ಷದವರ ಅಥವಾ ಅವರ ಬೆಂಬಲಿಗರು ಸಹಜ ಭಾಷಣ ಮಾಡಿದನ್ನು ದ್ವೇಷ ಭಾಷಣ ಎಂದು ಪರಿಗಣಿಸಿ ಪ್ರಕರಣ ದಾಖಲಿಸುವುದು, ಬಂಧಿಸುವುದು ಇತ್ಯಾದಿ ಕಿರುಕುಳ ಕೊಡುವ ಸಾಧ್ಯತೆ ಇರುವುದರಿಂದ ಮಸೂದೆ ಕಾಯಿದೆಯಾಗಬಾರದು ಎಂಬುದು ಬಹುತೇಕರ ಅಭಿಪ್ರಾಯವಾಗಿದೆ.
ಶ್ರೇಯಾ ಸಿಂಘಾಲ್ ಭಾರತ ಸರಕಾರ, 2015ರ ಈ ಪ್ರಕರಣದಲ್ಲಿ ಇಂತಹದೆ ವಿಚಾರದಲ್ಲಿ ಅಪರಾಧ ಪರಿಗಣಿಸಲು ಅಸ್ಪಷ್ಟ ಪದ ಪ್ರಯೋಗ ಉಪಯೋಗಿಸಿದನ್ನು ಸುಪ್ರೀಂ ಕೋರ್ಟ್ ಆ ಸೆಕ್ಷನ್ ಅಸಿಂಧು ಎಂದು ಘೋಷಣೆ ಮಾಡಿದೆ. ಆದ್ದರಿಂದ ಈ ಮಸೂದೆ ಕೂಡಾ ಅಸಿಂಧುವಾಗಿದೆ.
ಸಹೋದರತ್ವ ಎಂದರೆ
ಇದು ಸೇಡಿನ ಸಮಯ. ಆದರೆ ಪ್ರಪಂಚದ ಎಲ್ಲ ರಾಷ್ಟ್ರಗಳ ಜನರೂ ಒಂದನ್ನು ಮಾತ್ರ ತಿಳಿದುಕೊಳ್ಳಬೇಕು. ಅದೇನೆಂದರೆ, ನಾವು ಜನರು ಜನರಾಗಿ ಬದುಕಿರುವಲ್ಲೆಲ್ಲ ಸ್ನೇಹದ ಸರದಾರರು. ಅಂಥವರ ಸ್ನೇಹಗಳನ್ನೇ ನಾವು ಆದರ್ಶವಾಗಿಟ್ಟುಕೊಂಡಿದ್ದೇವೆ. ಫ್ರಾನ್ಸ್‌ದ ಜನತೆ ಸ್ವತಂತ್ರಮತಿಯರೂ ಹಾಗೂ ಪ್ರಪಂಚದೆಲ್ಲೆಡೆಯಿಂದ ಗೌರವಿಸಲ್ಪಟ್ಟವರೂ ಆಗಿರುವುದರಿಂದ ಇಡೀ ಯೂರೋಪಿಗೆ ಅವರು ಸಮೃದ್ಧಿ ಮತ್ತು ಶಾಂತಿಯನ್ನು ತರಬಲ್ಲವರಾಗಿದ್ದಾರೆ. ಅದಕ್ಕಾಗಿ ಕಳೆದ ಆರು ವರ್ಷಗಳಿಂದ ಅವರು ನಿರಂತರವಾಗಿ ತಮ್ಮ ಬದುಕನ್ನು ತ್ಯಾಗ ಮಾಡಿದ್ದಾರೆ. ಯಾವಾಗ ನೀವು ನಿಮ್ಮ ದೇಶಕ್ಕೆ ನಿಮ್ಮ ಮನೆಗೆ ಮರಳುತ್ತಿರೋ ಆಗ ಜನತೆ ನಿಮ್ಮೆಡೆಗೆ ಬೆರಳು ಮಾಡಿ ಅದೋ ನೋಡಿ ನಮ್ಮ ಸೈನಿಕ ಎಂದು ತೋರಿಸುತ್ತಾರೆ.
ಹೇಡಿತನದ, ಸಂಕುಚಿತತೆಯ, ಸಿದ್ದಾಂತಗಳನ್ನು ಕಲಿಸುವ ಜನರು ಈ ಕ್ಷಣದಿಂದ ನಮ್ಮ ಮಧ್ಯದಿಂದ ಓಡಿಹೋಗಿ ಎಲ್ಲಿಯಾದರೂ ಆಶ್ರಯವನ್ನು ಪಡೆದುಕೊಳ್ಳಲಿ. ಈ ದೇಶದ ಜನ ಅವರ ಪಾಲಿನ ಒಡೆಯರು, ಅವರೇ ಆಗಿರಲಿ. ಈ ದೇಶ ಅನ್ಯರೊಂದಿಗೆ ಸಹೋದರತ್ವವನ್ನು ಬಯಸುತ್ತದೆ ಆದರೆ ಆ ನೆಪದಲ್ಲಿಯ ದುರಹಂಕಾರದ ಭಾಷೆಯನ್ನು ಅತ್ಯಂತ ಗಂಭೀರವಾಗಿ ಗಮನಿಸುತ್ತದೆ. ಸಹೋದರತೆಯ ಅರ್ಥ ನಮ್ಮ ಸ್ವಾತಂತ್ರ್ಯವನ್ನು ಬಲಿಕೊಟ್ಟು ಯಾರ ಮುಂದೆಯೊ ಕೈಯೊಡ್ಡುವುದು ಎಂದು ಅಲ್ಲ. ಯಾರ ಹೃದಯಗಳು ಮೋಸದ ಯೋಚನೆಯಿಂದ ತುಂಬಿಕೊಂಡಿವೆಯೋ ಅಂಥವರ ಪರೀಕ್ಷೆಗೊಳಪಡಲು ಇಲ್ಲಿಯ ಜನರು ಸಿದ್ದರಿಲ್ಲ. ಇಲ್ಲ, ಯಾವ ಕಾಲಕ್ಕೂ ಇಲ್ಲ. - ಗಾರಿಬಾಲ್ಡಿ