Logo

VHP PUBLICATIONS

Hindu Vani


expand_more

ಸಂಸ್ಕೃತಿ

ಹೆಸರಿನಲ್ಲಿದೆ ಸಂಸ್ಕೃತಿ


ಅಭಿಜಿತ್ತು:

ದಕ್ಷನ ಮಗಳು, ಚಂದ್ರನ ಹೆಂಡತಿ, ರೋಹಿಣಿಯ ಪಕ್ಕದಲ್ಲಿ ಇರುವ ನಕ್ಷತ್ರ

ಅಶ್ವಾವಸು:

ವಿಶ್ವಾಮಿತ್ರನ ಪುತ್ರ ರೈತ್ಯ ಮಹರ್ಷಿಯ ಎರಡನೆಯ ಮಗ. ಇವನ ತಮ್ಮ ಪರಾವಸು.

ಅಲಕನಂದಾ:

ದೇವಲೋಕದಲ್ಲಿ ಹರಿಯುವ ಗಂಗೆ.

ಇಂದ್ರಪ್ರಮಿತಿ:

ವ್ಯಾಸಮಹರ್ಷಿಯ ಶಿಷ್ಯ ಪೈಲ ಖುಷಿಯ ಶಿಷ್ಯ. ಈತನು ಋಗ್ರೇದದ ಐತರೇಯ ಸಂಹಿತೆಯನ್ನು ವಿಭಾಗ ಮಾಡಿ ಬಾಲಿ, ಯಾಜ್ಞವಲ್ಕ ಪರಾಶರ, ಮಾಂಡುಕೇಯ, ಅಗ್ನಿಮತಗಳೆನ್ನುವ ಶಿಷ್ಯರಿಗೆ ಪಾಠ ಮಾಡಿದನು.

ಉದಯನ:

ಚಂದ್ರವಂಶದ ರಾಜ ಸಹಸ್ರಾನೀಕ ಮತ್ತು ಮೃಗಾವತಿಯ ಮಗ.

ಋಚೇಯು:

ಚಂದ್ರವಂಶದ ರಾಜ ರೌದ್ರಾಕ್ಷ ಮತ್ತು ಮಿತ್ರಕೇಶಿ ಎನ್ನುವ ಅಪ್ಸರೆಯರ ಮಗ, ಕಕ್ಷೇಯುವೇ ಮೊದಲಾದ ಒಂಬತ್ತು ಮಂದಿ ಇವನಿಗೆ ಸಹೋದರರು. ಇವನಿಗೆ ಅನಾದೃಷ್ಟಿಯೆಂದು ಕೂಡಾ ಹೆಸರಿದೆ. ಇವನ ಮಗ ಮತಿಸಾರ.

ಋತುಪರ್ಣ:

ಸೂರ್ಯವಂಶದ ರಾಜ, ಅಯೋಧ್ಯೆಯಲ್ಲಿ ರಾಜನಾಗಿದ್ದ. ರಾಜ್ಯವನ್ನು ಕಳೆದುಕೊಂಡ ನಳಚಕ್ರವರ್ತಿಯು ಇವನಲ್ಲಿ ಬಾಹುಕನೆಂಬ ಹೆಸರಿನಿಂದ ಸಾರಥಿಯಾಗಿ ಕೆಲಸ ಮಾಡುತ್ತಿದ್ದ.

ಋಭು:

ಬ್ರಹ್ಮನ ಮಾನಸ ಪುತ್ರರಲ್ಲಿ ಒಬ್ಬರು. ಸನಕ ಸನಂದ, ಸನತ್ಕುಮಾರ, ಸನತ್ಸುಜಾತ, ಇವರು ಋಭುವಿನ ನಾಲ್ವರು ಸಹೋದರರು.

ಕಪಿಲಾ:

ದಕ್ಷ ಬ್ರಹ್ಮನ ಮಗಳು. ಕಶ್ಯಪ ಮುನಿಯ 13 ಪತ್ನಿಯರಲ್ಲಿ ಒಬ್ಬಳು. ಗೋವುಗಳ ತಾಯಿ, ಅಮೃತ ಮತ್ತು ಗಂಧರ್ವರೂ ಈಕೆಯಿಂದ ಜನಿಸಿದರು.

ಕೀರ್ತಿಮಾಲಿನಿ:

ಸೀಮಂತಿನಿ ಮತ್ತು ರಾಜ ಚಂದ್ರಾಗದರ ಮಗಳು, ದಶಾರ್ಣದೇಶದ ಅಧಿಪತಿ ಚಿತ್ರಬಾಹುವಿನ ಮಗ ಭದ್ರಾಯುವಿನ ಪತ್ನಿ.

ಕುಮುದ:

1) ನೈಋತ್ಯ ದಿಕ್ಕಿನ ದಿಗ್ಗಜ,

2) ಸುಗ್ರೀವನ ಸೇನಾಪತಿಗಳಲ್ಲಿ ಒಬ್ಬ. ಇವನು ಗೋಮತೀ ನದಿತೀರದಲ್ಲಿ ರಮ್ಯಕ ಪರ್ವತದಲ್ಲಿ ವಾಸಿಸುತ್ತಿದ್ದ.

3) ಮೇರು ಪರ್ವತದ ಒಂದು ಬೆಟ್ಟ

4) ಮಧುರೆಯ ಬಳಿ ಇರುವ ಬೆಟ್ಟ

ಕುಂಭ:

1) ಪ್ರಹ್ಲಾದನ ಮಗ,

2) ಕುಂಭಕರ್ಣ ಮತ್ತು ವೃತ್ತ ಜ್ವಾಲೆಯರ ಹಿರಿಯಮಗ. ರಾಮಾಯಣದಲ್ಲಿ ಭಯಂಕರವಾದ ಯುದ್ಧ ಮಾಡಿ ಸುಗ್ರೀವನಿಂದ ಹತನಾದನು.

3) ಶಿವನ ಪ್ರಥಮ ಗಣದಲ್ಲಿ ಒಬ್ಬ ಶಿವನು ಕಾಶೀ ನಗರದಲ್ಲಿ ವಾಸಿಸಲು ಕಾರಣನಾದವನು.